ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೇ ಪಾತ್ರೆ, ಹಳೇ ಕಬುಣ

ಕಲಾನಿಕೇತನ – ಡಾ. ಎನ್. ಜಗದೀಶ್ ಕೊಪ್ಪ   ಕನ್ನಡದ ಸಿನಿಮಾವೊಂದಕ್ಕೆ ಹಳೇ ಪಾತ್ರೆ, ಹಳೇ ಕಬುಣ ತರ ಹೋಹಿ ಎಂಬ ಹಾಡು ಬರೆದ ಯೋಗರಾಜಭಟ್, ಇಂದಿನ ಯುವ ಮನಸ್ಸುಗಳ ಪಾಲಿಗೆ ಕವಿ ರವೀಂದ್ರ ನಾಥ್ ಟ್ಯಾಗೂರ್ ಇದ್ದಂತೆ, ಜೊತೆಗೆ ಈ ಹಾಡಂತೂ ಜನಮನಗಣ ಎಂಬ ರಾಷ್ಟ್ರಗೀತೆಯಷ್ಟೇ ಪ್ರಸಿದ್ಧಿಯಾಗಿದೆ ನಿಜ. ಕೇವಲ ಹಾಡಷ್ಟೇ ಹಾಡಿದರೆ ಸಾಕೆ? ಇದನ್ನು ಕೃತಿಗೆ ಇಳಿಸಿದರೆ ಹೇಗಿರುತ್ತದೆ? ಇಂತಹ ಛಲವನ್ನು ನಮ್ಮ ದೇಶದ ಯುವ ಕಲಾವಿದರು ಸಾಧಿಸಿದ್ದಾರೆ.. ಇವರ ಸಾಧನೆಯನ್ನು ನೋಡಲು ನಾವು ರಾಷ್ಟ್ರಕವಿ ರವೀಂದ್ರನಾಥರ ಶಾಂತಿನಿಕೇತನದ ಕಲಾ ವಿಭಾಗಕ್ಕೆ ಹೋಗಬೇಕು. ಅಲ್ಲಿ ಯುವ ಕಲಾವಿದರ ಸೃಜನಶೀಲತೆಯ ಜಗತ್ತೇ ಅನಾವರಣಗೊಳ್ಳುತ್ತದೆ.   ದೇಶದ ಹಲವು ಭಾಷೆ, ಸಂಸ್ಕೃತಿ ಹಿನ್ನಲೆಯಿಂದ ಬಂದಿರುವ ಸಾಂತಿನಿಕೇತನದ ಕಲಾ ವಿಭಾಗದ ವಿದ್ಯಾಥರ್ಿಗಳು ತಮ್ಮ ಕೈಗೆ ಸಿಕ್ಕ ಹಳೆಯ ವಸ್ತುಗಳನ್ನ ಕಲಾಕೃತಿಗಳಾಗಿ ರೂಪಿಸಿದ್ದಾರೆ. ಅದು ಕಬ್ಬಿಣವಿರಲಿ, ಹಳೆಯ ಪಾತ್ರೆಯಿರಲಿ, ಮರದ ಬೊಡ್ಡೆಯಿರಲಿ, ಬಿದಿರಿನ ಬೊಭುಗಳಿರಲಿ, ಕಲ್ಲು ಜೇಡಿಮಣ್ಣು ಇವುಗಳಿಗೆ ಜೀವ ತುಂಬಿರುವ ಬಗೆ ಅನನ್ಯವಾದುದು.   ಶಾಂತಿನಿಕೇತನದಲ್ಲಿ ಕಲಿಯಬೇಕೆಂಬುದು ಈ ದೇಶದ ಪ್ರತಿಯೊಬ್ಬ ಯುವ ಕಲಾವಿದನ ಕನಸು. ಏಕೆಂದರೆ ಅಲ್ಲಿನ ಕಲಾ ವಿಭಾಗ, ಸಂಗೀತ ಮತ್ತು ನಾಟ್ಯ ವಿಭಾಗ ಈ ದೇಶಕ್ಕೆ ಅತ್ಯುತ್ತಮ ಕಲಾವಿದ ಪ್ರತಿಭೆಗಳನ್ನ ನೀಡಿವೆ. ಅಲ್ಲಿನ ಕಲಾವಿಭಾಗಕ್ಕೆ ಹೋದರೆ, ಹೊಸದೊಂದು ಲೋಕ ನಮ್ಮೆದುರು ತೆರೆದುಕೊಳ್ಳುತ್ತದೆ. ಅಲ್ಲಿ ವಿದ್ಯಾಥರ್ಿಗಳು, ಹಾಗೂ ಸದಾ ಎಡಗೈಲಿ ಚಹಾದ ಕಪ್ ಮತ್ತು ಬಲಗೈನಲ್ಲಿ ಉರಿಯುವ ಸಿಗರೇಟು ಹಿಡಿದು ಬಯಲಲ್ಲಿ ನಿಸರ್ಗದ ನಡುವೆ ಪಾಠ ಮಾಡುವ ಪ್ರಾಧ್ಯಾಪಕರು, ಅವರ ಸ್ನೇಹಮಯಿ ವರ್ತನೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ಇಲ್ಲಿನ ವಿದ್ಯಾಥರ್ಿಗಳು ರೂಪಿಸಿದ ಮಾದರಿಗಳು ಇಲ್ಲಿವೆ ನೋಡಿ. ಇವುಗಳಿಗೆ ಯಾವುದೇ ವ್ಯಾಖ್ಯಾನ ಅಗತ್ಯವಿಲ್ಲ.                                        ]]>

‍ಲೇಖಕರು G

18 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading