ಎಲ್.ಸಿ.ಸುಮಿತ್ರಾ
ಡಾ.ಅಶೋಕ್ ಕುಮಾರ್ ಅನುವಾದಿಸಿರುವ ಮಲಯಾಳಂ ಕಾದಂಬರಿ “ಮನುಷ್ಯನಿಗೆ ಒಂದು ಮುನ್ನುಡಿ.”ಮೂಲ ಲೇಖಕರು ಸುಭಾಷ್ ಚಂದ್ರನ್.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ.. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂದು ನಾಲ್ಕು ಭಾಗಗಳಲ್ಲಿ ನಿರೂಪಿತವಾಗಿರುವ ಕಾದಂಬರಿ.. ಗಂಭೀರ ಓದನ್ನು ನಿರೀಕ್ಷೆ ಮಾಡುತ್ತದೆ…
ನಾನೂರು ಪುಟಗಳ ಪುಸ್ತಕದಲ್ಲಿ ನನ್ನ ಓದು ಈಗಿನ್ನೂ ನೂರು ಪುಟಗಳಾಗಿವೆ.. ನಿರೂಪಣೆ ತುಂಬಾ ಹೊಸತನದಿಂದ ಕೂಡಿದೆ… ಅಶೋಕ ಕುಮಾರ್ ಅವರಿಗೆ ಅಭಿನಂದನೆಗಳು.. ಈ ಹಿಂದೆ ಅವರು ಕುರುಂಜಿ ಜೇನು ಅನುವಾದಿಸಿದ್ದರು.. ಆಡು ಜೀವನ, ಮತ್ತು ಸಿ ವಿ ಶ್ರೀ ರಾಮನ್ ಕತೆಗಳನ್ನೂ ಮತ್ತೆ ಮತ್ತೆ ಓದಿದ್ದೇನೆ.

ಡಾ.ಅಶೋಕ್ ಕುಮಾರ್
ಶ್ರೀ ರಾಮನ್ ಅವರ ಐದು ಕತೆಗಳು ಚಲನಚಿತ್ರಗಳಾಗಿ ಪ್ರಸಿದ್ಧವಾಗಿವೆ.. ಜಿ.ಅರವಿಂದನ್ ನಿರ್ದೇಶನದ ಚಿದಂಬರಂ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದಿದೆ.. ಶ್ರೀ ರಾಮನ್ ಕತೆಗಳು ಪುಸ್ತಕದಲ್ಲಿ ಈ ಎಲ್ಲಾ ಕಥೆಗಳೂ ಸೇರಿವೆ. ಇದನ್ನು ಯಾಕೆ ಹೇಳಿದೆ ಅಂದರೆ, ಅಶೋಕ ಕುಮಾರ್ ಅನುವಾದಕ್ಕೆ ಆಯ್ದುಕೊಂಡ ಕೃತಿಗಳು ಅವರ ಅಭಿರುಚಿಯನ್ನು ತಿಳಿಸುತ್ತವೆ.
ಈ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ತೆಲುಗು, ತಮಿಳು, ಹಿಂದಿ, ಒಡಿಯಾ ಮುಂತಾದ ಹತ್ತು ಭಾಷೆಗಳಿಗೆ ಅನುವಾದವಾಗುತ್ತಿದೆ. ಹಿರಿಯ ತಜ್ಞ ವೈದ್ಯರಾಗಿದ್ದೂ ತಮ್ಮ ಬಿಡುವಿನ ವೇಳೆಯಲ್ಲಿ ಉತ್ತಮ ಅನುವಾದಗಳನ್ನು ನಮಗೆ ನೀಡಿದ ಅವರಿಗೆ ಧನ್ಯವಾದಗಳು..





0 Comments