ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋಮಣ್ಣ ಸರ್ ಇನ್ನಿಲ್ಲ..

ಎನ್ ಎಸ್ ಶ್ರೀಧರಮೂರ್ತಿ

ಹಿರಿಯರು ಅದ ಎಚ್.ಜಿ.ಸೋಮಶೇಖರ ರಾವ್ ಅವರ ಅಗಲುವಿಕೆಯ ಸುದ್ದಿ ಬರ ಸಿಡಿಲಿನಂತೆ ಬಂದು ಎರಗಿದೆ..

ಅವರು ನನ್ನ ದೊಡ್ಡಪ್ಪನ ಸ್ನೇಹಿತರು ಎಂದು ಪರಿಚಿತ ರಾದರು.ಬಹು ಬೇಗ ಆತ್ಮೀಯರು ಕೊಡ ಆಗಿ ಬಿಟ್ಟರು. ನನ್ನ ಕುಟುಂಬಕ್ಕೆ ಹಿರಿಯರಂತೆ ಮಾರ್ಗ ತೋರಿದರು..

ಸಿನಿಮಾ, ಸಾಹಿತ್ಯ, ಸಂಗೀತ ಹೀಗೆ ಹಲವು ಕ್ಷೇತ್ರ ಗಳಲ್ಲಿ ಅವರಿಗೆ ಪರಿಣತಿ ಇತ್ತು..

ಅವರ ಜೊತೆಗೆ ಸಮಯ ಕಳೆಯುವುದು ಎಂದರೆ ಅದು ಅನುಭವ ಕಥನವೇ…ನಾನು ಕೇಳಿದಾಗ ಎಲ್ಲ ಮಹತ್ವದ ಲೇಖನಗಳನ್ನು ಬರೆದು ಕೊಟ್ಟರು…ಕರೆದ ಕಾರ್ಯಕ್ರಮಗಳಿಗೆ ಬಂದರು..ವರ್ಷಕೊಮ್ಮೆ ಹೊಸ ವರ್ಷದ ಡೈರಿ, ಕ್ಯಾಲೆಂಡರ್ ಅವರಿಗೆ ಕೊಡುವುದನ್ನು ನಾನು ಇಪ್ಪತ್ತು ವರ್ಷದಿಂದ ಎಂದೂ ತಪ್ಪಿಸಲಿಲ್ಲ…

ಮನೆಗೆ ಬಾರಯ್ಯ. ಅಕ್ಕಿ ರೊಟ್ಟಿ ಮಾಡಿಸು ವೆ. ಎಂದು ಅಕ್ಕರೆಯಿಂದ ಕರೆಯುತ್ತಿದ್ದರು.. ಅವರ ಮನೆ ಅಕ್ಕಿ ರೊಟ್ಟಿ ಜೊತೆಗೆ ಅವರ ಅಕ್ಕರೆ.. ಚಿರ ಕಾಲ ನೆನಪಿನಲ್ಲಿ ಉಳಿಯುತ್ತದೆ… ಸರ್. ಹೋಗಿ ಬನ್ನಿ ನಿಮ್ಮ ‘ಸೋಮಣ್ಣನ ಸ್ಟಾಕ್’ ನಮ್ಮ ಮನದಲ್ಲಿ ಭದ್ರವಾಗಿ ಉಳಿಯುತ್ತದೆ…

‍ಲೇಖಕರು avadhi

3 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading