ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌದು, ಕಾಲನಿಗಿರುವುದು ಒಂದೇ ಮುಖ..

 ಕಾಲಜ್ಞಾನ

ರೇಷ್ಮಾ ರಾವ್ 

 

clockಕಾಲವೇ ನನ್ನ ಕೈಲಿ ಎಂದು ನಡೆಯುತಿದ್ದೆ

ಹಾದಿ ಬದಲಾಗಲಿಲ್ಲ

ಹುಟ್ಟಿನಿಂದ ಸಾವಿನೆಡೆಗೆ

ಬಿಂಬವನ್ನೇ ನಂಬುವುದಾದರೆ ಎಷ್ಟು ಚೆನ್ನ ?

ಕಾಲ ತಿರುಗುತ್ತದೆ, ಎಲ್ಲ ಉಲ್ಟಾ-ಪಲ್ಟಾ

ಸಾವಿನಿಂದ ಹುಟ್ಟಿನತ್ತ ಪಯಣ

ಅನುಭವಗಳ ಮೂಟೆ ಶೂನ್ಯದತ್ತ

ಸಾಗುತ್ತ, ನಾನು ಮಗುವಾಗುತ್ತೇನೆ

ಅಣುವಾಗುತ್ತೇನೆ, ಖಾಲಿಯಾಗುತ್ತೇನೆ

ಕಾಲನ ಕೈಲಿ ಏನೂ ಇಲ್ಲವಾಗುತ್ತೇನೆ

ಅರೆ ! ಮತ್ತೆ ಬಂದಿದ್ದು ಹುಟ್ಟೇ ಸಾವೇ ?

ಮುಂದೋಡಿದರೂ, ಹಿಂದೋಡಿದರೂ

ಹುಟ್ಟೇ ಸಾವಾಗುತ್ತದೆ, ಸಾವೇ ಬದುಕಾಗುತ್ತದೆ

ಕಡೆಗೆ ಅರಿವಾಗುತ್ತದೆ

ಹೌದು, ಕಾಲನಿಗಿರುವುದು ಒಂದೇ ಮುಖ

‍ಲೇಖಕರು Admin

17 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading