ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಹೆಣದ ಮನೆ ಬಾಗಿಲು

ಹೆಣದ ಮನೆ ಬಾಗಿಲು

– ವಿಜಯ್ ಹೂಗಾರ್

ಹಿಂದೆ ಚಲಿಸದೆ

ಹಿಂತಿರುಗಿ ಸೆಳೆಯುತಿದೆ

ಹಿಂದೆಂದೋ ಹಿಂಬಾಲಿಸಿದ

ಮೌನದ ಹಿಂಬಾಗಿಲು.

ನೋವು, ಅದರ ಕಾವು

ಒಂದೇ ಹಾಸಿಗೆಯಲಿ

ಚದುರಿಟ್ಟು

ಪೋಣಿಸಲು ಕರೆಯುತಿದೆ

ಕಾಣದ ಅವಳ ಮನೆಯ ಹೊಸ್ತಿಲು.

ಸಾವು ಬೆಳಗುವ ಮುನ್ನವೇ,

ಸಾವಿನ ರತ್ನಗಂಬಳಿ

ಬಾ ಎಂದು ಕರೆಯುತಿದೆ

ಹೆಣದ ಮನೆ ಬಾಗಿಲಲಿ ನಿಂತು.

ಎದೆಯ ಪ್ರಲಾಪಕೆ ಉಕ್ಕಿದೆ

ಮನದ ಕಾರ್ಮುಗಿಲು.

ಒಲವಿನ ತುಸು ಪ್ರೀತಿಗೆ

ಕಟ್ಟಬೇಕಾಗಿದೆ ವಿರಹದ ತೆರಿಗೆ

ತಕ್ಕಡಿಗೆ ಬಿದ್ದ ಒಲವು

ವಿರಹದ ಸೆಣಸಾಟದಲ್ಲಿ ಸಾಗಿದೆ

ತೂಕ ಬರದೆ ಒದ್ದಾಡುತಿದೆ ಒಲವು

ವಿರಹದ ಭಾರದ ದುಬಾರಿ ಗೆಲುವು

ಪದೇ ಪದೇ ಅದೇ ಭಾವ

ಎಡಬಿಡದೆ ಹುಡುಕುತಿದೆ

ಮತ್ತೆ ತನ್ನ ಕೈ ಸವರಲು.

ದಟ್ಟ ದಿಗಿಲು ಕೆರಳುವಂತಿದೆ

ಶೂನ್ಯಕ್ಕೆ ಶರಣಾಗಲು.

 

‍ಲೇಖಕರು G

4 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading