– ಸೂರಿ ಹಾರ್ದಳ್ಳಿ
ಒಂದು ಕತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ, ಯಾಕೆಂದರೆ ಇದು ಸತ್ಯ ಕತೆ.
ಮ್ಯಾಗಿಯಲ್ಲಿ ವಿಷ ಇದೆ ಎಂದು ಪ್ರಕಟವಾದಾಗ ಇಡೀ ದೇಶವೇ ಅಲ್ಲೋಲ ಕಲ್ಲೋಲವಾದ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಕೆಲವರು ಅದೆಷ್ಟು ಅದಕ್ಕೆ ದಾಸರಾಗಿದ್ದರೆಂದರೆ ನಮ್ಮ ಸಹೋದ್ಯೋಗಿಯೊಬ್ಬಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು, ತಾನು ಆರು ತಿಂಗಳಿಗಾಗುವಷ್ಟು ಸ್ಟಾಕ್ ಮಾಡಿಟ್ಟುಕೊಂಡಿದ್ದೇನೆ, ಎಂದು. ದೆಹಲಿಯಲ್ಲಿ ಹತ್ತು ರೂಪಾಯಿಯ ಮ್ಯಾಗಿ ನೂರು ರೂಪಾಯಿಗಳಿಗೆ ಮಾರಾಟವಾಗುತ್ತಿರುವ ಸುದ್ದಿ ಓದಿದ್ದೇನೆ. ಎಷ್ಟೇ ಬ್ಯಾನ್ ಮಾಡಿದರೂ ಅದರ ವ್ಯಾಪಾರ ಅಷ್ಟೇ ಆಗುತ್ತಿದೆ ಎಂದು ಅಂಗಡಿಯವರೊಬ್ಬರು ಹೇಳುತ್ತಿದ್ದರು.

ಇದು ನನ್ನ ಸಹೋದ್ಯೋಗಿ ಹೇಳಿದ ಕತೆ. ಮ್ಯಾಗಿಯಲ್ಲಿ ಸೀಸ, ಎಂ.ಎಸ್.ಜಿ. ಎಂದು ಗೊತ್ತಾಗುತ್ತಲೇ ಮನೆಯಲ್ಲಿರುವ ಮ್ಯಾಗಿಯನ್ನು ಎಸೆದುಬಿಡು, ತಿನ್ನಬೇಡ, ಎಂದರಂತೆ ನನ್ನ ಗೆಳೆಯ. ಆಗ ಆತನ ಹೆಂಡತಿ, ಅದು ಹ್ಯಾಗೆ ಆಗುತ್ತೆ, ಕಾಸು ಕೊಟ್ಟು ತಂದುದನ್ನ ಸುಮ್ಮನೇ ಬಿಸಾಡೋದೇ, ಎಂದಳಂತೆ.
‘ಸರಿ, ಇನ್ನೇನು ಮಾಡ್ತೀ?’ ಕೇಳಿದ ನನ್ನ ಗೆಳೆಯ.
‘ಮನೆ ಕೆಲಸದವಳು ಬರುತ್ತಾಳಲ್ಲ, ಅವಳಿಗೆ ಕೊಡ್ತೀನಿ,’ ಎಂದಳು ಅವನ ಹೆಂಡತಿ.
ಮರುದಿನ, ಮನೆ ಕೆಲಸದವಳು ಬರುತ್ತಲೇ ಹೇಳಿದಳು, ‘ನೋಡಿದ್ರಾ ಅಮ್ಮಾವ್ರೇ? ಮ್ಯಾಗಿನಾಗೆ ವಿಷ ಐತಂತೆ? ನಮ್ಮ ಮನೆಯಾಗೆ ಹತ್ತು ಪೊಟ್ಟಣ ಇತ್ತು, ಎಸೆದುಬಿಟ್ಟು ಬಂದೆ,’ ಎಂದಳು.





ತಮಾಷೆಯಾಗಿದೆ.
ವಾಸ್ತವದ ಕಟು ಸತ್ಯ ಎಂಬುದಕ್ಕೆ ಒಳ್ಳೆ ಉದಾಹರಣೆಯಂತಿದೆ. ಓದಿ ನಗು ಬಂತು.
ಸಂಗೀತ ರವಿರಾಜ್
“ಂಅಗ್ಗಿ (ಮಾಗ್ಗಿ)” ಒಂದು ಜೆರ್ಮನ್ ಮಾತು. ಜೆರ್ಮನ್ ಭಾಷೆಯಲ್ಲಿ ಆ ಮಾತಿನ ಉಚ್ಛಾರಣೆ ಮಾಗ್ಗಿ”!
ಆದು ಇಂಗ್ಲಿಶ್ಭಾಷೆಯ ನುದಿಯಲ್ಲ. . “ಮ್ಯಾಗ್ಗಿ” ಎಂದು ಹೇಳುವ ಉಚ್ಛಾರಣೆ ಶುದ್ಡ ತಪ್ಪು. “ಬೆಂಗಳುರು”ಅನ್ನುವುದು “ಬ್ಯಾಂಗಳುರು” ಎನ್ನುವ ಹಾಗಿ!!
ಆದಾವ ದಡ್ಡ ವಿಧೂಷಕ ಮಹನೀಯ “ಮ್ಯಾಗ್ಗಿ” ಮಾತು ಶ್ರುಷ್ಟಿಸಿದನೋ?
“ಅಯ್ಯೋ ಪರಮಾತ್ಮ”! ನನ್ನು “ಅಯ್ಯೋ ಪ್ಯಾರಮ್ಯಾತ್ಮ ” ಎಂದು ಹೇಳ ಬಹುದೆ?
ಸ್ವಲ್ಪ ಆಲೋಚಿಸಿ.
ಮಾವಿ