ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಗೈಯಗಲ ಗೋರಂಟಿ..

My Photo

-ಚರಿತಾ

ಗೋರಂಟಿ ಯಿಂದ..

ನೋಡನೋಡುತ್ತ ಅಷ್ಟೆತ್ತರ ಬೆಳೆದು ತೊನೆಯುವ ಗೋರಂಟಿ ಗಿಡ. ಈಷ್ಟುದ್ದ ಕೈಚಾಚಿಯೇ ಪಡೆಯಬೇಕು ಒಂದೊಂದೆ ಎಲೆಗೆಳನ್ನ. ಅದರ ಧಿಮಾಕು ನಮಗೆ ತಿಳಿಯೋದಾದ್ರೂ ಹೇಗೆ ಮತ್ತೆ?
ಎಲ್ಲಿ ನೋವಾಗುತ್ತೋ ಅಂತ ಒಂದೊಂದೆ ಎಲೆಗಳನ್ನ ನಿಧಾನ ಬಿಡಿಸಿಕೊಳ್ಳಬೇಕು ಅದರ ತೊಟ್ಟಿಂದ. ಬೊಗಸೆ ತಂಬ ಪುಟ್ಟ ಪುಟ್ಟ, ಚೂಪು ಮೂತಿಯ, ಚೆಂದದ ಎಲೆಗಳಿಗೊಮ್ಮೆ ಕಣ್ಣು ತಾಗಿಸಿ, ಅಪರೂಪಕ್ಕೊಮ್ಮೆ ಅಜ್ಜಿಯನ್ನು ನೆನಪಿಸುವ ಅರೆಯುವ ಕಲ್ಲಮೇಲೆ ಇವುಗಳನ್ನಿಟ್ಟು, ಗರಾ ಗರಾ ರಾಗ ತೆಗೆಸಬೇಕು.. ಅಜ್ಜಿಗೆ ತನ್ನ ಯೌವನದ ಗೋರಂಟಿ ಕೈ ನೆನಪಾದಾಗ ಯಾವುದೋ ಖುಶಿಯಿಂದ ಗುನುಗಿಕೊಂಡ ಹಾಗೆ.. ಆಗಲೇ ಘಮ್ಮ್…ಅನ್ನೊ ಗಾಢ ಹಸಿರು ಬಟ್ಟಲು ಸೇರೋದು. ಮಾಟಗಾತಿ ಥರ ಈ ಹಸಿರಿನ ಮೇಲೆ ನಿಧಾನಕ್ಕೆ ಮಳ್ಳ ಮಣ್ಣಿನ ಬಣ್ಣವೊಂದು ಹಾಸಿಕೊಳ್ಳುತ್ತೆ…ನಾವೂ ಕೂಡ ಇದನ್ನು ಕಂಡೇ ಇರದ ಹಾಗಿರಬೇಕು!

ಇನ್ನು, ಬಸುರಿ ಥರ ನಾಚಿಕೊಂಡು, ಒಳಗೊಳಗೆ ಸಂಭ್ರಮಪಡುವ ಅಂಗೈಯನ್ನೊಮ್ಮೆ ಕಣ್ಣು ಕಿರಿದು ಮಾಡಿ, ಸ್ವಲ್ಪ ಹುಬ್ಬು ಗಂಟಿಕ್ಕಿ ದಿಟ್ಟಿಸಬೇಕು – ಉಕ್ಕಿಬರುವ ಉತ್ಸಾಹ ಹೊರಗೆ ಸುರಿದುಹೋಗದಂತೆ ತೆಳುವಾದ ನಗುವಿನ ಮುಚ್ಚಳ ಹಾಕಿ ಒಮ್ಮೆ ಅಂಗೈ ನೋಡಬೇಕು. ಯಾವ ಚಿತ್ರ, ಎಷ್ಟುದ್ದ ಗೆರೆ, ಎಂಥ ಚುಕ್ಕಿ, ಎಲ್ಲಿ, ಎಷ್ಟು, ಹೇಗೆ ಅಂತ ಮನಸಲ್ಲೇ ನಕಾಶೆ ಮಾಡಿ,..ಚಿತ್ರ ಹಚ್ಚಬೇಕು.  ಗೋರಂಟಿ ಅಂಟಿದ ಕೈ ಒಮ್ಮೆಗೆ ತಣ್ಣಗಾಗಿ, ನಿಧಾನ ಬಿಸಿಯಾಗುತ್ತ ಬಣ್ಣ ಬಸಿದುಕೊಳ್ಳುವ ಖುಶಿಗೆ ತಲೆದೂಗಬೇಕು. ಇನ್ನು ಈ ಚಿತ್ರದ ಕೈಗಿಂತ ಇಡೀ ಜಗತ್ತಲ್ಲಿ ಮತ್ತೇನೂ  ಮುಖ್ಯವಲ್ಲವೇ ಅಲ್ಲ ಅನ್ನೋಹಾಗೆ ಜೋಪಾನಮಾಡಲೇಬೇಕು. ಮದರಂಗಿಯ ಮದವೆಲ್ಲ ಅಂಗೈಗೆ ಇಳಿದು, ಉಳಿದು ನಿಲ್ಲುವ ತನಕ ಮೈಯೆಲ್ಲ ಕಣ್ಣಾಗಿರಲೇಬೇಕು.

ಆಹ್! ಬಂದೇ ಬರಬೇಕು ಆ ಘಳಿಗೆ ಕೂಡ! ಒಣ ಚಿತ್ರ ತಾನಾಗಿ ಉಸ್ಸಪ್ಪ,.. ಸಾಕು ಅನ್ನುವ ಕಾಲ, ಕೈಯಿಂದ ಬಿಡಿಸಿ ತೊಳೆದುಹೋಗುವ ಕಾಲ. ಹಾ,..ಈಗ ಇದು ಶತಮಾನಗಳಿಂದ ಇಲ್ಲೇ ಅಡಗಿ ಕುಳಿತು, ಈಗಷ್ಟೆ ಮೈಮುರಿದು ಎದ್ದುಕುಳಿತಂಥ ಬಣ್ಣ! ಅಂಟಿದ್ದಲ್ಲ,..ಇಲ್ಲೇ, ಈಗಲೇ ಹುಟ್ಟಿದ್ದು ಅನ್ನುವ ಹಾಗೆ! ಮುಖದ ಇಷ್ಟಗಲ ನಗುವಿಗೂ ಗೋರಂಟಿ ಕೆಂಪು! ಜಗತ್ತಿನ ಕಾವ್ಯ, ಸಂಗೀತ, ಚಿತ್ರ, ಕಥೆಗಳೆಲ್ಲ ಆ ಕ್ಷಣವೇ ಜೀವಂತ!!

ಈ ಘಮ್ಮನೆ ಗೋರಂಟಿ ಕೈಯಗಲದಲ್ಲಿ ದೃಶ್ಯಕಲೆಯನ್ನು ಕುರಿತು, ಮುಖ್ಯವಾಗಿ ಚಿತ್ರಕಲೆ ಮತ್ತು ದೃಶ್ಯಗ್ರಹಿಕೆಯ ಪರಿಭಾಷೆಯನ್ನು ಕುರಿತು ನುಡಿ-ನೋಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ, ಚರ್ಚಿಸುವ, ಸಂವಾದಿಸುವ ಆಸೆ ನನ್ನದು. ಬನ್ನಿ, ಅಂಗೈಯಗಲದ ಗೋರಂಟಿಯ ಬಣ್ಣ, ಬೆರಗನ್ನು ಕಾಣಿ. ನಿಮ್ಮ ಟೀಕೆ, ವಿಮರ್ಶೆ, ಸಲಹೆ, ಸಹನೆಯಿಂದ ಈ ಅಂಗೈಮೇಲೆ ಹೊಸ ಚಿತ್ರಗಳ ಸಾಧ್ಯತೆಯನ್ನು ಆಗುಮಾಡಿ.

‍ಲೇಖಕರು sreejavn

1 November, 2011

3 Comments

  1. Rankusa

    nicely narrated one though there have already been a number of aritcles on the same subject, both in prose and verse. this one more or less translates into a do-it-yourself guide that explains how to prepare, apply, and enjoy henna onto some delicate hands; or into a writing that makes a mockery of the city-born-and-bred mademoiselles who are completely deprived of the little joys that when added together, make up something called “Life!” 🙂

    but i couldn’t control guffawing when i read the line “ಮದರಂಗಿಯ ಮದವೆಲ್ಲ ಅಂಗೈಗೆ ಇಳಿದು, ಉಳಿದು ನಿಲ್ಲುವ ತನಕ ಮೈಯೆಲ್ಲ ಕಣ್ಣಾಗಿರಲೇಬೇಕು.” “ಮದರಂಗಿಯ ಮದ??” – hello, excuse me! what does this exactly mean? ROFLOL! well, i believe its been used to spiece up the writing. or may be the writer got carried away with his own prowess of using rhymes! lol. if you really wanted to use rhymes, then i’m wondering why didn’t you think of something like “ಮದರಂಗಿಯ ಮದವೆಲ್ಲ ಮದವೇರಿದ ಮದ್ದಾನೆಯ ಮದವಡಗಿಸಿದ ಮದಕರಿನಾಯಕನ ಮದುವೆಯ ಮುನ್ನಾದಿನದಾತನ ಮತ್ತೇರಿದ ಮೈಯ್ಯಂತೆ ಮಿರಮಿರನೆ ಮಿಂಚುತಿರ್ಪುದು…” sounds better, doesn’t it? lolz 😀

    …still laughing,
    -R

  2. charitha

    Dear Rankusa,..

    first of all I am glad to receive your ‘lively’ comment! thanks for that.:-)but wondering why people always want to get struck with some expectation of finding only guidelines or info through all articles?!

    ‘ಮದರಂಗಿಯ ಮದ’ ಅಂದಿದ್ದು ಪ್ರಾಸಕ್ಕಾಗಿ ಅಲ್ಲ. ನಿಜಕ್ಕೂ ಮದರಂಗಿಗೆ ‘ಮದ’ ಇಲ್ಲ ಅನಿಸುತ್ತಾ ನಿಮಗೆ?! ಕಂಡಕಂಡವರೆಲ್ಲ ಬೆರಗಾಗೋ ಬಣ್ಣ ಕೊಡುವ ಈ ‘ಮದರಂಗಿ’ ಅನ್ನೋ ಪದ ಹುಟ್ಟಿದ್ದೇ ಅದರ ‘ಮದ’ದ ಕಾರಣಕ್ಕೆ ಅನ್ನೋದು ನನ್ನ ಗಟ್ಟಿ ನಂಬಿಕೆ! 🙂

    ‘ಅವಧಿ’ ಯಲ್ಲಿ ಇದನ್ನು share ಮಾಡಿದ್ದಕ್ಕೆ ‘ಅವಧಿ’ಗೆ ಧನ್ಯವಾದ.ತಿಳಿಸಿದ್ದಕ್ಕೆ ನಿಮಗೂ.

    ಅಂದಹಾಗೆ, ನಿಮ್ಮ ವಿಚಿತ್ರ ಹೆಸರನ್ನು ಬಿಡಿಸಿ ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸ್ತಾ ಇದೀನಿ. Ran+kusa? or Rank+usa ? ತಿಳೀತಿಲ್ಲ. ಸ್ವಲ್ಪ help ಮಾಡಿ ಪ್ಲೀಸ್! 🙂

  3. D.RAVIVARMA

    madam.nimma le khana tumba chennagide.ofcourse egiga kelavu patrikegalalli idara bagge lekhana odidde, but nimma lekhana different agide,aste alla ondistu kushi,hagu mada needuvantide, ondistu olle photosgalu akabahudittu,illi hampiyalli dinanityalu videshiyayaru tamma kaimele,bujada mele okkula mele,benna mele hacche hakisuttare, hinsi cinemagalalli idara pramukyateyannu tumba chennagi torisiddare. nimma lekhana hagu nimma chintanegu abhinandanegalu. idu sampradayada kale.idu nirantaravagirali endu asisutta……….
    d,ravi varma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading