ಸೂರ್ಯ:
ನೆರಳು ನೀಡುವ ಕಣ್ಣು
ನಕ್ಷತ್ರ :
ಚುಕ್ಕಿ ಜೋಡಿಸದ ರಂಗೋಲಿ.
ಚಂದ್ರ :
ನೆರಳ ಚಿಂದಿ ಆಯುವ ಬೆಸ್ತ .
ಅವಳು :
ಕದ್ದು ಕಾಣುವ ನೆನಪು.
ವ್ಯಾಕುಲ:
ನಿನ್ನ ಅಂದ ತೋರಿಸಿದ ದಾರಿ
ಕನಸು:
ಲೂಟಿಯಾದ ನಿಧಿ.
ನೆನಪು:
ನೆನೆದಷ್ಟು ನೋವು
ಒಲವು :
ಒಲಿದಷ್ಟು ಕಾವು.
ಮನಸು :
ಮುಚ್ಚಿಟ್ಟ ಸಾವು.
ಮಳೆ :
ಹೊಳೆಯಲ್ಲಿ ಮೂಡುವ ಬಳೆ.
ಇರುಳು:
ಬೆಳಕಿನ ಸರ್ವಸ್ವವೇ ನುಂಗುವ
ಕಪ್ಪು ಗಾಳಿ
ಬೆಳಕು :
ನಗ್ನತೆ ಜಾಲಾಡುವ ಹೊನಲು.
ಕವಿ :
ಭಾವಾರ್ಥಿ
ಕವಿತೆ :
ಉಲ್ಬಣಿಸಿದ ಬಯಕೆಯ ತುಣುಕು.
ಕಲೆ :
ಅಹಂ ಕರಗಿಸುವ ಬೆಂಕಿ.
ಮೈಥುನ :
ಮರಭೂಮಿಯ ಚಿರತೃಷೆ
]]>
Very nice.
Swarna