ಅಂಬೇಡ್ಕರ್ ತೊಟ್ಟ ಸೂಟಿದೆ ಬೇಕಾ?

ಬಿದಲೋಟಿ ರಂಗನಾಥ್


ನನ್ನ ಬಳಿ ಅಂಬೇಡ್ಕರ್ ತೊಟ್ಟ ಸೂಟಿದೆ ಬೇಕಾ?
ದುಡ್ಡು ಕಾಸು ಏನೂ ಬೇಡ
ಹಾಗೇ ಕೊಡುತ್ತೇನೆ ತೊಟ್ಟಿಕೊಳ್ಳಿ ಸಾಕು
 
ಕೋಟಿ ಕೊಟ್ಟರು ಸಿಗವಲ್ಲದು
ನಿಮಗಿದು ಬಜಾರಿನಲ್ಲಿ
ಇರುವುದೊಂದೇ ಸೂಟು
ಅದಕ್ಕೆ ಬಳಸಿರುವ ಬಟ್ಟೆ
ಇನ್ನೂ ನೇಯ್ದಿಲ್ಲ ಯಾರೂ!
 
ಅವಮಾನದ ಕಲೆಗಳಿವೆ
ಜಾತಿ ಸೂತಕದ ಚಹರೆಗಳಿವೆ
ನಾನಂತು ಸಾಬೂನಾಕಿ ಉಜ್ಜಿ ಉಜ್ಜಿ ತೊಳೆದರೆ ಹೋಗುತ್ತಿಲ್ಲ
ನೀವಾದರು ಉಜ್ಜಿ ತೊಳೆಯಿರಿ
ಇವತ್ತೇ ಕೊಡುತ್ತೇನೆ ಬನ್ನಿ
 
ಅಂಬೇಡ್ಕರ್ ಕೇಳುತ್ತಾರೆ
ಆಗಾಗ ನಮ್ಮನಿಗೆ ಬಂದು
ಯಾರೂ ತೊಡಲಿಲ್ಲವೆ ಈ ನನ್ನ ಸೂಟ
 
ಜಾಹಿರಾತು ಕೊಟ್ಟಿದ್ದೇನೆ
ಯಾರದೂ ಬರಲಿಲ್ಲ ಜಂಗಮವಾಣಿ
ನೀವೇನು ಬೇಸರಿಸಿಕೊಳ್ಳ ಬೇಡಿ
ನಿಮ್ಮ ಸೂಟಿಡಿದು ಗಲ್ಲಿ ಗಲ್ಲಿ ತಿರುಗಲು
ನಾನು ಸಿದ್ದ
ಅಂಬೇಡ್ಕರ್ ತೊಟ್ಟ ಸೂಟಿದೆ ಯಾರಿಗೆ ಬೇಕು
 
ಇದರಲ್ಲಿ ಅಂಬೇಡ್ಕರ್ ಕಂಡ ಕನಸಿದೆ
ಸಮಾನತೆಯ ಮನಸಿದೆ
ಸಕಾರಗೊಳಿಸುವವರು ಯಾರದರು ಇದ್ದರೆ
ಇಂದೇ ಬನ್ನಿ ಈಗಲೇ ಕೊಡುತ್ತೇನೆ
ನನ್ನ ಬಳಿ ಇರುವ ಅಂಬೇಡ್ಕರ್ ತೊಟ್ಟ ಸೂಟು
ಕಾಸು ಗೀಸು ಏನೂ ಬೇಡ
ತೊಟ್ಟರಷ್ಟೇ ಸಾಕು.

‍ಲೇಖಕರು G

April 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. vasudeva nadig

    padya symbolic and exxelent…aadare koneya pyaaragraph vaachya golhisi biduttade…but tumbaaa aparuupada chintaneya padya…hatsoff ranganath

    ಪ್ರತಿಕ್ರಿಯೆ
  2. vasudeva nadig

    padya thaanu helha horadalu aaydu konda maargave ananya annodake ee padya saakshi..suutu emba padavae idi ondhu saanskrutika mattu saamajika badukannu anaavarana golhisaballudu..ondu atyuttama kaavya maadabahudaada parinaama kke ee padya nidarshana..

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ವಾಹ್, ಹೊಸ ಕಲ್ಪನೆ! ಈ ಪದ್ಯವನ್ನು ಎಲ್ಲ ಭಾರತೀಯ ಭಾಷೆಗಳಿಗೂ ಅನುವಾದಿಸಿದರೆ ಒಳಿತು. ಪದ್ಯದ ಪರಿಕಲ್ಪನೆಯೆ ನೂತನ. ಕೆಲವು ತಪ್ಪು ಪ್ರಯೋಗಗಳಿವೆ, ಅದನ್ನು ಸರಿಪಡಿಸುವುದೇನು ಕಷ್ಟವಲ್ಲ. ಈ ಸೂಟಿಗೆ ಗಿರಾಕಿ ಸಿಗೋದು ನಿಜವಾಗಿಯೂ ಕಷ್ಟವಿಲ್ಲ – ಆದರೆ ಲಕ್ಷಲಕ್ಷ ಹರಾಜಿಗೆ ಹುಟ್ಟೊಲ್ಲ. ಹುಟ್ಟಿದರೆ ಅಪರಿಮಿತ ಸ್ವಾಭಿಮಾನದ ಅನೂಹ್ಯ ಬೆಲೆಗೆ ಹರಾಜಾಗಬೇಕು.

    ಪ್ರತಿಕ್ರಿಯೆ
  4. Anonymous

    ಕಾಮೆಂಟ್ ಬರೆದ ಎಲ್ಲಾ ಸಹೃದಯರಿಗು ಧನ್ಯವಾದಗಳು

    ಪ್ರತಿಕ್ರಿಯೆ
  5. ಟಿ.ಕೆ.ಗಂಗಾಧರ ಪತ್ತಾರ

    ****************************************
    “ಭಾರತ ರತ್ನ”, “ಸಂವಿಧಾನ ಶಿಲ್ಪಿ” ಡಾ.ಬಿ.ಆರ್.ಅಂಬೇಡ್ಕರ್
    -ಟಿ.ಕೆ.ಗಂಗಾಧರ ಪತ್ತಾರ
    ****************************************
    ಭಾರತಾಂಬೆಯ ಧೀರ ಪುತ್ರನೆ
    ಭೀಮ ಕೇಸರಿ ಸಿಡಿಲ ಮರಿ /ಪ/
    ಬೆವರನೆ ಕುಡಿದು ಅಳುವನು ನುಂಗಿದ
    ದೀನ ದರಿದ್ರರ ಹೃದಯ ಸಿರಿ /ಅ/ಪ/
    ದಲಿತರ ಬಾಳಿನ ಕತ್ತಲೆ ಕಳೆಯಲು
    ಹೊಮ್ಮಿದ ಕ್ರಾಂತಿಯ ಸೂರ್ಯನ ಕಿರಣವೊ/
    ಜಿಡ್ಡುಗಟ್ಟಿದಾ ವರ್ಣ ವ್ಯವಸ್ಥೆಯ
    ನಡುವೆಯೆ ಸಿಡಿದಾ ಸಿಟ್ಟಿನ ಸ್ಫೋಟವೊ/1/
    ಶೋಷಿತ ಜನರೆದೆ ಸಂಕಟ ದಹಿಸಲು
    ಚಿಮ್ಮಿದ ಸಿಡಿಲಿನ ಜ್ವಾಲಾಮುಖಿಯೊ/
    ಅಂತ್ಯೋದಯಕೆ ಆವಿರ್ಭವಿಸಿದ
    ಮಾನವ ರೂಪದ ಚಿಂತಾಮಣಿಯೊ/2/
    ಅಸ್ಪೃಶ್ಶತೆಯಾ ಪಿಡುಗನು ತೊಡೆಯಲು
    ಧರೆಗವತರಿಸಿದ ವಿಪ್ಲವ ಮೂರ್ತಿ/
    ಬತ್ತಿದ ಕನಸಿನ ಬತ್ತಲೆ ಗುಡಿಲಲಿ
    ಭರವಸೆ ಬಿತ್ತಿದ ಆಶಾ ಜ್ಯೋತಿ/3/
    ಬುದ್ಧ-ಬಸವರ ವಿಕಸಿತ ರೂಪದಿ
    ಇಳೆಯನು ಬೆಳಗಿದ ಶಕ ಪುರುಷ/
    ಮಾನವ ಧರ್ಮದ ಉನ್ನತ ತತ್ವದ
    ಮೌಲ್ಯವ ಬದುಕಿದ ಯುಗಪುರುಷ/4/
    ನರ-ನಾಡಿಗಳನೆ ಬತ್ತಿಯ ಮಾಡುತ
    ತುಂಬಿದೆ ನೆತ್ತರ ತೈಲವನು/
    ಕ್ರಾಂತಿಯ ಕಿಡಿಯಿಂ ಶಾಂತಿಯ ಕುಡಿಯಲಿ
    ಬೆಳಗಿದೆ ಮನುಕುಲ ಹಣತೆಯನು/5/
    ಆದ್ಯರ ನಗ್ನತೆ ವ್ಯಥೆ-ಕಥೆ ಮರೆಯಲು
    ಸೂಟು-ಬೂಟುಗಳ ಶೃಂಗಾರ/
    ಅಹಮಿಕೆಯಿಲ್ಲದ ಆತ್ಮ ಗೌರವದ
    ವ್ಯಕ್ತಿತ್ವದ ಘನ ಗಂಭೀರ/6/
    ಪುಟ-ಪುಟಗಳ ಒಳ ತಿರುಳನು ಅರಿಯುತ
    ಧರ್ಮ ಶಾಸ್ತ್ರಗಳ ಖಂಡಿಸಿದೆ/
    ವೈಜ್ಞಾನಿಕ ಆಧುನಿಕತೆ ಪ್ರಗತಿಯ
    ತತ್ವ ವಿಚಾರವ ಮಂಡಿಸಿದೆ/7/
    ಶತ-ಶತಮಾನದ ಮೈಚಳಿ ಬಿಡಿಸುತ
    ಮೌಢ್ಯತೆ ಮಾರಿಯ ಓಡಿಸಿದೆ/
    ಚಾತುರ್ವರ್ಣದ ಹಿಂಸೆಗೆ ರೇಗಿದೆ
    ಅಮಾನುಷ ಪದ್ಧತಿ ಛೇಡಿಸಿದೆ/8/
    ಸರ್ವ-ಸುಸಮ್ಮತ ಸರ್ವ-ಸಮಂಜಸ
    ಸಂವಿಧಾನವನು ಶಿಲ್ಪಿಸಿದೆ/
    ಲೋಕ ಚರಿತೆಯಲಿ ಮಾನ್ಯತೆ ಗಳಿಸಿದ
    ಮಾದರಿ ಘಟನೆಯ ರೂಪಿಸಿದೆ/9/
    ನಿಖರ ನಿರೂಪಣೆ ಗಹನ ವಿಚಾರದ
    ಕೃತಿ ರತ್ನಗಳನು ವಿರಚಿಸಿದೆ/
    ವಿಶ್ವ ಮಾತೆಯ ಕೀರ್ತಿ ಕಿರೀಟದಿ
    “ಭಾರತ ರತ್ನ”ವು ನೀನಾದೆ/10/
    ಯುಗ ಯುಗ ವ್ಯಥೆಯಲಿ ನಲುಗಿದ ಮುಖದಲಿ
    ಸಂತಸ ಶಾಂತಿಯ ಶ್ರೀಕಾರ/
    ದಲಿತೋದ್ಧಾರದ ನವ ಮನ್ವಂತರ
    ಅಕ್ಷರ ಕ್ರಾಂತಿಯ ಓಂಕಾರ/11/
    ಪದವಿಯ ಬಯಸದ ಪರಹಿತ ಬಯಸಿದ
    ಸೇವೆಯೆ ನಿನ್ನಯ ಪರಮ ಗುರಿ/
    ಮನವೇ ಮಂದಿರ ಅರಿವೇ ದೇವರು
    ಕರ್ಮವೆ ಪೂಜೆಯು ಧರ್ಮ ಸಿರಿ/12/
    ನಗೆಯಲಿ ಹಿಗ್ಗದ ನೋವಲಿ ಕುಗ್ಗದ
    ಸಿಹಿ-ಕಹಿ ಸಮರಸ ಸಾಧಿಸಿದೆ/
    ಅಮೃತ ಶಾಂತಿಯ ನಿಜಪದ ಸಿದ್ಧಿಗೆ
    ಬುದ್ಧನ ಬೆಳಕಿನ ಪಥ ಹಿಡಿದೆ/13/
    ಪವಿತ್ರ ಪಾವನ ನಿನ್ನಯ ಜೀವನ
    ಆದರ್ಶವು ನವ ಪೀಳಿಗೆಗೆ/
    ನಿನ್ನಯ ಕನಸಿನ ಭಾರತ ಬೆಳಗಲಿ
    ಮಾದರಿಯಾಗಲಿ ಮೇದಿನಿಗೆ/14/
    ****************************************************************
    12-4-2012ರಿಂದ ಒಂದು ವಾರ ವಿಮ್ಸ್ ಆಸ್ಪತ್ರೆ ತುರ್ತು ಚಿಕಿತ್ಸಾ ವಾರ್ಡಿನಲ್ಲಿ ದಾಖಲಾಗಿದ್ದೆ. ಆಹಾರ-
    ನೀರು ಏನೂ ಇಲ್ಲ. ಡ್ರಿಪ್ ನಳಿಕೆ ಸೂಜಿ ಬಲಗೈ ಅಲಂಕರಿಸಿತ್ತು. ಎದ್ದು ಕೂಡಲೂ ಆಗದಷ್ಟು ನಿತ್ರಾಣ.
    14-4-2012 ವಿಮ್ಸ್ ವೈದ್ಯಶಿಕ್ಷಣ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಜರುಗುತ್ತಿರುವುದು ಗೊತ್ತಾಯ್ತು.
    ಅಸಹಾಯಕತೆಯಿಂದ ನರಳುತ್ತ ಕಾಟ್ ಮೇಲೆ ಮಲಗಿದ್ದಂತೆ ಮೊಬೈಲಿನಲ್ಲೇ ರಚಿಸಿದ ಆಶು ಕವಿತೆ.
    ****************************************************************

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: