ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಫ಼ೇಸ್ ಬುಕ್ ಎನ್ನುವ ಮಾಯಾಬಜ಼ಾರು..

ಫೆಸ್ಬುಕ್ ಎಂಬ ಜಾಗೃತ ಜಾಗ

– ವಿಜಯ್ ಹೂಗಾರ್

೧ ಭೌತಿಕ ಅಸ್ತಿತ್ವ ಇರದ ಕೃತಕ ಕುತೂಹಲ ಜನಕ. ನಮ್ಮ ಖಾಸಗಿ ಬದುಕಿನ ಪ್ರಾಯೋಜಕ. ನಾವು ಉಸಿರಾಡಿದ ಕ್ಷಣವನ್ನೂ ಬಣ್ಣ ಬಡೆಯುವ ತಾಣ ೨ ಲೈಕು, ಕಾಮ್ಮೆಂಟು ಘಳಿಸುವ ಗಂಭೀರ ಸ್ಪರ್ದೆ, ಇವತ್ತಿನ ಗಳಿಕೆ ಇಷ್ಟು,ನಿನ್ನದೆಷ್ಟು….? ಎಂಬ ಬಿಸಿನೆಸ್ಸಿನ ಮರ್ಯಾದೆ. ೩ ‘ಅನುದಿನ ನೂರು ಲೈಕು,ನೂರು ಟ್ಯಾಗು, ಲಲ್ಲೆಯಂಥ ಕಾಮ್ಮೆಂಟು,ಉದ್ದನೆಯ ಫ್ರೆಂಡ್ಸ್ ಲಿಸ್ಟು’ ಸಾಕಾಗಿದೆ ಅಂತ ಖುಷಿಯಿಂದಲೇ ಹೇಳುವ ಹುಡುಗಿಯರ ಮೇಲೆ ಹುಡುಗರ ಹೊಟ್ಟೆಯುರಿ. ೪ ಆಗಾಗ ಒಂಚೂರು ಗಂಭೀರ ಪೋಸ್ಟು, ಅಷ್ಟೇ ಗಂಭೀರ ಭಾವಚಿತ್ರ ತಗುಲಿಸಿ ಘಳಿಗೆಗೊಮ್ಮೆ ಬಾಗಿಲು ತೆರೆಯುವ ಹುಡುಗರ ವೈಖರಿ . ೫ ಭಾವಚಿತ್ರ ಅದೆಷ್ಟೇ ಕೆಟ್ಟದಾಗಿದ್ರು ಅಷ್ಟೇ ಸುಂದರ ನೋಟದಿಂದ ಸ್ವೀಕರಿಸಿ ‘ಸೂಪರ್ ಮಾಮ್’ ಹೇಳುವ ಅಗೋಚರ ಗೆಳೆಯರು ಅದೆಷ್ಟೇ ಗೂಗಲ್ ಮಾಡಿದರು ಸಿಗಲಾರರು. ೬ ಅರ್ಧ ಪುಟ ಬರೆದು ಕಮೆಂಟಿಗಾಗಿ ದಾರಿ ಕಾಯೋ ಹೊಸ ಪೀಳಿಗೆಯ ಬರಹಗಾರನಿಗೆ ಭೇಷ್ ಅನ್ನಿಸಿಕೊಳ್ಳುವ ಆತುರ. ಪ್ರೋತ್ಸಾಹದ ಸುರಿಮಳೆಗೆ ಮಾತ್ರ ಹುಟ್ಟುವದು ಮುಂದಿನ ಬರಹ. ೭ ಇವರು ಕೂಡ ಗೆಳೆಯರೇ: ಎದುರಿಗೆ ಸಿಕ್ಕರೆ ಮುಖತಿರುಗಿಸಿ ಹೋಗುವರು, ಹುಟ್ಟುಹಬ್ಬಕ್ಕೆ ಶುಭಾಶಯ ಹೇಳುವದು ಮಾತ್ರ ಮರೆಯಲಾರರು. ೮ ಕಾಯಕದ ಮೆಚ್ಚುಗೆಗೆ, ಹೇಳುವ ಸಂತೋಷಕ್ಕೆ ಹೇಳಲಾಗದ ನೋವಿಗೆ ಮುಕ್ತಿ ದೊರೆಯುವ ಜಾಗೃತ ಜಾಗ.]]>

‍ಲೇಖಕರು G

27 August, 2012

3 Comments

  1. Swarna

    Very nicely said.
    Swarna

  2. keshav

    Good one.

  3. v.n.laxminarayana

    ಜೊತೆಗೆ
    ಅಸಾಂಜ್ ಫೇಸ್ಬುಕ್ಅನ್ನು cia,fbi ನ ಗೂಢಚಾರಿಕೆಯ ಅತ್ಯಾಧುನಿಕ ಸಾಧನ ಎಂದು ಗುರುತಿಸಿದ್ದಾರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading