ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ


ಪತ್ರಿಕೋದ್ಯಮಕ್ಕೆ ಇರೋ ನೂರಾರು ಸವಾಲುಗಳಲ್ಲಿ ಇದೂ ಒಂದು. ಪದಗಳನ್ನ ಸೃಷ್ಟಿಸೋದು. ಇಂಗ್ಲಿಷ್ ನಲ್ಲಿ ಜಗಿಯಕ್ಕೂ ಆಗದೇ ಇರೋ ಕಬ್ಬಿಣದ ಕಡಲೆಗಳನ್ನ ಕನ್ನಡದಲ್ಲಿ ಸಲೀಸಾಗಿ ಅರ್ಥ ಆಗುವ ಹಾಗೇ ಮಾಡ್ಬೇಕು. ಇಲ್ಲಾ ಕನ್ನಡದಲ್ಲೇ ಬರೀತೀವಿ ಅಂದ್ರೂ ನೇರಾನೇರ ಓದುಗರಿಗೆ ನಾಟಬೇಕು. ಈ ಪ್ರಯತ್ನದಲ್ಲೇ ಪದಗಳನ್ನ ಠಂಕಿಸೋ ಕೆಲಸ ಶುರುವಾಗೋದು. ಆಲ್ ಇಂಡಿಯಾ ರೇಡಿಯೋ ಶುರುವಾದಾಗ ಕನ್ನಡದಲ್ಲಿ ಇದನ್ನ ಏನಂತ ಕರೆಯೋದು ಅಂತ ಎಲ್ಲರೂ ತಲೆ ಕೆರೆದುಕೊಳ್ತಾ ಇದ್ದಾಗ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮರು ‘ಆಕಾಶವಾಣಿ’ ಅಂತ ಪದ ಸೂಚಿಸಿದರು. Ordinance ಅನ್ನ್ನೋ ಇಂಗ್ಲಿಷ್ ಶಬ್ದ ಮೊದಲು ಎದುರಾದಾಗ ಎಲ್ಲರೂ ಕಕ್ಕಾಬಿಕ್ಕಿ. ತಿರುಮಲೆ ತಾತಾಚಾರ್ಯರು ಚೆನ್ನಾಗಿ ರಾಮಾಯಣ ಓದಿದವರು ಆಲ್ವಾ. ಸುಗ್ರೀವನ ಖಡಕ್ ಆಜ್ಞೆಯನ್ನು ಜ್ಞಾಪಿಸಿಕೊಂಡು ಸುಗ್ರೀವಾಜ್ಞೆ ಅಂತ ಕರೆದರು.
ಜಿ ಪಿ ರಾಜರತ್ನಂ ಯಂಡ್ಕುಡ್ಕ ರತ್ನ’ ನ ಕೈಲಿ ಸುಮ್ಸುಮ್ನೆ ಹೇಳಿಸಲಿಲ್ಲ- ‘ಮಾತ್ ಇರ್ಬೇಕು ಮಿಂಚ್  ಒಳ್ದಂಗೆ / ಕೇಳ್ದೋರ್ ಹಾಂ ಅನಬೇಕು / ಯೋಳಾದ್ ಏನ್ರ ಯೋಳಾದಿದ್ರೆ ಜಟ್ ಪಟ್ನೆ ಹೇಳಿ ಮುಗ್ಸು / ಸುತ್ಕೊಂಡ್ ಓಗಾದ್ ಸಾಜ ಅದ್ಯಾಕ್ ನಂಗು ನಿಂಗೂ…ಅಂತ
ಪೂರ್ಣ ಓದಿಗೆ –ಮೀಡಿಯಾ ಮೈಂಡ್

‍ಲೇಖಕರು avadhi

15 December, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading