ಅಂಕಲ್ ಪೈ ಎಂದು ಜನಪ್ರಿಯರಾಗಿದ್ದ ಇವರು ಭಾರತದ ಶಿಕ್ಷಣತಜ್ಞ ಮತ್ತು ಭಾರತೀಯ ಕಾಮಿಕ್ಸ್ನ ಜನಕ. ೧೯೬೭ರಲ್ಲಿ ಇಂಡಿಯಾ ಬುಕ್ ಹೌಸ್ ಜತೆ ಸೇರಿ “ಅಮರ ಚಿತ್ರ ಕಥೆ” ಸರಣಿಯನ್ನು ಆರಂಭಿಸಿ ಭಾರತದ ಸಾಂಪ್ರದಾಯಿಕ ಜಾನಪದ ಕತೆಗಳು, ಪುರಾಣಕತೆಗಳು , ಐತಿಹಾಸಿಕ ವ್ಯಕ್ತಿಗಳ ಚರಿತ್ರೆಗಳನ್ನು ಮತ್ತೆ ಹೇಳಲಾರಂಭಿಸಿದರು. ಮಕ್ಕಳಿಗಾಗಿ ೧೯೮೦ ರಲ್ಲಿ “ಟಿಂಕಲ್” ಎಂಬಪತ್ರಿಕೆಯನ್ನು ಆರಂಭಿಸಿದರು. ಅದು ಭಾರತದ ಮೊದಲ ಕಾರ್ಟೂನ್ ಮತ್ತು ಕಾಮಿಕ್ಸ್ ಪತ್ರಿಕೆಯಾಗಿತ್ತು. ಅನಂತ್ ಪೈಯವರು ಹೃದಯಾಘಾತದಿಂದಾಗಿ ೨೪ ಫೆಬ್ರುವರಿ ೨೦೧೧ ರಂದು ನಮ್ಮನ್ನು ಅಗಲಿದರು. ಈಗ , ಅಮರ ಚಿತ್ರ ಕಥೆ, ಇಂಗ್ಲೀಷ್ ಮತ್ತು ೨೦ ಭಾರತೀಯ ಭಾಷೆಗಳಲ್ಲಿ ವರುಷಕ್ಕೆ ಸುಮಾರು ಮೂವತ್ತು ಲಕ್ಷ ಪ್ರತಿಗಳಷ್ಟು ಮಾರಾಟವಾಗುತ್ತದೆ. ಒಟ್ಟು ಈ ವರೆಗೆ ಮಾರಾಟವಾಗಿರುವ ಪ್ರತಿಗಳ ಸಂಖ್ಯೆ ಹತ್ತು ಕೋಟಿ. ಅವರ 82 ನೇ ಜನ್ಮ ದಿನವಾದ ಇಂದು ‘ಗೂಗಲ್’ ಪ್ರಕಟಿಸಿರುವ ‘ಡೂಡಲ್’ ಇಲ್ಲಿದೆ.
‘ಅಂಕಲ್ ಪೈ’ ಇನ್ ಗೂಗಲ್..
ನಿಮಗೆ ಇವೂ ಇಷ್ಟವಾಗಬಹುದು…



0 Comments