ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ

ಮೈಲಾರಪ್ಪ ಸುತಗಟ್ಟಿ

ಕೈಯಲ್ಲಿರುವುದನ್ನು ಕಳೆದುಕೊಂಡಾಗಲೆ ಕಳೆದುಕೊಂಡುದುದರ ಬೆಲೆ, ಅದರ ಮಹತ್ವ ಅರಿವಿಗೆ ಬರುವುದು. ನಿಜ. ಕೈಯಲ್ಲಿರುವಾಗ ಒಂದು ವಸ್ತುವಾಗಲಿ, ಹತ್ತಿರವಿರುವಾಗ ಒಂದು ಸಂಬಂಧವಾಗಲಿ ಅದರ ಬಗ್ಗೆ ಅಸಡ್ಡೆ ತೋರುತ್ತೇವೆ. ವಸ್ತು ಕಳೆದಾಗ, ಸಂಬಂಧ ದೂರಾದಾಗ, ಮನಸ್ಸಿಗೆ ಹತ್ತಿರವಾದ ಸ್ನೇಹ ದೂರಾಗುವ ಸಮಯ ಬಂದಾಗ ಮನದ ಅಳಲು ಯಾರಿಗೂ ಹೇಳಲಾಗದು. ಹಾಗೇಯೇ ನಾನೂ ಕೂಡ ಈಗ ನನ್ನ ಸ್ನೇಹಿತೆಯನ್ನ ದೂರಮಾಡಿಕೊಳ್ಳುತ್ತಿದ್ದೇನೆ. ಇನ್ನೇನೂ ಕೆಲವೇ ದಿನ ಕಾಲೇಜ್ ಮುಗಿಯಿತು. ಅವಳು ಈಗಿನಂತೆ ಮತ್ತೆಂದೂ ಸಿಗಲಾರಳು. ನನ್ನೊಡನೆ ಮಾತನಾಡಳು, ನಗಾಡಳು, ರೇಗಿಸಳು. ಇನ್ನು ಮುಂದೆ ನೆನಪೊಂದೆ ನನಗೆ ಗತಿ.
ಕಾಲೇಜ್ ಮುಗಿಯಿತೆಂದರೆ ಮನೆಯೇ ಅವಳಿಗೆ ಎಲ್ಲಾ. ಎದುರಿಗೆ ಇದ್ದಾಗ ಹಲವಾರು ಚೇಷ್ಟೆ ಮಾಡಿ, ಕಾಡಿ, ನಗಾಡಿ ರೇಗಿಸುತ್ತಿದ್ದೆ. ಇನ್ನು ಮುಂದೆ ಆ ಅವಕಾಶವೇ ಇಲ್ಲ. ನಾನೇ ಕೆಲವೊಂದು ಬಾರಿ ತಪ್ಪು ಮಾಡಿ ಮನಸ್ಸಿಗೆ ನೋವು ಮಾಡಿದರೂ ಸ್ನೇಹದಿಂದ ದೂರ ಮಾಡದ ಆಕೆ ಪದೇ ಪದೇ ತಿಳಿ ಹೇಳುತ್ತಿದ್ದಳು. ಆದರೆ ಆಕೆ ಒಂದು ಸಣ್ಣ ಮಿಸ್ಟೆಕ್ ಮಾಡಿದರೂ ಕೋಪದಿಂದ ಮಾತನ್ನೇ ಬಿಡುತ್ತಿದ್ದೆ. ಆಗಲೂ ಅವಳಾಗಿಯೇ ಮಾತನಾಡಲು ಯತ್ನಿಸುತ್ತಿದ್ದಳು. ನನಗೆ ಅವಳ ಮೇಲೆ ಎಷ್ಟೇ ಕೋಪವಿದ್ದರೂ ಅವಳ ಮುಖ ಕಂಡ ಕೂಡಲೇ ನಗು ಉಕ್ಕುತ್ತಿತ್ತು. ಆ ನಗು ಮತ್ತೆ ಮಾತಿಗೆ ಇಳಿಸುತ್ತಿತ್ತು.

ಆಕೆಯ ಮುಗ್ದತೆ, ಮುಗುಳ್ನಗೆ, ಶಾಂತ ಸ್ವಭಾವ ಎಲ್ಲವೂ ತುಂಬಾನೆ ಇಷ್ಟ. ಹಲವಾರು ಅಡ್ಡ ಹೆಸರುಗಳಿಂದ ನನ್ನನ್ನು ಕರೆದು ಖುಷಿ ಪಡುವ ನನ್ನ ಸ್ನೇಹಿತೆ ಯಾವತ್ತೂ ನಗುತಲಿರಲಿ. ಮೊದಲು ಟೈಂ ಪಾಸ್ ಗಾಗಿ ನನ್ನೊಡನೆ ಮಾತನಾಡುತ್ತಾಳೆ, ಚಾಟ್ ಮಾಡುತ್ತಾಳೆಂದು ಭಾವಿಸಿ ಅವಳ ಬಗ್ಗೆ ಅಸಡ್ಡೆ ತೋರಿಸಿದ್ದೆ. ಆದರೆ ಒಂದು ದಿನ ನನ್ನ ಮನದ ನೋವಿಗೆ ಸ್ಪಂದಿಸಿ, ನನ್ನ ಸ್ಥಿತಿ ಕಂಡು ಕಣ್ಣೀರು ಹಾಕಿದಾಗ ನನ್ನ ತಪ್ಪು ಕಲ್ಪನೆ ಕಂಡು ಬೇಸರವಾಯಿತು.
ಖುಷಿಯಿರಲಿ, ದುಃಖವಿರಲಿ ತನ್ನ ಮನದಾಳದ ಎಲ್ಲ ಸಂಗತಿಗಳನ್ನು ನನ್ನೊಡನೆ ಹಂಚಿಕೊಳ್ಲುವಷ್ಟು ಒಳ್ಳೆಯ ಸ್ನೇಹಿತನಾಗಿ ಅವಳಿಗೆ ಕಂಡಿದ್ದೆ. ಕೆಲವು ಬಾರಿ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗುತ್ತಿದ್ದಳು. ಆ ಮೌನದ ಹಿಂದಿನ ಸತ್ಯ ನನಗೆ ಇಂದಿಗೂ ತಿಳಿಯದಾಗಿದೆ.
ನಮ್ಮ ಗ್ರೂಪ್ ನ ಯಾರೋ ಒಬ್ಬರು ಕೋಪ ಬರುವ ಹಾಗೆ ನಡೆದುಕೊಂಡು ಮನಸ್ಸಿಗೆ ನೊವು ಮಾಡಿದರೆ ಅವಳು ಮಾಡುತ್ತಿದ್ದ ಕೆಲಸ ಒಂದೇ ಒಂದು ಅದು, ‘ ನಾನ್ ಯಾರಿಗೂ ಬೇಡ, ನನ್ನಂತವಳ ಜೋಡಿ ಫ್ರೆಂಡ್ ಶಿಫ್ ಬೇಡ ಗುಡ್ ಬೈ’ ಅಂತ ಮೆಸೆಜ್ ಟೈಪ್ ಮಾಡಿ ಫ್ರೆಂಡ್ಸ್ ಗ್ರೂಪ್ ಗೆ ಎಲ್ಲಾ ಸಂದೇಶ ರವಾನಿಸುತ್ತಿದ್ದಳು. ಅದ್ಯಾಕೆ ಹಾಗೆ ಮಾಡುತ್ತಿದ್ದಳೋ ಇದುವರೆಗೂ ತಿಳಿಯದಾಗಿದೆ. ರೇಗಿಸಿ ನಗಾಡಿ ಹಲವಾರು ಬಾರಿ ಅಳಿಸಿದ್ದು ಇದೆ. ಬಹುಶಃ ಅವಳನ್ನು ರೇಗಿಸಿದಷ್ಟು ಬೇರೆ ಯಾರನ್ನು ರೇಗಿಸಿಲ್ಲವೆನ್ನಿಸುತ್ತದೆ.
ನನ್ನ ಸ್ನೇಹಿತೆ, ನನ್ನ ಇನ್ನೊಬ್ಬ ಸ್ನೇಹಿತನನ್ನು ಪ್ರೀತಿಸುತ್ತಿದ್ದಾಳೆ. ಅವರ ಪ್ರೀತಿ. ಗೀತಿ, ಇತ್ಯಾದಿ ನನ್ನನ್ನು ಅಂಚೆ ಪೆಟ್ಟಿಗೆ ಕೆಲಸ ಮಾಡಿಸಿಯೂ ಬಿಟ್ಟಿತು. ಈ ಫೋಸ್ಟ್ ಬಾಕ್ಸ್ ಕೆಲಸ ಮಾಡಿದ ಒಂದೇ ಒಂದು ಉದ್ದೇಶವೆಂದರೆ ಪ್ರೀತಿಯ ಒಳ್ಳೆಯ ಸ್ನೇಹಿತೆ ಖುಷಿಯಿಂದರಲಿ ಎಂಬುದೊಂದೇಯಾಗಿತ್ತು. ಈ ಕೆಲಸ ಮಾಡಿದಾಗಲೂ ಹಲವಾರು ಬಾರಿ ನಾವಿಬ್ಬರೂ ಜಗಳವಾಡಿದ್ದೇವೆ. ಕಾರಣ ನಮಗೆ ತಿಳಿಯದು. ಒಂದು ಸಂಗತಿ ನನ್ನ ಸ್ನೇಹಿತೆ ನನ್ನನ್ನ ಸ್ವಂತ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ತನಗೆ ತೋಚಿದ ನಿಕ್ ನೇಮ್ ಗಳಿಂದಲೇ ಕರೆಯುತ್ತಿದ್ದಳು.
ಇರುವಾಗ ಇಷ್ಟೆಲ್ಲಾ ರೇಗಿಸಿ, ಕೋಪ ತರಿಸಿ, ಹಲವಾರು ತರಲೆ ಕೆಲಸಗಳಿಂದ ಮನಸ್ಸಿಗೆ ಗಾಯ ಮಾಡಿ ಅಸಡ್ಡೆ ತೋರಿದ ನನಗೆ ಈಗ ಅರಿವಾಗುತ್ತಿದೆ ನನ್ನ ಒಳ್ಳೆಯ ಸ್ನೇಹಿತೆಯ ಮನಸ್ಸು ಮತ್ತು ಅವಳ ಮಹತ್ವ. ಇಷ್ಟೆಲ್ಲ ಸಂತೊಷದಿಂದ ಇದ್ದ ಆಕೆ ದೀಢಿರನೇ ದೂರಾಗುತ್ತಿದ್ದಾಳೆ. ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ. ಇಷ್ಟು ದಿನ ಸ್ನೇಹದ ಕಡಲಲ್ಲಿ ಇದ್ದ ನಾನು ಇನ್ನೂ ಮುಂದೆ ನೆನಪಿನ ದೋಣಿಯಲಿ ಪಯಣ ಮುಂದುವರೆಸಬೇಕು. ಅವಳು ಎಲ್ಲೇ ಇರಲಿ, ಹೇಗೆ ಇರಲಿ ಯಾವಾಗಲೂ ನಗುತಿರಲಿ, ಅವಳು ಬಯಸಿದ ಸಂತೋಷದ ಜೀವನ ಅವಳದಾಗಲಿ.

‍ಲೇಖಕರು G

8 November, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading