ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದರೂ ಮುಪ್ಪು ಒಂದು ಶಾಪವೇ?

ಬಾಳ(ಇಳಿ) ಸಂಜಿಯಲ್ಲಿರುವವರ ಬವಣೆ

– ಟಿ ಪಿ ವ್ಯಾಸಮುದ್ರಿ

ಈ ಪ್ರಪಂಚದಲ್ಲಿ ಮನುಷ್ಯ ಒಂದು ವಿಚಿತ್ರ ವಿಕ್ಷಿಪ್ತ ಪ್ರಾಣಿ. ಯಾಕಂದರೆ ಜಗತ್ತಿನ ಇತರೆ ಪ್ರಾಣಿಗಳಿಗಿಂತ ಭಿನ್ನವಾದ ಬುದ್ಧಿ ಇದೆ, ಮಾತನಾಡುವ ಕಲೆ ಇದೆ. ಮಾತನಾಡುವ ಶಕ್ತಿ ಮನುಷ್ಯನಿಗೆ ದೇವರು ಕೊಟ್ಟಿರುವ ಸರ್ವಶ್ರೇಷ್ಠವಾದ ವರ.ಪ್ರಾಣಿಗಳಾದರೋ ಹಸಿವು,ತೃಷೆ,ನಿದ್ರೆ ಮೈಥುನ ಅದೂ ಕೂಡ ಆಯಾ ಕಾಲದಲ್ಲಿ ಬೇಕಾದಾಗ ಅಲ್ಲ, ಇನ್ನೊಂದು ಸಂಗ್ರಹ ಮಾಡುವ ಆಶೆ/ಚಟ. ಆಶೆ ದುರಾಶೆಯಾಗಿ ಹಪಾಪಿತನದಿಂದ ಜೀವಕ್ಕೆ ಸುಖವಿಲ್ಲದಂತಾಗುತ್ತದೆ.ಇದರಿಂದಾಗಿಯೇ ಮನುಷ್ಯ ಹೆಚ್ಚು ಅಸುಖಿಯಾಗಿದ್ದಾನೇನೋ
ಅದರಲ್ಲೂ ಮುಪ್ಪಿನ ಕಾಲದಲ್ಲಿ ದೇಹ ಶಿಥಿಲವಾಗುತ್ತದೆ.ಮನಸ್ಸು ದುರ್ಬಲವಾಗುತ್ತದೆ.ಆಗ ಘಾಸಿಗೊಂಡ ಮನಸ್ಸು ಏನೇನನ್ನೋ ಚಿಂತಿಸುತ್ತದೆ.ನಿದ್ರೆ ಬರುವದಿಲ್ಲ,ಅದು ಕಾರಣ ದೇಹ ಮತ್ತಷ್ಟೂ ಅಶಕ್ತಗೊಳ್ಳುತ್ತ ಹೋಗ್ತದೆ.ಆಗ ಅನೇಕ ರೋಗ ರುಜಿನಗಳು ಕಾಣಲು ಶುರು ಇಟ್ಟುಕೊಳ್ಳುತ್ತವೆ.. ಈ ಸ್ಥಿತಿಗೆ ನೂರೆಂಟು ಮಾನಸಿಕ ಕಾರಣಗಳು.
ಆಧುನಿಕತೆಯಿಂದಾಗಿ ಬದುಕು ಬದಲಾಗಿರುವದನ್ನು ನಾವು ಒಪ್ಪಿಕೊಂಡಿದ್ದೇವೆ.(ಒಪ್ಪಿಕೊಳ್ಳಬೇಕು) ಕಾಲದ ನೀರು ಹರಿದಂತೆಲ್ಲ ನಮ್ಮ ಕೆಲವು ಮೌಲ್ಯಗಳು ಬದಲಾಗುತ್ತವೆ.” ಬದಲಾವಣೆ ಜಗದ ನಿಯಮ.”
ಕಾಲ ಬದಲಾದಂತೆ ಆಧುನಿಕತೆ ಹಾಸುಹೊಕ್ಕಾಗುತ್ತದೆ. ನಮ್ಮ ಭವ್ಯ ಸಂಸ್ಕ್ರತಿಯನ್ನು ಕ್ರಮೇಣ ಮರೆಯುತ್ತಿದ್ದೇವೆ.ಎಲ್ಲವನ್ನೂ ಪಾಶ್ಯಾತ್ಯ ದೇಶ ಹಾಗೂ ಸಂಸ್ಕೃತಿಗೆ ಹೋಲಿಸಿ ನೋಡುವ ಪರಿಪಾಠ ಬೆಳೆಯುತ್ತಿದೆ. ಇದೊಂದು ಆಘಾತಕಾರಿ ಸಂಗತಿ ಮತ್ತು ಅಪಾಯಕಾರಿ ಬೆಳವಣಿಗೆ. ಸಂಕಷ್ಟ ಶುರು ಆಗೋದೇ ಇಲ್ಲಿಂದ.
ಬಾಲ್ಯದ ಬದುಕು ನಮ್ಮ ಮೇಲೆ ಎಂತಹ ಪ್ರಭಾವ ಬೀರುತ್ತದೆಯಂದರೆ ನಮ್ಮ ಮನಸ್ಸಿನಲ್ಲಿ ತನ್ನದೇ ಒಂದು ಆವರಣವನ್ನು ಸೃಷ್ಟಿಸುತ್ತದೆ.ಆ ಆವರಣವನ್ನು ದಾಟಲಾಗದೆ ಸಮಸ್ಯೆಯ ಜೊತೆಗೇ ಹೊಂದಿಕೊಂಡು ಗೊಣಗಾಡುತ್ತಲೇ ಬದುಕುತ್ತಿರುತ್ತೇವೆ. ಸರಳ ಪರಿಹಾರಗಳೂ ನಮಗೆ ಗೋಚರಿಸುವದಿಲ್ಲ. ಸಣ್ಣದಾಗಿ ಪ್ರಾರಂಭವಾದ ಸಮಸ್ಯೆಗಳು ದೊಡ್ಡದಾಗಿ ಬೆಳೆದು , ಹಲವಾರು ತಿರುವುಗಳನ್ನು ತೆಗೆದುಕೊಳ್ಳಬಹುದು.
ಅನೇಕರ ಅಭಿಪ್ರಾಯದಂತೆ ಎರಡು ಶಬ್ದಗಳು ಕೇಳಿಬರುತ್ತವೆ. careful(ಹುಷಾರಾಗಿರಬೇಕು) ಮತ್ತು adjustment(ಹೊಂದಾಣಿಕೆ), ಎಂಬ ಷಡಕ್ಷರಮಂತ್ರೋಪದೇಶ, ಬಹಳಷ್ಟು ಜನರಿಗೆ ಈ ಶಬ್ದಗಳನ್ನು ಕೇಳಿ ಕೇಳಿ ಸಾಕಾಗಿದೆಯಂತೆ. ಏನಾದರೂ ಆಯಿತೆಂದರೆ ಏ ಕೆರ್ಪ್ಹುಲ್ಲಾಗಿ ಇರಬೇಕು ಸಾರ್ ಅಂತ ಎಲ್ಲರೂ ಹೇಳುವವರೇ. ಯಾರು ಬೇಕು ಅಂತಾ ಕೆರ್ಲೆಸ್ಸ್ ಆಗಿ ಇರ್ತಾರೆ ಹೇಳಿ. ಇನ್ನು ಅಡ್ಜಸ್ಟ್ಮೆಂಟ್ (ಹೊಂದಾಣಿಕೆ ಎಲ್ಲಿಯವರೆಗೆ) ಟು ವಾಟ ಎಕ್ಸ್ತೆಂಟ್ ಅನ್ನುವದೂ ಒಂದು ಸಹಜವೇ ಅಲ್ಲವೇ.
ಬಡತನ ಬಹಳ ಕೆಟ್ಟದ್ದು.ಎಷ್ಟೋ ಮುದುಕರು ಕಟಿಂಗ್/ದಾಡಿಗೆ ಸಹಿತ ಮಕ್ಕಳಿಗೆ ಕೈ ಒಡ್ಡುವ ಪ್ರಸಂಗ ನೋಡಿದ್ದೇವೆ.ಎಂಥಾ ಕಷ್ಟಕರ. ಆದರೆ ಈಗ ಹಿಂದಿನಕಿಂತ ದುಡ್ಡಿನ ತಾಪತ್ರಯ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ ಅಂತ ಅನಬಹುದು. ಆದರೆ ಸಮೃದ್ಧಿ ಇರುವಲ್ಲೆಲ್ಲ ಸಂತೋಷ ಇರುತ್ತದೆಂದು ಹೇಳಲಿಕ್ಕೆ ಬರುವದಿಲ್ಲ.
ನಮ್ಮ ದೇಶದಲ್ಲಿ ನಮ್ಮ ಅಚಾರ ವಿಚಾರಗಳಿಂದಲೋ,ಪರಿಸರದಿಂದಲೋ ,ಬೆಳೆದು ಬಂದ ಪದ್ಧತಿಯಿಂದಲೋ ನಮ್ಮ ಸಂಸ್ಕೃತಿಯಿಂದಲೋ, ನಮ್ಮ ಮಕ್ಕಳ ಮೇಲಿನ ವ್ಯಾಮೋಹ ,ವಾತ್ಸಲ್ಯ ಧೃತರಾಷ್ಟ್ರನ ಕುರುಡು ಪ್ರೇಮ ದಿಂದಲೋ , ಏನೋ ಅರಿಯದ ಕಳವಳದಿಂದ ಗಾಢವಿಲ್ಲದ ನಿದ್ರೆಯಿಂದ ಮನಸ್ಸಿಗೆ ಆಗುವ ಆತಂಕ ಏನೋ ಒಂದು ಅನಿರ್ವಚನೀಯ ರೌದ್ರತೆ ಬಂದಂತೆ ಆಗಿ ಸ್ವಸ್ಥಮನಸ್ಕರಾಗಿರುವದು ಬಹಳೇ ವಿರಳ. ಇದೆ ಚಿಂತೆಯ/ಕೊರಗಿನ ಮೂಲ.
ಮಕ್ಕಳನ್ನು ಪಾಲಿಸಿ ಪೋಷಿಸಿ, ಕೈ ಹಿಡಿದು ನಡೆಸಿ,ಹೆಗಲ ಮೇಲೆ ಹೊತ್ತು ತಿರುಗಿ ಕಷ್ಟ ಅನುಭವಿಸಿ ಅವರನ್ನು ಓದಿಸಿ ಬೇರೆ ಊರಿಗೋ ವಿದೆಶಕ್ಕೋ ಕಳಿಸಿ ಮನೆಯಲ್ಲಿ ಒಂಟಿಯಾಗಿ ಬದುಕುವ ವೃದ್ಧ ತಂದೆ ತಾಯಿಗಳನ್ನು ಗಮನಿಸಿ. ಎಂದೋ ಒಮ್ಮೆ ಮಕ್ಕಳು ಮೊಮ್ಮಕ್ಕಳು ಬಂದಾಗ ಅವರ ಬಾಳಿಗೆ ಹೊಸ ಮಿನುಗು. ಉಳಿದಂತೆ ಖಾಲಿತನ . ಇವರು ಉಳ್ಳವರಾದರೂ ಅನಿವಾರ್ಯವಾಗಿ ಎಕಾಂಗಿಯಾದವರು. ಅದರಲ್ಲಿಯೂ ಈ ವಯಸ್ಸಿನಲ್ಲಿ ಬಂಡಿಯ ಎರಡು ಚಕ್ರಗಳಲ್ಲಿ ಒಂದು ಕಳಚಿದರಂತೂ ಅವರ ಪರಿಸ್ಥಿತಿ ದೇವರಿಗೇ ಪ್ರೀತಿ.
ಇನ್ನು ಅಕಸ್ಮಾತ್ ಒಂದೇ ಕಡೆ ಇದ್ದಾಗ ಅವರನ್ನು ಈ ಪರಿಸ್ಥಿತಿಗೆ/ಎತ್ತರಕ್ಕೆ ತಂದ ಇಂಥ ತಂದೆ ತಾಯಿಗಳನ್ನು ನಿಕೃಷ್ಟ ರೀತಿಯಿಂದ/ತಾತ್ಸಾರದಿಂದ ಕಂಡಾಗ ಆ ವೃದ್ಧರಿಗೆ ಆಗುವ ಮಾನಸಿಕ ಯಾತನೆಯನ್ನು ಊಹಿಸುವದೇಅಸಾಧ್ಯ. ಒಂದು ವಿಚಿತ್ರ ವಾಸ್ತವಿಕತೆ ( Strange Reality ) Sometimes people are Nathing, you make them Something.,and when they become Something They think you are Nothing. ಇದು ಮಕ್ಕಳಿಗೆ ಅಂತ ಅಷ್ಟೇ ಅಲ್ಲ ಎಲ್ಲರಿಗೂ ಅನ್ವಯಿಸುವಂಥದ್ದು.
ಬೆಳೆದ ಮಕ್ಕಳು ಮನೆ ಬಿಟ್ಟು ಸ್ವತಂತ್ರರಾಗಿರುವದು ಅಮೇರಿಕನ್ ಕುಟುಂಬದ ತೀರ ಸಾಮಾನ್ಯ ವಿಷಯ.ಜಾಗತೀಕರಣದ ಪ್ರಭಾವದಿಂದ ಅದು ನಮ್ಮಲ್ಲಿಗೂ ಹೆಚ್ಚೆಚ್ಚಾಗಿ ಬಂದಿದೆ. ಒಂದು ವ್ಯತ್ಯಾಸ ಅಂದರೆ ಇಲ್ಲಿ ಲಗ್ನವಾದ ಗಂಡು ಮಕ್ಕಳು ಬೇರೆ ಮನೆ ಮಾಡಿ ಹೋಗುವದು ಇತ್ತಿತ್ತಲಾಗಿ ಸಾಮಾನ್ಯವಾಗಿದೆ. ಈಗ Family(ಕುಟುಂಬದ) ಡಫಿನೆಷೆನ್ ಅಂದರೆ ತಾನು ತನ್ನ ಹೆಂಡತಿ ಮತ್ತು ತಮ್ಮ ಮಕ್ಕಳು ಇಷ್ಟೇ. ಉಳಿದವರಾರೂ ಸಂಬಂಧವೇ ಇಲ್ಲ ಅನ್ನುವ ಹಾಗೆ ಆಗಿದೆ. ಮಕ್ಕಳಿಲ್ಲದವರಿಗೆ ಮಕ್ಕಳಿಲ್ಲ ಎಂಬ ಒಂದೇ ಚಿಂತೆ. ಇದ್ದವರಿಗೆ ನೂರೆಂಟು ಚಿಂತೆ. ಮೊದಲು ಗಂಡು ಮಕ್ಕಳಿಲ್ಲದವರಿಗೆ ಅಪುತ್ರಸ್ಯ ಗತಿರ್ನಾಸ್ತಿ ಈಗ ಬರೀ ಗಂಡು ಮಕ್ಕಳಿದ್ದವರ ಫಜೀತಿ. ಅಂತಃಕರಣಕ್ಕೆ, ಕೊನೆಗೆ ಸತ್ತಾಗ ಅಳಲಿಕ್ಕಾದರೂ ಒಂದು ಹೆಣ್ಣು ಮಗು ಇರಬೇಕಾಗಿತ್ತು ಎಂಬ ಅನಿಸಿಕೆ ಇರದೇ ಇರದು. ಇನ್ನು ಒಬ್ಬರಿಗಿಂತ ಹೆಚ್ಚು ಗಂಡು ಮಕ್ಕಳಿದ್ದವರ ಪಾಡು. ಆಯಾ ಮಗನ ಮನೆಯಲ್ಲಿ ೩-೪-೬ ತಿಂಗಳು ಹಂಚಿಕೊಂಡು ಇರುವದು.( ಬಾಗಬಾನ್ ಸಿನೆಮಾದಂತೆ ) ಇನ್ ಕೆಲವರಂತೂ, ನಾಳೆಯಿಂದ ಅವರ ಅಣ್ಣನ/ತಮ್ಮನ ಮನೆಯಲ್ಲಿ ಅಂತ ಇದ್ದರೆ ಇವೊತ್ತೇ ಸಾಯಂಕಾಲ ಸಾಗ ಹಾಕಿಬಿಡುತ್ತಾರೆ .
ನಮ್ಮ ಅಳಿಯ ಭಾಳ ಛಲೋಇದ್ದಾರ ನಮ್ಮ ಹುಡ್ಗೀ ಮಾತ ಒಂದೂ ತಗದ ಹಾಕಂಗಿಲ್ಲ /ಉಗುಳ ಹಾಕಿದ್ದು ದಾಟಂಗಿಲ್ಲ ಚೊಕ್ಕ್ ಭಂಗಾರ.( ಆದರೆ ಆ ಭಂಗಾರವನ್ನು ಚೊಕ್ಕ್ ಮಾಡಿ ಕೊಟ್ಟ ಅವನ ತಂದೆ ತಾಯಿಗಳು ಜಂಗ(ತುಕ್ಕು) ಹಿಡಿದ ಕಬ್ಬಿಣ ಏಕೆ.) ಅಂತ ಹೇಳಿಕೊಂಡು ತಿರುಗಾಡುವ ಅನೇಕರು ನೋಡಲು ಸಿಗುತ್ತಾರೆ. ಅದೇ ಹೆಣ್ಣುಮಗಳು ತನ್ನ ಮಗನ ಬಗ್ಗೆ ಮಾತನಾಡುವಾಗ ,ಮೊದಲ ಹೆಂತಾ ಛಲೋ ಇದ್ದ ಈಗ ಈ ತಾಟಕಿ ಬಂದಮ್ಯಾಲೆ ಏನ ತಲಿ ತಿಕ್ಕ್ಯಾಳೋಏನೋ ಅದರ ಹತೀಲೆ ಏನ್ ಅಕಲೇಇಲ್ಲ. ಬರೆ ಅಕಿ ಸೀರೀ ಸೆರಗ ಹಿಡಕೊಂಡು ಅಡ್ಡ್ಯಾದ್ತದ ಅಕಿ ಹೇಳಿಧಂಗs ಕೇಳತದ. ಇವನ್ನ ೯ ತಿಂಗಳು ಹೊಟ್ಟಿಯಾಗ ಹೊತ್ಕೊ೦ಡು ಹಡದೆನಿ ಅಂದ್ರ , ಅವ್ವಾ ನಿನ್ನ ಹೊಟ್ಟೆ ಬಾಡಗೀ ಎಷ್ಟು ಹೇಳಿಬಿಡು ಬಡ್ಡೀ ಸಹಿತ ಒಗದ ಬಿಡ್ತೆನಿ ಅಂತದ ಹುಚ್ಚ್ಖ್ ಖೋಡಿ.
(ಒಬ್ಬಳೇ ಹೆಣ್ಣ ಮಗಳ ವಿಚಾರ ಸರಣಿಯ ವೈಪರಿತ್ಯವನ್ನು ಇಲ್ಲಿ ಕಾಣಬಹುದು)
ಮಕ್ಕಳು ಸಂಪ್ರದಾಯಸ್ಥ ತಂದೆ ತಾಯಿಗಳನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುವ ಬಗ್ಗೆ ಟೀಕೆಗಳಿವೆ. ಹಿರಿಯರೂ ಕೂಡ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತರೆಂಬ ಟೀಕೆಯೂ ಇದೆ. ಇದಕ್ಕೆ ಮುಖ್ಯ ಕಾರಣ ಜನರೇಶನ್ ಗ್ಯಾಪ್ ಹಾಗೂ ಜಾಗತೀಕರಣ ಅಂತನೂ ಹೇಳಲಾಗುತ್ತದೆ. ಹಿರಿಯರು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತ ಕೊನೆಯ ದಿನಗಳನ್ನು ಬದುಕುವದು ಒಳ್ಳೆಯ ಸಂಗತಿಯೆ. ಆದರೆ ಕೆಲವು ಸೊಸೆಯಂದಿರು ಮಕ್ಕಳನ್ನು ಅಜ್ಜ ಅಜ್ಜಿಯ (ಗಂಡನ ತಂದೆ ತಾಯಿ) ಕಡೆಗೆ ಹೋಗದಂತೆ ನೋಡಿಕೊಳ್ಳುವದನ್ನೂ ಅನೇಕ ಕುಟುಂಬಗಳಲ್ಲಿ ಕಾಣಬಹುದು ಹೀಗೆ ಇದು ಅಸಾಧ್ಯವಾದಾಗ, ಅದರಲ್ಲೂ ಸಂಗಾತಿಯಿಲ್ಲದೆ ಒಂಟಿಯಾದಾಗ ,ಮನೆಯವರ ಉಪೇಕ್ಷೆಗೆ ಒಳಗಾದಾಗ ಬಹಳ ದು:ಖವಾಗುತ್ತದೆ. ಈ ರೀತಿ ಪರಸ್ಪರ ಹಿತವಿಲ್ಲದ ಕಡೆ ಗತಿಯಿಲ್ಲದ ಅವಲಂಬನೆ ಎಷ್ಟು ನೋವು,ಕಸವಿಸಿ ಉಂಟು ಮಾಡುತ್ತದೆ ಎಂಬ ವಿಷಯ ಊಹಿಸಲೂ ಅಸಾಧ್ಯ ಆಗ ಈ ರೀತಿ ಬದುಕುವದಕ್ಕಿಂತ ಸಾಯುವುದೇ ಉತ್ತಮ ಅಂತ ಅನಿಸಿದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದರೆ ಕಳದೆರಡು ದಶಕಗಳಲ್ಲಿ ಜನರ ಜೀವನಾವಧಿ ನಿರೀಕ್ಷೆ ಉತ್ತಮ ವೈದ್ಯಕೀಯ ಆಯ್ಕೆಗಳ ಲಭ್ಯತೆಯಿಂದ ಹೆಚ್ಚಾಗುತ್ತಿದೆ.
ಮನುಷ್ಯನ ವಿದ್ಯೆ,ಅಧಿಕಾರ, ಸ್ಥಾನಮಾನ, ಅಂತಸ್ತು,ಐಶ್ವರ್ಯ ಮುಂತಾದವು ಅವನ ವ್ಯಕ್ತಿತ್ವದ ಮೇಲ್ಗುರುತುಗಳಾಗಿ ಅವನನ್ನು ಸ್ವಲ್ಪ ಬದಲಾಯಿಸಿಬಿಡುತ್ತವೆ.
ವಯಸ್ಸು,ವಿದ್ಯೆ,ಹುದ್ದೆ,ಪಾಶ್ಚ್ಯಾತ್ಯ ದೇಶದಲ್ಲಿ ವಾಸ ಕೈತುಂಬ ಕಿಸೆತುಂಬ ಪಗಾರ ಲಕ್ಸ್ಯ ಲಕ್ಷ್ಯ (ಇರುವಾಗ) ಹಿರಿಯರ /ಇತರರ ಬಗ್ಗೆ ಅಲಕ್ಷ ಅಲಕ್ಷ (ಏನು ಮಹಾ)
ಕನ್ಯಾ ಪಿತೃಗಳಲ್ಲಿಯೂ ವೈಪರಿತ್ಯವನ್ನು ಕಾಣಬಹುದು. ಮೊನ್ನೆ ನಾನು ಒಬ್ಬರ ಮನೆಗೆ ಹೋಗಿದ್ದೆ . ಅವರು ತಮ್ಮ ಮಗನಿಗೆ ಒಂದು ಕನ್ಯಾ ಇದ್ದರ ಹೇಳ್ರಿ ಅಂದ್ರು. ಹ್ಞೂಂ ಅಂದೆ. ಅವರ ಹೆಂಡತಿ ಚಹಾ ಕೊಡ್ಲಿಕ್ಕೆ ಬಂದಾಗ, ನಾವು ರಾಹು ಕೇತು ಅಂತ್ರೆಪಾ ಅಂದ್ರು,ನನಗ ಒಮ್ಮೆಲೇ ತಿಳಿಲೇ ಇಲ್ಲ. ಆಮೇಲೆ ಅವರ ಗಂಡ ಹೇಳಿದರು.ಏನಂದರ ವರಗ ತಂದಿ ತಾಯಿ ಇರಬಾರದಂತ .ಇದ್ದರ( ಅವರು ರಾಹು ಕೇತು ಇದ್ದ್ಹಂಗ ) ಅವರ ಹುಡುಗೀಗೆ ಸುಖ ಆಗೂದಿಲ್ಲಂತ. ನಮ್ಮ ಮಗಾ ಬೇಕು ಆದರ ನಾವು ಸೆಟದಿರಬೇಕು ಅನ್ನೂ ಟ್ರೆಂಡು ಹ್ಯಾಂಗ ಅದರೀ ಅಂತ ನನಗs ಪ್ರಶ್ನ ಮಾಡಿದರು. ಏನ್ ಹೇಳಲಿ ಚಹಾ ಕುಡುದು ಎದ್ದ ಬಂದೆ. ಆದರೆ ಅ೦ಥವರಿಗೆ ತಮ್ಮ ಮಗನಿಗೆ ಕನ್ಯಾ ಬೇಕಾದಾಗ ತಿಳಿತದ.
ಹಿಂದಿನ ಸ್ವತಂತ್ರ ಬದುಕನ್ನು ನೆನೆದು ಕೊರಗುತ್ತ ಜೀವಚ್ಚವವಾಗಿ ಬದುಕುವ ಹಿರಿಯರಿಗೆ ನೆಮ್ಮದಿ,ಆಶೆ ಆಕಾಂಕ್ಷೆಗಳು ಸತ್ತು ಹೋಗಿರುತ್ತವೆ.
ಆದರೂ ಈಗಿನ ಕಾಲದಲ್ಲಿ ಗಂಡು ಮಕ್ಕಳು ಲಗ್ನವಾದಮೇಲೆ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸದಿದ್ದರೆ, ಮನೆ ಬಿಟ್ಟು ಹೊರ ಹಾಕದಿದ್ದರೆ ಅಥವಾ ತಾವೇ ಬೇರೆ ಮನೆ ಮಾಡಿಕೊಂಡು ಹೋಗದಿದ್ದರೆ ಅವರೇ ಈಗಿನ ಕಾಲದ ಶ್ರವಣಕುಮಾರರು ಅಂತ ಅಂದುಕೊಳ್ಳಬೇಕು..
ಅಡ್ಜಸ್ಟ್ಮೆಂಟ್.
ಅಂದರೂ ಮುಪ್ಪು ಒಂದು ಶಾಪವೇ?
 

‍ಲೇಖಕರು G

18 November, 2014

1 Comment

  1. suresh

    very nice the story

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading