ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸೌಹಾರ್ದ ಕರ್ನಾಟಕ’ ಲೇಖನಗಳಿಗೆ ಆಹ್ವಾನ!

ಕನ್ನಡ ನಾಡಿನ ಕೋಮು ಸೌಹಾರ್ದ ಕದಡುವ ಬಗೆಬಗೆಯ ಉದ್ದೇಶಪೂರ್ವಕ ಪ್ರಯತ್ನಗಳು ವಿಪರೀತ ಸದ್ದು ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ನಡುವಿನ ಭಾವೈಕ್ಯಬದುಕು ಮಸುಕಾದಂತೆ, ಬಾಡಿದಂತೆ ಕಾಣುತ್ತಿದೆ. ಹಾಗಾಗಿ ಈ ನೆಲದಲ್ಲಿ ಹಾಸುಹೊಕ್ಕಾಗಿರುವ ಸೌಹಾರ್ದ ಬದುಕಿನ ಅಸ್ತಿತ್ವವನ್ನು ನೆನಪಿಸುವ, ಗುರುತಿಸುವ, ಗಟ್ಟಿಗೊಳಿಸುವ, ಮನನ ಮಾಡಿಕೊಳ್ಳುವ, ದಿಟ್ಟದನಿಯಲ್ಲಿ ಸಾರುವ ಅನುಭವ ಲೇಖನಗಳ ಸಂಕಲನ ‘ಸೌಹಾರ್ದ ಕರ್ನಾಟಕ’ ಬೆಂಗಳೂರಿನ ‘ಅಂಕುರ ಪ್ರಕಾಶನ’ದಿಂದ ಪ್ರಕಟವಾಗಲಿದೆ. 

ಅನ್ಯ ಧರ್ಮದವರೊಂದಿಗಿನ ಸೌಹಾರ್ದಯುತ ಒಡನಾಟ, ಘಟನೆ, ಹಬ್ಬಗಳ ಆಚರಣೆ, ಊಟೋಪಚಾರದ ಅನುಭವಗಳನ್ನು ಒಳಗೊಂಡ ಗರಿಷ್ಟ 1500 ಪದಗಳ ಬರಹಗಳನ್ನು 15 ಏಪ್ರಿಲ್ 2022ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: vadduchandrakanta@gmail.com 

‍ಲೇಖಕರು Admin

4 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading