ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

‘ಸ್ಟ್ರಿಂಜರ್ ಎಂದರೆ ಯಾರು..’ ಅನ್ನೋ ಪ್ರಶ್ನೆ ಬಂದದ್ದು ಇನ್ಯಾರಿಂದಲೂ ಅಲ್ಲ, ಮೀಡಿಯಾದ ವಿದ್ಯಾರ್ಥಿಗಳಿಂದಲೇ. ಅವರಿಗೆ ರಿಪೋರ್ಟರ್ ಗೊತ್ತು , ಸಬ್ ಎಡಿಟರ್ ಗೊತ್ತು, ಎಡಿಟರ್ ಕೂಡಾ ಗೊತ್ತು, ಆನ್ ಲೈನ್ ಎಡಿಟರ್ ಗೊತ್ತು, ಪ್ರೊಡಕ್ಷನ್ ಎಕ್ಸಿಕ್ಯುಟಿವ್ ಗೊತ್ತು, ಆಂಕರ್ ಗೊತ್ತು… ಆದರೆ ಗೊತ್ತಿಲ್ಲದೇ ಇದ್ದದ್ದು ಸ್ಟ್ರಿಂಜರ್ ಮಾತ್ರ.

ತಕ್ಷಣ ನನ್ನ ನೆನಪು ಇಪ್ಪತ್ತು ವರ್ಷಕ್ಕೂ ಹಿಂದಕ್ಕೆ ಓಡಿತು. ‘ಅದು ಸ್ಟ್ರಿಂಜರ್ ಅಲ್ಲ, ಸ್ಟ್ರಿಂಗರ್’ ಎಂದಿದ್ದರು ಆರ್ ಪೂರ್ಣಿಮಾ. ಡೆಕ್ಕನ್ ಹೆರಾಲ್ಡ್ ನ ಮುಖ್ಯಸ್ಥರೊಬ್ಬರಿಂದ ಅವರು ಏನು ಕಲಿತಿದ್ದರೋ ಅದನ್ನು ನನಗೆ ಪಾಠ ಮಾಡಿದ್ದರು. ಸ್ಟ್ರಿಂಗರ್ ಎಂಬುದು ‘ಸ್ಟ್ರಿಂಗ್’ ನಿಂದ ಬಂದ ಪದ. ಆತ ಒಂದು ಕೊಂಡಿ. ಪತ್ರಿಕಾ ವ್ಯವಸ್ಥೆಯಲ್ಲಿ ‘he is a string’ ಅಂದಿದ್ದರು. ನನ್ನ ನಾಲಿಗೆ ನಂತರ ತಪ್ಪು ಮಾಡಲಿಲ್ಲ. ಈಗ ಮೀಡಿಯಾ ವಿದ್ಯಾರ್ಥಿಗಳ ಮುಂದೆ ಕುಳಿತು ಅವರ ನಾಲಿಗೆಗೆ ಉಚ್ಚಾರಣೆ  ಕಲಿಸುತ್ತಿದ್ದೆ. ‘ನೀವೇ ಹೇಳಿ ನೋಡೋಣ  ಸ್ಟ್ರಿಂಗರ್ ಅಂದ್ರೆ ಏನು ಅಂತ?’ ಅಂತ ನಾನೇ ಪ್ರಶ್ನಿಸಿದೆ. ಸಂಬಳ ಇಲ್ಲದೆ ಕೆಲಸ ಮಾಡೋರು ಸ್ಟ್ರಿಂಗರ್ ಎಂದರು. ಒಂದು ಕ್ಷಣ ಬೆಚ್ಚಿಬಿದ್ದೆ.

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

4 May, 2010

2 Comments

  1. bavivekrai

    ಪತ್ರಿಕೆ ಮತ್ತು ಟಿವಿ ಗಳಲ್ಲಿ ಅರೆಕಾಲಿಕ ಕೆಲಸಮಾಡುವವರ ಬಗ್ಗೆ ಒಳನೋಟ ಉಳ್ಳ ಲೇಖನ.ಅನೇಕ ಹಿರಿಯ ಪತ್ರಕರ್ತರ ಮಹತ್ತನ್ನು ತೋರಿಸಿದ್ದೀರಿ.ದುಡಿಮೆ ಮತ್ತು ಸಾಧನೆ ಮೂಲಕ ಮಾಧ್ಯಮ ಕಟ್ಟುವವರ ಸಂಕಥನ ವಿಶಿಷ್ಟ ಆಗಿದೆ.

  2. ಪ.ರಾಮಚಂದ್ರ,ರಾಸ್ ಲಫ್ಫಾನ್-ಕತಾರ್

    1972ನೇ ಇಸವಿಯಿಂದ ಪತ್ರಿಕೋದ್ಯಮಕ್ಕೆ ಸಂಬಂದವಿಲ್ಲದ ಸಮೂಹ ಮಾಧ್ಯಮದಲ್ಲಿ ತೊಡಗಿಸಿಕೊಂಡು ಸಂಪೂರ್ಣ ಕೈ ಸುಟ್ಟಾಗ 1974ನೇ ಇಸವಿಯಲ್ಲಿ ನನ್ನ ತಂದೆ ಶ್ರೀ. ಪ. ಗೋಪಾಲಕೃಷ್ಣ ಅವರು ಕಾರ್ಯನಿರತ ಪತ್ರಿಕೋದ್ಯಮಕ್ಕೆ ಮರಳಿ ಬಂದದ್ದು ಯು.ಎನ್.ಐ. ವಾರ್ತಾ ಸಂಸ್ಥೆಯ ಸ್ಟ್ರಿಂಗರ್ ಆಗಿ.

    ಸ್ಟ್ರಿಂಗರ್ ಎಂಬುದು ‘ಸ್ಟ್ರಿಂಗ್’ ನಿಂದ ಬಂದ ಪದ. ಆತ ಒಂದು ಕೊಂಡಿ. ಪತ್ರಿಕಾ ವ್ಯವಸ್ಥೆಯಲ್ಲಿ ‘he is a string’ ತಿಳಿಸಿದ ತಮಗೆ ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading