೧
ಪೇಟೆಯಿಂದ ಖರೀದಿಸಿ
ತಂದ ಅಜ್ಞಾತ ಪದಗಳು
ಕವಿತೆಯಲ್ಲಿ ಕಟ್ಟಿ ಹಾಕಿದ
ಕವಿಯನ್ನು ಶಪಿಸುತ್ತ ತನ್ನ
ಮರೆತ ಹೆಜ್ಜೆಯ ಹುಡುಕುತಿವೆ.
೨
ನೀರಿನಲ್ಲಿ ಗಾಳಿಯ ಹೆಜ್ಜೆಯ
ಹುಡುಕುತ ಮೀನು
ಹೊಳೆಯ ತುಂಬಾ ತನ್ನ ಹೆಜ್ಜೆಯಿಂದ
ಬಳೆಯಾಕಾರ ಮೂಡಿಸುತಿದೆ.
೩
ಮಾಮರಕೆ ಕಾವಲು ನಿಂತ
ಪೋರನ ಕಣ್ಣು ತಪ್ಪಿಸಿ
ದೋಚಿದ ಹೆಜ್ಜೆಗಳು
ಜಾಡಿಗೆ ಒಂದೆರೆಡು
ಕಾಯಿಯ ನೈವೇದ್ಯ ನೀಡಿದೆ.
೪
ಮಳೆಗೂ ಹೆಜ್ಜೆಗೂ ಒಂದು ನಂಟಿದೆ .
ಎಲ್ಲರಿಗು ತಮ್ಮ ಹೆಜ್ಜೆ
ಬರೆದಿಡುವ ಒಂದು ಅವಕಾಶ
ಮೊದಲ ಆದ್ಯತೆ ಮಾತ್ರ ನೀರಿಗೆ .
ಅದರ ಮೇಲೆ ನಮ್ಮ ಕರಡುಪ್ರತಿ
೫
ಕಡಲ ತೀರದಲ್ಲಿ ಮೂಡಿವೆ
ಅಜ್ಞಾತ ಹೆಜ್ಜೆಯ ರಾಶಿಗಳು
ಕಳಚಿ ಹೋದವರ ವಿಕಾರ ಹೆಜ್ಜೆಗಳು
ದೂರದಲ್ಲಿ ಸಾಗುತಿವೆ
ದುಃಖ ಹಂಚಲು ಹೋದರೆ
ಪಕ್ಕದಲ್ಲೇ ಒಂದು ಹೆಜ್ಜೆ ಬಿಕ್ಕಳಿಸುತ್ತಿದೆ,
ಅದರ ಇನ್ನೊಂದು ಜೊತೆ
ಮಣ್ಣಾಗಿರುವದಕ್ಕೆ .
]]>
ನೀರಿನ ಮೇಲೆ ನಮ್ಮ ಕರಡು ಪ್ರತಿ.
ತುಂಬಾ ಸುಂದರವಾಗಿದೆ.
ಸ್ವರ್ಣಾ