ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೃಜನಶೀಲತೆ ಇರುವವರಿಗೆ ವಿಕ್ಷಿಪ್ತತೆ ಇರುತ್ತದೆ: ರೂಪ ಹಾಸನ

ನಾಗರಾಜ್ ಹೆತ್ತೂರು

`ಸೃಜನಶೀಲತೆ ಇರುವವರಿಗೆ ಒಂದಷ್ಟು ವಿಕ್ಷಿಪ್ತತೆ ಇರುತ್ತದೆ’ ಹೀಗೆಂದವರು ಸಾಹಿತಿ, ಕವಿಯತ್ರಿ ರೂಪಾ ಹಾಸನ.  ಸೃಜನಶೀಲತೆ ಇರುವವರು ಡಿಫರೆಂಟ್ ಆಗಿ ಥಿಂಕ್ ಮಾಡುತ್ತಾರೆ. ಆ ಕಾರಣಕ್ಕಾಗಿಯೇ ಅವರು ಕೆಲವರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅದನ್ನು ವಿಕ್ಷಿಪ್ತತೆ ಎಂದಾದರೂ ಅಂದುಕೊಳ್ಳಬಹುದು. ಇದು ಪ್ರಪಂಚಕ್ಕೆ ಬೇರೆಯದೇ ರೀತಿ ಕಾಣಿಸಬಹುದು. ಯಾವುದೇ ಸೃಜನಶೀಲ ವ್ಯಕ್ತ ಚಲನಶೀಲವಾಗಿರಬೇಕು ಯಾವತ್ತೂ ಬಂಧನಕ್ಕೊಳಗಾಗಬಾರದು.

ಶುಕ್ರವಾರ ಸಂಜೆ ಹಾಸನದ ಹಾಡ್ಲಹಳ್ಳಿ ಪಬ್ಲಿಕೇಶನ್ನಲ್ಲಿ ಚಲಂ ಹಾಡ್ಲಹಳ್ಳಿ ಅವರ ಕಥಾ ಸಂಕಲನ ‘ಪುನರಪಿ’ ಕುರಿತು ಚರ್ಚೆ  ನಡೆಯಿತು. ಈ ಸಂದರ್ಭ ಸಾಕಷ್ಟು ವಿಚಾರ ವಿನಿಮಯ ನಡೆದವು. ಚಲಂ ಅವರ `ಪುನರಪಿ’ ಕಥಾ ಸಂಕಲನದ ಕುರಿತಂತೆ ಮಾತನಾಡುತ್ತಾ, ಚಲಂ ಹಾಡ್ಲಹಳ್ಳಿ ನಾ ಕಂಡಂತೆ ಒಬ್ಬ ವಿಕ್ಷಿಪ್ತ, ಉಡಾಫೆ ಹುಡುಗ ಆ ಕಾರಣಕ್ಕಾಗಿ ಆತ ವಿಭಿನ್ನವಾಗಿ ಯೋಚಿಸಿ ಬೇರೆಯದೇ ರೀತಿಯ ಕತೆ ಕಟ್ಟಿಕೊಡಲು ಸಾಧ್ಯವಾಗಿದೆ. ಚಲನೆಯೇ ಇಲ್ಲದಿದ್ದರೆ ವ್ಯಕ್ತಿ ಸತ್ತಂತೆ . ಒಬ್ಬ ಕತೆಗಾರನಿಗೆ ಮುಖ್ಯವಾಗಿ ಇರಬೇಕಾದಂತ ತಿಳಿವಳಿಕೆಗಳು ಮೂಲಭೂತವಾಗಿ ಸೈಕಾಲಜಿ, ಫಿಲಾಸಫಿ ಮತ್ತು ಸಮಾಜ ಶಾಸ್ತ್ರ ಈ ಮೂರರ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಸೃಜನಶೀಲ ಬರವಣಿಗೆ ಸಾಧ್ಯವೇ ಇಲ್ಲ. ಅಥವಾ ಬರೆದರೂ ಅದು ಪೇವಲ ಎನಿಸುತ್ತವೆ. ಈ ನಿಟ್ಟಿನಲ್ಲಿ ಚಲಂ ಒಂದಷ್ಟು ಒಳ್ಳೆಯ ಕತೆಗಳನ್ನು ಕಟ್ಟಿಕೊಡಲು ಸಾಧ್ಯವಾಗಿದೆ ಎಂದರು.

ಮಾರುಕಟ್ಟೆ ಕೇಂದ್ರೀಕೃತ ವಿಮರ್ಶೆಗಳು

ಯಾವುದೇ ಒಂದು ಕೃತಿ ಬಗ್ಗೆ ತಪ್ಪು ಸರಿ ಎಂದು ಹೇಳುವುದೇ ಮೊದಲ ತಪ್ಪು. ಇಂದಿನ ವಿಮರ್ಶೆಗಳು ಮಾರುಕಟ್ಟೆ ಕೇಂದ್ರೀಕೃತವಾಗುತ್ತಿವೆ. ಇದೊಂದು ಆತಂಕಕಾರಿ ಬೆಳವಣಿಗೆ. ಯಾವುದೇ ಒಬ್ಬ ಕತೆಗಾರ, ತನ್ನ ಕೃತಿಯನ್ನು ಅವನ ಆಂತರ್ಯದಿಂದ ಒಳಗಿನಿಂದ ಬರೆದಿರುತ್ತಾನೆ. ಅವನಿಗೆ ವೈಯಕ್ತಿಕ, ಖಾಸಗಿ ಅನುಭವ ಇರುತ್ತದೆ. ಅದು ಆತನ ಸೃಜನಶೀಲ ಅಭಿವ್ಯಕ್ತಿ. ಅದರ ಮೂಲವನ್ನು ಕೆದಕಲು ಹೋಗಬಾರದು. ವಿಮರ್ಶೆಯ ಹೆಸರಲ್ಲಿ ಅದನ್ನು ಒಂದು ಚೌಕಟ್ಟಿಗೆ ಒಳಪಡಿಸಬೇಡಿ. ಅದು ಚಿತ್ರಕಲೆ, ಕತೆ, ಕಾದಂಬರಿ ಯಾವುದಾದರೂ ಆಗಿರಬಹುದು. ಅನುಭವವನ್ನು ಅರ್ಥ ಮಾಡಿಸಲು ಸಾಧ್ಯವೇ…? ಇದಕ್ಕೆ ಯಾಕೆ ಅರ್ಥ ಹುಡುಕಬೇಕು..? ಅದು ಖಾಸಗಿ ಮತ್ತು ಏಕಾಂತದ ಅನುಭವ. ಬೀದಿಯಲ್ಲಿ ನಿಂತು ಅದನ್ನು ಎಕ್ಸ್ ಪೋಸ್ ಮಾಡಬಾರದು. ಕೆಲವೊಮ್ಮೆ ಇಂತಹವುಗಳು ಇರುಸು ಮುರುಸು ತರುತ್ತದೆ. ಅದು ಓದಿ ಅನುಭವಿಸುವಂತದ್ದು. ಎಲ್ಲರೊಳಗೂ, ನನ್ನೊಳಗೂ ಒಂದು ಉಡಾಫೆಯ ವ್ಯಕ್ತಿತ್ವ ಇದೆ. ಈ ಕಾರಣಕ್ಕಾಗಿಯೇ ನೀಗಿಕೊಳ್ಳುವ ಕವಿತೆಗಳನ್ನು ಹೆಚ್ಚು ಬರೆದುಕೊಂಡಿದ್ದೇನೆ. ಆದರೆ ಸಾರ್ವಜನಿಕರಿಗೆ ಇಡುವಾಗ ಒಂದಷ್ಟು ಪಾಲೀಶ್ ಮಾಡಬೇಕಾಗುತ್ತದೆ. ಅದು ಕೃತಿಕಾರನಿಗೆ ಬಿಟ್ಟ ವಿಚಾರ.

ಮೆಸೇಜ್ ಇರಬಾರದು

ಕತೆ, ಕಾವ್ಯ, ಕಾದಂಬರಿಗಳಲ್ಲಿ ಅಂತಿಮವಾಗಿ ಮೆಸೇಜ್ ನೀಡಬೇಕು ಎಂಬುದು ಮೂರ್ಖರ ವಾದ. ಅದು ಘೋಷಣೆ ಆಗುತ್ತದೆ. ಹೊರಗಿನ ಸಾಹಿತ್ಯ ಆಗುತ್ತದೆ. ಹೊರಗಿನವರಿಗೆ ಒಪ್ಪಿಸಲು ಕಟ್ಟಿದ ಕತೆ, ಕವಿತೆ ಆಗಿರುವುದರಿಂದ ಇಂತಹವುಗಳಿಂದ ಪೂರ್ಣ ಪ್ರಮಾಣದ ಆಳ ಇರುವುದಿಲ್ಲ. ಒಳಗಿನಿಂದ ಹುಟ್ಟಿದ ಕವಿತೆಗೆ ಯಾವುದೇ ಹಂಗು ಇರುವುದಿಲ್ಲ. ಕತೆ ಅಥವಾ ಕಾವ್ಯ ಹುಟ್ಟಬೇಕಾದ ಸಂದರ್ಭ ಇದೆಯಲ್ಲಾ ಅದು ಹಸಿಹಸಿಯಾಗಿರಬೇಕು. ಕೆ ಎಸ್ ನರಸಿಂಹಸ್ವಾಮಿ ಹೇಳುವಂತೆ `ಆಳದ ಅನುಭವದ ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವಿತೆ ಹುಟ್ಟುತ್ತದೆ’ ಹೀಗಾಗಿ ಅನುಭವಿಸಿ ಕಾದಾಗ ಮಾತ್ರ ಉತ್ತಮ ಕವಿತೆ ಹುಟ್ಟುತ್ತದೆ. ದೇವನೂರು ಮಹದೇವ ಇನ್ನೂ ಒಂದು ಮಾತು ಬರೆಯುತ್ತಾರೆ ` ನಾವು ಏನೂ ಅಲ್ಲ ಎಂದು ಪ್ರಾರಂಭಿಸಿ ಮುಗಿಸಿದ ನಂತರ ಕಲಾವಿದನಾಗಿರುತ್ತೀಯಾ’ ಎಂಬಂತೆ. ನಾನು ಮೆಸೇಜ್ ಕೊಡಲೇ ಬರೆಯುತ್ತೇನೆ ಎಂದು ಬರೆಯುವರಿಂದ ಏನನ್ನೂ ನಿರೀಕ್ಷಿಸಲು ಸಧ್ಯವಿಲ್ಲ. ಮೆಸೇಜ್ ಹೇಗೆ ಕೊಡಬೇಕೆಂದರೆ ಅದು ಅನುಭವದ ವಿಸ್ತರಣೆಯಲ್ಲಿ ಹೊಡೆಯುತ್ತಾ ಹೋಗಬೇಕು. ಅದು ಆಂತರಿಕವಾಗಿ ತಾನಾಗಿಯೇ ಅನುಭವಕ್ಕೆ ಒಳಪಡುತ್ತದೆ. ಸೃಜನಶೀಲತೆಯಲ್ಲಿ ಮನಸ್ಸು ಕೆಲಸ ಮಾಡಬೇಕು, ಬುದ್ದಿ ಕೆಲಸ ಮಾಡಬಾರದು.

ತಾವು ಬರೆದ ಕತೆಗಳ ಅಭಿಪ್ರಾಯ ಹಂಚಿಕೊಂಡ ಚಲಂ ಹಾಡ್ಲಹಳ್ಳಿ, ಇಲ್ಲಿ ಬರೆದ ಕತೆಗಳು ನನ್ನ ರಿಲ್ಯಾಕ್ಸ್ ಗಾಗಿ ಬರೆದಂತಹವು. ಆ ಕ್ಷಣಕ್ಕೆ ಆ ನನ್ನ ಮನಸ್ಸಿಗೆ ಸಮಾಧಾನ ಕೊಟ್ಟಿವೆ. ಪಾತ್ರಗಳ ಸೃಷ್ಠಿ ಕೂಡ ಯಾವುದೇ ಬೇಸ್‌ನಿಂದ ಆಗಿಲ್ಲ. ಹೇಗೆ ಹುಟ್ಟಿದವು, ಯಾವ ಕಾರಣಕ್ಕೆ ಹುಟ್ಟಿದವು ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಎಲ್ಲಕ್ಕೂ ಮಿಗಿಲಾಗಿ ’ಪುನರಪಿ’ ವಿಕ್ರಂತ ಕರ್ನಾಟಕದ ಕಥಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯಿತು ಆದರೆ ಅದು ಹುಟ್ಟಿದ್ದು ಹಣದ ಅನಿವಾರ್ಯತೆಯಿಂದ. ಸ್ಪರ್ಧೆಯಲ್ಲಿ ಜಯಗಳಿಸುವ ಸಲುವಾಗಿಯೇ ಬರೆದ ಕತೆ. ತನ್ನಿಂದ ತಾನೆ ಹುಟ್ಟಿಕೊಂಡವು. ಮನಸ್ಸಿನಲ್ಲಿ ಹುಟ್ಟಿಕೊಂಡ ಕಲ್ಪನೆಗಳೇ ಪಾತ್ರವಾಗಿವೇ ಎಂದು ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಕೆಲವರು ನನ್ನನ್ನು ಉಡಾಫೆ ಎಂದುಕೊಳ್ಳಬಹುದು, ಆದರೆ ಉಡಾಫೆ ಎನ್ನುವುದು ನನ್ನ ಶಕ್ತಿ. ಹೀಗಾಗಿಯೇ ಕತೆಗಳನ್ನು ಬರೆಯಲು ಸಾಧ್ಯವಾಗಿದೆ. ವರದಿಗಾರಿಗೆ ನನ್ನ ಕತೆಯನ್ನು ಸೀಮಿತ ಅಕ್ಷರಗಳಲ್ಲಿ ಮುಗಿಸಲು ಸಾಕಷ್ಟು ಸಹಾಯ ಮಾಡಿದೆ.

ಜಾಣಗೆರೆಯ ಶಿಷ್ಯಂದಿರಾದ ತಾವು ತಮ್ಮ ಉಡಾಫೆಯೋ ಅಥವಾ ಅಶಿಸ್ತೋ ಗೊತ್ತಿಲ್ಲ. 10 ವರ್ಷದ ಹಿಂದೆ ಪುಸ್ತಕ ಮಾಡಲು ಜಾಣಗೆರೆ ಅವರಿಗೆ ಕೊಟ್ಟ ಪ್ರತಿ ಕಳೆದು ಹೋಯಿತು. ನಂತರ ಅಳಿದುಳಿದ ಬರಹಗಳನ್ನು ಒಗ್ಗೂಡಿಸಿ ಕೊನೆಗೂ ಕಥಾ ಸಂಕಲನ ತಂದಿದ್ದನು ನೆನಪಿಸಿಕೊಂಡರು. ಜಿ.ಎನ್ ಮೋಹನ್, ಜೋಗಿ  ಅವರನ್ನು ಪುಸ್ತಕ ಬಿಡುಗಡೆಗೆ ಆಹ್ವಾನಿಸಲಾಗಿತ್ತು. ಆದರೆ ಕಾರ್ಯಕ್ರಮದ ಹಿಂದಿನ ಮಧ್ಯ ರಾತ್ರಿವರೆಗೂ ಪುಸ್ತಕ ಕೈ ಸೇರದೆ ಬಸ್ ನಿಲ್ಧಾಣದಲ್ಲಿ ಕಾದು ಕೊನೆಗೂ ಬೆಳಗ್ಗೆ ಪುಸ್ತಕ ಸಿಕ್ಕಿದಾಗ ಆದ ಸಂತೋಷ. ಬಿಡುಗಡೆ ಮಾಡಿದ ಪ್ರಸವ ವೇದನೆಯನ್ನು ನೆನಪಿಸಿಕೊಂಡರು.

ರಂಗಕರ್ಮಿ ಜಯಶೇಖರ್ ಬೆಳಗುಂಬ ಮಾತನಾಡಿ ಚಲಂ ಕತೆಗಳಿಗಿಂತ ಅವರ ಅನುಭವ ಕವಿತೆಗಳು ಹೆಚ್ಚು ಇಷ್ಟ ಎಂದರು. ಸಾಹಿತಿ ಗೊರೂರು ಶಿವೇಶ್ ಚಲಂ ಅವರ ಕತೆಗಳ ಕುರಿತು ಮಾತನಾಡಿದರು. ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ದ್ಯಾವನೂರು ಮಂಜುನಾಥ್ ಇತರರು ಚರ್ಚೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು.

‍ಲೇಖಕರು avadhi

2 June, 2013

12 Comments

  1. Arkalgud Jayakumar

    Srujanasheelathe eruvavarige ondishtu vixipthathe eruthade annodu sathyavada maathu… vividha ayamada olagannina mulaka avlokisi abhivyaktisuvude parinamakaariyada chitrana needaballudu… naanu odikonda lekhakaralli kuvempu thejaswi, devanooru kaaduva chitrana neediddare..

  2. Vijendra

    ಅ ಕಾರಣಕ್ಕೆ ಬಹಳ ಬರಹಗಾರರು ಸಮಾಜಕ್ಕೆ ವಿಮುಕರಾಗಿರುತ್ತಾರೆ .not ಗುಡ್ ಥಿಂಗ್

  3. suvarna

    ಯಾವುದೇ ವ್ಯಕ್ತಿ ತಾನು ಅನುಭವಿಸಿದ ಮತ್ತು ನೋಡಿದನ್ನು ಪದಜೋಡಣೆಗಳಿಂದ ಆಭಿವ್ಯಕ್ತಿಸುವುದು ಸೃಜಲಶೀಲ ಬರಹಗಾರನ ಲಕ್ಷಣ. ಆದರೆ ಈಗ ಬಹುತೇಕ ಬರಹಗಾರರ ಬರಹ ಿದಕ್ಕೆ ಹೋರತಾಗಿದೆ. ಪ್ರಚಾರದಿಂದ ುತ್ತಮ ಬರಹಗಾರರಾಗುತ್ತಿದ್ದಾರೆ ಹೋರತು ತಮ್ಮ ಸೃಜನಶೀಲತೆಯಿಂದಲ್ಲ. ಸೃಜನಶೀಲರು ಎಲೆ ಮರೆಕಾಯಿ ಆಗಿ ಉಳಿದಿದ್ದಾರೆ ಏನು ಹೇಳುತ್ತೀರಾ ನಾಗರಾಜ್ ?

  4. suvarna.c

    ಸೃಜನಶೀಲ ಬರಹಗಾರರು ಪ್ರಚಾರವಿಲ್ಲದೆ ಎಲೆಮರೆಕಾಯಿಯಾಗಿದ್ದಾರೆ. ಪ್ರಚಾರದಿಂದ ಕೆಲವರು ಖ್ಯಾತ ಬರಹಗಾರರು ಆಗಿದ್ದಾರೆ ಪ್ರಚಾರ ಮುಖ್ಯವೋ ಸೃಜನಶೀಲತೆ ಮುಖ್ಯವೋ ನಾಗರಾಜ್

  5. Sumangala

    ಚಲಂ ಅವರ ಪುಸ್ತಕ ಬಿಡುಗಡೆಗೆ ಅಭಿನಂದನೆಗಳು. ಬಿಡುಗಡೆ ಸಮಾರಂಭದ ವಿವರಗಳನ್ನು ಚಿತ್ರವತ್ತಾಗಿ ನಿರೂಪಿಸಿರುವ ನಾಗರಾಜ್ ಅವರಿಗೆ ಧನ್ಯವಾದಗಳು.”ಬಿಡುಗಡೆ ಮಾಡಿದ ಪ್ರಸವ ವೇದನೆಯನ್ನು ನೆನಪಿಸಿಕೊಂಡರು” ಎಂದು ಬರೆದಿದ್ದೀರಿ.
    ಪುಸ್ತಕಬಿಡುಗಡೆಯನ್ನು ಅಥವಾ ಕೃತಿರಚನೆಯನ್ನು ತಾವೆಂದೂ ಅನುಭವಿಸಿಯೇ ಇರದ ಮತ್ತು ಅನುಭವಕ್ಕೆ ದಕ್ಕುವುದು ಸಾಧ್ಯವೇ ಇಲ್ಲದ ಪ್ರಸವವೇದನೆಗೆ ಹೋಲಿಸುವುದು ಪುರುಷ ಬರಹಗಾರರಿಗೆ ಇತ್ತೀಚಿನ ದಿನಗಳಲ್ಲಿ ಒಂದು ಪ್ಯಾಷನ್ ಆಗುತ್ತಿದೆ ಎನ್ನಿಸುತ್ತದೆ. ಮಹಿಳೆಯರ ಜೈವಿಕ ನೋವುಗಳನ್ನು ಹೀಗೆ ಯಾವುದಕ್ಕೋ ಹೋಲಿಸುವುದನ್ನು ಕಂಡಾಗ ಏನೆನ್ನಬೇಕು ಅರ್ಥವಾಗುವುದಿಲ್ಲ. ಅದರಲ್ಲಿಯೂ ತನ್ನ ಜೀವವನ್ನೇ ಪಣಕ್ಕಿಟ್ಟು ಹೊಸಜೀವಕ್ಕೆ ಜನ್ಮ ಕೊಡುವ ಪ್ರಸವವೇದನೆಯನ್ನು ಹೊಸಜೀವವೊಂದರ ಸೃಷ್ಟಿಗೆ ಹೋಲಿಸಿದಾಗ ಕ್ಷುಲ್ಲಕ ಎನ್ನಿಸಬಹುದಾಗ ಪುಸ್ತಕ ಬಿಡುಗಡೆಗೋ ಅಥವಾ ಕೃತಿರಚೆನಗೋ ಹೋಲಿಸುವುದನ್ನು ಓದಿದಾಗ ಈ ಕ್ಲೀಷೆಗೆ ನಗಬೇಕೋ ಅಳಬೇಕೋ ರೇಗಬೇಕೋ ಗೊತ್ತಾಗುತ್ತಿಲ್ಲ. ನಾವು ಅನುಭವಿಸಿಯೇ ಇರದುದ್ದನ್ನು ಅನುಭವಿಸಿದಂತೆ ಬರೆಯಬಾರದು ಎಂದು ನಾನು ವಾದಿಸುತ್ತಿಲ್ಲ. ಆದರೆ ಜೀವವನ್ನೇ ಪಣಕ್ಕೊಡ್ಡುವ ಈ ಸೃಷ್ಟಿಕಾರ್ಯವನ್ನು ಕೃತಿರಚನೆ/ಬಿಡುಗಡೆಗೆ ಹೋಲಿಸುವುದು ಯಾಕೋ ನನಗಂತೂ ಸರಿಕಾಣುತ್ತಿಲ್ಲ. ಮಹಿಳೆಯರ ಜೈವಿಕ ನೋವುಗಳು/ಅನುಭವಗಳನ್ನು ಹೀಗೆ ತಮ್ಮದೇನೋ ದೈನಂದಿನದ ಸಂಗತಿಗಳಿಗೆ ಹೋಲಿಸುವ ಈ ಗೀಳು ಪುರುಷರಿಗೆ ಯಾಕಪ್ಪ ಎಂದೂ ಅನ್ನಿಸುತ್ತದೆ. ಬರಹಗಾರ್ತಿಯರು ಪುರುಷರು ಅನುಭವಿಸುವ ಸ್ವಪ್ನಸ್ಖಲನವನ್ನೋ, ವೀರ್ಯಬಿಡುಗಡೆಯ ನಿರಾಳತೆ, ಸುಖವನ್ನೋ (ಹೀಗಿರಬಹುದು ಎಂಬುದು ನನ್ನ ಊಹೆ ಮಾತ್ರ) ತಮ್ಮದೇನೋ ನಿರಾಳತೆಗೋ ಅಥವಾ ಮತ್ತೇನಕ್ಕೋ ಹೋಲಿಸಿದ್ದನ್ನು ನಾನಂತೂ ಈವರೆಗೆ ಎಲ್ಲಿಯೂ ಓದಿಲ್ಲ. ಸಕಲ ಪ್ರಾಣಿಪಕ್ಷಿ, ಗಿಡಮರ ಮತ್ತು ಸ್ತ್ರೀಯರು ಎಲ್ಲ ಸೇರಿದಂತೆ ಸುತ್ತಲಿನ ಚರಾಚರಗಳನ್ನು ವ್ಯಾಖ್ಯಾನಿಸುವ ಹಕ್ಕು ತಮಗಿದೆ ಎಂದು ಪುರುಷರು ಭಾವಿಸಿರುವುದರಿಂದ ಹೀಗೆ ಪ್ರಸವವೇದನೆಯನ್ನೂ ಕೃತಿಬಿಡುಗಡೆಯಂತಹ ಸಂಗತಿಗೆ ಹೋಲಿಸುವುದು ಸಾಧ್ಯವಾಗಿರಬೇಕು ಎನ್ನಿಸುತ್ತದೆ.
    ಸುಮಂಗಲಾ

  6. hethur nagaraj

    ಅದನ್ನು ರೂಪ ಹಾಸನ್ ಅವರಲ್ಲಿ ಕೇಳಿ ಸುವರ್ಣ ಅವರೇ, ಅದು ಅವರ ಅಭಿಪ್ರಾಯ

  7. ಲಿಂಗರಾಜು ಬಿ.ಎಸ್.

    ಕತೆ, ಕವಿತೆಗಳ ಮೂಲಕ ಗುರುತಿಸಿಕೊಂಡು ಕವಿ ಬೆಳೆಯಬೇಕು. ಬೆಳವಣಿಗೆಯ ಹಂತದಲ್ಲಿ ಅವಮಾನ, ವ್ಯಂಗ್ಯ ಎದುರಾಗುವುದು ಸಾಮಾನ್ಯ. ಅದಕ್ಕೆ ಹೆಚ್ಚಿ ಗಮನ ನೀಡದೆ ಹಾಗೂ ನಿರ್ಲಕ್ಷ್ಯ ಮಾಡದೆ ತನ್ನ ಸಾಹಿತ್ಯದಲ್ಲಿ ಸೃಜನಶೀಲತೆ ಹೊಂದಬೇಕು. ಅದರಲ್ಲೂ ಕಿರಿಯ ವಯಸ್ಸಿನ ಕವಿಗಳು, ಕತೆಗಾರರು ಅಸನೇಕ ಸಮಸ್ಯೆಗಳನ್ನು ಎದುರಿಸಿಯೂ ಪುಸ್ತಕ ಹೊರತರಬೇಕು. ಆಗ ಮಾತ್ರವೇ ಬೆಳವಣಿಗೆ ಸಾಧ್ಯ. ಜನರೊಂದಿಗೆ ಕವಿಗಳು ಬೆರೆಯದೇ ಹೋದರೆ ಸಾಹಿತ್ಯ ರಚನೆ ಮಾಡಲು ಆಗದು. ಮನಸು, ಕಣ್ಣು ಹಾಗೂ ಭಾವಕ್ಕೆ ಹೊಳೆದ ವಿಷಯ ಎ
    ದಂದಿಗೂ ಮಾಯವಾಗದು. ಇದರ ಜತೆಗೆ ಸಹಜತೆ ಹಾಗೂ ಒಳ್ಳೆಯ ಗುಣಕ್ಕೆ ಎಂದೂ ಕೊನೆ ಎಂಬುದಿಲ್ಲ. ಹೀಗಾಗಿ ಕವಿಗಳಾದವರು, ಕತೆಗಾರರಾದವರು ಒಳ್ಳೆಯ ಉದ್ದೇಶ ಇಟ್ಟುಕೊಂಡು ಬರೆಯಬೇಕು, ಮುನ್ನಡೆಯಬೇಕು. ಚಲಂಗೆ ಶುಭವಾಗಲಿ

  8. nagarajhettur

    eccarisisakka sumangala avarige dhanyavaadagalu adannu vedane endaste andukollutteve….

  9. hethur nagaraj

    ನಾವು ಕೆಲವೊಂದು ವೇಳೆ ಮಾಡುವ ತಪ್ಪುಗಳ ಬಗ್ಗೆ ಸುಮಂಗಲಿ ಮೇಡಂ ಎಚ್ಚರಿಸಿದ್ದಾರೆ. ಸರಾಗವಾಗಿ ಬರೆಸಿಕೊಂಡು ಹೋದ ಬರಹಳಲ್ಲಿನ ಇಂತಹ ದೊಡ್ಡ ತಪ್ಪುಗಳ ಬಗ್ಗೆ ಬರೆಯುವಾಗ ಆಕ್ಷಣಕ್ಕೆ ನಮ್ಮ ಯೋಚನೆಗೆ ಬಾರದೆ ಇದ್ದದಕ್ಕೆ ಪಶ್ಚತ್ತಾಪವಿದೆ. ಎಚ್ಚರಿಸಿದ್ದಕ್ಕೆ ಥ್ಯಾಂಕ್ಯೂ ಮೇಡಂ ಮತ್ತೊಮ್ಮೆ ಇಂತಹ ತಪ್ಪುಗಳು ನುಸುಳದಂತೆ ಎಚ್ಚರವಹಿಸುತ್ತೇನೆ. ಪ್ರಸವ ತೆಗೆದು ಹಾಕಿ ವೇದನೆ ಎಂದಷ್ಟೆ ಓದಿಕೊಳ್ಳಲು ಮನವಿ- ನಾಗರಾಜ್ ಹೆತ್ತೂರು

  10. Gururaja kathriguppe

    First, congrats, to ‘CHALAM’ for giving good collection of stories. Thanks to Nagarajhettur for this good article with pleasant photos. It is very heartening to see the young, creative, minds are actively serving kannada literature in Hassan. Much more happier thing is that, you are really fortunate to have sensitive, dynamic, and very creative ROOPAJI as your mentor and leader. Recently Roopa Hassan was in news for her stand taken in favour of kannada religion and against some communal minds. that made her really stands ‘tall’ in between other writers. she really inspired us and show how to protest with guts, when somebody hurts our faith and belief. any how where is our 1980’s rebel star BHANU MASTHAQ?

  11. nagraj.harapanahalli

    ಹೆಚ್ಚು ಹೆಚ್ಚು ಮನುಷ್ಯರನ್ನು ಅರ್ಥ ಮಾಡಿಕೊಂಡರೆ ಸೈಕಾಲಜಿ ಓದಲೇ ಬೇಕೆಂದಿಲ್ಲ . ಮನುಷ್ಯ್ರರನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ . ಬಹುಮುಖಿ ಸಮಾಜ ಭಾರತದಲ್ಲಿ ಬಹುತೇಕ ಬರಹಗಾರರಿಗೆ ಸಮಾಜ ರಚನೆ ಗೊತ್ತಿರುತ್ತ್ದೆ. ಅವರು ಶಾಸ್ತ್ರೀಯ ಅಧ್ಯಯನ ಮಾಡಿರಲ್ಲ. ಬದುಕಿನ ಧೊರಣೆಯೇ ತತ್ವಶಾಸ್ತ್ರ ವಾಗಿರುತ್ತ್ದೆ. ಶಾಸ್ತ್ರೀಯ ಅಧ್ಯಯನ ಇಲ್ಲದಿದ್ದರೂ ಒಳ್ಳೆಯ ಸೃಜನ ಶೀಲ ಕವಿತೆ ಬರೆದವ್ರು ಇದ್ದಾರೆ .

    • ರೂಪ ಹಾಸನ

      ಸೈಕಾಲಜಿ, ತತ್ವಶಾಸ್ತ್ರ ಸಮಾಜ ವಿಜ್ಞಾನದ ಸೂಕ್ಷ್ಮ ಒಳನೋಟವಿರಬೇಕು ಎಂದಿದ್ದೆನೇ ಹೊರತು ಅದನ್ನು ಶಾಸ್ತ್ರೀಯ ಅಧ್ಯಯನ ಮಾಡಬೇಕೆಂದೇನೂ ಹೇಳಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading