ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಸಿರಿಗೆ ಉಸಿರಾದವರು…

-ಡಾ. ಎನ್. ಜಗದೀಶ್ ಕೊಪ್ಪ.
ಭಾರತವೂ ಸೇರಿದಂತೆ ವರ್ತಮಾನ ಜಗತ್ತಿನ ಕೃಷಿಲೋಕ ಸಂಕಟದ ಸ್ಥಿತಿಯಲ್ಲಿರುವಾಗ ದಿಕ್ಕೆಟ್ಟ ಅಮಾಯಕ ರೈತರಿಗೆ ದಾರಿ ದೀಪವಾಗಿ ಕೆಲಸ ಮಾಡುತ್ತಿರುವ ಧಾರವಾಡದ ಕೃಷಿ ಮಾಧ್ಯಮ ಕೇಂದ್ರಕ್ಕೆ ಈಗ ದಶಕ ಕಳೆದು ಹನ್ನೋಂದರ ಪ್ರಾಯ.ಇಂತಹ ಒಂದು ಆದರ್ಶ ಸಂಸ್ಥೆಯನ್ನು ಹುಟ್ಟು ಹಾಕಿ ಅದನ್ನು ಬದ್ಧತೆಯಿಂದ ಧ್ಯಾನದಂತೆ ಇಲ್ಲಿಯವರೆಗೆ ನಡೆಸಿಕೊಂಡು ಬಂದವರು ಶಿವರಾಮ್ ಪೈಲೂರ್ ಮತ್ತು ಅನಿತಾ ಪೈಲೂರ್ ದಂಪತಿಗಳು. ಮೂಲತಹ ದಕ್ಷಿನ ಕನ್ನಡ ಜಿಲ್ಲೆಯ ಕೃಷಿ ಮನೆತನದಿಂದ ಬಂದ ಇವರಿಗೆ ಆಧುನಿಕ ಅಭಿವೃದ್ಧಿಯ ಅಂಧಯುಗದ ಪರಿಣಾಮಗಳ ಬಗ್ಗೆ ಅಪಾರ ಅರಿವಿದೆ. ಈ ನಿಟ್ಟಿನಲ್ಲಿ ನಿಸರ್ಗ ಮತ್ತು ಜೈವಿಕ ಜೀವ ಜಾಲಕ್ಕೆ ಧಕ್ಕೆಯಾಗದಂತಹ ನಮ್ಮ ಪೂವರ್ಿಕರ ಜ್ಙಾನ ಶಿಸ್ತುಗಳನ್ನ ಮರು ರೂಪಿಸುತ್ತಾ, ಕೃಷಿಯ ಬಗ್ಗೆ ಯುವಕರನ್ನ ಆಕಷರ್ಿಸುತ್ತಾ ಕೃಷಿಲೋಕದ ನೋವಿನ ಅಧ್ಯಾಯಕ್ಕೆ ಹೊಸ ಮುನ್ನುಡಿ ಬರೆಯುತ್ತಿದ್ದಾರೆ.ಕಳೆದ ಹತ್ತು ವರ್ಷಗಳಲ್ಲಿ ನೂರಾರು ರೈತರ ಯಶೋಗಾಥೆಗಳನ್ನ ಕಿರು ಪುಸ್ತಕಗಳ ಮೂಲಕ ಪರಿಚಯಿಸುತ್ತಾ,  ಕೃಷಿ ಪತ್ರಿಕೋದ್ಯಮ ಡಿಪ್ಲಮೊ ಮೂಲಕ ಕೃಷಿ ಕುರಿತು ಆಸಕ್ತಿದಾಯಕವಾಗಿ ಬರೆಯಬಲ್ಲ ಇನ್ನೂರಕ್ಕೂ ಹೆಚ್ಚು ಬರಹಗಾರನ್ನು ಹುಟ್ಟು ಹಾಕಿದ್ದಾರೆ.ಮೊನ್ನೆ ಭಾನುವಾರ ಧಾರವಾಡದ ಹೊರ ವಲಯದ ಡಾ.ಸಂಜೀವಕುಲಕಣರ್ಿಯವರ ತೋಟದಲ್ಲಿ ನಡೆದ ದಶಮಾನೋತ್ವವ ಸಂದರ್ಭದಲ್ಲಿ ನಾಡಿನ ಹಿರಿಯ ಜೀವಗಳಾದ ಶ್ರೀಪಡ್ರೆ, ನಾಗೇಶ್ ಹೆಗ್ಡೆ, ವಿಮೋಚನಾ ಸಂಸ್ತೆಯ ಪಾಟೀಲರು, ಜಿ. ಎಸ್. ಜಯದೇವ ಮುಂತಾದವರು ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ವಿತರಿಸಿ, ಹೊಸ ಕೃತಿಯೊಂದನ್ನು ಬಿಡುಗಡೆ ಮಾಡುವುದರ ಮೂಲಕ ಸಂಸ್ಥೆಯನ್ನು ಹರಸಿದರು.

‍ಲೇಖಕರು sreejavn

15 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading