ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಹಸಿವು ಅಂದ್ರೆ ಹೇಗಿರುತ್ತೆ ಗೊತ್ತಾ?

ಗಿರೀಶ ಕುಂಬಾರ


ಹಸಿವೆ ಹಿಂಗಲ್ವಾ……? ಈ ಹಸಿವು ಮನಸ್ಸಿನ ಆಸೆ, ಆಕಾಂಕ್ಷೆಗಳನ್ನು ಹತ್ತಿಕ್ಕಿ ಹಣ್ಣಾಗಿ ಮಾಗುವಂತೆ ಮಾಡುತ್ತದೆ. ಬದುಕಬೇಕೆಂಬ ಆಸೆ ಇದ್ದ ಭವಿಷ್ಯದ ದಿನಗಳನ್ನು ‘ಜಿಗುಪ್ಸೆ’ ಆಗುವುಂತೆ ಮಾಡುತ್ತದೆ. ಹಸಿವಿನಿಂದಾಗಿ ನರನಾಡಿಗಳು ನಿಶ್ಯಕ್ತಿಯಿಂದ ತನ್ನ ಕಾರ್ಯಗಳನ್ನು ನಿಸ್ತೇಜ ಸ್ಥಿತಿಗೆ ತಂದಿರುತ್ತವೆ. ಯಾವುದೊ ಒಂದು ಹೊತ್ತು ಅರ್ಧಂಬರ್ಧ ತಿಂದ ಅಪೌಷ್ಟಿಕ ಆಹಾರ, ಕರಗಿ ಮಾರನೇಯ ದಿನದ ಕಕ್ಕಸಗುಂಡಿಗೆ ಹೋಗಲು ರೆಡಿಯಾಗಿರುತ್ತದೆ. ಹೊಟ್ಟೆ ಬರಿದಾದಾಗ ದೇಹದಲ್ಲಿರುವ ಅಂಗಾಂಗಗಳು ನರಳಿ, ಹೊಡೆದಾಡಿ ಅಪ್ರಜ್ಞಾ ವ್ಯವಸ್ಥೆಗೆ ಮರಳಿರುತ್ತವೆ.
ಇದೆಲ್ಲಾ ನಮ್ಮಂತ ಬಡವರಿಗೆ ಬ್ರಹ್ಮ ಪುರುಸೊತ್ತು ಇಲ್ಲದ ಸಮಯದಲ್ಲಿ ಬೇಡಾಗಿ ಗಿಚಿದ ಹಣೆಬರಹ. ಹೀಗೆ ಸುಮ್ಮನೆ ನನ್ನ ಗೆಳೆಯನನ್ನು ಕೇಳಿದೆ, ಹಸಿವಿನ ಬಗ್ಗೆ ನಿನಗೆನಾದರು ಗೋತ್ತಿದೆಯಾ? ಅಂತ. ಅವನು ಹೇಳಿದ ಉತ್ತರ ಹೀಗಿತ್ತು, ಹಸಿವೇನಾ….!! ಅದೇನೆಂದರೆ ನಂಗೆ ಗೊತ್ತಿಲ್ಲ ಪಾ, ಯಾಕಂದ್ರೆ ನಂಗೆ ಹಸಿವು ಆಗೊದ್ರೊಳಗೆ ಉಂಡು ಬಿಟ್ಟಿರ್ತೀನಿ ಅಂದ.
ಎಷ್ಟೋ ಜನ ಉಂಡಿದ್ದು ಅರಗಿಸಿ ಕೊಳ್ಳಲಾರದೆ ಗೋಳಾಡಿದರೆ, ಅದೇಷ್ಟೋ ಜನ ಒಂದೊತ್ತು ಊಟಕ್ಕೆ ಇಲ್ಲದಂತೆ ಮರುಗುತ್ತಾರೆ. ಅದರಲ್ಲೂ ಓದಲೇ ಬೇಕು, ಏನಾದರು ಸಾಧನೆ ಮಾಡಲೇಬೇಕು, ತಂದೆ-ತಾಯಿ ನಮ್ಮೇಲೆ ಇಟ್ಟಿರುವ ಆಸೆಗಳನ್ನು ಈಡೇರಿಸಲೇಬೇಕು. ಅವರಿಗೆ ಮೂರೋತ್ತು ಆರೋಗ್ಯಕರ ಊಟ ಕೊಡುತ್ತಾ, ಜೀವನದಲ್ಲಿ ಯಾವುದೇ ಕಷ್ಟಗಳು ಬಾರದಂತೆ ನೋಡಿಕೊಳ್ಳಬೇಕು. ಎಂದು ನೂರಾರು ಕನಸುಗಳ ಬುತ್ತಿಯನ್ನು ಕಟ್ಟಿಕೊಂಡ ಬಂದ ನಮ್ಮಂತವರ ಪರಸ್ಥಿತಿಯಂತ್ರು ಹೇಳತೀರದು.
‘ಕಲಿತರ ಕಲಿಬೇಕು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ’ ಅಂತ ಮನಸ್ಸಿನಲ್ಲಿ ಅಚಲವಾದ ಛಲವನ್ನು ಇಟ್ಟುಕೊಂಡ ಬಂದ ನನಗೆ ಹಸಿವು ಕೊಟ್ಟ ಪಾಠ ಜೀವನದಲ್ಲಿ ಎಂದು ಮರೆಯಲಾಗುವುದಿಲ್ಲ. ಉತ್ತಮ ಅಂಕ ಹೊಂದಿದ ನನಗೆ ಹಾಸ್ಟೆಲ್ ದೊರಕದೆ ಇದ್ದಾಗ ಹಾಸ್ಟೆಲ್ಗೊಸ್ಕರ ನಾಯಿಯಂತೆ ಅಲೆದಾಡಿದೆ. ದಿನದ ಒಂದೊತ್ತು ಊಟ ಮಾಡುತ್ತಿದ್ದೆ, ಅದು ಸ್ನೇಹಿತರು ತಂದ ಊಪಹಾರವೇ ನನಗೆ ಪಂಚಾನ್ಯ ಭೋಜನವಾಗಿ ಈಡಿ ದಿನದ ಹೊಟ್ಟೆ ತುಂಬಿಸುತ್ತಿತ್ತು. ಯಾಕಂದ್ರೆ ಬಡ ಕುಟುಂಬದಿಂದ ಬಂದ ವಿದ್ಯಾಥರ್ಿ ನಾನು. ನನ್ನ ಪೀಜು ತುಂಬೋಕು ನನ್ನ ಕುಟುಂಬ ಸಂಕಟ ಪಡುತ್ತಿತ್ತು ಅದಕ್ಕಾಗಿ ಹಣ ಕೇಳಿ ತೊಂದರೆ ಯಾಕೆ ಮಾಡೋದು ಅಂತ ಹಣವನ್ನು ಕೇಳುತ್ತಿರಲಿಲ್ಲ. ಕೊನೆಗೂ ಒಬ್ಬ ಪತ್ರಕರ್ತರ ವಾಕ್ ಚಾತುರ್ಯದಿಂದ ಹಾಸ್ಟೆಲ್ ಸಿಕ್ಕಿತು.
ಒಂದು ಕಡೆ ಹೇಳುತ್ತಾರೆ ಹಸಿವು, ಕಷ್ಟ, ಬಡತನ, ನಿರುದ್ಯೋಗ ಕಲಿಸುವುಂತಹ ಪಾಠವನ್ನು ಯಾವ ವಿಶ್ವವಿದ್ಯಾಲಯವು ಕಲಿಸುವುದಿಲ್ಲ. ನಿಜಕ್ಕೂ ಅವರ ಈ ಅನುಭವದ ಮಾತು ಅಕ್ಷರಶಃ ಸತ್ಯ. ಹಸಿವು ಅನ್ನುವ ಈ ರಾಕ್ಷಸಿ ಮಾಯೆ ಮನುಷ್ಯನನ್ನು ಹಿಂಡಿ ಹಿಪ್ಪಿರಿಗೆಯನ್ನಾಗಿ ಮಾಡುತ್ತದೆ. ಹೊಸತೇನಾದರು ಕಲಿಯಬೇಕು, ಏನಾದರು ಸಾಧಿಸಬೇಕು, ಎಂಬ ಆಸೆಯಿಂದ ಪ್ರತಿನಿತ್ಯ ಬೆಳಗ್ಗೆ ಬೇಗನೆ ಏಳುತ್ತಿದ್ದ ನನಗೆ ಈ ಹಸಿವು ನನ್ನನ್ನು ತಡೆದು ನನ್ನ ಆಸೆಗೆ ಮಣ್ಣೇರೆಚುವ ಕೆಲಸ ಮಾಡುತ್ತಿತ್ತು. ಕನಸ್ಸಿನ ಬುತ್ತಿಯನ್ನು ಕಟ್ಟಿಕೊಂಡ ಬಂದ ನಮಗೆ ಹಳಸವುಂತೆ ಮಾಡುವುದು ಹಸಿವು.
ಈ ಹಸಿವು ಎಷ್ಟೊ ಜನರನ್ನು ಸಾಧನೆಯ ಏಣಿಯನ್ನು ಏರುವ ಮೊದಲ ಮೆಟ್ಟಿಲಲ್ಲೆ ಅದುಮಿ ಹೆಡೆಮುರುಗೆ ಕಟ್ಟಿಬಿಡುತ್ತದೆ. ಹಸಿವಿನಿಂದ ಕಂಗಾಲಾಗಿ, ಬಂದ ದಾರಿ ಹೀಡಿಯಬೇಕು. ಇಲ್ಲವಾದರೆ ಓದಲು ಬಂದ ನಾವು ಕೆಲಸ ಮಾಡುವ ದಾಸರಾಗಬೇಕು. ಆದರೂ ಚಿಂತೆಯಿಲ್ಲ ಹಸಿವನ್ನು ಮೆಟ್ಟಿ ಸಾಧನೆಯ ಮೆಟ್ಟಿಲನ್ನು ಏರತ್ತಾರಲ್ಲ. ಆಗ ಹಸಿವು ಕೂಡಾ ನಾಚಿ ತಲೆತಗ್ಗಿಸಿ ಪಲಾಯನ ಮಾಡುತ್ತದೆ.
ಸ್ನೇಹಿತರೆ….
ಏನಾದರು ಸಾಧನೆಮಾಡಬೇಕೆಂದಾಗ ಹಸಿವು, ಆರ್ಥಿಕ ಸಮಸ್ಯೆ, ಬಡತನ, ಕಷ್ಟ , ಅಸಮಾನತೆ, ಲಂಚ, ಬೇರೆಯವರು ನಮ್ಮ ಬಗ್ಗೆ ಮಾತನಾಡುವ ಮಾತುಗಳೆಲ್ಲಾ ನಮ್ಮ ಮನಸ್ಸಿನ ದಿಕ್ಸೂಚಿಯನ್ನು ಬೇರೆ ಕಡೆಗೆ ವಾಲುವುಂತೆ ಮಾಡುತ್ತವೆ. ಇವುಗಳು ನಮ್ಮಂತ ಬಡವ-ಕಡುಬಡವ ವರ್ಗಕ್ಕೆ ದೇವರಿಟ್ಟ ಪರೀಕ್ಷೆಗಳು ಇಂತವುಗಳಿಗೆಲ್ಲಾ ಎದೆ ಸೆಟೆಸಿ, ಸೆಡ್ಡು ಹೊಡೆದು ಇವುಗಳನ್ನು ಮೆಟ್ಟಿ ಮುಂದೆ ಹೋದರೆ ನಿಜಕ್ಕೂ ನಮ್ಮ ಗುರಿ ಮುಟ್ಟುವಲ್ಲಿ ಸಂಶಯವೇ ಇಲ್ಲ.
 

‍ಲೇಖಕರು G

23 May, 2015

6 Comments

  1. Anonymous

    super sir.. all the best

    • Anonymous

      ಧನ್ಯವಾದಗಳು ಸರ್

  2. J.S.Ganjekar

    ಈ ಹಸಿವು ಎಷ್ಟೊ ಜನರನ್ನು ಸಾಧನೆಯ ಏಣಿಯನ್ನು ಏರುವ ಮೊದಲ ಮೆಟ್ಟಿಲಲ್ಲೆ ಅದುಮಿ ಹೆಡೆಮುರುಗೆ ಕಟ್ಟಿಬಿಡುತ್ತದೆ. ಹಸಿವಿನಿಂದ ಕಂಗಾಲಾಗಿ, ಬಂದ ದಾರಿ ಹೀಡಿಯಬೇಕು. ಇಲ್ಲವಾದರೆ ಓದಲು ಬಂದ ನಾವು ಕೆಲಸ ಮಾಡುವ ದಾಸರಾಗಬೇಕು. ಆದರೂ ಚಿಂತೆಯಿಲ್ಲ ಹಸಿವನ್ನು ಮೆಟ್ಟಿ ಸಾಧನೆಯ ಮೆಟ್ಟಿಲನ್ನು ಏರತ್ತಾರಲ್ಲ. ಆಗ ಹಸಿವು ಕೂಡಾ ನಾಚಿ ತಲೆತಗ್ಗಿಸಿ ಪಲಾಯನ ಮಾಡುತ್ತದೆ. super sir.. all the best

    • Anonymous

      ನಿಮ್ಮ ಈ ಪ್ರೋತ್ಸಾಹ ಹೀಗೆ ಇರಲಿ. ಧನ್ಯವಾದಗಳು ಸರ್.

  3. ಬಂದೇನವಾಜ ಮ್ಯಾಗೇರಿ

    ದೋಸ್ತ್, nice article. ನಿನ್ನೆಲ್ಲ ಅನುಭವದ ಮೂಟೆಗಳು ಅಕ್ಷರದಲ್ಲಿ ದ್ಋಶ್ಯಗಳನ್ನು ಕೆತ್ತಿದಂತಿತ್ತು, ಸೋ! ಧನ್ಯವಾದ ಗೆಳೆಯ, best of luck

    • Anonymous

      ಧನ್ಯವಾದಗಳು ಗೆಳೆಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading