ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾದಿತಪ್ಪಿದ ಅಣ್ಣಾ ಬಳಗ

ಡಾ.ಎನ್. ಜಗದೀಶ್ ಕೊಪ್ಪ

ಭಾರತದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯಲು ಪಣ ತೊಟ್ಟಿರುವ ಅಣ್ಣ ಹಜಾರೆಯ ಹೋರಾಟ ದಿನ ಕಳೆದಂತೆ ತನ್ನ ಕಾವನ್ನು ಕಳೆದುಕೊಳ್ಳುತಿದ್ದು ಹಾದಿ ತಪ್ಪಿದೆ ಎಂದು ಅನಿಸತೊಡಗಿದೆ. ಕಳೆದ ನಾಲ್ಕು ದಶಕಗಳಿಂದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೂಲೆಗುಂಪಾಗಿದ್ದ ಲೋಕ್ಪಾಲ್ ಮಸೂದೆ ಕುರಿತ ಚಚರ್ೆ ಮತ್ತೇ ಅಸ್ತಿಕ್ಕೆ ಬರಲು ಅಣ್ಣಾ ಬಳಗ ಕಾರಣವಾಗಿದೆ ಇದಕ್ಕೆ ಅವರು ಅಭಿನಂದನಾರ್ಹರು. ಆದರೆ ಪ್ರಜಾ ಪ್ರಭುತ್ವ ವ್ಯವಸ್ಥೆಯಡಿ ನಾವು ಬದುಕುತಿದ್ದೇವೆ ಎಂಬುದನ್ನ ಅಣ್ಣಾ ಬಳಗ ಮರೆತಂತಿದೆ.

ಲೋಕಪಾಲ ಮಸೂದೆಯಲ್ಲಿ ಯಾವ ಅಂಶಗಳು ಇರಬೇಕು, ಇರಬಾರದು ಎಂಬ ವಿಷಯದಲ್ಲಿ ಅಣ್ಣಾ ಬಳಗ ಅನುಸರಿಸುತ್ತಿರುವ ರೀತಿ ನೀತಿ ಗಮನಿಸಿದರೆ, ಇವರುಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೆನೋ ಎಂಬ ಸಂಶಯ ಕಾಡತೊಡಗಿದೆ. ಅಣ್ಣಾ ಹಾಗೂ ಅವರ ತಂಡ ಎಷ್ಟೇ ಪ್ರಾಮಾಣಿಕರಾಗಿರಲಿ, ಅವರಿಗಿಂತ ಈ ದೇಶದ ಸಂವಿಧಾನ ರೂಪಿಸಿರುವ ಸಂಸತ್ತು ದೊಡ್ಡದು. ಅದರ ನಿರ್ಣಯ ಮುಖ್ಯ ಎಂಬುದನ್ನ ಅಣ್ಣಾ ಹಜಾರೆ ಮನಗಂಡಂತಿಲ್ಲ.

ಕಳೆದ ಮೂರು ತಿಂಗಳಿಂದ ಅಣ್ಣಾ ಹಾಗೂ ಅವರ ತಂಡದ ಸದಸ್ಯರು ನೀಡುತ್ತಿರುವ ಹೇಳಿಕೆಗಳನ್ನ ಗಮನಿಸಿ ನೋಡಿ. ಅವರು ಹಾಕುತ್ತಿರುವ ಕಾಲ ಮಿತಿ, ಮತ್ತು ಹೇರುತ್ತಿರುವ ಒತ್ತಡ ಇವೆಲ್ಲವೂ ಒಂದು ಸಾಮಾಜಿಕ ಅಥವಾ ರಾಜಕೀಯ ಹೋರಾಟಗಳಿಗೆ ಮಾದರಿಯಾಗುವಂತಿಲ್ಲ. ಒಬ್ಬ ಚಳುವಳಿಯ ನಾಯಕನಾದವನಿಗೆ ಮಾತೃಹೃದಯವಿರಬೇಕು. ಅದು ನಮ್ಮ ನೆಲದ ಬಸವಣ್ಣ, ಗಾಂಧಿ, ಅಂಬೇಡ್ಕರ್ ಇವರುಗಳಿಗೆ ಇತ್ತು. ಯಾವ ನಾಯಕ ತನ್ನ ಸಮುದಾಯದ ನೋವನ್ನ ತನ್ನ ವ್ಯಯಕ್ತಿಕ ನೋವು ಎಂದು ಪರಿಭಾವಿಸಬಲ್ಲನೊ ಅವನು ಮಾತ್ರ ನಾಯಕನಾಗಬಲ್ಲನು.

ಇಂದು ಈ ದೇಶದಲ್ಲಿ ಭ್ರಷ್ಟಾಚಾರದಷ್ಟೇ ಮುಖ್ಯವಾಗಿ ಹಸಿವು ಬಡತನದ ಸಮಸ್ಯೆಯಿದೆ. ಅನ್ನದಾತರೆನಿಸಿಕೊಂಡಿದ್ದ ರೈತರು ಅನಾಥರಾಗಿ, ಅನಾಮಿಕರಾಗಿ ಸಾವಿನ ಉರುಳಿಗೆ ಕೊರಳೊಡ್ಡುತ್ತಿದ್ದಾರೆ. ಇವೆಲ್ಲವೂ ಈ ನಾಗರೀಕ ಸಮಾಜಕ್ಕೆ ಏಕೆ ಮುಖ್ಯವಾಗುತ್ತಿಲ್ಲ? ದಹಲಿಯಲ್ಲಿ ಕುಳಿತ ನಾಲ್ಕು ಜನ ರೂಪಿಸುತ್ತಿರುವ ಚಳುವಳಿಯ ರೂಪುರೇಷೆಗಳಿಗೆ ಅಣ್ಣಾ ರೊಬಟ್ ಯಂತ್ರ ಮಾನವನಂತೆ ವತರ್ಿಸುತ್ತಿರುವುದು ನಿಜಕ್ಕೂ ದುದರ್ೈವದ ಸಂಗತಿ.

ಭಾರತದ ಕಾನೂನುಗಳನ್ನು ರೂಪಿಸುವ ಪರಮೋಚ್ಛ ಅಧಿಕಾರವನ್ನ ಹೊಂದಿರುವ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಕುರಿತಂತೆ ಚಚರ್ೆ ನಡೆಯುತ್ತಿರುವಾಗ, ಅದರ ಬಗ್ಗೆ ಯಾವುದೇ ನಿರ್ಣಯ ಹೊರಬೀಳದಿರುವಾಗ ಅಣ್ಣಾ ಮತ್ತೇ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಅಗತ್ಯವಿದೆಯೆ? ಇದು ನಾಗರೀಕ ಸಮಾಜ ಉತ್ತರ ಕಂಡುಕೊಳ್ಳಬೇಕಾದ ಸತ್ಯ.

ಮಸೂದೆ ಜಾರಿಗೆ ತರುವ ವಿಷಯದಲ್ಲಿ ಅಣ್ಣಾ ತಂಡ ಎಲ್ಲಿಯೂ ಮುಕ್ತ ಮನಸ್ಸಿನಿಂದ ನಡೆದುಕೊಳ್ಳಲಿಲ್ಲ. ಒಂದು ಚಚರ್ೆಯಲ್ಲಿ ಇರಬೇಕಾದ ಕೊಡು-ಕೊಳ್ಳುವ ಉದಾರ ನೀತಿಯನ್ನ ಅಣ್ಣಾ ಬಳಗ ಪ್ರದಶರ್ಿಸಲಿಲ್ಲ. ಮಸೂದೆಯಿಂದ ಸಿ.ಬಿ.ಐ ಅಥವಾ ಪ್ರದಾನಿ ಹೊರಗಿರಬೇಕು ಅಥವಾ ಒಳಗಿರಬೆಕು ಎಂಬುದನ್ನ ನಿರ್ಧರಿಸುವವರು, ಕಾನೂನು ಮತ್ತು ಸಂವಿಧಾನ ತಜ್ಙರೇ ಹೊರತು ಅಣ್ಣಾ ಬಳಗವಲ್ಲ. ಕಾನೂನಿನ ಮೂಲಕ ಎಲ್ಲವೂ ಸಾಧ್ಯ ಎಂದು ನಂಬಿ ಹೊರಟಿರುವ ಅಣ್ಣಾ ಹಜಾರೆಗೆ ಅದೊಂದು ಸತ್ತ ಕುದುರೆ, ಅದರ ಮೇಲೆ ಯಾರು ಬೇಕಾದರೂ ಸವಾರಿ ಮಾಡಬಹುದೆಂಬ ಕಟು ವಾಸ್ತವ ಸತ್ಯ ತಿಳಿದಂತಿಲ್ಲ.

ಈ ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ಕುರಿತಂತೆ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ, ಎರಡು ದಶಕ ಕಳೆದರೂ 900 ಕೋಟಿ ರೂಪಾಯಿಗಳ ಮೇವು ಹಗರಣದಲ್ಲಿ ಬಿಹಾರದ ಲಾಲು ಪ್ರಸಾದ್ಗೆ ಏಕೆ ಶಿಕ್ಷೆಯಾಗಲಿಲ್ಲ? ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಜಯಲಲಿತಾಗೆ ಏನು ಶಿಕ್ಷೆಯಾಗಿದೆ? ಉತ್ತರ ಪ್ರದೇಶದಲ್ಲಿ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ, ಕೇವಲ ಇಪ್ಪತ್ತು ವರ್ಷದ ಹಿಂದೆ ಕಾನ್ವೆಂಟ್ ಶಿಕ್ಷಕಿಯಾಗಿದ್ದ ಮಾಯಾವತಿ ಇಂದು ದೇಶದ ಸಿನಿಮಾ ಹಾಗೂ ಕ್ರಿಕೇಟ್ ತಾರೆಗಳಿಗಿಂತ ಹೆಚ್ಚಿನ ಆದಾಯ ತೆರಿಗೆ ಹಣ ಕಟ್ಟುತಿದ್ದಾಳೆ (65ಕೋಟಿ) ಇಷ್ಟೊಂದು ಆಸ್ತಿ ಆಕೆಗೆ ಎಲ್ಲಿಂದ ಬಂತು? ಅಷ್ಟೇ ಏಕೆ? ಇಡೀ ದೇಶದಲ್ಲಿ ಬಲಿಷ್ಠ ಲೋಕಪಾಲ ವ್ಯವೆಸ್ಥೆ ಇರುವ ಕನರ್ಾಟಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನ ಎಲ್ಲರೂ ಬಲ್ಲರು.

ಭ್ರಷ್ಟಾಚಾರ ಕುರಿತಂತೆ ಕೆಳಹಂತದ ನ್ಯಾಯಲಯಗಳಲ್ಲಿ ವಿಚಾರಣೆ ನಡೆಯುತ್ತಿರುವಾಗ ಮೇಲಿನ ನ್ಯಾಯಾಲಯಗಳು ಅನಗತ್ಯ ಜಾಮೀನು ನೀಡಿ ವಿಚಾರಣೆಗೆ ಅಡ್ಡಿಪಡಿಸಬಾರದು ಎಂದು ಸವರ್ೋಚ್ಛನ್ಯಾಯಾಲಯ ತೀಪರ್ು ನೀಡಿದ್ದರೂ ಕೂಡ ಕನರ್ಾಟಕ ಉಚ್ಛ ನ್ಯಾಯಲಯದಲ್ಲಿ ನಮ್ಮ ಕಡು ಬ್ರಷ್ಠ ರಾಜಕಾರಣಿಗಳು ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಗಳಿಗೆ ಏಕೆ ತಡೆಯಾಜ್ಙೆ ತರುತಿದ್ದಾರೆ? ಇವುಗಳಿಗೆ ಉತ್ತರ ಕಂಡುಕೊಂಡರೆ ಕಾನೂನು ಏನು ಎಂಬುದು ನಮಗೆ ಅರ್ಥವಾಗುತ್ತದೆ.

ಕೇವಲ ಬಲಿಷ್ಠ ಜನಲೋಕಪಾಲ ಮಸೂದೆಯಿಂದ ಭಾರತ ರಾಮ ರಾಜ್ಯವಾಗುತ್ತದೆ ಎನ್ನುವುದು ಒಂದು ಭ್ರಮೆ ಮಾತ್ರ. ಭ್ರಷ್ಟಾಚಾರವನ್ನ, ಮತ್ತು ಕಡು ಭ್ರಷ್ಟಾಚಾರಿಗಳನ್ನ ಬುಡ ಸಮೇತ ಕಿತ್ತು ಹಾಕುವ ಶಕ್ತಿ ಇರುವುದು ಸಾಮಾನ್ಯ ಜನರಿಂದ ಮಾತ್ರ ಸಾಧ್ಯ.ಕಳಂಕಿತರನ್ನ, ಭ್ರಷ್ಟರನ್ನ ಶಾಸನಸಭೆಗಳಿಗೆ, ಸಂಸತ್ತಿಗೆ ಆರಿಸಿ ಕಳಿಸದಂತೆ ನೋಡಿಕೊಳ್ಳುವತ್ತ ನಮ್ಮ ಚಳುವಳಿಗಳು ಗಮನ ಹರಿಸಬೇಕಾಗಿದೆ.

ಮತದಾರರು ಹಣಕ್ಕೆ ಹೆಂಡಕ್ಕೆ ಓಲೆ, ತಾಳಿ, ಉಂಗುರ, ಸೀರೆ ಇವುಗಳಿಗೆ ಮಾರಿಕೊಳ್ಳದಂತೆ ಅವರನ್ನು ಸನ್ಮಾರ್ಗದ ಹಾದಿಗೆ ತಂದು ಅವರಲ್ಲಿ ರಾಜಕೀಯ ಪ್ರಜ್ಙೆ ಬೆಳಸಬೇಕಾಗಿದೆ.

ಸುಮ್ಮನೆ ತಣ್ಣಗೆ ಕುಳಿತು ಯೋಚಿಸಿ. ಅಣ್ಣಾ ಹಜಾರೆ ಜೈಲ್ಬರೋ ಚಳುವಳಿಗೆ ಕರೆ ನೀಡಿದ್ದಾರೆ. ಇದೊಂದು ದೇಶ ಕಂಡ ಉಗ್ರ ಚಳುವಳಿ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಈ ದೇಶದ ಜನಸಂಖ್ಯೆ ಈಗ ಅಂದಾಜು 120 ಕೋಟಿ. ಇವರಲ್ಲಿ ಶೇಕಡ ಒಂದರಷ್ಟು ಮಂದಿ ಜೈಲು ತುಂಬಿಸುವ ಚಳುವಳಿಗೆ ಬಂದರೆ, ಅವರ ಸಂಖ್ಯೆ ಒಂದುಕೋಟಿ ಇಪ್ಪತ್ತು ಲಕ್ಷವಾಗಬೇಕು. ಇಷ್ಟು ಮಂದಿ ಜೈಲಿಗೆ ಹೋಗುತ್ತರಾ? ಅಕಸ್ಮಾತ್ ಹೋಗದಿದ್ದರೆ, ಜನಸಂಖ್ಯೆಯ ಶೇಕಡ ಒಂದರಷ್ಟು ಜನತೆ ಪಾಲ್ಗೊಳ್ಳದ ಅಣ್ಣ ಹಜಾರೆಯ ಮತ್ತು ಬಳಗದ ಸತ್ಯಾಗ್ರಹವನ್ನು ಯಾವ ನಿಟ್ಟಿನಲ್ಲಿ ನಾವು ಅಥರ್ೈಸಿಕೊಳ್ಳಬೇಕು? ವಿವೇಚಿಸಬೇಕು?

ಇದು 25 ವರ್ಷದ ಹಿಂದಿನ ಸಂಗತಿ. ರಾಜೀವಗಾಂಧಿ ಪ್ರಧಾನಿಯಾಗಿದ್ದ ಸಂದರ್ಬದಲ್ಲಿ 74 ವರ್ಷ ವಯಸ್ಸಿನ ಮುಸ್ಲಿಂ ಮಹಿಳೆ ಶಾ ಬಾನು ವಿವಾಹ ವಿಚ್ಛೇದನ ಕುರಿತಂತೆ ಸವರ್ೋಚ್ಛ ನ್ಯಾಯಾಲಯ ಆಕೆಗೆ ಮಾಶಾಸನ ನೀಡುವಂತೆ ಆಕೆಯ ಪತಿಗೆ ಆದೇಶ ಮಾಡಿ ಐತಿಹಾಸಿಕ ತೀಪರ್ು ನೀಡಿತು.ಇದು ಒಂದು ಸಮುದಾಯದ ಭಾವನೆಗೆ ಧಕ್ಕೆಯುಂಟುಮಾಡುವ ತೀಪರ್ು ಎಂದು ಭಾವಿಸಿ ಸಂಸತ್ತು ವಿಶೇಷ ಮಸೂದೆಯೊಂದನ್ನ ಮಂಡಿಸಿ ತೀರ್ಪನ್ನ ಕಸದ ಬುಟ್ಟಿಗೆ ಎಸೆಯಿತು. ನಾಳೆ ಅಣ್ಣಾ ಹಜಾರೆಯ ಕನಸಿನ ಲೋಕಪಾಲ ಮಸೂದೆಗೆ ಇಮತಹದ್ದೆ ಸ್ಥಿತಿ ಬರುವುದಲ್ಲ ಎಂಬುದಕ್ಕೆ ಏನು ಖಾತರಿ ಇದೆ?

ಜನತಾ ನ್ಯಾಯಾಲಯದಿಂದ ಮಾತ್ರ. ಈ ಅನಿಷ್ಟ ಸಂಗತಿಗಳಿಗೆ ಮುಕ್ತಿ ದೊರೆಯಬಲ್ಲದು. ಇದು ನನ್ನ ನಂಬಿಕೆ.

 

 

 

 

‍ಲೇಖಕರು G

25 December, 2011

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. samiulla

    annaa horatada maththondu mukhavannu anaavaranagolisuva chinthane. anna..bagge gauravavide. adre..chaluvali haadi thappi yavudo rajakeeya pakshakke anukula maadikododu..olleyadalla. bangalorege bandiddaga..anna, lokayuktha nemaka avantharada bagge, rajyasarkarada bagge ondu shabda maathadalilla….

  2. Anil

    Dear Sir,

    If I tell you that only few people are going to read your articles and the books you have published , then do you believe that your artcles and literary works do not hold any value?

    Sorry for that last senetnce, if you felt offended.

    We all know that the ongoing agitation by Anna Hazare is not going to eradicate and root out the corruption, but it certainly has awakened us as well as the thick skinned government machinery. So why don’t we contribute our part and bring in a little change if not big.

    Expecting a thought provoking and energy booster article from you !!

    Regards,
    Anil

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading