ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಬಸ್ಸು ಬೀದರ್ ನಿಂದ ಬೆಂಗಳೂರಿಗೆ ಸಾಗುತ್ತಿತ್ತು. ಆಂಧ್ರದ ಮೇಲೆ ಮುಕ್ಕಾಲು ಭಾಗ ಸಂಚಾರ ಮಾಡಬೇಕಾಗಿದ್ದ ಬಸ್ ಅದು. ಹೈದರಾಬಾದ್ ಬಂತು ಅನ್ನುವುದನ್ನು ಅಲ್ಲಿನ ಭಾರೀ ಐ ಟಿ ಕಟ್ಟಡಗಳೂ, ಮಿನಾರುಗಳೂ ಸಾರಿ ಹೇಳುತ್ತಿದ್ದವು. ಇವೆಲ್ಲವನ್ನ್ನೂ ಕಣ್ಣೊಳಗೆ ತುಂಬಿಕೊಳ್ಳುತ್ತಾ ಸಾಗುತ್ತಿರುವಾಗಲೇ ಕಂಡದ್ದು ಆ ದೊಡ್ಡ ಫಲಕ- ‘ಈನಾಡು’. ಒಂದು ಕ್ಷಣ ರೋಮಾಂಚನವಾಯಿತು. ಪತ್ರಿಕೋದ್ಯಮ ಕ್ಲಾಸ್ ನಲ್ಲಿ ಎನ್ ಎಸ್ ಅಶೋಕ್ ಕುಮಾರ್ ‘ಈನಾಡು’ ಕಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಹೇಗೆ ಅದು ಭಾಷಾ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯಿತು ಅಂತ ತಿಳಿಸಿದ್ದರು. ಜಿಲ್ಲಾ ಆವೃತ್ತಿ ಎನ್ನುವ ಕಲ್ಪನೆಗೆ ಚಾಲನೆ ಸಿಕ್ಕಿದ್ದೇ ಈನಾಡುವಿನಿಂದ ಅಂತ ತಿಳಿಸಿದ್ದರು. ಅಂತಹ ಈನಾಡುವಿನ ಮುಂದೆ ನಾನಿದ್ದ ಬಸ್ ಹಾದುಹೋಗುತ್ತಿತ್ತು. ನನಗೋ ಕಾಲಕೋಶದಲ್ಲಿ ಕುಳಿತು ಪತ್ರಿಕೋದ್ಯಮದ ಇತಿಹಾಸದ ಅಂಗಳಕ್ಕೆ ಜಾರಿ ಅಲ್ಲಿನ ಮೈಲಿಕಲ್ಲುಗಳನ್ನು ಮುಟ್ಟುತ್ತಿದ್ದೇನೆ ಅನಿಸಿತು.
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್

‍ಲೇಖಕರು avadhi

7 December, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading