ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮೃತಿ ಇರಾನಿ ಅವರೇ, ನೀವು ಖೊಟ್ಟಿ ಡಿಗ್ರಿ ಪಡೆದಿರಿ ಹಾಗಾಗಿ ನನ್ನ ಮಗನೂ ಹಾಗೇ ಎಂದು ತಿಳಿದಿರಿ..

ರಾಧಿಕಾ 

(ರೋಹಿತ್ ವೇಮುಲಾ ತಾಯಿ)

ಕನ್ನಡಕ್ಕೆ-ಕಿರಣ್ ಎಂ ಗಾಜನೂರು

 

26 ವರ್ಷ ನಾನು ಕಷ್ಟ ಪಟ್ಟು ಕಟ್ಟಿದ ಕನಸೊಂದನ್ನು ನೀವು ಮೂರೇ ತಿಂಗಳಿನಲ್ಲಿ ಕೆಡವಿಬಿಟ್ಟಿರಿ

ನಾನು ಸ್ಮೃತಿ ಇರಾನಿಯವರನ್ನು ಭೇಟಿಯಾಗಿ ನನ್ನ ಮಗನನ್ನು ಯಾವ ಆಧಾರದ ಮೇಲೆ ದೇಶದ್ರೋಹಿ ಎಂದು ಘೋಷಿಸಿದರಿ ಎಂದು ಕೇಳಬೇಕು ಎಂದಿದ್ದೇನೆ?

ನಿಮ್ಮ ಸಚಿವಾಲಯ ನನ್ನ ಮಗ ಮತ್ತು ಅವನ ಐವರು ಮಿತ್ರರನ್ನು ತೀವ್ರವಾದಿ ದೇಶದ್ರೋಹಿಗಳು ಎಂದು ಅರೋಪಿಸಿ ಐದು ಪತ್ರ ಬರೆದಿದೆ !

New Delhi: Rohith Vemula's mother Radhika breaks into tears during a protest rally over her son's suicide at Jantar Mantar in New Delhi on Tuesday. PTI Photo by Manvender Vashist(PTI2_23_2016_000254B)

ನೀವು ಆತ ದಲಿತನೆ ಅಲ್ಲ ಎಂದಿರಿ, ನೀವು ಅವನು ಸುಳ್ಳು ಪ್ರಮಾಣ ಪತ್ರ ಪಡೆದಿದ್ದಾನೆ ಎಂದು ಆರೋಪಿಸಿದಿರಿ, ನೀವು ನಿಮ್ಮ ಶೈಕ್ಷಣಿಕ ಅರ್ಹತೆಯ ಕುರಿತಂತೆ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದಿರುವುದರಿಂದ ಎಲ್ಲರೂ ಹಾಗೆಯೇ ಪಡೆಯಬಹುದು ಎಂದು ಯೋಚಿಸಿದಂತಿದೆ ಎಂದು ನಾನು ಹೇಳಿದ್ದೇನೆಯೇ

ನೀವು ನನ್ನ ಮಗನ ಶಿಷ್ಯವೇತನವನ್ನು ತಡೆ ಹಿಡಿದಿರಿ, ಅವನನ್ನು ವಿಶ್ವವಿದ್ಯಾನಿಲಯದಿಂದ ಅಮಾನತುಗೊಳಿಸಿದಿರಿ. .

ಇಂದು ನೀವು ಶಿಕ್ಷಣ ಸಚಿವೆಯಾಗಿರಬಹದು ಆದರೆ ಶಿಕ್ಷಣದ ಕುರಿತು ನಿಮಗೆ ಕಿಂಚಿತ್ತೂ ಗೌರವವಿಲ್ಲ! ನಿಮಗೆ ಒಬ್ಬ ದಲಿತ ಹುಡುಗ ಪಿ.ಹೆಚ್.ಡಿ ಹಂತಕ್ಕೆ ಬರುವುದು ಎಷ್ಟು ಕಷ್ಟವಿದೆ ಎಂಬುದು ಖಂಡಿತ ಅರ್ಥವಾಗೋದಿಲ್ಲ, ಈ ಸಮಾಜದಲ್ಲಿ ಒಬ್ಬ ದಲಿತ ಆ ಸ್ಥಾನಕ್ಕೆ ತಲುಪಲು ನಡೆಸುವ ಹೋರಾಟ, ಕಷ್ಟ, ತ್ಯಾಗ ಮತ್ತು ಕಣ್ಣಿರನ್ನೂ ನೀವು ಕಡೆ ಪಕ್ಷ ಊಹಿಸಿಕೊಳ್ಳಲಾರಿರಿ

ಒಂದು ಅರ್ಥದಲ್ಲಿ ನಾನು ಕಷ್ಟ ಪಟ್ಟು 26 ವರ್ಷಗಳ ಕಾಲ ಕಟ್ಟಿದ್ದ ನನ್ನ ಕನಸನ್ನು ಈ ಮೂರೇ ತಿಂಗಳಿನಲ್ಲಿ ಕೆಡವಿ ಹಾಕಿದಿರಿ

ನಾನು 26 ವರ್ಷಕ್ಕೆ ಬದುಕು ಮುಗಿಸಿಕೊಂಡ ನನ್ನ ರೋಹಿತ್ ಎಂಬ ಕನಸಿನ ಕುರಿತು ಮಾತನಾಡುತ್ತಿದ್ದೇನೆ. . .

ಇಷ್ಟನ್ನು ನಾನು ಸ್ಮೃತಿ ಇರಾನಿಯವರಿಗೆ ಹೇಳಬೇಕು ಎಂದಿದ್ದೇನೆ.

ಇನ್ನು ಮೋದೀ ಜಿ ನೀವು ಐದು ದಿನ ಮೌನವಾಗಿ ಇದ್ದಿರಿ

ನಂತರ ತಾವು ಅಂಬೇಡ್ಕರ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟಿಸಿದರು ಆಗ “ಭಾರತ ಮಾತೆ ಮಗನನ್ನು ಕಳೆದುಕೊಂಡಿದ್ದಾಳೆ” ಎಂದಿರಿ

ನೀವು ಹೇಳಿದ ಮಾತಿನ ಮೇಲೆ ನಿಮಗೆ ನಂಬಿಕೆ ಇದ್ದರೆ ವಿಶ್ವಾಸವಿದ್ದರೆ ನನ್ನ ಮಗನನ್ನು ದೇಶದ್ರೋಹಿ ಎಂದು ಆರೋಪಿಸಿದವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?

ಯಾರು ಸರಿ, ಮಾನ್ಯ ಸಚಿವೆ ಸರಿಯೋ? ಹಾಗಿದ್ದರೆ ಪ್ರಧಾನಿಗಳು ಏಕೆ ಒಬ್ಬ ದೇಶದ್ರೋಹಿಯನ್ನು ಭಾರತದ ಮಗ ಎಂದು ಕರೆದರು ಈ ನನ್ನ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು. . . .?

 

‍ಲೇಖಕರು Admin

26 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading