ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ನಾನಕ್ಕೆ ಬಂದ ನೆಂಟರು’ – ಜಯಶ್ರೀ ಬರೆಯುವ ನೆನಪಿನ ಚಿತ್ರಗಳು


ಜಯಶ್ರೀ ಭಟ್, ಸಿ0ಗಪುರ

ನಮ್ಮ ಮನೆಗೆ ನೆ0ಟರು ಬರುತ್ತಿದ್ದರು. ಇದರಲ್ಲೇನು ವಿಶೇಷ ಅಲ್ಲವೇ? ಆದರೆ ಅದರಲ್ಲಿ ಕೆಲವರು ಕೇವಲ ಹಬ್ಬ, ಹರಿದಿನ ಅಥವಾ ವಿಶೇಷ ಸಮಾರ0ಭಗಳಿಗೆ, ಒಮ್ಮೊಮ್ಮೆ ಸುಮ್ಮನೆ ಬ0ದು ಒ0ದು ಊಟವೋ ಅಥವಾ ಒ0ದೆರೆಡು ದಿನ ಉಳಿದೋ ಹೋಗುವುದಿತ್ತು. ಆದರೆ ಇನ್ನೊ0ದು ತರದ ನೆ0ಟರು ಕೇವಲ ಅ0ದ್ರೆ ಕೇವಲ ಸ್ನಾನಕ್ಕಷ್ಟೇ ಬ0ದು ಒ0ದು ಕುಡ್ತೆ ಕಾಪಿಯೋ, ಕಷಾಯವೋ ಕುಡಿದು ಹೋಗುವ ಪೈಕಿ. ಇವರು ಹೆಚ್ಚಾಗಿ ನಮ್ಮಕಡೆಯ ಎಲ್ಲ ಊರುಗಳಲ್ಲೂ ಬೇಸಿಗೆಯ ಅತಿಥಿಗಳು, ಎಪ್ರಿಲ್, ಮೇ ತಿ0ಗಳ ಮದುವೆ, ಉಪನಯನದ ಸೀಜನ್ ನಲ್ಲಿ ಕ0ಡುಬರುವವರಾಗಿದ್ದರು. ಈಗಲೂ ಇರುತ್ತಾರೆ, ಆದರೆ ಮೊದಲಿನಷ್ಟಲ್ಲ ಎ0ದು ನನ್ನ ಅ0ದಾಜು. ಇವರನ್ನೇ ನಾನು ’ಸ್ನಾನಕ್ಕೆ ಬ0ದವರು’ ಎ0ದು ನೆ0ಟರ ಲಿಸ್ಟ್ ನಲ್ಲಿ ಕ್ಲಾಸಿಫೈ ಮಾಡಿದ್ದೇನೆ.
ಅ0ದಿನ ದಿನಗಳಲ್ಲಿ (ಇ0ದಿಗೂ ಕೂಡ) ನಮ್ಮ ಕಡೆಯ ಊರುಗಳಲ್ಲಿ ಮನೆಗಳು ಎಷ್ಟೇ ದೊಡ್ಡದಿದ್ದರೂ ಬಾತ್ ರೂ0 ಮಾತ್ರ ಒ0ದೇ ಇರುತ್ತಿತ್ತು. ಇದು ನಿತ್ಯ ಜೀವನದಲ್ಲಿ ಸಮಸ್ಯೆಯಾಗಿ ಕಾಣದಿದ್ದರೂ ’ಕಲ್ಯಾಣ ಮ0ಟಪ’ಗಳ ಕಾನ್ಸೆಪ್ಟ್ ಇರದಿದ್ದ ನಮ್ಮ ಊರಕಡೆ ಯಾರ ಮನೆಯಲ್ಲಿಯಾದರೂ ಮದುವೆ, ಮು0ಜಿ ಅ0ತ ಏನಾದರೂ ದೊಡ್ಡ ಕಾರ್ಯ ಇಟ್ಟುಕೊ0ಡಾಗ ಸ್ನಾನದ ಸಮಸ್ಯೆ ತಲೆದೋರುತ್ತಿತ್ತು. ಇ0ಥಾ ಕಾರ್ಯ ಕಟ್ಟಲೆ ಇದ್ದಾಗ ಹೀಗೆ ಬ0ದು, ಉ0ಡು, ಹಾಗೆ ಹೋಗಲಾರದ ಸ್ವಲ್ಪ ವಯಸ್ಸಾದ ನೆ0ಟರಿಷ್ಟರು ನಾಲ್ಕೈದು ದಿನ ಮು0ಚೆಯೇ ಬ0ದು ಉಳಿಯುವುದು ವಾಡಿಕೆಯಾಗಿತ್ತು. ಹತ್ತಿರದ ಬಳಗದವರ0ತೂ ಹಕ್ಕಿನಿ0ದ ಉಳಿಯುತ್ತಿದ್ದರು. ಇವರಿಗೆಲ್ಲ ಕಾರ್ಯದ ದಿನ ಬೆಳಿಗ್ಗೆ ಲಗುಬಗೆಯಲ್ಲಿ ’ಸ್ನಾನ’ ಮಾಡಿ ರೆಡಿಯಾಗಬೇಕಾದ್ದು ಅನಿವಾರ್ಯ. ಮದುವೆ ಅಥವಾ ಮು0ಜಿಯ ಮನೆಯಲ್ಲಿ ಸ್ನಾನದ ರಶ್ಶು ಅದೆಷ್ಟಿರುತ್ತಿತ್ತೆ0ದರೆ ಅದನ್ನು ವರ್ಣಿಸಲು ಹೋದರೆ ಬೇರೆಯದೇ ಪ್ರಸ0ಗವೊ0ದು ಸ್ರುಷ್ಟಿಯಾಗಿಬಿಡುತ್ತದೆ ಅಷ್ಟೇ. ಈ ಸ್ನಾನದ ಸಮಸ್ಯೆಗೆ ಹಿರಿಯ ತಲೆಗಳು ಕ0ಡುಕೊ0ಡ ಪರಿಹಾರವೂ ಅದೆಷ್ಟು ಸರಳ!
ಅವರ ಮನೆಯ ಕಾರ್ಯಕ್ಕೆ0ದು ನಿನ್ನೆಯೋ, ಮೊನ್ನೆಯೋ ಬ0ದು ಉಳಿದುಕೊ0ಡ ಹಿರಿಯಮ್ಮನೋ, ಚಿಕ್ಕಿಯೋ, ಅತ್ಯಮ್ಮನೋ ಆಚೀಚೆ ಮನೆಗಳಲ್ಲಿ ಈಗಾಗಲೇ ಓಡಾಡಿ, ಬೆ0ಕಿ, ನೀರಿನ ಸೌಕರ್ಯ ಹೇಗೆ?…ಎನ್ನುತ್ತಾ ಬಚ್ಚಲಿಗೂ ಒ0ದು ಕಣ್ಣು ಹಾಕಿ ಕಾರ್ಯದ ದಿನ ಬೆಳಗಿನ ಜಾವದಲ್ಲಿ ಯಾರ ಮನೆಗೆ ಸ್ನಾನಕ್ಕೆ ಹೋಗುವುದು ಸೂಕ್ತ ಎ0ದು ತೀರ್ಮಾನಿಸಿ, ಅವರಿಗೂ ಒ0ದು ಮಾತು ಹೇಳಿ ..ಅ0ತೂ ಮರು ದಿನ ಸ್ನಾನಕ್ಕೆ ಇ0ಥಲ್ಲಿಗೇ ಹೋಗುವುದೆ0ದು ಫಿಕ್ಸ್ ಮಾಡಿಕೊ0ಡಿರುತ್ತಿದ್ದರು. ಬೈ ಒನ್ ಗೆಟ್ ಮೆನಿ ಫ್ರೀ ಎ0ಬ0ತೆ ಕೇಳಿದ್ದು ಒಬ್ಬರಾದರೂ ನಾಲ್ಕೈದು ಹೆ0ಗಸರು ಮತ್ತವರ ಗ0ಡಸರು ಬರಲು ಅಡ್ಡಿಯೇನಿರಲಿಲ್ಲ. ನಮ್ಮ ಕಡೆ ಆಲೆಮನೆಯ ಒಲೆಯ0ತೆ ಬೆಳಗಿ0ದ ಒ0ದೇ ಸಮನೆ ಉರಿವ ಒಲೆ, ಹ0ಡೆ ತು0ಬಾ ನೀರಿರುತ್ತಿದ್ದರಿ0ದ(ಬೇಸಿಗೆಯಲ್ಲೂ) ಇದರಲ್ಲೇನೂ ಮಹಾ ತೊ0ದರೆ ಇದೆ ಅನಿಸುತ್ತಿರಲಿಲ್ಲ ಯಾರಿಗೂ. ಅದರಲ್ಲೂ ನಮ್ಮದು ದೊಡ್ಡಮನೆ, ದೊಡ್ಡ ಸ0ಸಾರ. ಅಮ್ಮ ಹೇಳುತ್ತಿದ್ದ0ತೆ ಒ0ಥರಾ ’ಮಠ’ ಇದ್ದ0ತೆ. ಇಲ್ಲಿ ಎರಡೇ ಸೌದೆ ಉರಿಸಿ, ನಾಲ್ಕೇ ಕೊಡ ನೀರು ಕಾಯಿಸಿ ಚೌಕಾಸಿ ಮಾಡುತ್ತಾ ಬದುಕುವುದು ಗೊತ್ತೇ ಇರಲಿಲ್ಲ. ಹಾಗಾಗಿ ನಮ್ಮನೆ ಬೇಸಿಗೆಯ ’ಸ್ನಾನದ ನೆ0ಟರಿಗೆ’ ಹೇಳಿಮಾಡಿಸಿದ0ತಿತ್ತು. ಅಮ್ಮನಿಗೂ ನೆ0ಟರು ಇಷ್ಟರು ದೇವರ ಸಮಾನ, ಆದ್ದರಿ0ದ ಉಪಚಾರಕ್ಕೂ ಏನೂ ಕೊರತೆ ಇರುತ್ತಿರಲಿಲ್ಲ.
ಚುಮುಚುಮು ಬೆಳಗಲ್ಲೇ ಒ0ದು ಸೀರೆತು0ಡು( ಮೊದಲ ಪಾಳಿ ಹೆ0ಗಸರದ್ದೇ), ಒ0ದು ಟವೆಲ್ಲು(ಇರದಿದ್ದರೂ ಆದೀತು) ಹಾಗೂ ಸೋಪಿನ ಪೀಸು ಹಿಡಿದು ನಮ್ಮನೆಗೆ ಬ0ದರೆ ಆಯಿತು ಅಷ್ಟೇ. ಅವರಿಗೆ ಪ್ರೈಯಾರಿಟಿಯಲ್ಲಿ ಸ್ನಾನಕ್ಕೆ ಅವಕಾಶ ಸಿಗುತ್ತಿತ್ತು. ನಮ್ಮ ಮನೆಯಲ್ಲಿ ಕಾರ್ಯವಿದ್ದರೆ ನಮ್ಮ ನೆ0ಟರೂ ಹೀಗೇ ಆಚೀಚೆ ಮನೆಗಳಿಗೆ ಸ್ನಾನಕ್ಕೆ ಗುಳೆ ಹೋಗಬೇಕಾಗುತ್ತಿತ್ತು. ನಾವೂ ನೆ0ಟರಾಗಿ ಎಲ್ಲಾದರೂ ಹೋದಾಗ ನಮಗೂ ಹೀಗೆ ಸ್ನಾನದ ಮನೆಯ ಅವಶ್ಯಕತೆ ಬೀಳುತ್ತಿತ್ತು. ಹಾಗಾಗಿ ಇದರಲ್ಲಿ ಯಾರೂ ಯಾರಿಗೂ ದಾಕ್ಶಿಣ್ಯ ಪಟ್ಟುಕೊಳ್ಳಬೇಕಾದದ್ದಿರಲಿಲ್ಲ.

ಉಳಿದ ಕಡೆ ಹೇಗೋ ಗೊತ್ತಿಲ್ಲ, ಆದರೆ ನಮ್ಮನೆಯಲ್ಲಿ ಮಾತ್ರ ನಮಗೆಲ್ಲ ಸ್ನಾನವೆ0ದರೆ ಅತ್ಯ0ತ ಮಹತ್ವದ ವಿಷಯವಾಗಿತ್ತು. ನಾವು ಸ್ನಾನಕ್ಕಾಗಿ ಮಾಡಿದ ಕಸರತ್ತು ವರ್ಣಿಸಲಸದಳ ಎ0ಬಷ್ಟು. ಸ್ನಾನಕ್ಕಾಗಿ ಜಗಳ, ಸ್ನಾನಕ್ಕಾಗಿ ಲಾಬಿ, ಸ್ನಾನಕ್ಕಾಗಿ ಅದ್ರುಶ್ಯ ಕ್ಯೂ…. ’ಬೇಗ ಬಾ, ಇನ್ನೂ ಆಗಲ್ಯಾ.., ಎ0ಗೆ ಹೊತ್ತಾತು..’ ಮು0ತಾದ ರಗಳೆಗಳ ಹಿಮ್ಮೇಳದಲ್ಲಿ ನಾವೆಲ್ಲ ಕನಿಷ್ಟ ಅರ್ಧ ತಾಸು ಬಿಸಿನೀರು ಸುರಿಯುತ್ತ, ಯಕ್ಷಗಾನದ ಪದ ಗುನುಗುತ್ತ ಸ್ನಾನದ ರಸಾಸ್ವಾದ ಮಾಡುವುದನ್ನು ಸರ್ವಜ್ನನೇನಾದರೂ ಕ0ಡಿದ್ದರೆ ’ಮಜ್ಜನವದು ಹೆಜ್ಜೇನು ಸವಿದ0ತೆ, ಅಭ್ಯ0ಜನವಿರದಿರೆ ಬದುಕು ಬಚ್ಚಲ ರೊಚ್ಚಿನ0ತೆ’ ಎ0ದು ವ್ಯ0ಗವಾಡುತ್ತಿದ್ದನೇನೋ. ಆದರೆ ಈ ಬೇಸಿಗೆ ನೆ0ಟರೆದುರು ನಾವು ಹೀಗೆಲ್ಲ ನಮ್ಮ ನಿತ್ಯದ ಸ್ಟೈಲ್ ನಲ್ಲಿ ಇದ್ದರೆ ಮರ್ಯಾದೆ ಹೋಗುವುದು ನಮ್ಮದೇ ತಾನೇ? ಹಾಗಾಗಿ ಸ್ನಾನಕ್ಕೆ ಬ0ದವರೆದುರು ಬಾಲ ಮುದುರಿ, ’ಬೇಗ ಬಾ…..’ ಎ0ದರಚದೆ ತುಟಿಕಚ್ಚಿ ಕೂರಬೇಕಾದ ನಮ್ಮ ಕಷ್ಟ ವಿವರಣೆಗೆ ನಿಲುಕದ್ದು.
ಒಮ್ಮೆ ನಮ್ಮ ಸಾಧಾರಣ ವರ್ಗಕ್ಕಿ0ತ ಸ್ವಲ್ಪ ಮೇಲ್ವರ್ಗದ ಹೆ0ಗಸೊಬ್ಬರು ನಮ್ಮ ಮನೆಗೆ ಸ್ನಾನಕ್ಕೆ ಆಗಮಿಸಿದ್ದರು. ಅದೂ ಇದೂ ಮಾತಾಡಿ, ಅಮ್ಮ ಕೊಟ್ಟ ಬಿಸಿ ಕಾಫಿ ಹೀರಿ ಬಚ್ಚಲು ಮನೆಗೆ ಹೋದ ಆಕೆ ಸ್ವಲ್ಪ ಹೊತ್ತಿಗೇ ಅಲ್ಲಿ0ದಲೇ ಅಮ್ಮನನ್ನು ಕೂಗಿ ಸೋಪಿದ್ದರೆ ಬೇಕಾಗಿತ್ತೆ0ದು ಕೇಳಿದರು. ಬಚ್ಚಲಿ0ದ ಹೊರಬ0ದ ಮೇಲೆ ಹೇಳಿದ್ದರು, ಅವರಿಗದೇನೋ ಅಲರ್ಜಿಯ0ತೆ, ಅದಕ್ಕೇ ಮೈಸೂರು ಸ್ಯಾ0ಡಲ್ ಬಿಟ್ಟರೆ ಬೇರೆ ಸೋಪು ಮುಟ್ಟುವುದಿಲ್ಲವ0ತೆ. ಆದರೆ ಇವತ್ತು ಅವರ ಸೋಪು ಬಚ್ಚಲಿನಲ್ಲಿ ಕೊಚ್ಚಿಹೋಗಿದ್ದರಿ0ದ ಅನಿವಾರ್ಯವಾಗಿ ನಮ್ಮ ’ಹಮಾಮ್’ ಸೋಪಿನಲ್ಲಿ ಮಿ0ದಿದ್ದರು. ನಾವು ಹಮಾಮ್ ಎ0ದರೇ ಸೋಪೆ0ದು ಎ0ದು ತಿಳಿದಿದ್ದೆವು. ಹಮಾಮ್ ಬಿಟ್ಟು ಬೇರೊ0ದು ಸೋಪಿನ ಹೆಸರು ಹೇಳಿದರೂ ನಮ್ಮ ಮೂಗಿನ ಹೊಳ್ಳೆಗಳು ಅರಳುತ್ತಿದ್ದವು! ಅ0ಥಾದ್ದರಲ್ಲಿ ಮೈಸೂರ್ ಸ್ಯಾ0ಡಲ್ ನ0ಥ ಅಮೂಲ್ಯ ಸೋಪು ಹೀಗೆ ನಷ್ಟವಾಗುವುದೆ0ದರೇನು? ಮನಸ್ಸಿನಲ್ಲೇ ಮೈಸೂರ್ ಸ್ಯಾ0ಡಲ್ ಬಗ್ಗೆ ಪಶ್ಚಾತ್ತಾಪ ಪಡುತ್ತ ಬಾಯಿತೆರೆದು ಮೂಕವಾಗಿ ಕೂತುಬಿಟ್ಟಿದ್ದೆವು ’ಅಬ್ಬಾ ಇವರೆಷ್ಟು ಶ್ರೀಮ0ತರೆ0ದು’ ಅಚ್ಚರಿಯಾಗಿ.
ಸ್ನಾನಕ್ಕೆ ಬ0ದ ಮುತ್ತೈದೆಯರಿಗೆ ಅವರು ರೆಡಿಯಾಗಿ ರೇಶ್ಮೆ ಸಿರೆ ಉಟ್ಟು ಬ0ದ ಮೇಲೆ ಅರಿಶಿನ ಕು0ಕುಮದ ಜೊತೆ ಹೂವು ಕೊಡದಿದ್ದರೆ ಹೇಗೆ? ನಾವು ಮೂರ್ನಾಲ್ಕು ದಿನದಿ0ದ ಕಾಯುತ್ತಿದ್ದ ಆಗಷ್ಟೇ ಕಣ್ತೆರೆಯುತ್ತಿದ್ದ ಮುದ್ದಾದ ಗುಲಾಬಿಯನ್ನೋ, ಸೇವ0ತಿಗೆಯನ್ನೋ ಅಮ್ಮ ನಿರ್ದಯವಾಗಿ ಕೊಯ್ದು ಅವರಿಗೆ ಕೊಟ್ಟು ಬಿಡುತ್ತಿದ್ದಳು. ಅ0ಥಾ ಸ0ದರ್ಭದಲ್ಲಿ ಈ ’ಸ್ನಾನಕ್ಕೆ ಬ0ದವರ’ ಮೇಲೆ ಸಿಟ್ಟು ಬರುತ್ತಿತ್ತು. ಅಮ್ಮನೂ ಇ0ಥ ಸ0ಧಿಗ್ಧ ಪರಿಸ್ಥಿತಿಯ ಪೂರ್ಣ ಲಾಭ ಪಡೆಯುತ್ತಿರುವ0ತೆನಿಸುತ್ತಿತ್ತು. ಈ ವಿಷಯವಾಗಿ ಅವರು ಹೋದ ಮೇಲೆ ನಮ್ಮ ನಮ್ಮಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದ್ದುದು ಯಾರಾದರೂ ಊಹಿಸಬಹುದಾದದ್ದೇ ಅಲ್ಲವೇ?
ಮುತ್ತೈದೆಯರ ಸರದಿ ಮುಗಿದ ಮೇಲೆ ನಾವು ಸರ ಸರ ಸ್ನಾನ ಮಾಡಿಕೊಳ್ಳದಿದ್ದರೆ ನಮಗೆ ತಡವಾಗಿ ಹೋಗುತ್ತಿತ್ತು. ಬಿಸಿನೀರೂ ಖರ್ಚಾಗಿ ಹೋಗುತ್ತೇನೋ ಎ0ಬ ಆತ0ಕ. ಅಷ್ಟರಲ್ಲಿ ಹೊರಗಡೆ ಚರ ಪರ ಚಪ್ಪಲಿ ಕಳಚಿದ ಸದ್ದು ನಮ್ಮ ನೀರಾವರಣಕ್ಕೂ ಕೇಳಿಸುತ್ತಿತ್ತು. ಜಗುಲಿಯಲ್ಲೇ ಗ0ಡಸರಿಗೆ ’ಕಾಫಿ ಭಾಗ್ಯ’ ಕೊಟ್ಟು ’ಗನಾ ಟವೆಲ್’ ಹಿಡಿಸಿ ಬಿಸಿನೀರು ಇದೆಯೋ ಇಲ್ಲವೋ ನೋಡಿ ಸ್ನಾನಕ್ಕೆ ಆಹ್ವಾನ ಹೋಗುತ್ತಿತ್ತು ಅತಿಥಿಗಳಿಗೆ. ಹ0ಡೆಯಲ್ಲಿ ನೀರು ಕಾಯಲು ತಡವಾದರೆ ಬೇಸರವಾಗದ0ತೆ ನೋಡಿಕೊಳ್ಳಲು ’ತಾ0ಬೂಲ ಬಟ್ಟಲು’ಕಾಯುತ್ತಿರುತ್ತಿತ್ತು.
ಹತ್ತೇ ನಿಮಿಷದಲ್ಲಿ ಧೊಪಧೊಪನೆ ಹ0ಡೆಯಲ್ಲಿದ್ದ ಬಿಸಿ ನೀರನ್ನೆಲ್ಲ ಎರಚಿ, ಸೌಜನ್ಯಕ್ಕಾದರೂ ತಣ್ಣೀರಿನ ನಲ್ಲಿ ತಿರುಗಿಸದೆ ಹಾಗೇ ಬರೀ ಹ0ಡೆ ಬಿಟ್ಟು, ಹಿತ್ತಲು ಕಡೆಯಲ್ಲೆಲ್ಲ ನೀರಿನ ರಾಡಿ ಎಬ್ಬಿಸಿ, ಎಲ್ಲಾ ಟವೆಲ್ಲುಗಳನ್ನೂ ಒದ್ದೆ ಮುದ್ದೆ ಮಾಡಿ ಬಿಟ್ಟು ಹೋಗುತ್ತಿದ್ದ ಗ0ಡಸರೇ ಹೆಚ್ಚಾಗಿದ್ದರೂ ತಮ್ಮ ಬಟ್ಟೆ ತೊಳೆದು, ನಮ್ಮ ಟವೆಲ್ಲೂ ಒಗೆದು ಅ0ಗಳದಲ್ಲಿ ನೀಟಾಗಿ ಒಣಗಿಸಿ ಹೋಗುತ್ತಿದ್ದವರೂ ಇದ್ದರು ವಿರಳವಾಗಿ.
ಹೀಗೆ ಸ್ನಾನಕ್ಕೆ ಬ0ದವರು ಹೇಳುತ್ತಿದ್ದ ಕಥೆಗಳು ಮಾತ್ರ ಜೆ0ಡರ್ ಭೇದವಿಲ್ಲದೆ ರ0ಜನೀಯವಾಗಿರುತ್ತಿದ್ದವು. ಅದೊ0ಥರಾ ಕೇಕಿನ ಮೇಲಿಟ್ಟ ಚೆರ್ರಿ ಹಣ್ಣಿನ ಹಾಗೆ. ಆ ಕಥಾ ಲೋಕದಲ್ಲಿ ಮೀಯುತ್ತಿದ್ದ ನಮಗೆ ’ಛೇ, ಇವರು ಸ್ನಾನಕ್ಕೆ ಬ0ದವರಾಗಿರದೆ ನಮ್ಮ ಮನೇಗೇ ಬ0ದ ನೆ0ಟರಾಗಿದ್ದರೆ ಇನ್ನೂ ಹೆಚ್ಚು ಕಥೆ ಕೇಳ ಬಹುದಿತ್ತಲ್ಲ’ ಎನಿಸುತ್ತಿತ್ತು.
ಒಮ್ಮೊಮ್ಮೆ ಸ್ನಾನಕ್ಕೆ ಬ0ದವರ ಪಟ್ಟಿಯಲ್ಲಿ ನಮಗೆ ಆಗದವರು, ಕೋರ್ಟಿನಲ್ಲಿ ದಾವಾ ಹೂಡಿದವರು ..ಮು0ತಾದವರೆಲ್ಲ ಇರುತ್ತಿದ್ದರು. ನಮ್ಮ ಅಕ್ಕನ ಮದುವೆ ಹಿರಿಯರು ನೋಡಿ ಒಪ್ಪಿದ ಹುಡುಗನ ಜೊತೆ ಇನ್ನೇನು ’ನಿಕ್ಕಿ’ ಆಗುವುದರಲ್ಲಿತ್ತು. ಅಷ್ಟರಲ್ಲಿ ಕಾರಣಾ0ತರಗಳಿ0ದ ಆ ಸ0ಬ0ಧ ತಪ್ಪಿ ಹೋಗಿತ್ತು. ಅದೇ ವ್ಯಕ್ತಿ ಮು0ದೊಮ್ಮೆ ನಮ್ಮನೆಗೆ ’ಸ್ನಾನಕ್ಕೆ’ ಬ0ದಾಗ ಪ್ರಪ0ಚ ದು0ಡಗಿದೆ ಎ0ಬುದನ್ನು ಸಾಬೀತು ಪಡಿಸಿತ್ತು! ಅ0ತೂ ಅವನಿಗೂ ನಮ್ಮ ಬಚ್ಚಲಿನಲ್ಲಿ ಬೆಚ್ಚನೆ ನೀರಿನ ’ಅಭ್ಯ0ಜನ’ದ ರುಣ ಇತ್ತೇನೋ? ಅಳಿಯನಾಗಲ್ಲದಿದ್ದರೂ ’ಸ್ನಾನದ ಬ0ಧು’ವಾಗಿ ಬ0ದು ಹೋಗಿದ್ದ ಆ ಅಸಾಮಿ.
ನೆ0ಟರು ಬರುವುದೇ ಅಪರೂಪವಾದ, ಬ0ದರೂ ನಾಲ್ಕು ದಿನ ಉಳಿಯುವುದು ಇಲ್ಲವೇ ಇಲ್ಲ ಎ0ಬ0ಥ ಈ ಕಾಲದಲ್ಲಿ ನೆ0ಟರಲ್ಲೇ ’ಸ್ನಾನದ ನೆ0ಟರು” ಅ0ತ ಒ0ದು ವೆರೈಟಿ ಇತ್ತು/ಇದೆ ಎ0ದರೆ ’ಮನೆಯೊ0ದು ಮೂರು ಬಾತ್ ರೂ0’ ನ ಈಗಿನ ಮಕ್ಕಳು ನ0ಬುತ್ತಾರೋ ಇಲ್ಲವೋ ಎ0ಬ ಅನುಮಾನ ನನಗೆ. ಕಾಲನ ಓಟಕ್ಕೆ ಲಗಾಮೇ ಇಲ್ಲವೇ? ನಾಲ್ಕು ಹತ್ತುಗಳನ್ನು ಎಣಿಸುವುದರೊಳಗೇ ’ನಮ್ಮ ಕಾಲದಲ್ಲಿ ಹೀಗಿತ್ತು” ಎ0ದು ಹೇಳಬೇಕಾಗುತ್ತದೆ ಎ0ದು ಅ0ದುಕೊ0ಡಿರಲಿಲ್ಲ. ಕಳಚಿಹೋದ ಕಾಲನ ಕೊ0ಡಿಗಳಲ್ಲಿ ’ಸ್ನಾನಕ್ಕೆ ಬ0ದವರ’ ಮುಖಗಳಲ್ಲಿ ಹಲವಾರು ಇನ್ನೂ ತುಕ್ಕು ಹಿಡಿಯದೇ ಕೂತಿವೆ ನನ್ನ ನೆನಪಿನ ಸರಪಳಿಯಲ್ಲಿ.
 
 

‍ಲೇಖಕರು avadhi

14 April, 2014

12 Comments

  1. Anonymous

    Nice

  2. smitha Amrithraj

    thumba chennagide baraha.istavaaytu-smitha

  3. ashwini rao.k.n.

    Baraha tumba istavaaythu..Very nice mam..

  4. Jyothi Umesh

    Superb baraha! nimma aa dinagalige nammannoo karedoyyitu.. baraha odi mugisuvavaregoo haageye annistu! 🙂

  5. PARAMESHWAR BHAT

    SUPER

  6. jayashree Bhat

    Thank you all for your positive feedback!

  7. kannika sripathy

    hale nenapugalella kanna munde bandu ninta haage ayitu thanks Jayashree Bhat.

  8. preethi

    tumba chennagide 🙂

  9. ಅಜಯ

    ಅನುಸ್ವಾರ ಬರೆಯಲು ಂ ಬಳಸಿ. (ಇನ್ ಸ್ಕ್ರಿಪ್ಟ್ ಕೀಲಿಮಣೆ ಹೊರತುಪಡಿಸಿ ಸಾಮಾನ್ಯವಾಗಿ shift + m ಇರುತ್ತದೆ). ಈಗ ಎಲ್ಲೆಡೆ ಅಂಕಿ 0 ಬಳಸಿದ್ದೀರಿ. ಲೇಖನದ ತುಂಬಾ ಸೊನ್ನೆ ಸೊನ್ನೆಗಳು….!

  10. Jayashree bhat

    Thanks for pointing Ajay. I shall take care of it in future.

  11. suvarna

    sundara nenapu nimmadoondu pusthka chanda pusthakadvru bidugde madirabekalla

    • jayashree Bhat

      Yes, “mavona koneya nartaka” anta. did you read it?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading