ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೈಕು ಮಾಂತ್ರಿಕ ’ಬಾಶೋ’ ಕಂಡ ನೋಟ

ರವಿ ವರ್ಮ

ಹೊಸಪೇಟೆ

ಹೈಕೂ ಕವಿ ಬಶೋ ಪ್ರತಿ ವರ್ಷ ಒಂದು ಗುಹೆಗೆ ಹೋಗುತ್ತಿದ್ದರು

ಯಾಕೆಂದರೆ ವಸಂತ ಕಾಲದಲ್ಲಿ ಆ ಗುಹೆಯಲ್ಲಿ ಅದ್ಬುತವಾದ ಹೂವು ಅರಳುತ್ತಿದ್ದವು .
ಅಲ್ಲಿ ಬಲು ಮನೋಹರವಾದ ದೃಶ್ಯ ವಿರುತಿತ್ತು .
ವಿಶೇಷವಾಗಿ ಆ ಹೂವು ಗಳ ಅಂದವನ್ನು ಆಸ್ವಾದಿಸಲು ಅವರು ಅಲ್ಲಿಗೆ ಹೋಗುತ್ತಾರೆಂದು ಎಲ್ಲರಿಗು ಗೊತ್ತಿತ್ತು .
ಪ್ರತಿವರ್ಷದಂತೆ ಈ ವರ್ಷ ಕೂಡ ಬಶೋ ಆ ಗುಹೆಗೆ ಹೊರಟು ನಿಂತರು ,

ಆ ಗುಹೆಗೆ ಹೋಗುವ ದಾರಿಯಲ್ಲಿ ಒಂದು ಗ್ರಾಮ ಬರುತ್ತದೆ ..
ಆ ಗ್ರಾಮದಲ್ಲಿ ದಣಿವಾರಿಸಿಕೊಳ್ಳಲು ಸ್ವಲ್ಪ ಹೊತ್ತು ವಿರಮಿಸಿದರು .
ಅಲ್ಲಿ ಸೇರಿದ್ದ ಗ್ರಾಮಸ್ತರು ಆ ಸಮಯದಲ್ಲಿ ದೂರದಲ್ಲಿ ಬರುತ್ತಿದ್ದ ಒಬ್ಬ ಮಹಿಳೆಯ ಬಗ್ಗೆ ಮಾತನಾಡುವುದನ್ನು ಕೇಳಿದರು .
“ಆಕೆ ಯ ತಂದೆ ತಾಯಿಯರು ಬಡ ರೈತರು . ಅವರೆಂದರೆ ಆಕೆಗೆ ಪ್ರಾಣ .
ಆ ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳಲು ಆಕೆ ಕೂಲಿ ಕೆಲಸ ,ಮಾಡುತ್ತಾಳೆಂದು,
ಅಡವಿ ಯಿಂದ ಕಟ್ಟಿಗೆ ತರುತ್ತಾಳೆಂದು,ಬೇರೆಯವರ ಮನೆಯ ಮುಸುರೆ ಕೆಲಸ ಮಾಡುತ್ತಾಳೆಂದು,
ತನ್ನ ತಂದೆತಾಯಿ ,ಯಾವಾಗಲು,ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾಳೆ ” ಎಂದು ಅಲ್ಲಿ ನೆರೆದವರು ಮಾತನಾಡಿಕೊಳ್ಳುವುದನ್ನು ಕೇಳಿ ಬಶೋ ಆಶ್ಚರ್ಯ ಗೊಂಡರು.
ಅಸ್ಟರಲ್ಲೇ ಆ ಹೆಂಗಸು ಅವರಿದ್ದಡೆಗೆ ಬಂದಳು .
ಆಕೆಯ ಮುಖದಲ್ಲಿ ಉತ್ಸಾಹ,ಶಾಂತಿ, ಖುಶಿ ಎದ್ದು ಕಾಣುತ್ತಿದ್ದವು .
ಬಶೋ .. ಆ ಹೆಂಗಸನ್ನು ಹತ್ತಿರ ಕರೆದು ತಮ್ಮ ಬಳಿ, ಇದ್ದ ಹಣ ,ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಆಕೆಗೆ ಕೊಟ್ಟು ತಮ್ಮ ಊರಿಗೆ ಹಿಂದುರಿಗಿದರು .
ಅವರು ತಕ್ಷಣ ಹಿಂದುರಿಗಿದ್ದನ್ನು ನೋಡಿ ಆಶ್ಚರ್ಯದಿಂದ ಆ ಊರಿನ ಜನ ,
“ಏನು ಆಗಲೇ ಹಿಂದಿರುಗಿದ್ದೀರಿ? ಗುಹೆಯಲ್ಲಿ ಹೂವು ಚೆನ್ನಾಗಿವೆಯೇ ” ಎಂದು ಕೇಳಿದರು .
ಬಶೋ ಈ ವರ್ಷ ಹುವಿಗಿಂತ ದೊಡ್ಡ ಸಂಗತಿ ನನಗೆ ತಿಳಿದು ಬಂದಿದೆ ಎಂದು ಖುಶಿಯಾಗಿ ಹೇಳಿದರು .
ಜೆನ್ ಕಥೆಗಳು
ಮೂಲ : ತೆಲುಗು ಸೌಭಾಗ್ಯ ಹೈದರಾಬಾದ್ .
ಅನುವಾದ : ಡಿ ರವಿವರ್ಮ . ಹೊಸಪೇಟೆ
 

‍ಲೇಖಕರು G

5 October, 2014

2 Comments

  1. vidyashankar

    Wow what a parable! Thanks Ravi Varma!

  2. mmshaik

    nice …sundara..arthapurna..!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading