ರಷೀದ ನಮ್ಮ ನಡುವಿನ ಪ್ರೀತಿಯ ಹೆಸರು. ಒಮ್ಮೆ ಮಗುವಿನಂತೆ, ಮತ್ತೊಮ್ಮೆ ಸಂತನಂತೆ, ಮಗದೊಮ್ಮೆ ಕಿಲಾಡಿಯಂತೆ ಮಾತಾಡುವ ಇವರ ಬರಹಗಳೊಳಗಿನ ಹುಡುಗ ಪ್ರೀತಿ ಮಾಡೋ ಹೊತ್ತಲ್ಲಿ ಕಾಡು ಸುತ್ತುತ್ತಾನೆ. ಗಿಡಕ್ಕೆ ಪಾತಿ ಮಾಡಿ ನೀರು ಬಿಡುತ್ತಾನೆ. ಚೇಷ್ಟೆ ಮಾಡೋ ಹೊತ್ತಲ್ಲಿ ಗಂಭೀರವಾಗುತ್ತಾನೆ.
ಇದು, ಕವಿ, ಕಥೆಗಾರ ಅಬ್ದುಲ್ ರಷೀದ್ ಬಗ್ಗೆ ಹೇಳುವ ಇಸ್ಮಾಯಿಲ್ ಸ್ಟೈಲ್.
ಮೋಹಕವಾಗಿ ಬರೆಯುವ ರಷೀದ್, ಕಥೆಗಳಲ್ಲಿ ಪ್ರಾಣಪಕ್ಷಿಯ ಹಾಡು ಕೇಳಿಸುತ್ತಾರೆ. ಕಾವ್ಯದಲ್ಲಿ ಬೇರೊಂದೇ ಬಗೆಯ ಗಂಧ ಬಚ್ಚಿಡುತ್ತಾರೆ. ಪ್ರಬಂಧಗಳಲ್ಲಂತೂ ಮಾತಿಗೂ ಆಚೆ ನಡೆಸಬಯಸುತ್ತಾರೆ.
ರಷೀದರ ಶಕ್ತಿಗೆ ಗೌರವಗಳೂ ಸಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಬರಹಗಾರರಿಗೆ ನೀಡುವ ಪ್ರಶಸ್ತಿಗೆ ರಷೀದ್ ಪಾತ್ರರಾಗಿದ್ದಾರೆ.
ಸದ್ಯ ಅವರು “ಹೂವಿನ ಕೊಲ್ಲಿ” ಎಂಬ ಕಾದಂಬರಿ ಬರೆಯುತ್ತಿದ್ದಾರೆ. ರಷೀದರ ಈ ಎಲ್ಲ ಬರವಣಿಗೆಗಳ ಮಧ್ಯೆಯೂ ಅವರ “ಹಾಲು ಕುಡಿದಾ ಹುಡುಗ” ಮಾತ್ರ ಇನ್ನೂ ಸ್ವಾರಸ್ಯಕರವಾಗೇ ಇದ್ದಾನೆ.
ಅಲೆಮಾರಿತನಕ್ಕೆ ಬಲು ಮಾರಿಹೋಗಿರುವ ರಷೀದರ ಸದ್ಯದ ವಿಳಾಸ ಮೈಸೂರ್ ಪೋಸ್ಟ್. “ಮೈಸೂರ್ ಪೋಸ್ಟ್” ಎಂಬುದು ಅವರ ಬ್ಲಾಗ್ ಹೆಸರೂ ಹೌದು. ರಷೀದರ ಎಲ್ಲಾ ಅವತಾರಗಳೂ ಇಲ್ಲಿ ರಂಗದ ಮೇಲಿವೆ. ಲಿಂಕ್ಸ್ ನೋಡಿ.





0 Comments