ಸ್ಲಮ್ಮಿನ ಭೀಕರ ಜಗತ್ತು ಬೆಳೆಯುತ್ತಲೇ ಇದೆ. ಒಂದು ಕಟ್ಟುನಿಟ್ಟಾದ ಬದುಕಿಲ್ಲದ, ಶಿಕ್ಷಣವೇ ಗೊತ್ತಿಲ್ಲದ, ಪ್ರಾಣಿಗಳಿಗಿಂತ ಕೀಳು ಜೀವನದ ಸ್ಲಮ್ಮಿನ ಕಥೆಗಳಿಗೆ ಮುಕ್ತಿಯೇ ಇಲ್ಲವೇನೋ. ಪ್ರತಿನಿತ್ಯ ಸ್ಲಮ್ಮು ಬೆಳೆಯುತ್ತಲೇ ಇದೆ. ಸ್ಲಮ್ಮು ಮುಕ್ತ ಭಾರತ ಎಂಬ ಸಕರ್ಾರಗಳ ಕನಸುಗಳೆಲ್ಲಾ ಸುಳ್ಳಾಗುತ್ತಿವೆ ಅಥವಾ ಸ್ಲಮ್ಮು ಮುಕ್ತ ಭಾರತವನ್ನು ಸೃಷ್ಟಿಸಲು ಈ ಸಕರ್ಾರಗಳ ಕೈಯಲ್ಲಿ ಸಾಧ್ಯ ವಾಗುತ್ತಿಲ್ಲ. ಇದಕ್ಕೆಲ್ಲಾ ಜನಸಂಖ್ಯೆಯ ಭೂತವನ್ನು ತೋರಿಸಿ ಈ ಸಕರ್ಾರಗಳು ಸ್ಲಮ್ಮುಗಳ ಅಭಿವೃದ್ಧಿ ಮಾಡುತ್ತಿದೆಯೇನೋ ಎಂದೆನಿಸದಿರದು.
ಸ್ಲಮ್ಮಿನ ಪ್ರಪಂಚವೇ ಹಾಗೆ. ಅಲ್ಲಿ ನಾಗರೀಕ ಜಗತ್ತು ಕಾಣಿಸುವುದಿಲ್ಲ. ಹಾಗೆಂದು ಅಲ್ಲಿ ಅನಾಗರೀಕ ಪ್ರಪಂಚವಿದೆ ಎಂದು ಹೇಳಲೂ ಸಾಧ್ಯವಿಲ್ಲ. ಈ ನಾಗರೀಕ ಪ್ರಪಂಚದ ಅನಾಗರೀಕ ಮನಸ್ಸುಗಳ ಕೂಸು ಈ ಸ್ಲಮ್ಮುಗಳು. ಪ್ರತಿನಿತ್ಯ ಸ್ಲಮ್ಮುಗಳು ಬೆಳೆಯುತ್ತಲೇ ಇವೆ. ಈ ಸ್ಲಮ್ಮುಗಳಲ್ಲಿ ಜನಸಂಖ್ಯೆಯೂ ಸಹಜವಾಗಿ ಬೆಳೆಯುತ್ತಿದೆ. ಹಾಗೆಂದು ಇಲ್ಲಿ ಜನಸಂಖ್ಯೆಗೆ ಸಂತಾನಹರಣ ಚಿಕಿತ್ಸೆ ಮಾಡಿಸಿ ಬಿಟ್ಟರೆ ಸ್ಲಮ್ಮುಗಳು ಇರುವುದೇ ಇಲ್ಲ ಎಂದು ಹೇಳುವ ಧೈರ್ಯವಾದರೂ ಯಾರಿಗಿದೆ. ಸ್ಲಮ್ಮಿನ ಜನನಕ್ಕೆ ಜನಸಂಖ್ಯೆಯೇ ಕಾರಣವಾಗಿದ್ದರೆ ಇಷ್ಟೆಲ್ಲಾ ಕಸರತ್ತು ಮಾಡಬೇಕಾದ ಅನಿವಾರ್ಯತೆ ಯಾವುದೇ ಸಕರ್ಾರಗಳಿಗೆ ಇರುತ್ತಿರಲಿಲ್ಲ. ಆದರೆ, ಸಕರ್ಾರಗಳು ಅಂತಹ ಕಸರತ್ತು ಮಾಡುತ್ತಿರುವುದನ್ನು ಕೇವಲ ಘೋಷಣಾವಾಕ್ಯಗಳ ಮೂಲಕ ಹೇಳಿಕೊಳ್ಳುತ್ತವೆ ಎಂಬುದನ್ನು ಬಿಟ್ಟರೆ, ವಿಶೇಷವಾದ ಪ್ರಯತ್ನಗಳು ನಡೆಯುತ್ತಿಲ್ಲ ಎಂಬುದು ಕಣ್ಣುಮುಚ್ಚಿ ಕುಳಿತ ಬೆಕ್ಕಿಗೂ ಗೊತ್ತಾಗುವ ಸತ್ಯ.
1981ರಲ್ಲಿ 27.9 ಮಿಲಿಯನ್ ಇದ್ದ ಸ್ಲಮ್ಮಿನ ಜನಸಂಖ್ಯೆ 2001ರ ಹೊತ್ತಿಗೆ 61.8 ಮಿಲಿಯನ್ ಆಗಿತ್ತು. ನಂತರದ ಪ್ರತೀ ವರ್ಷ ಅಂದಾಜು ಶೇ.8ರಷ್ಟು ಜನಸಂಖ್ಯೆ ಇಲ್ಲಿ ಹೆಚ್ಚತೊಡಗಿತ್ತು. ಇಂದು ಇಡೀ ಭಾರತದಲ್ಲಿ 4,25,78,150 ಎಂದರೆ ಸ್ಲಮ್ಮಿನ ಭಯಾನಕತೆ ಅರ್ಥವಾಗ ಬಹುದು. ಇದರಲ್ಲಿ 2,26,97,218 ಜನ ಪುರುಷ ಸ್ಲಮ್ಮಿಗರಿದ್ದಾರೆ. 1,98,80,932 ಜನ ಮಹಿಳಾ ಸ್ಲಮ್ಮಿಗರಿದ್ದಾರೆ. ಕನರ್ಾಟಕದಲ್ಲಿಯೇ 1,04,2,971 ಸ್ಲಮ್ಮಿಗರಿದ್ದಾರೆ. ಇದರಲ್ಲಿ 7,14,413 ಜನ ಪುರುಷ ಸ್ಲಮ್ಮಿಗರು, 6,88,558 ಮಹಿಳಾ ಸ್ಲಮ್ಮಿಗರಿದ್ದಾರೆ.
ಈ ಸಂಖ್ಯೆ ಆಯಾ ರಾಜ್ಯಗಳ ಸಕರ್ಾರಕ್ಕೆ ಎಷ್ಟು ತಲೆನೋವಾಗಿರುತ್ತದೋ ಆಯಾ ಸಕರ್ಾರದ ಮನೋಸ್ಥಿತಿಗೆ ಬಿಟ್ಟ ವಿಚಾರ. ಕೇಂದ್ರಸಕರ್ಾರ ಸಹ ಇಂಥದ್ದೊಂದು ತಲೆನೋವಿನಲ್ಲಿಯೇ ಕಾಲಕಳೆಯಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ, ಇದೊಂದು ತಲೆನೋವು ಎಂದು ನಿರ್ಲಕ್ಷ್ಯ ಮಾಡುವ ಸಕರ್ಾರಗಳೇ ಹೆಚ್ಚು. ನ್ಯಾಷನಲ್ ಸ್ಯಾಂಪಲ್ ಸವರ್ೇ ಆಫೀಸ್ (ಎನ್ಎಸ್ಎಸ್ಓ) ಒಂದು ಅದ್ಭುತವಾದ ಅಧ್ಯಯನದ ಸುದ್ದಿಯನ್ನು ಹೊರಕ್ಕೆ ಹಾಕಿದೆ. ಅದರ ಪ್ರಕಾರ, ಇಡೀ ದೇಶದಲ್ಲಿ 49 ಸಾವಿರಕ್ಕಿಂತ ಹೆಚ್ಚಿನ ಸ್ಲಮ್ಗಳಿವೆ. ಈ ಸ್ಲಮ್ಮುಗಳಲ್ಲಿ ಶೇ.24ರಷ್ಟು ಸ್ಲಮ್ಮುಗಳು ದೊಡ್ಡ ಚರಂಡಿಗಳ ಬಳಿ, ಡ್ರೈನೇಜ್ಗಳ ಮೇಲೆ ಉದ್ಭವಗೊಂಡಿವೆ. ಅಂತೆಯೇ, ಶೇ.12ರಷ್ಟು ಸ್ಲಮ್ಮುಗಳು ರೈಲ್ವೇ ಟ್ರ್ಯಾಕ್ಗಳ ಅಕ್ಕಪಕ್ಕದಲ್ಲಿ ನಿಮರ್ಾಣಗೊಂಡಿವೆ. ಇನ್ನುಳಿದ ಶೇ.57ರಷ್ಟು ಸ್ಲಮ್ಮುಗಳು ಆಯಾ ಪ್ರದೇಶದ ಸಾರ್ವಜನಿಕ ಜಾಗಗಳಲ್ಲಿ, ನಗರಸಭೆಯ ಆಸ್ತಿಗಳಲ್ಲೇ ಉದ್ಭವಗೊಂಡಿವೆ.
ಸ್ಲಮ್ಮುಗಳ ಮಟ್ಟಿಗೆ ಈಗಲೂ ಅಂತಹ ಅಭಿವೃದ್ಧಿಗಳನ್ನು ಕಾಣಲು ಸಾಧ್ಯವಿಲ್ಲ. ಅಲ್ಲೊಂದು-ಇಲ್ಲೊಂದು ಸ್ಲಮ್ಮುಗಳಲ್ಲಿ ಮಾತ್ರ ಒಂದಿಷ್ಟು ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಕಾಣುವುದನ್ನು ಬಿಟ್ಟರೆ ಇನ್ನುಳಿದಂತೆ ಎಲ್ಲಾ ಸ್ಲಮ್ಮುಗಳಿಗೂ ಒಂದೇ ಮುಖ. ದೆಹಲಿಯ ಸ್ಲಮ್ಮು, ಮುಂಬೈಯ ಸ್ಲಮ್ಮು, ಬೆಂಗಳೂರಿನ ಸ್ಲಮ್ಮು, ಶಿವಮೊಗ್ಗದ ಸ್ಲಮ್ಮು – ಎಲ್ಲದಕ್ಕೂ ಒಂದೇ ಬಣ್ಣ. ಇಲ್ಲಿ ಗುರುತಿಸಲ್ಪಟ್ಟ ಸ್ಲಮ್ಮುಗಳು ಇವೆ. ಸಕರ್ಾರದ ಕಣ್ಣಿಗೆ ಕಾಣದ ಸ್ಲಮ್ಮುಗಳೂ ಇವೆ. ಗುರುತಿಸಲ್ಪಟ್ಟ ಸ್ಲಮ್ಮುಗಳಲ್ಲಿ ಒಂದಿಷ್ಟು ನೀರು, ಒಂದಿಷ್ಟು ಶೌಚಾಲಯ ಕಾಣಬಹುದು. ಆದರೆ, ಉಳಿದ ಸ್ಲಮ್ಮುಗಳ ಕಥೆ ಒಂದೇ ಥರದ್ದು. ಮಳೆಗಾಲ ಬಂತೆಂದರೆ ಝೋಪಡಿಗಳ ಒಳಗೆ ಮಳೆಯೂ ಬರುತ್ತದೆ. ಬೇಸಿಗೆಯ ಬಿಸಿಲು ಈ ಝೋಪಡಿಗಳಲ್ಲಿ ಬಿಸಿಲ ಕೋಲಿನಾಟ ಆಡುತ್ತದೆ. ಇನ್ನೂ ಚಳಿಗಾಲದಲ್ಲಿ ಮನೆತುಂಬಾ ಇಬ್ಬನಿ ಆವರಿಸುತ್ತದೆ.
ಕಳೆದ ಐದು ವರ್ಷಗಳಲ್ಲಿ ಸ್ಲಮ್ಮುಗಳಿಗೆ ಒಂದಿಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಪ್ರಯತ್ನಗಳಾಗಿವೆ. ಆದರೆ, ಈ ಪ್ರಯತ್ನಗಳು ಸಫಲವಾಗಲಿಲ್ಲ. ಸ್ಲಮ್ಮಿಗಾಗಿ ರಸ್ತೆಗಳು ನಿಮರ್ಾಣಗೊಂಡಿವೆ. ಆದರೆ, ಮೊದಲಿದ್ದ ರಸ್ತೆಗಳೇ ಚೆನ್ನಾಗಿದ್ದವೇನೋ ಎಂಬಂತೆ ಈ ಹೊಸರಸ್ತೆಗಳು ಸೃಷ್ಟಿಗೊಂಡಿವೆ. ಒಂದಿಷ್ಟು ನೀರಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ, ಈ ನಲ್ಲಿಗಳಲ್ಲಿ ಚರಂಡಿಯ ನೀರೂ ಸಹ ಹರಿಯುತ್ತದೆ. ಸೊಳ್ಳೆಗಳ ಕಾಟ ಹೇಳತೀರದಷ್ಟು. ಆದರೂ ಸಕರ್ಾರಗಳು ತಮ್ಮ ತುತ್ತೂರಿಯನ್ನು ಊದುತ್ತಲೇ ಇರುತ್ತವೆ.
ಇಡೀ ದೇಶದಲ್ಲಿ ಮಿಲಿಯನ್ಪ್ಲಸ್ ಮಹಾನಗರಗಳು ಸ್ಲಮ್ಮಿನ ಸೆರಗಿನಲ್ಲಿ ಅವಿತುಕುಳಿತಿವೆ. ಗ್ರೇಟರ್ ಮುಂಬೈ ನಮ್ಮ ದೇಶದ ಅತೀ ದೊಡ್ಡ ಮಿಲಿಯನ್ ಸ್ಲಮ್. ಇಲ್ಲಿ ಶೇ.54.06ರಷ್ಟು ಜನ ಸ್ಲಮ್ಮಿನಲ್ಲಿ ವಾಸಮಾಡುತ್ತಿದ್ದಾರೆ. ಕೋಲ್ಕತ್ತಾ ನಂತರದ ಸ್ಥಾನದಲ್ಲಿ ಬರುತ್ತದೆ. ಇಲ್ಲಿ ಶೇ.32.48ರಷ್ಟು ಜನ ಸ್ಲಮ್ಮಿಗರು. ಸೂರತ್ ಶೇ.20.89, ಪುಣೆ ಶೇ.19.39, ಚೆನ್ನೈ ಶೇ.18.88, ದೆಹಲಿ ಶೇ.18.74, ಹೈದರಾಬಾದ್ ಶೇ.17.23, ಕಾನ್ಪುರ ಶೇ.14.42, ಅಹಮದಾಬಾದ್ ಶೇ.13.46, ಬೆಂಗಳೂರು ಶೇ.10.02ರಷ್ಟು ಸ್ಲಮ್ಮಿಗರನ್ನು ಹೊಂದಿರುವ ಮಹಾನಗರಗಳು. ಈ ಲೆಕ್ಕಾಚಾರವನ್ನು ಕೊಟ್ಟಿರುವುದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್.
ಸ್ಲಮ್ಮುಗಳ ಬಗ್ಗೆ ಈಗ ಮತ್ತೊಂದು ಗಂಭೀರವಾದ ಪ್ರಯತ್ನ ಆರಂಭವಾಗಿದೆ. ಸ್ಲಮ್ಮುಗಳ ಅಭಿವೃದ್ಧಿ ಕೇವಲ ಕಲ್ಪನೆಯಾಗಬಾರದು. ಅದೊಂದು ಗಂಭೀರ ಕ್ರಾಂತಿಯಂತೆ ಪರಿಗಣಿಸಲ್ಪಡಬೇಕು. ಅದಕ್ಕಾಗಿ ಹೊಸ ಕಾನೂನುಗಳು ಸಿದ್ಧಗೊಳ್ಳಬೇಕು. ಹೊಸದೊಂದು ಅರ್ಥ ಮತ್ತು ಗುರಿಯೊಂದಿಗೆ ಸ್ಲಮ್ ಸೆನ್ಸಸ್-2011 ಆರಂಭವಾಗಬೇಕು. ಆಗ ಮಾತ್ರ ಸ್ಲಮ್ಮುಗಳ ಬಗ್ಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಾಧ್ಯ ಎಂದು ಕೇಂದ್ರದ ಸಚಿವೆ ಕುಮಾರಿ ಸೆಲ್ಜಾ ಅಭಿಪ್ರಾಯವೊಂದನ್ನು ಕೇಂದ್ರದ ಮುಂದಿಟ್ಟಿದ್ದಾರೆ.
ಈ ಸ್ಲಮ್ ಸೆನ್ಸಸ್-2011ರಲ್ಲಿ ಜಾರಿಗೆ ಬಂದರೆ 5161 ನಗರಗಳು ಹಾಗೂ 3799 ಪಟ್ಟಣಗಳಲ್ಲಿರುವ ಸ್ಲಮ್ಮುಗಳಿಗೆ ಏನಾದರೂ ಮಾಡಲು ಸಾಧ್ಯ. ಆದರೆ, ಇಂಥದ್ದೊಂದು ಮಾಸ್ಟರ್ಫ್ರೇಮ್ ಈವರೆಗೂ ಚಚರ್ೆಗೂ ಬಂದಿಲ್ಲ ಎಂಬುದೇ ಇಲ್ಲಿನ ವಿಷಾದ.







nimma baraha tumbaa chennagide
thanks