ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಲೆಯರು ದೇವಸ್ಥಾನಕ್ಕೆ ನುಗ್ಗಿದರೆ ನಿಜಕ್ಕೂ ಏನಾಗುತ್ತದೆ..?

ನಾಗರಾಜ್ ಹೆತ್ತೂರು, ಹಾಸನ

‘ಕೇಳ್ರಪ್ಪೋ ಕೇಳಿ ಗ್ರಾಮದ ಹೊಲೆಯನೊಬ್ಬ ದೇವಸ್ಥಾನಕ್ಕೆ ನುಗ್ಗಿ ದೇವಾಲಯ ಮಲೀನ ಮಾಡಿದ್ದಾನೆ. ಎಲ್ಲರೂ ಪಂಚಾಯಿತಿ ಕಟ್ಟೆಯ ಹತ್ತಿರ ಬರಬೇಕು. ಬರದಿದ್ದರೆ ಅವರನ್ನು ಊರಿಂದ ಆಚೆ ಇಡಲಾಗುತ್ತದೆ’, ಬೆಳ್ಳಂಬೆಳಗ್ಗೆ ಅವರು ಬಡಿದೆ ತಮಟೆಯ ಸದ್ದು ಅವರ ಕಿವಿಗೆ ಬಿದ್ದ ಕೂಡಲೇ ಅಕ್ಷರಶಃ ಅವರು ಪಾತಾಳಕ್ಕೆ ಇಳಿದು ಹೋಗಿದ್ದರು. ತಾವೇನು ಮಾಡಬಾರದ ಮಹಾಪರಾಧ ಮಾಡಿದೆವು. ಯಾವ ಕಾರಣಕ್ಕೆ ಈ ಪಂಚಾಯಿತಿ ಎಂದು ಮಾತನಾಡಿಕೊಂಡರು.
ಹೌದು..!
ಜಾತಿಯನ್ನೇ ಹೊತ್ತು ಮಲಗಿಕೊಂಡಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸೀ ಸಮೀಪದ ಬಾಗೀವಾಳು ಗ್ರಾಮದಲ್ಲಿ ದೇವಸ್ಥಾನ ಪ್ರವೇಶೀಸಿದ ದಲಿತರಿಗೆ ಬಹಿಷ್ಕಾರ ಹಾಕಿ ಅಪವಿತ್ರಗೊಂಡಿದೆ ಎಂದು ಅದಕ್ಕೆ ಬೀಗ ಜಡಿದು ತೀವ್ರ ವಿವಾದ ಸೃಷ್ಠಿಸಿದ ಪ್ರಕರಣ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಜಿಲ್ಲಾಡಳಿತ ಮಧ್ಯ ಪ್ರವೇಶದಿಂದ ತಿಳಿಯಾಗಿದೆ. ಆದರೆ ದೇವಸ್ಥಾನವನ್ನು ಅಪವಿತ್ರಗೊಳಿಸಿದವರ ಬಗ್ಗೆ ಅಸಮಧಾನ ಇನ್ನೂ ಹಾಗೆಯೇ ಇದೆ. ಅಸ್ಪೃಶ್ಯತೆ , ಅಸಮಾನತೆ ವಿರುದ್ಧ ಎಷ್ಟೆ ದೊಡ್ಡ ಕಾನೂನು ಇದ್ದರೂ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿ ನಮ್ಮ ಮುಂದಿದೆ.
ಅಂದು ನಡೆದಿದ್ದೇನು..?
ಬಾಗೀವಾಳು ಸುಮಾರು 500 ಜನರಿರುವ ಪುಟ್ಟ ಗ್ರಾಮ ದಲಿತರು 70 ಮಂದಿ ಇದ್ದಾರೆ. ಗ್ರಾಮದಲ್ಲಿ ಉಡುಸಲಮ್ಮ ಎಂಬ ದೇವಸ್ಥಾನವಿದೆ. ಹಿಂದಿನಿಂದಲೂ ದಲಿತರಿಗೆ ಈ ದೇವಸ್ಥಾನ ಪ್ರವೇಶ ನಿಷಿದ್ಧವಾಗಿದೆ. ಹಿಂದೆ ಗ್ರಾಮದ ಕೆಲವರು ಪ್ರವೇಶ ಕೇಳಿದ್ದರು ಅದಾದ ನಂತರ ಕೆಲ ವರ್ಷದಲ್ಲಿ ಕೇಳಿದವರಲ್ಲಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದನ್ನೆ ಕಾರಣವಾಗಿಟ್ಟುಕೊಂಡ ಇಲ್ಲಿನ ಕೆಲವರು `ನೋಡಿ ದಲಿತರು ದೇವಸ್ಥಾನ ಪ್ರವೇಶ ಮಾಡಿದರೆ ರಕ್ತ ಕಾರಿಕೊಂಡು ಸಾಯುತ್ತಾರೆ. ಈ ದೇವರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ’ ಎಂದು ಹೇಳಿ ಇಷ್ಟು ವರ್ಷದವರೆಗೆ ದೇವಸ್ಥಾನದಿಂದ ದಲಿತರನ್ನು ದೂರ ಇಟ್ಟಿದ್ದಾರೆ. ಆ ಭಯವೋ ಏನೋ ಈವರೆಗೆ ಇಲ್ಲಿನದಲಿತರು ದೇವಾಲಯ ಹತ್ತಿರ ಹೋಗುವುದಕ್ಕೂ ಭಯ ಪಡುತ್ತಿದ್ದರು. ಕಾರಣ ಆ ದೇವತೆ ಬಗ್ಗೆ ಭಕ್ತಿಯಂತೂ ಅಲ್ಲ. ಬದಲಾಗಿ ಎಲ್ಲಿ ಏನಾಗುವುದೋ ಎಂಬ ಭಯ. ಸವಣರ್ಿಯರನ್ನು ಎದುರು ಹಾಕಿಕೊಂಡು ಬದುಕಲು ಸಾಧ್ಯವೇ ಎಂಬ ಭಯ. ಇಲ್ಲಿನ ದಲಿತರು ಕೂಡ ಈ ದೇವರೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಆದರೆ ತಮ್ಮ ಆಚರಣೆಗಳು ಮಾಡಲು ಸಾಧ್ಯವಾಗದ್ದರ ಬಗ್ಗೆ ವಿಷಾಧವಿದೆ. ಈ ಕಾರಣದಿಂದ ಒಂದೂವರೆ ತಿಂಗಳ ಹಿಂದೆ ಊರಿನ ಎಲ್ಲರ ಸಹಕಾರ ಪಡೆದುಕೊಂಡು ದೇವಾಲಯಕ್ಕೆ ಸಮೀಪ ಚಿಕ್ಕಮ್ಮ ಗುಡಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದ್ದಾರೆ. ಈ ಸಂಬಂಧ ಈ ದೇವರಿಗೆ ಹೋಮ ಹವನ ಮಾಡಿಸಿದ್ದಾರೆ.

ಚಿಕ್ಕಮ್ಮ ಗುಡಿ ಸ್ಥಾಪನೆ ಬಗ್ಗೆ ಗ್ರಾಮದ ಸವಣರ್ಿಯರಲ್ಲಿ ಚಚರ್ೆ ನಡೆದಿದೆ. ಗ್ರಾಮದಲ್ಲಿ ಯಾಕೆ ಹೋಮ ಮಾಡಿಸಿದಿರಿ ಎಂದು ದಲಿತರನ್ನು ಕರೆಸಿದ್ದಾರೆ. ಇಲ್ಲಿನ ಉಡುಸಲಮ್ಮ ದೇವರ ಪೂಜಾರಿ ಮೈಗೆ ದೇವರು ಬಂದ ಸಂದರ್ಭ ದೇವರೂ ಕೂಡ. ಒಳ್ಳೆ ಕೆಲಸ ಮಾಡಿದಿರಿ ಎಂದು ಹೇಳಿದೆ. ಜೊತೆಗೆ ನೀವು ನನ್ನ ಮಕ್ಕಳೇ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಿ ಎಂದಿದೆ. ಇದರಿಂದ ಸಂತಸಗೊಂಡ ದಲಿತರು ದೇವರ ಗುಣಗಾನ ಮಾಡಿಕೊಂಡು ಹೋಗಿದ್ದಾರೆ.
ಇದಾದ ನಂತರ ಕಳೆದ 10 ನೇ ತಾರೀಖಿನಂದು ಗ್ರಾಮದ ವಿದ್ಯಾವಂತ ಯುವಕ ಮೋಹನ್ ಕುಮಾರ್ ಇಲ್ಲಿನ ಪೂಜಾರಿ ಯ ಜೊತೆ ಮಾತನಾಡುತ್ತಾ ದೇವಸ್ಥಾನದ ವರೆಗೂ ಬಂದಿದ್ದಾನೆ. ಬಂದವನೇ ದೇವಸ್ಥಾನದ ವರಾಂಡಕ್ಕೆ ಕಾಲಿಟ್ಟಿದ್ದಾನೆ. ಆದರೆ ಇದನ್ನು ನಿರೀಕ್ಷಿಸದಿದ್ದ ಪೂಜಾರಿ ತಕ್ಷಣವೇ ಆತನನ್ನು ಬೈದು ದೇವಸ್ಥಾನ ಅಪವಿತ್ರಗೊಳಿಸಿಬಿಟ್ಟೆ ಮೊದಲು ಇಲ್ಲಿಂದ ಹೋಗು ಎಂದು ಹೇಳಿದ್ದಾನೆ. ಕೂಡಲೇ ಒಂದಿಬ್ಬರಿಗೆ ಕರೆ ಮಾಡಿ ದಲಿತ ಮೋಹನ್ ಕುಮಾರ್ ದೇವಸ್ಥಾನದೊಳಗೆ ಪ್ರವೇಶಿಸಿದ ಎಂದು ಹೇಳಿ ಕರೆಸಿದ್ದಾನೆ. ಅಲ್ಲೇ ತೀರ್ಮಾನ ಮಾಡಿದ ಪೂಜಾರಿ ದೇವಸ್ಥಾನ ಮಲೀನವಾಗಿದೆ ಹೋಮ ಮಾಡಿ ಶುದ್ದಿಯಾಗುವವರೆಗೆ ತೆಗೆಯುವುದಿಲ್ಲ. ಮಲೀನಕ್ಕೆ ತಗುಲುವ ವೆಚ್ಚವನ್ನು ಇವನಿಂದಲೇ ಹಾಕಿಸಿ ಎಂದವನೇ ದೇವಸ್ಥಾನಕ್ಕೆ ಬೀಗ ಜಡಿದು ಪಂಚಾಯಿತಿ ಮುಖಂಡರಿಗೆ ವಿಷಯ ಮುಟ್ಟಿಸಿದ್ದಾನೆ.
ಹೀಗೊಂದು ಘಟನೆ ಈ ರೀತಿ ತಿರುಗಿಕೊಂಡಿದ್ದಕ್ಕೆ ಆಘಾತಗೊಂಡ ಮೋಹನ್ ಕುಮಾರ್ ನಡೆದ ಘಟನೆಯನ್ನು ಕೆಲವರಿಗೆ ತಿಳಿಸಿದ್ದಾನೆ. ಸವಣರ್ಿಯರು ಈತನ ವಿಷಯವನ್ನೆ ಕೇಳಿಕೊಂಡರೇ ವಿನಃ ಯಾರೊಬ್ಬರೂ ದೈರ್ಯ ತುಂಬಿಲ್ಲ.
ಸಣ್ಣ ವಿಷಯವಲ್ಲವೇ..? ಒಂದು ಮಾತು ಬೈಯ್ಯಬಹುದು ಆದದ್ದು ಆಗಲಿ ಎಂದ ಮೋಹನ್ ಕುಮಾರ್ ಎಂದಿನಂತೆ ಮನೆಗೆ ಹೋಗಿದ್ದಾನೆ. ಆದರೆ ಮಾರನೆ ದಿನ ಎಲ್ಲೆಡೆ ಡಂಗೂರ ಸಾರಲಾಗಿದೆ. ದೇವಸ್ಥಾನ ಮಲೀನವಾಗಿದೆ. ದಲಿತ ಮೋಹನ್ ಕುಮಾರ್ ದೇವಸ್ಥಾನ ಪ್ರವೇಶಿಸಿ ದೇವಾಲಯ ಮಲೀನವಾಗಿದೆ. ಹೋಮ ಮಾಡಿದಸಲು ಖರ್ಚು ವೆಚ್ಚ ಕೊಡಬೇಕು. ಎಲ್ಲರೂ ಪಂಚಾಯಿತಿ ಕಟ್ಟೆಗೆ ಬರಬೇಕು. ಬರದಿದ್ದರೆ ಅವರನ್ನು ಗ್ರಾಮದಿಂದ ಬಹಿಷ್ಕಾರ ಹಾಕಲಾಗುವುದು ಎಂದು ತಮಟೆ ಹೊಡೆದುಕೊಂಡು ಕಾಲೂನಿಗೂ ವಿಷಯ ಮುಟ್ಟಿಸಿದ್ದಾರೆ. ಈ ಮಧ್ಯೆ ಕೆಲವರು ಮೋಹನ್ ಕುಮಾರ್ ಮೇಲೆ ಹರಿಹಾಯ್ದು ಹಲ್ಲೆ ನಡೆಸುವ ಬೆದರಿಕೆ ಒಡ್ಡಿದ್ದು ಕಿವಿಗೆ ಬಿದ್ದಿದೆ. ಗುಂಪುಗುಂಪಾಗಿ ಈ ಬಗ್ಗೆ ಚರ್ಚೆ ನಡೆದಿದೆ. ಗ್ರಾಮದ ಕೆಲ ಯುವಕರು ಅಲ್ಲಿಗೆ ಹೋಗುವುದು ಬೇಡ ಹೊಡೆದು ಹಾಕುತ್ತಾರೆ ಎಂದು ಮೋಹನ್ ಕುಮಾರ್ ಗೆ ಹೇಳಿದ್ದಾರೆ. ಇದರಿಂದ ಬೆದರಿದ ಮೋಹನ್ ಕುಮಾರ್ ಕೆಲವರು ಸ್ಥಳೀಯರ ಸಹಕಾರದಿಂದ ನೇರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾನೆ. ಇದಿಷ್ಟು ನಡೆದಿರುವ ಘಟನೆ.
ಇದೀಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕರಣ ತಿಳಿಗೊಳಿಸಿದ್ದಾರೆ. ಎಲ್ಲರೂ ದೇವಾಲಯ ಪ್ರವೇಶಿಸಿದ್ದಾರೆ. ಗ್ರಾಮಸ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ತಿಳಿಗೊಳಿಸಲಾಗಿದೆ. ಗ್ರಾಮದಲ್ಲಿ ಪೊಲೀಸ್ ಬೂಟುಗಳ ಸದ್ದು ಕೇಳಿಸುತ್ತಿದೆ. ಒಬ್ಬರು ಮತ್ತೊಬ್ಬರನ್ನು ಮಾತನಾಡಿಸದ ಪರೀಸ್ಥಿತಿ ಇದೆ.
ಕಳೆದ 4 ತಿಂಗಳಲ್ಲಿ ಹಾಸನದಲ್ಲಿ ನಡೆಯುತ್ತಿರುವ 4 ನೇ ಪ್ರಕರಣ ಇದು. ಗಂಗೂರು ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವಶ ನಿಷೇಧ, ಕ್ಷೌರ ನಿಷೇಧ ವಿರುದ್ಧ ಹೋರಾಟ ನಡದಿತ್ತು. ಅವತ್ತು ಘಟನೆಗೆ ಸಾಕ್ಷಿಯಾಗಿದ್ದ ನನಗೆ ನೆನಪಿದೆ. ನಾವು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಸವರ್ಣೀಯರೆಲ್ಲ ಕಣ್ಣೀರಿಟ್ಟಿದ್ದರು. ಇನ್ನು ಸಕಲೇಶಪುರ ತಾಲೂಕಿನ ಶಿರಾಡಿಯಮ್ಮನಿಗೆ ದಲಿತರ ತಲೆಯೇ ಆಗುವುದಿಲ್ಲ ಎಂದು ಅಲ್ಲೂ ಕೂಡ ದಲಿತರನ್ನು ದೂರ ಇಟ್ಟಿದ್ದು ಶಾಸಕ ಕುಮಾರಸ್ವಾಮಿ ಕೂಡ ಇಲ್ಲಿ ಕಾಲಿಡುವುದಿಲ್ಲ ಎಂಬ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ನಿಜಕ್ಕೂ ಇವೆಲ್ಲವೂ ಅಮಾನವೀಯ ಘಟನೆಗಳು, ಒಂದು ಕಡೆ ಪ್ರಭಲ ಕಾನೂನುಗಳಿದ್ದರೂ ದೇವಸ್ಥಾನ ನಿಷೇಧ, ಅಸ್ಪೃಷಶ್ಯತೆ ಆಚರಣೆ ಪ್ರಕರಣಗಳು ನಡೆಯುತ್ತಲೇ ಇವೆ. ಈ ಸಂದರ್ಭದಲ್ಲೆಲ್ಲ ದಲಿತರು ಭಯದಿಂದ ದೂರವೇ ಉಳಿಯಲು ನಿರ್ಧರಿಸುತ್ತಾರೆ. ಇನ್ನೂ ಒಂದು ದುರಂತ ಎಂದರೆ ಪ್ರಕರಣ ನಂತರ ಗ್ರಾಮದಲ್ಲಿ ಶಾಂತಿಗಿಂತ ಅಶಾಂತಿಯೇ ಹೆಚ್ಚಾಗುತ್ತದೆ. ಎಲ್ಲೂ ಕೂಡ ತಾವು ದಲಿತರನ್ನು ದೂರ ಇಟ್ಟಿದ್ದು ತಪ್ಪು ಎಂದು ತದ್ದಿಕೊಳ್ಳುವುದಿಲ್ಲ. ಮೇಲಾಗಿ ಇಂತಹ ಪ್ರಕರಣ ಸಂದರ್ಭದಲ್ಲಿ ದಲಿತರು ತಿಂಗಳುಗಟ್ಟಲೆ ಅಘೋಷಿತವಾಗಿ ಬಹಿಷ್ಕಾರಕ್ಕೆ ಒಳಗಾಗಿ ಬದುಕಿದ್ದಾರೆ. ಗಂಗೂರಿನಲ್ಲಿ ಇನ್ನೂ ಕೂಡ ಮುಖಕ್ಕೆ ಮುಖ ಇಟ್ಟು ಮಾತನಾಡದ ಪರಿಸ್ಥಿತಿ ಇಲ್ಲ. ಪ್ರಕರಣದ ನಂತರ ಅಸ್ಪೃಶ್ಯತಾ ಆಚರಣೆಯ ನಿಜವಾದ ಪರಿಸ್ಥಿತಿ ಉಂಟಾಗುತ್ತದೆ. ಕೆಲಸಕ್ಕೆ ಕರೆಯುವುದಿಲ್ಲ, ನೀರಿಗೆ ಸಮಸ್ಯೆ ಮಾಡುತ್ತಾರೆ, ಕೆಲವು ಕಡೆ ದಿನಸಿ, ಗಿರಣಿ ಕೊಡುವುದಿಲ್ಲ ಇಂತಹವುಗಳೆಲ್ಲ ನಡೆಯುತ್ತವೆ.
ಈ ಸಂದರ್ಭದಲ್ಲೆಲ್ಲ ಗ್ರಾಮದ ಸವರ್ಣೀಯರು ಸಾಮೂಹಿಕವಾಗಿ ತಮ್ಮ ಜಿದ್ದನ್ನು ದಲಿತರ ಮೇಲೆ ತೀರಿಸಿಕೊಳ್ಲುತ್ತಿರುವುದು ನಿಜಕ್ಕೂ ದುರಂತ. ಎಲ್ಲಕ್ಕೂ ಮುಖ್ಯವಾಗಿ ಇಂತಹ ಸಮಸ್ಯೆಗಳನ್ನು ದಲಿತರೇ ಪರಿಹರಿಸಿಕೊಳ್ಳಬೇಕಾದ ಪರಿಸ್ಥಿತಿ. ಜಾತ್ಯಾತೀತರೆಂದು ಹೇಳಿಕೊಳ್ಳುವ ಯಾವ ಮುಖಂಡರೂ ಮುಂದೆ ಬಂದು ಇವುಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿಲ್ಲ.. ಕಾರಣ ದಲಿತರ ಪರವಾಗಿ ಮಾತನಾಡಿದರೆ ಅವರನ್ನೇ ಬಹಿಷ್ಕರಿಸುವ ಭಯ.. ಕಾನೂನು ಕಟ್ಟಳೆಗಳು ಎಷ್ಟೇ ಗಟ್ಟಿಯಿದ್ದರೂ ಇಂತಹ ಸಂದರ್ಭದಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ. ಹಾಗೆ ಈ ಸಂದರ್ಭದಲ್ಲೆಲ್ಲ ಕಾನೂನು ಬಳಕೆಯಾಗುವುದೂ ಇಲ್ಲ… ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರ ವಿಶೇಷ ತಂಡ ರಚಿಸಬೇಕಿದೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಆ ತಂಡ ಗ್ರಾಮಕ್ಕೆ ಬಂದು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಸ್ಪೃಶ್ಯತೆ ಆಚರಣೆಗಳ ಮತ್ತು ನಿಷೇಧದ ಬಗ್ಗೆ ಹೊಸ ಚಿಂತನೆಗಳು ನಡೆಯಬೇಕಿದ್ದು.. ಈ ನಿಟ್ಟಿನಲ್ಲಿ ಯೋಚಿಸಬೇಕಿದೆ…
 

‍ಲೇಖಕರು G

16 June, 2014

8 Comments

  1. Anonymous

    ದೇವರು ಭೂಮಿಯನ್ನು , ಭೂಮಿ ಮೇಲೆ ಮನುಷ್ಯರನ್ನು ಸೃಷ್ಟಿ ಮಾಡಿದ . ಮನುಷ್ಯ ಭೂಮಿ ಮೇಲೆ ರಾಕ್ಷಸರನ್ನು ರಾಕ್ಷಸತ್ವವನ್ನು ಸೃಷ್ಟಿ ಮಾಡಿ ದೇವರನ್ನೆ ತನ್ನ ಹದ್ದು ಬಸ್ತಿನಲ್ಲಿಟ್ಟುಕೊಂಡ. ನಮ್ಮನ್ನು ನಾವೇ ಕಾಪಾಡಿಕೊಳ್ಬೇಕು. ದೇವರು ನಿಸ್ಸಾಯಕ !

  2. ಸತ್ಯನಾರಾಯಣ

    ಆ ದೇವಾಲಯವನ್ನು ನಾನು ಬಹಳಷ್ಟು ಸಾರಿ ಆ ರಸ್ತೆಯಲ್ಲಿ ಹೋದಾಗಲೆಲ್ಲಾ ಹೊರಗಿನಿಂದ ನೋಡಿದ್ದೇನೆ. ಪ್ರವೇಶ ಬೇಕಾಗಿರುವುದು ದೇವಾಲಯದೊಳಕ್ಕಲ್ಲ; ಮನಸ್ಸಿನೊಳಗೆ. ಆದರೆ, ಮನಸ್ಸಿನೊಳಗೆ ಪ್ರವೇಶ ಪಡೆಯಬೇಕಾದರೆ ಸಮಾನತೆ ಬೇಕು ಅದಕ್ಕಾಗಿಯಾದರೂ ದೇವಾಲಯ ಸರ್ವರಿಗೂ ತೆರೆದಿರಲೇಬೇಕು.
    ಆ ದೇವಾಲಯ ಮುಜರಾಯಿ ಇಲಾಖೆಯ ಸವಲತ್ತನ್ನು ಪಡೆಯುತ್ತಿದೆ ಎಂದು ಪತ್ರಿಕೆಯಿಂದ ತಿಳಿಯಿತು. ದೇವಾಲಯಕ್ಕೆ, ಪೂಜಾರಿಗೆ ಮುಜರಾಯಿ ಇಲಾಖೆಯ ಸವಲತ್ತು ಬೇಕು, ಆದರೆ ಸಂವಿಧಾನದ ಆಶಯದಂತೆ ಸರ್ವರನ್ನು ಸಮಾನವಾಗಿ ಕಾಣುವುದು ಬೇಕಿಲ್ಲ ಎಂದರೆ ಹೇಗೆ?
    ಆಗಾಗ ಚರ್ಚೆಗೆ ಬರುವ “ದೇವಾಲಯ ಸಂಸ್ಕೃತಿ ನಾಶವಾಗದ ಹೊರತು ಸಮಾನತೆ ಸಾಧ್ಯವಿಲ್ಲ” ಎನ್ನುವ ಮಾತುಗಳ ಗಂಭೀರತೆಯನ್ನು ಇಂತಹ ಘಟನೆಗಳು ಹೆಚ್ಚಿಸುತ್ತಿವೆಯೇನೊ ಎಂಬ ಅನುಮಾನ ಕಾಡುತ್ತದೆ.
    ಸರ್ವರನ್ನೂ ಒಳಗೊಳ್ಳದ ದೇವರಿಗೆ, ದೇವರ ಸೃಷ್ಟಿಕರ್ತರಿಗೆ ವೈಯಕ್ತಿಕೆ ನೆಲೆಯಲ್ಲಿ ಧಿಕ್ ಭಾವವನ್ನು ಬೆಳೆಸಿಕೊಳ್ಳುವುದು ಇಂತಹುದಕ್ಕೆ ಪರಿಹಾರ ಮಾರ್ಗವನ್ನು ಒದಗಿಸಬಲ್ಲದು.

    • ಗಣಪತಿ.ಎಂ.ಎಂ

      ಮಾನ್ಯರೇ ಲೇಖನ ಇತ್ತೀಚಿನ ಉದಾಹರಣೆ. ನನ್ನ ಅಭಿಪ್ರಾಯದಂತೆ ಜಾತಿ ಇಂದು ರಾಜಕಾರಣವಾಗಿದೆ. ಅದಕ್ಕೆ ಸ್ವಾರ್ಥ ಬೆರೆತದ್ದರಿಂದ ನಾವು ದೂರೀಕರಿಸುವ ಜನರನ್ನು ಮುಟ್ಟಿದರೆ, ಅವರ ಸಹವಾಸದಿಂದ ಏನೂ ಆಗೋದಿಲ್ಲ ಎಂಬ ವೈಜ್ಞಾನಿಕ ಸತ್ಯ ತಿಳಿದಿರುವ ಅಕ್ಸ್ಷರಸ್ಥರೂ ಸಹ ಅಸ್ಪರ್ಶತೆ ಬಗ್ಗೆ ಮಾತನಾಡುವುದು ಫ್ಯಾಷನ್. ನಾವು ಕಲಿತವರು ನಿಜ ಹೀಗೆ ಎಂದು ಹೇಳುವುದು ಧರ್ಮ ದ್ರೋಹ!ಇದೆಂತಹ ವಿಪರ್ಯಾಸ!ಹಾಗಾಗಿ ಅಕ್ಷರಸ್ಥ ಬಹುಪಾಲು ಮಂದಿ ಜಾತಿ ವ್ಯವಸ್ಥೆಯೊಳಗೆ ಸೇರಿದ್ದಾರೆ. ಆಶ್ಚರ್ಯವೆಂದರೆ ಶೇ.೧೦೦ರಷ್ಟು ಸಾಕ್ಷರತೆ ಸಾಧ್ಸಿದ ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಎಲ್ಲಾ ಜಾತಿಯವರೂ ಸಂಘಟಿತರಾಗುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಶಿಕ್ಷಣದಲ್ಲಿ ಮಕ್ಕಳು ಪರಿಸ್ಥಿತಿ ವಿಷ್ಲೇಶಣೆ ಮಾಡುವುದನ್ನು ಕಲಿಯದ ಹೊರತು ಅವರು ಪರಿಸ್ಥಿತಿಗೆರ್ ಶರಣಾಗುತ್ತಿದ್ದಾರೆ. ಪರಿಸ್ಥಿತಿಯನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಹಿರಿಯರಾದಾಗ ಪರಿಸ್ಥಿತಿಯನ್ನು ಮುಂದುವರೆಸುವವರಾಗುತ್ತಾರೆ. ಈ ನಿಟ್ಟಿನಲ್ಲಿ ಆಲೋಚಿಸುವ ಬಳಗ ದೊಡ್ದದಾಗಬೇಕು
      ಗಣಪತಿ.ಎಂ.ಎಂ.

  3. Anonymous

    ‘holeyaru devaalayakke nuggidare….’ emba vaakya rachaneye ashaneya kidi hottisuttade. eaga jilladalita mattu samaaja kalyana ilakhe maadida kelasavanne modale prathi gramadallu ellarannu ottagi serisi maadiddare intha paristthithi baralaaradeno..eagaluu aa kelasavannu maadabeku..

  4. Radhika

    We all talk and forget about it and are not candid to bring about the change. Even now city dwellers express utter surprise and refuse to believe that such discrimination exists in our society. Does education bring about a change? I fail to see the impact. There are teachers, govt officers in my village who do not enter the temple. Nobody has ever made an attempt to enter. Who can bring about the change? I just don’t know 🙁

  5. suvarna

    ಎಲ್ಲಿಯವರೆ ಈ ಜಾತಿವ್ಯವಸ್ಥೆ ಈ ಸಮಾಜದಲ್ಲಿ ತೂಲಗುವುದಿಲ್ಲವೋ ಅಲ್ಲಿಯವರೆಗೆ ಈ ಸಮಾಜ ಹೀಗೆ. ದಲಿತರು ಎಲ್ಲಿಯವರೆಗೆ ಒಗ್ಗಟ್ಟಾಗಿ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ಶೋಷಣೆ ಅನುಭವಿಸಲೇ ಬೇಕು.

  6. Anonymous

    “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ”
    ದೇವ್ರು ಎಲ್ಲಿದಾನೆ ಸ್ವಲ್ಪ ಹುಡ್ಕಿ ಕೊಡಿ ಅಂತಾ ಪೂಜಾರಿ ಕೆಳಿದ್ರೆ ಮಂಗಳಾರತಿ ತಟ್ಟೆ ತೋರಿಸ್ತಾನೆ. ಇದು ಹಿಂದೇನೆ ಕಂಡುಕೊಂಡ ಹೈಟೆಕ್ ಬಿಕ್ಷಾಟನೆ!
    ದೇವ್ರು ಓಕೆ ದೇವ್ರೂ ಮುಂದೆ ಹುಂಡಿ ಯಾಕೆ?
    ಹೋಗ್ಲಿ ಈ ಭಟ್ಟ ಪೂಜಾರಿ ಫಾದರ್ ಮುಲ್ಲಾ ಇತ್ಯಾದಿಗಳಿಗೆ ದೇವ್ರು ಕಂಡಿದ್ದಾನಾ? ನಂಗೆ ಪುಲ್ ಕನ್ಫ್ಯೂಜ್ ಸ್ವಲ್ಪ ದೇವ್ರು ದೆವ್ವಗಳನ್ನ ತೋರ್ಸಿ ಸ್ವಾಮಿ.

    • Dr Dwarakanath N K

      ದಲಿತರಿಗೆ ದೇವಸ್ಥಾನದ ಅಗತ್ಯವಿದೆಯೇ? ನಿಮಗೆ
      ಎಲ್ಲಿ ಗೌರವ ವಿರುವುದಿಲ್ಲವೋ ಅಲ್ಲಿ ನಿಮ್ನ ಚಪ್ಪಲಿಯನ್ನು ಸಹ ಬಿಡಬೇಡಿ ,ನಿಮ್ಮ ಆತ್ಮಗೌರವದ ಮೇಲೆ ಬದುಕಿ ಎಂದು ಹೇಳಿರುವ ಭಾಬಾಸಾಹೇಬರ ಮಾತು ಮತ್ತು ಮಾರ್ಗ ಪಾಲನೆ ಮಾಡಿದ್ದರೆ ಈ ಸ್ಥಿತಿ ಇರುತ್ತಿರಲಿಲ್ಲ, ಈಗಲಾದರೂ ಅವರ ದೇವರನ್ನ ಅವರಿಗೆ ಬಿಟ್ಟು ಬಾಬಾಸಾಹೇಬರ ಧರ್ಮಕ್ಕೆ ಸೇರಿ,ವಿಮೋಚನೆ ಕಂಡು ಕೊಳ್ಳಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading