ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಲ್ಪ ತರ್ಲೆ,ಸ್ವಲ್ಪ ಸುಳ್ಳು..ಪೂರ್ತಿ ಸತ್ಯ ….

-ವೀಣಾ ಭಟ್.

ಅರೆ ..ಇದೇನಿದು ಸುಳ್ಳು.. ಸತ್ಯ …ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಬರುವ ಮೊದಲು ಹೇಳಿ ಬಿಡುತ್ತೇನೆ .ನಾನು ಬರೆದಿರುವುದೆಲ್ಲಾ ಸತ್ಯ .ನೀವು ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಸೇರಿದ್ದು . ಇದು ಬರೀ ತಲೆಹರಟೆ  , ಶುದ್ಧ ತರ್ಲೆ ,ಓದುವುದೇ ವೇಸ್ಟ್ ಆಫ್ ಟೈಮ್ ಅಂತ ಅನ್ನಿಸಿದರೂ …. ಪರವಾಗಿಲ್ಲ ಬಿಡಿ…..

ಆದರೆ ಸತ್ಯ ಒಪ್ಕೋಳ್ಳೋದು ಎಲ್ಲರ ಕೈಯಲ್ಲಿ ಆಗದ ಮಾತು.ಇವರೆಲ್ಲ ಸುಳ್ಳುಗಾರರು ಅಂತ ಅಲ್ಲ.ಆವಾಗಾವಾಗ  ಸುಳ್ಳು ಹೇಳುತ್ತಿರುತ್ತಾರೆ .ಸುಳ್ಳು ಹೇಳೋದು ಕೂಡಾ ಒಂದು ಕಲೆ ಅಂತ ಅದನ್ನು ಕಲೆಗಳ ಪಟ್ಟಿಗೆ ಸೇರಿಸಿದ್ದಾರೆ .ಯಾಕಂದ್ರೆ ಎಲ್ಲರಿಗೂ ನಂಬೋ ಹಾಗೆ ಸುಳ್ಳು ಹೇಳಲು ಬರೋದಿಲ್ಲ . ಇವರ ಮುಖ ನೋಡಿದರೆ ಗೊತ್ತಾಗುತ್ತೆ ..ಸುಳ್ಳು ಹೇಳ್ತಾ ಇದ್ದಾರೆ ಅಂತ…ಇವರು ಸ್ವಲ್ಪ ಸತ್ಯವಂತರು ಎನ್ನಬಹುದು.ಇನ್ನು ಕೆಲವರು  ಸುಳ್ಳು ಹೇಳೋದರಲ್ಲಿ ನಿಪುಣರು . ಇವರ ಮುಖ ನೋಡಿ ನಮಗೆ ಸುಳ್ಳಾ ..ಸತ್ಯವಾ…ಕಂಡು ಹಿಡಿಯುವುದು ಕಷ್ಟ . ಇನ್ನು ಕೆಲವರದು ಹಸಿ ಹಸಿ ಸುಳ್ಳು .ಹಾಗಾದರೆ ಹಸಿ ಹಸಿ ಸತ್ಯ ಅಂತ ಇದೆಯಾ ಕೇಳಬೇಡಿ ….ಹೇಳಿದ್ದು ಸುಳ್ಳು ಅಂತ ನಿಖರವಾಗಿ ತಿಳಿದಾಗ ಮತ್ತು ಹೇಳಿದ್ದನ್ನು ಯಾವತ್ತೂ ಅನುಷ್ಟಾನಕ್ಕೆ ತರುವುದಿಲ್ಲ ಎಂದು ತಿಳಿದಿದ್ದಾಗ ಅದನ್ನು ಹಸಿ ಹಸಿ ಸುಳ್ಳು ಎಂದು ಪರಿಗಣಿಸಲಾಗುತ್ತದೆ .ಇಂತಹ ಸುಳ್ಳುಗಳನ್ನು ಎಲ್ಲರೂ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹೇಳೇ ಹೇಳುತ್ತಾರೆ .

ಒಂದು ರೀತಿಯಲ್ಲಿ ನೋಡಿದಾಗ ಎಲ್ಲರೂ ಸುಳ್ಳುಗಾರರೆ….ನಾವು ದಿನಾ ಎಷ್ಟೊಂದು ಸುಳ್ಳು ಹೇಳ್ತಾ ಇರ್ತೇವೆ… .ನಮಗೇ ತಿಳಿಯದಂತೆ .ಉದಾಹರಣೆಗೆ …ಬೆಳಗ್ಗೆ ಕಾಫಿ ಕುಡ್ಕೊಂಡು ಪೇಪರ್ ಓದ್ತಾ ಇದ್ದೀವಿ ಅಂದ್ಕೊಳ್ಳಿ .ಆಗ ಪಕ್ಕದ ಮನೆಯವನು ಬಂದು ಬೆಲ್ ಮಾಡ್ತಾನೆ .ನೀವು ಕಾಫಿ ಕಪ್ ಹಿಡಿದುಕೊಂಡು ಬಾಗಿಲು ತೆಗೆಯುತ್ತೀರಿ ..’.ಇವನು ಬೆಳ್ಳಂ ಬೆಳಗ್ಗೆ ಯಾಕೆ ಬಂದ …ತಲೆ ಹರಟೆ ‘ ಅಂತ
ಯೋಚಿಸುತ್ತೀರಿ .ಮನಸ್ಸಲ್ಲೇ ..ಅಷ್ಟೇ .ಅದನ್ನು ನೇರವಾಗಿ ಹೇಳಿದರೆ ಏನಾಗಬಹುದು ಊಹಿಸಿ .ನಗುತ್ತಲೇ ..’ಗುಡ್ ಮಾರ್ನಿಂಗ್ ..ಏನ್ ಸಮಾಚಾರ ….?’ ಅಂತ ಹೇಳ್ತೇವೆ .ಇಂತಹ   ಕಿರುನಾಟಕ ಮಾಡುತ್ತಲೇ ಇರಬೇಕು .ಅದು ಅನಿವಾರ್ಯ .
ಅದೇ ರೀತಿ ..ಸ್ನೇಹಿತ ಅಥವಾ ಯಾರಾದರೂ ಸಂಬಂಧಿ ಹೊಸ ಬಟ್ಟೆ ಹಾಕಿಕೊಂಡಾಗ ‘ಹೇಗೆ ಕಾಣ್ತಾ ..ಇದ್ದೀನಿ ..? ‘ ಅಂತ ಕೇಳ್ತಾನೆ ಅಂತ ಇಟ್ಟುಕೊಳ್ಳಿ  .ಅವನ ಡ್ರೆಸ್ ತುಂಬಾ ಕೆಟ್ಟದಿರುತ್ತದೆ. “ಅಬ್ಬಾ…ರಾಕ್ಷಸನ ಪಾತ್ರಕ್ಕೆ ಮೇಕ್ ಅಪ್ ಬೇಡ ..ಹೀಗೇ ಹೋದರೆ ಸಾಕು …” ಅಂತ ಮನಸ್ಸಲ್ಲೇ ಅಂದ್ಕೊತೀವಿ .  ಆದರೆ ನಮಗೆ ನೇರವಾಗಿ ಹೇಳಲು ಸ್ವಲ್ಪ ಕಷ್ಟವಾಗುತ್ತದೆ .ತುಂಬಾ ಚೆನ್ನಾಗಿದೆ ಅಂತ ಹೇಳ್ತೀವಿ .ಈ ತರದ ಸುಳ್ಳನ್ನು ‘ವೈಟ್ ಲೈಸ್ ‘  ಅಂತ ಇಂಗ್ಲಿಷ್ನಲ್ಲಿ ಹೇಳ್ತಾರೆ .ಆದರೆ ನಮ್ಮ ನಿಜವಾದ ,ಆತ್ಮೀಯ ಸ್ನೇಹಿತರಿಗೆ ಮಾತ್ರ ನಾವು ನಿಜ ಹೇಳಲೇಬೇಕು .ಏನಂತೀರಾ….?

ಒಬ್ಬರನ್ನು ನೋಡಿದಾಗ ಅಥವಾ ಹೊಸಬರನ್ನು  ಭೇಟಿಯಾದಾಗ ನಮ್ಮ ಮನಸ್ಸಲ್ಲಿ ಬೇರೇನೋ ಇರುತ್ತದೆ .ಅವರು ನಮ್ಮ ಜೊತೆ ಹೀಗೇ ಮಾತಾಡಬೇಕು ,ವರ್ತಿಸಬೇಕು … ಅಂತ ನಿರೀಕ್ಷಿಸುತ್ತಾ ಇರ್ತೇವೆ .ನಾವು ಒಳ್ಳೆಯವರಂತೆ ಅವರೆದುರು  ಮಾತನಾಡುತ್ತೇವೆ .ಇಷ್ಟ ಇಲ್ಲದಿದ್ದರೂ ಇಷ್ಟ ಇದ್ದಂತೆ …ನಟಿಸ್ತಾ…ಇರ್ತೇವೆ .ಆದರೆ ಈ ರೀತಿಯ ಸುಳ್ಳುಗಳಿಂದ ಒಳ್ಳೆಯದೆ ..ಯಾಕೆ ಗೊತ್ತಾ…?ಇಲ್ಲಾಂದ್ರೆ ಎಲ್ಲರೂ ಇಡೀ ದಿನ ಜಗಳ ಆಡ್ತಾ ಇದ್ರು … ಆಗ ಲೈಫು ಹೇಗಿರ್ತಾ ಇತ್ತು …? ಲೈಫು ಇಷ್ಟೇನೆ…. ಅಂತ ಅನ್ನಿಸ್ತಾ ಇತ್ತು ಆವಾಗ .ಈಗ ಹೊಸದೊಂದು ಪ್ರಶ್ನೆ ..ಹಾಗಾದರೆ ಒಳ್ಳೆಯ ಸುಳ್ಳು ಅಂತ ಇದೆಯಾ..? ಹೌದು ..ಸುಳ್ಳುಗಳಲ್ಲಿ ಎರಡು ವಿಧ .ಒಂದು ಒಳ್ಳೆಯ ಸುಳ್ಳು,ಇನ್ನೊಂದು ಕೆಟ್ಟ ಸುಳ್ಳು .

ಒಂದು ಸುಳ್ಳು ಹೇಳುವುದರಿಂದ ಇನ್ನೊಬ್ಬರಿಗೆ ಒಳ್ಳೆಯದಾಗುತ್ತದೆ ಎಂದಾದಲ್ಲಿ ಆ ಸುಳ್ಳು ಒಳ್ಳೆಯ ಸುಳ್ಳು ಎನ್ನಬಹುದು .ಚಿಕ್ಕ ಮಕ್ಕಳಿಗೆ ಒಳ್ಳೆಯದನ್ನು ಮನವರಿಕೆ ಮಾಡುವಾಗ ಕೆಲವು ಸಣ್ಣ ಪುಟ್ಟ ಸುಳ್ಳುಗಳನ್ನು ಹೇಳಬೇಕಾಗುತ್ತದೆ .

ಹಾಗೆ ಡಾಕ್ಟರ್ ಕೂಡಾ ಕೆಲವೊಮ್ಮೆ ಸುಳ್ಳು ಹೇಳಬೇಕಾಗುತ್ತದೆ .ರೋಗಿಗೆ ಮಾನಸಿಕ ಆಘಾತವಾಗುವಷ್ಟು ಬಲಹೀನನಾಗಿದ್ದರೆ..ಅಥವಾ ಅವರ ಆತ್ಮೀಯರು ಆ ಸ್ಥಿತಿಯಲ್ಲಿ ಇದ್ದರೆ ಈ ರೀತಿಯ ಸುಳ್ಳು ಅನಿವಾರ್ಯವಾಗುತ್ತದೆ .

ಮಕ್ಕಳು ಬಹಳ ಬೇಗ ಸುಳ್ಳು ಹೇಳಲು ಕಲಿತು ಬಿಡುತ್ತಾರೆ .ಅಮ್ಮನಿಂದ ತಪ್ಪುಗಳನ್ನು ಮುಚ್ಚಿಟ್ಟು ಬೈಗಳು ತಿನ್ನುವುದನ್ನು ತಪ್ಪಿಸಲು ಸುಲಭೋಪಾಯ ಎಂದು ಬೇಗ ಕಲಿತುಬಿಡುತ್ತಾರೆ .
ತಂದೆ ಅಥವಾ ತಾಯಿ ಸುಳ್ಳು ಹೇಳುತ್ತಿದ್ದಾರೆ  ಅಂತ ಮಗುವಿಗೆ ತಿಳಿದರೆ ಸಾಕು …ಮಗು ಕೂಡಾ ಸುಳ್ಳು ಹೇಳಲು ಪ್ರಾರಂಭಿಸುತ್ತದೆ .
ಆಫೀಸ್ ಗೆ ತಡವಾಗಿ ಬಂದು ಬಾಸ್ ಗೆ  ಸುಳ್ಳು ಹೇಳುವುದು ,ಗಂಡ ಹೆಂಡತಿಗೆ ಸುಳ್ಳು ಹೇಳುವುದು ..ಇವೆಲ್ಲಾ  ಸಾಮಾನ್ಯ  ಸುಳ್ಳುಗಳು .ಈ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ .
ಹೆಂಡತಿಗೆ ಗಂಡ ಯಾವಾಗ ಸುಳ್ಳು ಹೇಳುತ್ತಾನೆ ಅಂತ ಸರಿಯಾಗಿ ತಿಳಿದಿರುತ್ತದೆ .ಬಾಸ್ ಗೂ ಅಷ್ಟೇ ..

ಕೆಲವರು ಹುಟ್ಟು  ಸುಳ್ಳುಗಾರರು .ಸುಳ್ಳು ಹೇಳುವುದು ಕೂಡಾ ಆನುವಂಶಿಕ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ .ಆಗ ಸುಳ್ಳು ಹೇಳದಿರುವುದು ಸ್ವಲ್ಪ ಕಷ್ಟ.ಇಂತವರು ಹೋದಲೆಲ್ಲಾ
ಸುಳ್ಳು ಹೇಳುತ್ತಿರುತ್ತಾರೆ .ರಾಜಕಾರಿಣಿಗಳನ್ನು ಈ ವಂಶದವರು ಎನ್ನುವುದು ಸಾಮಾನ್ಯವಾಗಿ ರೂಢಿಯಲ್ಲಿರುವ ಮಾತು .  ಇಂತವರು ಸತ್ಯ ಹೇಳಿದರೂ ಯಾರೂ ನಂಬುವುದಿಲ್ಲ .
ಜೀವನ ಪರ್ಯಂತ ‘ಸುಳ್ಳುಗಾರ ‘ಎಂಬ ಪಟ್ಟ ಹೊತ್ತುಕೊಂಡೇ ಇರುತ್ತಾರೆ .ಆದ್ರೆ ಇವರಿಗೆ ಆ ಬಗ್ಗೆ ಬೇಸರವಿರುವುದಿಲ್ಲ .ಯಾಕೆಂದರೆ ಅವರಿಗೆ ಸುಳ್ಳು ಹೇಳುವುದು ಸಮಸ್ಸೆಯೇ ಅಲ್ಲ .
ಇಂತವರನ್ನು ಸರಿಪಡಿಸಲು ಆ ಭಗವಂತನಿದಲೂ ಸಾಧ್ಯವಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುತ್ತದೆ .

ಬೇರೆಯವರ ಮನನೋಯಿಸುವ ಉದ್ದೇಶದಿಂದ ಕೆಲವರು ಸುಳ್ಳು ಹೇಳುತ್ತಾರೆ .ಇದು ತುಂಬಾ ಕೆಟ್ಟದ್ದು .ಸ್ನೇಹಿತರ  ಮಧ್ಯೆ ,ಗಂಡ ಹೆಂಡತಿಯರ ಮಧ್ಯೆ ಹೇಳುವ ಕೆಟ್ಟ ಸುಳ್ಳು ಸಂಬಂಧವನ್ನು
ಹಾಳುಗೆಡವಬಹುದು.ಒಂದು ಸುಳ್ಳು ಹೇಳಿದರೆ ಅದನ್ನು ಸತ್ಯ ಮಾಡಲು ಪುನಃ  ನೂರು ಸುಳ್ಳು ಹೇಳಬೇಕು ಅಂತಾರೆ .ಹೀಗೇ ಸುಳ್ಳಿನಿಂದಾಗುವ ಅನಾಹುತಗಳು ಮತ್ತು
ಸತ್ಯದಿಂದಾಗುವ ಕ್ಷಣಿಕ ನೋವು ಇವೆರಡನ್ನು ಹೋಲಿಸಿದಾಗ ಯಾವಾಗಲೂ …ಸತ್ಯಕ್ಕೇ ಜಯ.

ಹಾಗಾದರೆ ..ಸಂದರ್ಭಕ್ಕೆ ತಕ್ಕಂತೆ ..ಸುಳ್ಳು ಹೇಳುವುದು ತಪ್ಪಲ್ಲ ಅಂದ ಹಾಗಾಯಿತು .ಇಲ್ಲೂ ಕೂಡಾ ಸುಳ್ಳುಗಾರರು ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ .
ಆದರೆ ಇವರು ಹುಟ್ಟಾ ಸುಳ್ಳುಗಾರರಾದ್ದರಿಂದ ಇವರನ್ನು ಹೊರಗಿರಿಸಲಾಗುವುದು .
ಈಗ ನೀವು ಯಾವ ಪಟ್ಟಿಯಲ್ಲಿ ಸೇರುತ್ತೀರಿ …ನೀವೇ ನಿರ್ಧರಿಸಿ ..
ಆದರೆ ಇದುವರೆಗೆ ನಾನು ಹೇಳಿದ್ದು ಖಂಡಿತಾ ಸುಳ್ಳಲ್ಲ .ನಿಮಗೇನನಿಸುತ್ತಿದೆ …?

‍ಲೇಖಕರು avadhi

29 September, 2011

12 Comments

  1. Anitha Naresh Manchi

    tumbaa chennaagide ( sullalla .. satya maaraayre )

  2. savitri

    ನೀವು ಹೇಳಿದ್ದು ಸತ್ಯ ಅಂತ ನಾನು ಹೇಳುತ್ತಿರುವುದು ಸುಳ್ಳಲ್ಲರೀ ವೀಣಾ ಮೇಡಮ್.

  3. Ashoka Bhagamandala

    Sullugala bagge nanna fav quote: Sullu hela baradu, helidare mareya baradu!
    Lekhana tumbaa chennagide !

  4. veda

    Ha ha ha nimma lekhana nijakku satya!! Veena

  5. Pramod

    🙂
    ಬರಹ ಓದುತ್ತಾ ಹೋದ ಹಾಗೆ ‘ಇನ್ವೆನ್ಷನ್ ಆಫ್ ಲೈಯಿ೦ಗ್’ ಸಿನೆಮಾದ ನೆನಪಾಯಿತು.

  6. Roopa DP

    ಕೆಲವರ ಮನಸ್ಸಿನ ಸುಳ್ಳನ್ನು ಸತ್ಯವಾಗಿಸಿದ್ದೀರಿ.

  7. ಶ್ರೀವತ್ಸ ಜೋಶಿ

    “ಅವಧಿಯಲ್ಲಿ ಇದುವರೆಗೆ ಪ್ರಕಟವಾದ ಬರಹಗಳ ಪೈಕಿ, ಹಾಗೆಯೇ ವೀಣಾ ಭಟ್ ಇದುವರೆಗೆ ಬರೆದಿರುವ ಬರಹಗಳ ಪೈಕಿ, ಇದು ಅತ್ಯಂತ ಕೆಟ್ಟ ಬರಹ”. 🙂

    – the above statement is oven-fresh (so ಬಿಸಿಬಿಸಿ), yet ಹಸಿಹಸಿ …. 🙂

  8. D.RAVIVARMA

    madam,nimma lekhana odide,idu ondu visistavada,hagu vibhinnavada baraha, eko hiriyara matu nenapu baruttide”sullige sukhavilla,sathyakke saavilla” nanage anniso hage ee baduke ondu sullina santeyeno,hottepadigagi halavaru,tamma astitvakkagi,innu halavaru,hennu,honnu,mannigagi,matte kelavaru,edee,deshada janateyannu mosamadalu nammannu alida,aluttiruva sarakaragalu heluva sullu helikegagalu.. heege,heege, navello sullina suliyalli sikki hogiddeveno,irali bidi,dina nitya saviraru jana,kusukunnigalu sayuttiddaru,naavu,avarige spandisade,namagenu aaguvudilla,naavu chiranjeevigalu endu bramisiruvudu ondu dodda sullallave, heege omme ondu spardhe ittante,yaru ati dodda sullu sullu heluttaro avarige dodda bahumana,hattaru jana bhagavahisidaru,konege bahumana padedaddu yavudu gotte”nalku jana hengasaru ondu katteya mele ondu ganteyavaregu kutidrante,adare avaru yaru mate adiralillante” idu appata sullallave. ee avadi,kendasampige indagi nanatu visista vibinna baraha,lekhana odi sakattu enjoy madtaiddene,kannadalli pratikriyasilu,nanna systemnalli nudi,barhadalli some techinical problem anta sanna sullu heluttene, ee systemge dinalu prayatna madta iddene,hage omme guess madi yavude ondu patrikeyalli heege nimmadondu sundararavada patrikeyalli ee lekhana baralu sadyavitte.pratikriye doddadaytu anta sampadakaru baytare illdidre sullinabagge ondu sundaravada raja mattu maguvina kathe heltayidde,innondusala nodona , nimmahage nanage bareyalu sadyavaguttilla ennuva hottekichhiddaru,shubhavagali endu ,endu satyavagi asisusuttene.D.RAVI VARMA HOSPET

  9. veena bhat

    ಎಲ್ಲರಿಗೂ ..[ನಿಜವಾದ ..] ಧನ್ಯವಾದಗಳು…..ನಿಮ್ಮ ಕಾಮೆಂಟ್ಸ್ ಎಲ್ಲವೂ ನಿಜವಾದ್ದೆಂದು ನಂಬಿರುವೆ. …:):))) sincerely….:):)))

  10. veena bhat

    ನಮಸ್ಕಾರ ..ರವಿ ವರ್ಮ ಅವರೆ..ನಿಮ್ಮ ಪ್ರತಿಕ್ರಿಯೆಗೆ ,ಹಾರೈಕೆಗಳಿಗೆ… .ತುಂಬಾ ಧನ್ಯವಾದಗಳು ….:)

  11. D.RAVIVARMA

    Obba rajanige,tanna sreemantikeya bagge vipareeta hammu irutte,aata tanna mantryannu karedu idee jagattinalli yaaru hakalarada ondu sundaravada bangarada dress ready madisu,naanu adannu dharisikondu ondu rajadaniyalli ondu meravanige hogi baruve endu heluttane. mantri sikka avakashavannu balasikondu,darjiya jote matanadi siddapadisuttenendu heuttane. adondu dina rajarige,udupu siddhavagideendu,adare aa udupu sullu heluvavarige kanisuvudillavendu tilisittane, aa udupu rajanige todisalagutte, aaga kuddu rajarige udupukanisuttilla aadare aa matu helidare tanu sullugaranendu gottagutte endu,meravanige siddagolisuttane,rajadaniella suddi haraduttade,rajaru ati belebaluva udupinalli,meravanige,baruttiddarendu,but sullu heluvavarige aa udupu kanuvudillvendu, rasteyalli kikkiridu ninta jana,haaha,hoho ” enu sundaravada udupu endu ellaru hogaluvavare rajanige higgo higgu ata anandakke parave illa” alle maguvondu meravanige nodutta joragi nagutta rajara mimele udupe,raja bettale iddare endu helutte.aa maguvina mugda manasu satyavannu helutte, idu badukina satyaveno,kelavomme,anyaru helida sullugalanne naavu satyagalendu bramisutteve,yaro odida pustike sariillavemba comment naavu kuda oppibidutteve allave, nanage niviragi kathe helalu baruvudilla,saladdakke sampadakaru kannadalli baredu kalisi ennuttare , hattaru puta kannadalli bareyuva naanu ee computernalli kannada bareyalu sadyavaguttilla ,dinalu prayathnisuttiruve, ondu levelge bandide.bahusya next reply kannadalli bareyuve, ellavadhi odugarigu dasara shubhashayagalu
    D.RAVI VARMA HOSPET

    • Avadhi team

      sir
      what u have written here, just write the same in ” googlekannada.com” and press space after each word.. u can easily write in kannada . u can also write in gmail compose box by choosing kannada language in top left corner with same technique..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading