ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದ ಹಾಗೆ ಪಣಜಿಯಲ್ಲಿ…

ಪಣಜಿಯಲ್ಲಿ ಭಾಷಾ ಭಾವೈಕ್ಯ ಸಮಾವೇಶ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೧೩-೦೧-೨೦೧೩ ಭಾನುವಾರ ಬೆಳಿಗ್ಗೆ ೧೧ ಗಂಟೆಯಿಂದ ಪಣಜಿಯ ಗೋಮಂತಕ ಮರಾಠಾ ಸಮಾಜ ಸಭಾಭವನದಲ್ಲಿ ಭಾಷಾ ಭಾವೈಕ್ಯ ಸಮಾವೇಶ ಹಾಗೂ ಹೊರನಾಡ ಕನ್ನಡಿಗರ ಕನ್ನಡ ಸಂಸ್ಕೃತಿ ಉತ್ಸವ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅಥಣಿಯ ಮೋಟಗಿ ಮಠದ ಶ್ರೀ ಮ.ನಿ.ಪ್ರ. ಪ್ರಭುಚನ್ನಬಸವಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಶ್ರೀ ಕೆ. ಸುಧಾಕರ ಶೆಟ್ಟಿ, ಖ್ಯಾತ ಹಾಸ್ಯ ಕಲಾವಿದ ಶ್ರೀ ರಿಚರ್ಡ್ಸ್ ಲೂಯಿಸ್ ಹಾಗೂ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಶ್ರೀ ಪ್ರಹ್ಲಾದ ಗುಡಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ ೧೨-೩೦ಕ್ಕೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಕವಿ ಶ್ರೀ ವಿಷ್ಣು ನಾಯ್ಕ್ ವಹಿಸಲಿದ್ದಾರೆ. ಶ್ರೀ ಫಾಲ್ಗುಣ ಗೌಡ, ಶ್ರೀ ಗಜಾನನ ಜೋಗ್, ಶ್ರೀಮತಿ ಶೈಲಜಾ ಕಣವಿ, ಶ್ರೀಮತಿ ಸ್ಮಿತಾ ಪ್ರಸಾದ್ ದರ್ಶೇತ್ಕರ್, ಶ್ರೀಮತಿ ಅಖಿಲಾ ಕುರಂದವಾಡ ಇವರು ಕನ್ನಡ, ಕೊಂಕಣಿ, ಹಿಂದಿ, ಕೊಂಕಣಿ ಹಾಗೂ ಮರಾಠಿ ಭಾಷೆಗಳಲ್ಲಿ ಕವನ ಪ್ರಸ್ತುತಪಡಿಸಲಿದ್ದಾರೆ.
ಮಧ್ಯಾಹ್ನ ಭೋಜನಾನಂತರ ಶ್ರೀ ಬಸವರಾಜ ಹಿರೇಮಠ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರವಿದೆ. ನಾಗರತ್ನ ಹಡಗಲಿ ಹಾಗೂ ತಂಡದವರಿಂದ ನೃತ್ಯರೂಪಕ ಹಾಗೂ ಕೊನೆಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನದೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೦೫೧೫೮೫೫೫, ಅಥವಾ ೮೮೮೮೦೪೨೫೮೮ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ.
 

‍ಲೇಖಕರು G

11 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading