ಇನ್ನೂ ನೇತ್ರಾವತಿಯ ಸೇತುವೆಯನ್ನು ದಾಟಿರಲಿಲ್ಲ, ಆಗಲೇ ದಟ್ಟ ಹೊಗೆ ಎದ್ದು ನಿಂತಿತ್ತು. ಮಂಗಳೂರಿನಿಂದ ಹರದಾರಿ ದೂರವಿರುವ ವಿಶ್ವವಿದ್ಯಾಲಯಕ್ಕೆ ಹೋಗಬೇಕಾದರೆ ನೇತ್ರಾವತಿ ದಾಟಲೇ ಬೇಕು. ವಿಶ್ವವಿದ್ಯಾಲಯಕ್ಕೆ ಅನಂತಮೂರ್ತಿ ಬರುವವರಿದ್ದರು. ’ಪ್ರಜಾವಾಣಿ’ಯಲ್ಲಿದ್ದ ನಾನು ಸ್ಕೂಟರ್ ಏರಿ ಹೊರಟಿದ್ದೆ. ಅಷ್ಟರಲ್ಲಿ ಕಲ್ಲುಗಳ ತೂರಾಟ ಆರಂಭವಾಯಿತು. ಬಸ್ ಗಳಲ್ಲಿದ್ದವರು ಭಯ ಹೊತ್ತ ಮುಖಗಳೊಂದಿಗೆ ದುಡುದುಡನೆ ಇಳಿದು ಚೆಲ್ಲಾಪಿಲ್ಲಿಯಾದರು. ಟೈರುಗಳಿಗೆ ಹತ್ತಿದ ಬೆಂಕಿ ತನ್ನ ಕಮಟು ವಾಸನೆಯಿಂದ ಪರಿಸ್ಥಿತಿಗೆ ಇನ್ನಷ್ಟು ಭೀಕರ ಸ್ಪರ್ಶ ನೀಡಿತು. ಅದು ಡಿಸೆಂಬರ್ 6 ರ ನಂತರದ ದಿನ. ಸ್ಕೂಟರ್ ಹಿಂದಕ್ಕೆ ತಿರುಗಿಸುವಷ್ಟರಲ್ಲಿ ಸೇತುವೆಯ ಇನ್ನೊಂದು ಭಾಗದಲ್ಲೂ ಬೆಂಕಿ. ಬಸ್ ಗಳಿಂದ ಇಳಿದವರು ಪ್ರಾಣ ಭಯದಿಂದ ತಮ್ಮ ಮನೆಯತ್ತ ಓಡಲು ತೊಡಗಿದರು. ಮೊದಲ ಬಾರಿಗೆ ಊರಿಗೆ ಊರೇ ನಿರಾಶ್ರಿತವಾಗಿಬಿಡುತ್ತಿದೆ ಎನ್ನುವ ಭಾವನೆ ಬಂತು. ದಿನಗಳು ಉರುಳುತ್ತಿದ್ದರೂ ಹತ್ತಿದ ಬೆಂಕಿಗೆ ಆರುವ ಅವಸರವೇ ಇಲ್ಲ. ಸುಡುವ ಬೆಂಕಿಗೆ ಮೈಯೆಲ್ಲಾ ಕಾಲು. ಅದು ನದಿ ದಾಟಿತು, ಬೆಟ್ಟ ಏರಿತು, ಸಿಕ್ಕ ಊರುಗಳನ್ನ, ಕಂಡ ಕಂಡಲ್ಲೆಲ್ಲಾ ಗಲಭೆ ಹರಡುತ್ತಲೇ ಹೋಯಿತು.
ಪೂರ್ಣ ಓದಿಗೆ ಭೇಟಿ ಕೊಡಿ : ಮೀಡಿಯಾ ಮೈಂಡ್
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ನಿಮಗೆ ಇವೂ ಇಷ್ಟವಾಗಬಹುದು…





0 Comments