– ದಯಾನ೦ದ್ ಟಿ.ಕೆ.
ಅಂಡರ್ ನೈಂಟೀನ್ ಚೌಕಾಬಾರಾ ಕಪ್!
ನಮ್ಮ ಊರಲ್ಲಿ 24×7 ಆಕ್ಟೀವ್ ಆಗಿರುವ ವಯೋವೃದ್ಧೆಯರ “ಅಂಡರ್ ನೈಂಟೀನ್ ಚೌಕಾಬಾರಾ ಕಪ್” ಕಾಂಪಿಟಿಷನ್.. ಫೋಟೋ ತೆಗೆಯುತ್ತಿರುವಾಗ ಕೆಂಪವ್ವನೆಂಬ ಚೌಕಾಬಾರ ಪ್ರವೀಣೆ “ಯಾಕ್ ಮರೀ ಹಿಂಗ್ ಪೋಟವ ಹಿಡಕಂತಾ ಇದೀಯ” ಅಂತು. ಪಕ್ಕದಲ್ಲಿದ್ದ ಗೆಳೆಯ ರಾಜು “ಇಸ್ಪೀಟ್ ಆಡೋರು, ಚೌಕಾಬಾರಾ ಆಡೋರನ್ನ ಹಿಡಕಂಡೋಗಿ ಜೈಲಿಗಾಕೋಕೆ ಕಾನೂನು ಮಾಡವ್ರೆ” ಅದಕ್ಕೆ ಪೋಟ ತೆಗೀತಾ ಇದೀವಿ ಅಂದ.. ಗಾಬರಿ ಬಿದ್ದ ಸಾಕಮ್ಮಜ್ಜಿ “ಲೇ ಎದ್ದೇಳ್ರೇ.. ಪೋಲೀಸ್ರಿಗೆ ಹಿಡಕೊಡಾಕೆ ಪೋಟ ತೆಗೀತಾ ಅವ್ರೆ” ಅಂತ ಎದ್ದು ನಿಂತೇ ಬಿಟ್ಟಿತು. ಅದಕ್ಕೆ ಸೊಪ್ಪು ಹಾಕದ ಇನ್ನೊಂದು ಅಜ್ಜಿ ” ಲೇ ಕೂಕಳೇ.. ಅದ್ಯಾವ ದಪೇದಾರ ಬತ್ತನೆ ನೋಡನ.. ಬರಲು ತಗಂಡು ಮಕ ಕೆತ್ತನ” ಅಂದು ಹುಣಸೇಬೀಜವನ್ನು ನೆಲಕ್ಕೆ ರೊಯ್ಯನೆ ಬೀಸಿತು. ಪೋಲೀಸಿನವನು ಈ ಅಪಾಯಕಾರಿ ಮುದುಕಿಯರ ಗ್ಯಾಂಗಿನ ಮಧ್ಯೆ ಸಿಗಾಕ್ಕಂಡ್ರೆ ಅವನ ಪಾಡೇನಾಗುತ್ತಪ್ಪ ಅಂತ ಯೋಚಿಸಿ ನನಗೂ ಗಾಬರಿಯಾಯಿತು.]]>






ಹ್ಹೊಹ್ಹೊಹ್ಹೊಹ್ಹೊಹ್ಹೊ …..ಈ ಪ್ರವೀಣೆಯರಲ್ಲಿ ಯಾರಿಗ್ ಸಿಕ್ತಪ್ಪಾ ಕಪ್ಪು ?
ಅಂಡರ್ ನೈಂಟಿ?
hahahaha good one!!!title is nice!!
malathi S
:):)
wonderful.