ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಗೆ ದಂಡಿಸಿದ್ದಾರೆ ನೋಡಿ ಪ್ರೇಮವನ್ನು..

ಸವಿತಾ ನಾಗಭೂಷಣ

ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ
ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ
ಅಗೋ ಅಲ್ಲಿ ತೂಗುತ್ತಿದೆ ಮರದ ಕೊಂಬೆಯಲಿ
ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ

ಕೊಚ್ಚಿ ಹಾಕಿಹರು ಕೂಡು ರಸ್ತೆಯಲಿ
ವಿಷಕ್ಕೆ ವಶವಾಗಿ ರೋಷಕ್ಕೆ ಈಡಾಗಿ
ಎವೆ ಮುಚ್ಚಿ ಮಲಗಿದೆ ಪ್ರೀತಿ
ಮಣ್ಣೊಳಗೆ ತಣ್ಣಗೆ ಹೆಣವಾಗಿ….

ದಂಡನೆಗೆ ಅಂಜಿ ಅಳಿಯುವುದೆ ಪ್ರೀತಿ?
ಭಿನ್ನ-ಭೇದಕ್ಕೆ- ಬಗ್ಗುವುದೆ? ತಗ್ಗುವುದೆ ಪ್ರೀತಿ?
ಅಡಗುವುದೆ? ಉಡುಗುವುದೆ?
ನಡುಗುವುದಿಲ್ಲ ಅದರ ನಾಡಿ… ಉಸಿರೇ ನಿರ್ಭೀತಿ…!!

ಮರುಹುಟ್ಟು ಪಡೆಯುವುದು
ಅನು ದಿನವೂ ಅರಳುವುದು ಗಿಡದಲ್ಲಿ ಹೂವಾಗಿ
ನದಿಯಲ್ಲಿ ಅಲೆಯಾಗಿ ಗಿರಿಯಲ್ಲಿ ನವಿಲಾಗಿ
ನಲಿಯುವುದು ಬಲಿಯುವುದು ಬಿದಿಗೆಯ ಚಂದ್ರನಂತೆ.. ಮಿನುಗುವುದು ನಕ್ಷತ್ರವಾಗಿ
ಹಂಬಲಿಸುವ ಹೃದಯದಲಿ ಹಾಡಾಗಿ ಹೊಮ್ಮುವುದು…..ಚಿಮ್ಮುವುದು…..

ಹಗೆಯೆಂದು ಬಗೆದವರೆಷ್ಷೋ ಮಂದಿ ಮುಟ್ಟಿ
ಮನುಷ್ಯರಾದರು ಪ್ರೀತಿಯ ಅತ್ಮವನ್ನು…
ಮನುಷ್ಯರಾದವರು ಮತ್ತೆ ಮತ್ತೆ ….
ಬೆಳೆದರು ಪ್ಪೀತಿ ಬೆಳೆಯನ್ನು…….

 

‍ಲೇಖಕರು avadhi

18 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading