ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸ್ತ್ರೀ ಸಮಾನತೆಯ ಇತಿಹಾಸ ಮತ್ತು ಹಂಚಿಕೆಯೆಂಬ ಮರೀಚಿಕೆ' – ಸೌಮ್ಯಾ ಕೆ ಆರ್

 

ಸೌಮ್ಯಾ ಕೆ ಆರ್

ಭಾರತದ ಮಹಿಳೆಯರಿಗೆ ಸಮಾನತೆ ನಿಜಕ್ಕೂ ಇನ್ನೂ ಮರೀಚಿಕೆ. ಇಲ್ಲಿ ಸಾಕಷ್ಟು ಸ್ತ್ರೀವಾದ, ಸ್ತ್ರೀಪರ ಚಳವಳಿಗಳಿದ್ದರೂ ಅವಳ ಹಕ್ಕು ಪಡೆಯಲು ನಡೆಸಬೇಕಾದ ಹರಸಾಹಸ ಮಾತ್ರ ಯಮಯಾತನೆಯದ್ದು. ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಂತಿಮವಾಗಿ ರಾಜಕೀಯವಾಗಿ ಕೂಡ ಸಮಾನತೆ ಮಹಿಳೆಗೆ ಸುಲಭದ ತುತ್ತಲ್ಲ.
ಸ್ತ್ರೀ ವಾದ ಪುರುಷ ಪ್ರಧಾನ ಮತ ಮತ್ತು ಸಂರಚನೆಗಳನ್ನು ವಿಮರ್ಶಿಸುತ್ತದೆ. ಪ್ರಚಲಿತ ಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಅದು ಈ ಬಗೆಯ ವಿಮರ್ಶೆಯನ್ನು ಮುಂದಿಡುತ್ತದೆ. ಇಲ್ಲಿನ ಗೃಹೀತವೆಂದರೆ, ಪುರುಷ ಪ್ರಧಾನತೆಯು ನಿರ್ದಿಷ್ಟ ಚಾರಿತ್ರಿಕ ಸನ್ನಿವೇಶಗಳ ಫಲವೇ ಹೊರತು ಸಹಜ ವಾದುದೇನೂ ಅಲ್ಲ. ಆದ್ದರಿಂದ ಈ ವ್ಯೆವಸ್ಥೆಯನ್ನು ಬದಲಾಯಿಸುವುದು ಸಾಧ್ಯ ಎನ್ನುವ ಆಶಯವೂ ಇದೆ. ಇತಿಹಾಸದುದ್ದಕ್ಕೂ ಪುರುಷರು ಸ್ತ್ರೀಯರನ್ನು ಅಡಿಯಲ್ಲಿಟ್ಟುಕೊಳ್ಳಲು ಯತ್ನಿಸಿದ್ದು ಒಂದು ಸತ್ಯ ಸಂಗತಿ. ಅವಳನ್ನು ವ್ಯೆವಸ್ಥೆ ಅಡಿಯಲ್ಲಿ ಇರಿಸಿಕೊಳ್ಳಲು ಲಿಂಗ ಪ್ರಬೇದ ಸೃಷ್ಟಿಯಾಗಿದೆ.

ಸಮಾಜದಲ್ಲಿ ಈ ವ್ಯೆವಸ್ಥೆಯನ್ನು ಬದಲಾಯಿಸುವುದು ಸಾಧ್ಯವೆನ್ನುವುದು ಸ್ತ್ರೀ ವಾದಿಗಳ ನಿಲುವು. ಈ ವ್ಯೆವಸ್ಥೆಯನ್ನು ಬದಲಾಯಿಸುವುದಕ್ಕೆ ವಯುಕ್ತಿಕ ಪ್ರತಿಭಟನೆಗಿಂತಲೂ ಸಂಘಟಿತ, ಪ್ರಜಾತಾಂತ್ರಿಕ ಹೋರಾಟಗಳು, ಚಳವಳಿಗಳನ್ನ ಹೂಡುವುದು ಮುಖ್ಯ. ಆದ್ದರಿಂದ ಸ್ತ್ರೀ ವಿಮೋಚನಾ ಹೋರಾಟವು ಜಗತ್ತಿನ ಯಾವುದೇ ಒಂದು ಪ್ರೆದೇಶಕ್ಕೆ ಸೀಮಿತವಾಗಿಲ್ಲ. ಅದು ಪ್ರಾಜಾತಾಂತ್ರಿಕ ಹೋರಾಟಗಳಂತೆಯೇ ಆಧುನಿಕ ರಾಜಕೀಯ ಸಂಘಟನೆಯ ಸ್ವರೂಪವನ್ನು ಪಡೆದಿದೆ. ಸ್ತ್ರಿ ವಾದಕ್ಕೆ ಅನೇಕ ಇತಿಹಾಸಗಳಿವೆ. ವಿವಿಧ ಗತಿಗಳಿವೆ. ಸನ್ನಿವೇಶಗಳು ಸಂಧಿಸುವ, ಜೊತೆಗೂಡುವ ಮೂಲಕ ಸ್ತ್ರೀ ವಾದ ಬೆಳೆದಿದೆ. ಸ್ತ್ರೀವಿಮೋಚನಾ ಹೋರಾಟಗಳು ಪಶ್ಚಿಮದಿಂದ ಬಂದವು. ಬೇರೆ ಬೇರೆ ದೇಶಗಳಲ್ಲಿಯೂ ಸಹ ಸ್ತ್ರೀಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ, ಹಾಗೆಯೇ ಮುಂದುವರೆಸಿದ್ದಾರೆ.
ಮಹಿಳಾ ಪತ್ರಕತರ್ೆ ಮಧು ಕಿಶ್ವರ್ “ಭಾರತದಲ್ಲಿ ಸ್ತ್ರೀಯೊಬ್ಬಳು ತನ್ನನ್ನು ತಾನು ಸ್ತ್ರೀವಾದಿಯೆಂದು ಕರೆದುಕೊಳ್ಳಲು ಸೂಕ್ತವಲ್ಲ. ಯಾಕೆಂದರೆ ಹಾಗೆಂದುಕೊಂಡ ತಕ್ಷಣ ಸ್ವಯಂ ತಾಂತ್ರಿಕ ಸಮಾಜವಾದ, ಮೂಲ ಜಿಜ್ಞಾಸೆ ಸ್ತ್ರೀ ವಾದ ಮೊದಲಾದ ವಗರ್ೀಕರಣದ ಪದಗಳ ಗುಚ್ಚ ಪಶ್ಚಿಮದಿಂದ ಸುಲಭವಾಗಿ ಆಮದಾಗಿಬಿಡುತ್ತದೆ. ಈ ಪದಗಳು ಭಾರತದ ಸ್ತ್ರೀ ಚಳವಳಿಯ ನಿಲುವುಗಳನ್ನು ವಿವರಿಸಲಾರವು. ತಮ್ಮ ಸಾಂಸ್ಕೃತಿಕ ಸಂಧರ್ಭ ಬೇರೆಯಾದುದರಿಂದ ಪಶ್ಚಿಮವು ಹೇರುವ ಹುಸಿ ಸಾರ್ವತ್ರಿಕತೆಯಿಂದ ಕೂಡಿದ ಯಾವುದೇ ಪದವನ್ನು (ಇಲ್ಲಿ ಸ್ತ್ರೀ ವಾದಿ ಕೂಡ ಹೌದು) ನಾವು ಒಪ್ಪಿಕೊಳ್ಳಬಾರದು” ಎಂದು ವಾದಿಸುತ್ತಾರೆ. ಕಿಶ್ವರ್ ಅವರ ನಿಲವು ಸಾಕಷ್ಟು ಎಚ್ಚರಿಕೆಯ ನಿಲುವು ಎಂಬುದು ಸ್ತ್ರೀವಾದಿಗಳೆಲ್ಲ ಒಪ್ಪುವಂಥದ್ದು. ಆದರೆ ಸ್ತ್ರೀ ವಿಮೋಚನ ಚಳವಳಿಗಳ ವ್ಯಾಪಕ ಮತ್ತು ವೈವಿಧ್ಯದ ಚರಿತ್ರೆಯನ್ನು ಸೂಚಿಸುವ ಸ್ತ್ರೀ ವಾದ ವನ್ನು ಅಷ್ಟು ಸುಲಭವಾಗಿ ಬಿಟ್ಟಿಕೊಡುವುದು ಸರಿಯಲ್ಲ ಎಂದು ನಮಗೆ ಅನ್ನಿಸದಿರದು. ನಮ್ಮನ್ನು ವಿರೋಧಿಸುವವರು ಸಾಮಾನ್ಯವಾಗಿ ಮಾಡುವ ಹಾಗೇಯೇ ಸ್ತ್ರೀವಾದವನ್ನು ಪಾಶ್ಚಿಮಾತ್ಯ ಎಂದು ತಳ್ಳಿಹಾಕಿದರೆ, ನಮ್ಮಲ್ಲಿ ಅಂಥ ಸಂಧರ್ಭದಲ್ಲಿ ಸ್ತ್ರೀ ವಿಮೋಚನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಕೂಡ ಅವಕಾಶ ಸಿಗುವುದಿಲ್ಲ.
ಈ ಇತಿಹಾಸದಲ್ಲಿ ಸನ್ನಿವೇಶಗಳ ಮಹತ್ವದ ಅಂಶಗಳಲ್ಲಿ ಸಾಮ್ರಾಜ್ಯಶಾಹಿಯ ಮತ್ತು ಪಾಶ್ಚಿಮಾತ್ಯ ಚಿಂತನೆಯ ಪ್ರಭಾವಗಳು ಸೇರಿವೆಯಾದರೂ ಅವೆ ಎಲ್ಲವೂ ಅಲ್ಲ. ಮಹಿಳೆಯರ ಹಕ್ಕು ಮತ್ತು ಸ್ತ್ರೀ ಶಿಕ್ಷಣಗಳನ್ನು ಕುರಿತ ವಾಗ್ವಾದಗಳನ್ನು 18ನೇಯ ಶತಮಾನದಲ್ಲಿಯೇ ಭಾರತದಲ್ಲಿ ಕಾಣಬಹುದಾಗಿತ್ತು. 70-80 ವರ್ಷಗಳ ಹಿಂದೆಯೇ ಏಷ್ಯದ ಅನೇಕ ರಾಷ್ಟ್ರಗಳಲ್ಲಿ ಸ್ತ್ರೀ ಚಳವಳಿಗಳು ತಲೆ ಎತ್ತಿರುವುದನ್ನು (ಇತರ ಅಧ್ಯಯನಗಳಿಂದ) ನಾವು ಕಾಣುತ್ತೇವೆ. ವಾಸ್ತವವಾಗಿ ಅನೇಕ ಯುರೋಪೇತರ ರಾಷ್ಟ್ರಗಳ ಸ್ತ್ರೀವಾದಿ ಹೋರಾಟ ಹಾಗೂ ಮಹಿಳಾ ಚಳವಳಿಗಳನ್ನು ಇತಿಹಾಸದಿಂದ ಬಿಚ್ಚಿಡಲಾಗಿದೆ. ಸ್ವಾತಂತ್ರ್ಯ ಮತ್ತು ಸಾಮಾಜಿಕ ಬದಲಾವಣೆಯ ಸಂಕ್ರಮಣ ಕಾಲದಲ್ಲಿ ತಮ್ಮ ಬೆಡಿಕೆಗಳನ್ನು ಕುರಿತು ಒತ್ತಾಯಿಸುವುದು ಯಾವಾಗಲೂ ಸುಲಭವೆನ್ನುವುದು ರಾಷ್ಟ್ರೀಯವಾದಿ ಅಥವಾ ಕ್ರಾಂತಿಕಾರಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸ್ತ್ರೀವಾದಿ ಸಮಾಜ ವಿಮರ್ಶಕರ ಅನುಭವ.
ದೊಡ್ಡರೀತಿಯ ರಾಷ್ಟ್ರೀಯವಾದಿ ಆಂದೋಲನಗಳ ಕೊನೆಯಲ್ಲಿ ಸ್ವಾತಂತ್ರ್ಯವನ್ನು ಪಡೆದು ಸಂವಿಧಾನವನ್ನು ರೂಪಿಸಿಕೊಂಡ ಭಾರತದಂತಹ ದೇಶಗಳು ಈ ವಿಷಯದಲ್ಲಿ ಎಷ್ಟೋವಾಸಿ. ಕೊನೆ ಪಕ್ಷ ಕಾನೂನಿನ ಕಣ್ಣಿನಲ್ಲಾದರೂ ಇಲ್ಲಿ ಸ್ತ್ರೀ-ಪುರುಷರು ಸಮಾನರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಸ್ತ್ರೀ ಸಮುದಾಯದ ಹಿತವನ್ನು ಸಂವಿಧಾನ ರಚನೆಯ ಸಂಧರ್ಭದಲ್ಲಿ ಕೆಲಮಟ್ಟಿಗಾದರೂ ಗಣನೆಗೆ ತಂದುಕೊಳ್ಳಲೇಬೇಕಾಯಿತು. ಆದರೆ ಇಂದಿನ ಸಮಾಜದಲ್ಲಿ ಸಂವಿಧಾನ ಇದ್ದರೂ ಕೂಡ ಲಿಂಗ ತಾರತಮ್ಯ ತೊಲಗಲಿಲ್ಲ. ಯಾಕೆಂದರೆ ಸಂವಿಧಾನದಲ್ಲಿ ಪುರುಷ/ಮಹಿಳೆ ಸಮಾನ ಹಂಚಿಕೆ ಇದ್ದರೂ ಅದನ್ನು ಆಡಳಿತಕ್ಕೆ ತರಲೇಯಿಲ್ಲ.
ಭಾರತದಲ್ಲಿ ಸ್ತ್ರೀಯರು ಮೊದಲಿಗೆ ಸುಧಾರಣೆಯ ವಸ್ತುಗಳೆಂಬಂತೆ ಸಮಾಜ ಸುಧಾರಣಾ ಚಳವಳಿಗಳ ಕಡೆಗೆ ಎಳೆಯಲ್ಪಟ್ಟರು. ಆದರೆ ಬಹುಬೇಗ ಅವರು ತಮ್ಮ ಋಜುತ್ವವನ್ನು ಸ್ಥಾಪಿಸಿದರು. ಸಮಾಜ ಸುಧಾರಣೆಗಳಲ್ಲಿ ಸಕ್ರಿಯವಾಗಿ ಪಾಲುಗೊಂಡವರು ಸಮಾಜ ಸುಧಾರಕರು. ಅವರು ತುಸು ಸಂಕೋಚದಿಂದಲೇ ಆರಂಭಿಸಿ ಸ್ತ್ರೀ ಶಿಕ್ಷಣವನ್ನು ಅನೀರಿಕ್ಷಿತವಾಗಿ ಆಯ್ಕೆಯಾಗಿ ಪಡೆದದ್ದು ಮಹತ್ವದ ಪರಿವರ್ತನೆಗಳಿಗೆ ಕಾರಣವಾಯಿತು. ಸ್ವತಂತ್ರ್ಯ ಚಳವಳಿಯಲ್ಲಿ ಹೆಚ್ಚುಕಡಿಮೆ ಎಲ್ಲ ಜಾತಿ- ವರ್ಗದ ಮಹಿಳೆಯರು ಕೂಡ ಭಾಗವಹಿಸಿದ್ದರು. 20ರ ದಶಕ ಭಾರತೀಯ ಮಹಿಳಾ ಹೋರಾಟದ 3ನೇ ಹಂತವನ್ನು ಕಂಡಿತು. ನಂತರ ಸ್ತ್ರೀ ಸಂಘಟನೆಗಳು ಹೆಚ್ಚು ಬಂದವು. ವರದಕ್ಷಿಣೆ ಸಾವು, ಬಲಾತ್ಕಾರ, ಕಾನೂನು ವೈಫಲ್ಯ, ಬೆಲೆಏರಿಕೆ, ಗರ್ಭನಿರೋಧಕ ಚುಚ್ಚು ಮದ್ದುಗಳು, ಸ್ತ್ರೀ ಭ್ರೂಣ ಹತ್ಯೆ, ಪೋಲಿ-ಕೀಟಲೆ, ಸಮಾನ ನಾಗರೀಕ ಸಂಹಿತೆ, ಪರಿಸರ ಸಂರಕ್ಷಣೆ ಇನ್ನೂ ಮುಂತಾದ ವಿಷಯಗಳನ್ನಿಟ್ಟುಕೊಂಡು ಹೋರಾಟಗಳನ್ನು ನಡೆಸಿದವು. ಈ ವಿಷಯಗಳು ಒಟ್ಟಾರೆ ಎಲ್ಲಾ ಜಾತಿಯ, ವರ್ಗಗಳ ಮಹಿಳೆಗೆ ಸಂಬಂಧಿಸಿದವು. ಭಾರತದ ಸ್ತ್ರೀ ವಿಮೋಚನಾ ಹೋರಾಟಗಳು ಭಾರತೀಯ ಮಹಿಳೆಯರ ನಿಧರ್ಿಷ್ಟ ಅನುಭಗಳಿಂದಲೇ ಹುಟ್ಟಿಬೆಳೆದಿದೆ. ಮಹಿಳಾ ಚಳವಳಿಯಲ್ಲೇ ಇರುವ ವೈವಿಧ್ಯ ಮತ್ತು ಅಸಮಾನತೆಗಳನ್ನು ಅರಿವಿಗೆ ತಂದುಕೊಳ್ಳವ ಯತ್ನವನ್ನು ಭಾರತದ ಮಹಿಳಾ ಚಳವಳಿಗಳು ಮಾಡುತ್ತಿವೆ. ಇದರ ಜೊತೆಗೆ ಲಿಂಗ ಪ್ರಬೇದದ ಪ್ರಶ್ನೆಯು ಜಾತಿ, ವರ್ಗ, ಧರ್ಮ ವಸಾಹತೀಕರಣಗಳೊಂದಿಗೆ ಹೆಣೆದುಕೊಂಡಿರುವ ಸನ್ನಿವೇಶ, ಸಂದರ್ಭ. ಲಿಂಗ ಪ್ರಭೇದ ಆಧರಿಸಿದ ಶೋಷಣೆ ದಬ್ಬಾಳಿಕೆ ಹಾಗೂ ಇತರ ಶೋಷಣೆಗಳ ನಡುವಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಲಾಗಿದೆ. ಸಮಸ್ಯೆಗಳನ್ನು ಕುರಿತು ಚಚರ್ೆಮಾಡುವ, ಮಾತನಾಡಲು ಆರಂಭಿಸಬಹುದು ಎನ್ನುವ ಎಚ್ಚರ ಇಂದಿನ ಅನೇಕ ಸ್ತ್ರೀವಾದಿಗಳಲ್ಲಿದೆ.
ಸ್ತ್ರೀವಾದ ಕೇವಲ ಅಧ್ಯಯನ ಕುತೂಹಲದ, ಶಿಕ್ಷಣದ ವಿಷಯವಾಗಲಿ, ಕೇವಲ ವಿವಾದಗ್ರಸ್ಥ ವಿಚಾರವಾಗಲಿ, ಬೌದ್ಧಿಕ ಚಚರ್ೆಯ ವಸ್ತುವಾಗಲಿ ಅಲ್ಲ. ಅದು ನಮ್ಮ ದಿನ ನಿತ್ಯದ ಬದುಕನ್ನು ಅರ್ಥಮಾಡಿಕೊಳ್ಳುವ ಅದನ್ನು ಪ್ರಶ್ನಿಸಿ, ವಿಮಶರ್ಿಸಿ, ವಿಶ್ಲೇಷಿಸುವ ಕಡೆ ಎಡೆ ಮಾಡಿಕೊಡುವ ಒಂದು ಹೋರಾಟ. ಭಾರತದಲ್ಲಿನ ಇತ್ತೀಚಿನ ಸ್ತ್ರೀವಾದಿ ಚಿಂತನೆಯು ಸಾಕಷ್ಟು ಗಾಢವಾದ ಪಾಶ್ಚಾತ್ಯ ಪ್ರಭಾವಕ್ಕೊಳಪಟ್ಟಿದೆ ಎಂದು ಇಲ್ಲಿನ ಸ್ತ್ರೀವಾದಿಗಳೆ ಒಪ್ಪಿಕೊಂಡಿದ್ದಾರೆ. ಸ್ತ್ರೀಯ ಮೇಲೆ ವಸಾಹತೀಕರಣ ಮತ್ತು ಬಂಡವಾಳಶಾಹಿ ಪ್ರಪಂಚೀಕರಣದ ಪರಿಣಾಮಗಳು ಸಾಕಷ್ಟು. ಸ್ತ್ರೀವಾದಿ ಅಧ್ಯಯನ ಕ್ಷೇತ್ರವು ಒಂದು ಹಂತದಲ್ಲಿ ಇಂತಹ ಯಜಮಾನೀ ನಿರ್ವಚನಗಳಿಗೆ ಜಾಗತಿಕ ಮಟ್ಟದಲ್ಲಿ ಒಮ್ಮನಸಿನ ವಿರೋಧವನ್ನು ವ್ಯಕ್ತಪಡಿಸುತ್ತದೆ.
ಸಂಸ್ಕೃತಿಯಲ್ಲಿ ವಯಕ್ತಿಕತೆಯು ಕಾಣೆಯಾಗಿ, ಎಲ್ಲವೂ ಎರಕ ಹೊಯ್ದು ಸಿದ್ದರೂಪಗಳಲ್ಲಿ ಬಂದುಬಿಡುವ ಅಪಾಯವಿದೆ. ಇದೇ ಕಾರಣಕ್ಕಾಗಿ ಸ್ತ್ರೀವಾದದಲ್ಲಿ ಸ್ತ್ರೀಯರ ವ್ಯೆಯಕ್ತಿಕ ಸಾಧನೆಯನ್ನು ಮುಖ್ಯ ಎಂದು ಪರಿಗಣಿಸಲಾಗಿದೆ. ಹಾಗೆಂದೇ ಸ್ತ್ರೀವಾದಿ ಅಧ್ಯಯನದಲ್ಲಿ ವಯುಕ್ತಿಕವೂ ರಾಜಕೀಯವೇ ಆಗಿದೆ. ಇದು ಅಲ್ತೂಸರ್ನ ವಿಚಾರವೂ ಹೌದು.
ರಾಷ್ಟ್ರವು ಅನೇಕ ರೀತಿಯಲ್ಲಿ ವಿಫಲವಾಗಿದೆ. ಕೆಲವು ದಶಕಗಳಲ್ಲಿ ತಮ್ಮ ಸ್ವಂತ ಅನುಭವಗಳಿಂದ ಹೆಂಗಸರು ಹುಟ್ಟುಹಾಕಿಕೊಂಡಿರುವ ನವ ಪ್ರಜ್ಞೆಯ ಸಹಾಯದಿಂದ ಅದನ್ನು ಪುನಃ ನಿರ್ಮಿಸಲೇಬೇಕಾಗಿದೆ. ಮಹಾತ್ಮಾ ಗಾಂಧಿ ಕೂಡ ಹೆಂಗಸರು ತಮ್ಮ ಮೂಲಭೂತ ಆಸಕ್ತಿಗಳನ್ನು ಬದಿಗೆ ತಳ್ಳಿ ತಮ್ಮನ್ನು ರಾಜಕೀಯ ಮುಖ್ಯವಾಹಿನಿಗೆ ಎಳೆದುಕೊಂಡರು ಎಂದು ವಿವರಿಸುತ್ತಾರೆ. ಆದರೆ ಗಾಂಧಿಯವರಿಗೆ ಯಜಮಾನಿ ನೆಲೆಯ ಪ್ರತಿನಿಧೀಕರಣವಷ್ಟೇ ಸಾಕಾಗಿತ್ತು. ಒಬ್ಬ ವ್ಯಕ್ತಿಯಾಗಿ, ಊಳಿಗಮಾನ್ಯ ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಂಗಸಿನ ಪಾತ್ರವೇನು ಎಂಬುದರ ಬಗೆಗೆ ಅವರಿಗೆ ಸ್ವಲ್ಪವೂ ಗಮನವಿರಲಿಲ್ಲ.
ಸೃಷ್ಟಿಯಲ್ಲಿ ಸ್ತ್ರೀ – ಪುರುಷ ಒಂದೇ ನಾಣ್ಯದ ಎರಡು ಮುಖಗಳಂತೆ. ಸ್ತ್ರೀಯರ ಬದುಕು ಮೊದಲಿನಿಂದಲೂ ಬೇರೆ-ಬೇರೆ ಕಾಲಗಟ್ಟಗಳಲ್ಲಿ ಒಂದೇ ಆಗಿರಲಿಲ್ಲ. ಅಂದರೆ ಅವರ ಸಮಸ್ಯೆಗಳಾಗಲಿ, ಪುರುಷ ಸಮಾಜದ ದಬ್ಬಾಳಿಕೆ, ಸ್ತ್ರೀಯರ ಬಗ್ಗೆ ನಿಲುವು ಅನೇಕ ರೀತಿಯಲ್ಲಿ ಅಥವಾ ಅನೇಕ ಬದಲಾವಣೆಗಳಿಂದ ಕೂಡಿತ್ತು. ಪ್ರಾದೇಶಿಕವಾಗಿ ಭಾರತದಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ನಿರ್ಧರಿಸುವುದು ಜಾತಿ ಪದ್ಧತಿ ಆಧಾರದಿಂದಲೇ ಎಂಬುದು ಪ್ರಮುಖ ಅಂಶ.
ಸ್ತ್ರೀಯರ ವೈಭವೀಕರಣ, ಧೈವೀಕರಣಗಳ ಮೂಲಕ ಅವಳಿಗೆ ಸಿಕ್ಕಿರುವ ಸ್ಥಾನಮಾನಗಳೇ ಬೇರೆ. ಆದರೆ ವಾಸ್ತವವಾಗಿ ಅವಳ ಸ್ಥಿತಿ-ಗತಿಯೇ ಬೇರೆ. ಮಾನವ ಪೂರ್ವ ಇತಿಹಾಸದಲ್ಲಿ (ಬೇಟೆಯ-ಇತಿಹಾಸ) ಸ್ತ್ರೀಯರನ್ನ ಕೇವಲ ಬಳಕೆ ವಸ್ತುವನ್ನಾಗಿ ನೋಡುತ್ತಿದ್ದರೆ, ನಂತರ ವ್ಯವಸಾಯ ಬದುಕು ಕಂಡುಕೊಂಡಾಗ ಮಾತೃಪ್ರಧಾನ ವ್ಯವಸ್ಥೆಯಿದ್ದಾಗ ಅವಳಿಗೆ ಒಂದು ಪ್ರಾತಿನಿಧ್ಯ ಸಿಕ್ಕಿತ್ತು. ತದನಂತರ ಭೂಮಿಗಾಗಿ ಆರಂಭಗೊಂಡ ಯುದ್ಧ ಸಂಸ್ಕೃತಿ ಮತ್ತೆ ಅವಳ ಸ್ಥಿಗತಿಗಳನ್ನು ಅಧೋಗತಿಗೆ ಇಳಿಸಿತು.
ಭಾರತದಲ್ಲಿ ಆರ್ಯರು ಮೂಲನಿವಾಸಿಗಳ ಮೇಲೆ ಆಕ್ರಮಣ ನಡೆಸಿದ್ದರ ಫಲವಾಗಿ ಇಲ್ಲಿನ ಸ್ತ್ರೀಯರು ಅವರಿಗೆ ದಾಸಿಗಳಾಗಬೇಕಾಗಿತ್ತು. ಅಂದಿನಿಂದ ಇಂದಿನವರೆಗೂ ಭಾರತದ ಮಹಿಳೆಯ ಬದುಕು ಹತ್ತು ಹಲವಾರು ಏಳು ಬಿಳನ್ನು ಕಂಡಿದೆ ಹೊರತು ಪೂರ್ಣವಾದ ಸ್ತ್ರೀ ಸಮಾನತೆಗೆ ದಾರಿಮಾಡಿ ಕೊಟ್ಟಿಲ್ಲ.
ಬೇರೆ ದೇಶದ ಮಹಿಳೆಯರಿಗಿಂತಲೂ ಭಾರತೀಯ ಸ್ತ್ರೀ ಅಮಾನವೀಯ ಕುಕೃತ್ಯಗಳಾದ ಸತಿಪದ್ಧತಿ, ಬಾಲ್ಯವಿವಾಹ, ಬಸವಿ ಪದ್ಧತಿ, ಜೀತಪದ್ಧತಿ ಇವುಗಳ ಜೊತೆಗೆ ಇತಿಹಾಸದ ಯಾವುದೇ ಐತಿಹಾಸಿಕ ದುರ್ಘಟನೆಗಳಲ್ಲಿ ಮೊಟ್ಟಮೊದಲು ಬಲಿಯಾದವಳು ಮಹಿಳೆಯೇ ಎನ್ನುವುದು ಸ್ಪಷ್ಟ. ಇದರ ನಡುವೆ ಅಲ್ಲಲ್ಲಿ ಮಾನವೀಯ ಚಳವಳಿಗಳು ನಡೆದವು. ಇದರಿಂದಾಗಿ ತುಸು ಪ್ರಗತಿಯೂ ಕಂಡುಬರುವುದು ಸ್ತ್ರೀಯರ ಬದುಕು ಸ್ವಲ್ಪಮಟ್ಟಿಗಾದರೂ ಸುಧಾರಣೆಯಾಗಲು ಕಾರಣವಾಯಿತು. ಹೀಗಾಗಿ ಭಾರತದ ಸಂದರ್ಭದಲ್ಲಿ ಸ್ತ್ರೀಯು ಬಳಕೆ ಸ್ಥಾನದಿಂದ ಪೂಜಾನೀಯ ಸ್ಥಾನ, ಪೂಜಾನೀಯ ಸ್ಥಾನದಿಂದ ಅಧಿಕಾರ ಸ್ಥಾನಕ್ಕೆ ಪಲ್ಲಟಗೊಳ್ಳುವಂತಾಗಿದೆ.
ಮಹಿಳೆ ಕೇವಲ ಸಾಮಾಜಿಕವಾಗಿ ಮಾತ್ರವಲ್ಲ ಕುಟುಂಬದ ಒಳಗೂ ಕೂಡ ತನ್ನನ್ನು ತಾನು ಕಂಡುಕೊಳ್ಳಲು ಇನ್ನೂ ಪ್ರಯತ್ನಿಸುತ್ತಲೇ ಇದ್ದಾಳೆ. ದುಡಿಮೆಗೆ ಹೋಗುವ ಮಹಿಳೆ ಸಾಮಾಜಿಕವಾಗಿ, ಆಥರ್ಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಸಂದಿಗ್ದ ಪರಿಸ್ಥಿತಿಗಳನ್ನು ತೀರಾ ಜಾಣತನದಿಂದ ನಿಭಾಯಿಸಬೇಕಿದೆ. ಅದರ ನಡುವೆಯೇ ತನ್ನ ಇತಿಮಿತಿಗಳ ನಡುವೆ ತನ್ನನ್ನು ತಾನು ಗುರುತಿಸಿಕೊಳ್ಳಬೇಕಿದೆ. ಹೀಗಾಗಿ ಸಮಾನತೆಯ ಹಂಚಿಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿರುವುದು, ಅವಳು ಕುಟುಂಬದಿಂದ ಸಮಾಜದ ಉನ್ನತ ಸ್ಥರದ ವರೆಗೆ ಬೇರೆ ಬೇರೆ ನೆಲೆಗಳಲ್ಲಿ ಹೋರಾಟಗಳನ್ನು ನಡೆಸುತ್ತಲೇ ಬದುಕಬೇಕಾಗಿರುವುದು ಮಾತ್ರ ದುರಂತವೇ ಸರಿ.

‍ಲೇಖಕರು G

22 November, 2014

2 Comments

  1. mahesh s deshpande

    ಮಹಿಳೆ ಕೇವಲ ಸಾಮಾಜಿಕವಾಗಿ ಮಾತ್ರವಲ್ಲ ಕುಟುಂಬದ ಒಳಗೂ ಕೂಡ ತನ್ನನ್ನು ತಾನು ಕಂಡುಕೊಳ್ಳಲು ಇನ್ನೂ ಪ್ರಯತ್ನಿಸುತ್ತಲೇ ಇದ್ದಾಳೆ. ದುಡಿಮೆಗೆ ಹೋಗುವ ಮಹಿಳೆ ಸಾಮಾಜಿಕವಾಗಿ, ಆಥರ್ಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಸಂದಿಗ್ದ ಪರಿಸ್ಥಿತಿಗಳನ್ನು ತೀರಾ ಜಾಣತನದಿಂದ ನಿಭಾಯಿಸಬೇಕಿದೆ. ಅದರ ನಡುವೆಯೇ ತನ್ನ ಇತಿಮಿತಿಗಳ ನಡುವೆ ತನ್ನನ್ನು ತಾನು ಗುರುತಿಸಿಕೊಳ್ಳಬೇಕಿದೆ. ಹೀಗಾಗಿ ಸಮಾನತೆಯ ಹಂಚಿಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿರುವುದು, ಅವಳು ಕುಟುಂಬದಿಂದ ಸಮಾಜದ ಉನ್ನತ ಸ್ಥರದ ವರೆಗೆ ಬೇರೆ ಬೇರೆ ನೆಲೆಗಳಲ್ಲಿ ಹೋರಾಟಗಳನ್ನು ನಡೆಸುತ್ತಲೇ ಬದುಕಬೇಕಾಗಿರುವುದು ಮಾತ್ರ ದುರಂತವೇ ಸರಿ.

  2. Anonymous

    Total Article was very nice… Keep it up Sowmya…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading