ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂತ್ರಧಾರ ರಾಮಯ್ಯ ಪನ್ – ಫನ್

ಪನ್ – ಫನ್

ಸೂತ್ರಧಾರ ರಾಮಯ್ಯ

 

ಅಚ್ಚು ಮೆಚ್ಚು

ಸಾಹಿತ್ಯಿಕ, ರಂಗ ವಿಮರ್ಶೆಗಳು ದಿನಪತ್ರಿಕೆಯಲ್ಲಿ ಬಂದರೆ, ಬಂದ ಕೆಲವೇ ದಿನಗಳಲ್ಲಿ ಭದ್ರಾವತಿ ಕಾರ್ಖಾನಾವಳಿಯ ಪಾಲಾಗುತ್ತದೆ. ಸಾಹಿತ್ಯ ಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಕಟವಾಯಿತೋ ಸ್ವಲ್ಪ ಮೇಲು, ಭದ್ರಾವತಿ ಮಾರ್ಗಮಧ್ಯೆ ಶಿವಮೊಗ್ಗದಲ್ಲಿ ಒಂದೆರಡು ವಾರ, ತಿಂಗಳು ತಂಗಿ, ತಮ್ಮ ಪ್ರಯಾಣವನ್ನು ಮುಂದುವರಿಸಿ, ಕಾಗದದ ಫ್ಯಾಕ್ಟರಿಯಲ್ಲಿ ಅಸುನೀಗುತ್ತವೆ. ಪುಸ್ತಕ ರೂಪ ಧರಿಸಿದರಷ್ಟೇ ‘ಕಾಲಂ’ಗಳು ಕಾಲವನ್ನು ವರಿಸಿ, ಮುಂದಿನ ಪೀಳಿಗೆಯ ಹರಸಿದಂತೆ ಎಂಬುದು ಈ ಕಾಲಂ ನಿಷ್ಟನ ನಂಬಿಕೆ.

ಅಧಿಕಾರ ಸ್ವದುಪಯೋಗ

ಪೂರ್ವಾಭಾದ್ರ: ಏನೇ ಆದರೂ ಹಿಂದಿನ ನಾಯಕರುಗಳಿಗೆ ಫರ್ಮ್(firm) ಮೈಂಡ್ ಇರ್ತಿತ್ತು ಬಿಡು. ಸಾರ್ವಜನಿಕ ಕೆಲಸಗಳಲ್ಲಿ ಹ್ಯಾಗೆ ‘ತೊಡಗಿ’ ಕೊಳ್ಳುತ್ತಿದ್ದರು.

ಉತ್ತರಾಭಾದ್ರ: ಈಗ ಭರ್ತಿಇರೋ ಲೀಡರ್ಗಳು ಅಷ್ಟೇ, ಹತ್ತಾರು ಫರ್ಮ್ಗಳು, ಫಾರ್ಮ್ಗಳು ಕಂಪನಿಗಳಲ್ಲಿ ‘ತೊಡಗಿಸಿ’ ಕೊಂಡ ವರೆ ( invest). ‘ಕಂಪನಿ ಸಾವಧಾನ್’ ಅಂತಾ ಎಚ್ಚರಿಕೆ ಕೊಟ್ರೂ, ವಿಶ್ರಮಿಸಿಕೊಂಡು, ನಾಯಕರನ್ನ ಅನುಸರಿಸೋದಷ್ಟೇ ಪ್ರಜೆಗಳ ಪಾಡು! ಬೇಕಾರ್ ಕನ್ ಫರ್ಮ್ ಮಾಡ್ಕೋ.

 

ರಂಗ: ಅದೇನ್ ಬಂತಯ್ಯಾ! ಎಲ್ಲಿ ಹೋದರೂ ಮೈಲುದ್ದದ ಕ್ಯೂ. ಎತ್ತ ಹೋದರೂ ಕಾಮ್ಪಿಟಿಷನ್ ! ಇದಕ್ಕೆ ಫುಲ್ ಸ್ಟಾಪೆ ಇಲ್ಲವೇ ಅಂತಾ, ಛೇ!

ಸಿಂಗ: ‘ಮಕ್ಕಳಿವರೇನಮ್ಮ ನೂರಿಪ್ಪತ್ತು ಕೋಟಿ’ ಅಂತಾದಮೇಲೆ, ಛೇ ಅಂತ ಡಜನ್ ಬಾರಿ ಅಂದರೂ ನೋ ಯೂಸ್. ಕಾಲದಲ್ಲೇ ಕಾಮನ ಸೆನ್ಸ್ ಗೆ ಕಾಮ ಎಳೆದು, ಆ ಗರ್ಭ ಶ್ರೀಮಂತಿಕೆಗೆ ವಿರಾಮ ಕೊಟ್ಟು, birthನಾಟ್ಯಕ್ಕೆ ಬ್ರೇಕ್ ಹಾಕಬೇಕಿತ್ತು.

ನೌ ಇಟ್ಸ್ ಲೇಟು, too latoo ಊ!

 

ಪನ್ ಸ್ಟರ್ (ವಿವಿಧಾರ್ಥ ಜೀವಿ) ಅರ್ಥ್ ವರ್ಮ್ ಇದ್ದಹಾಗೆ. ಮಣ್ಣಿನ ಪದ-ರಗಳ ಹೊಕ್ಕು, ಸದಾ ಹೊಸಮಣ್ಣನ್ನು

ಹೊರಚೆಲ್ಲುವಂತೆ, (ಅನ್ ಅರ್ಥ್) ಪನ್ ಸ್ಟರ್ ಪದ ತಳಕ್ಕಿಳಿದು, ಹೊಸ ಅರ್ಥಗಳನ್ನು (ಅನರ್ಥಗಳನ್ನು) ಹೊಳೆಯಿಸುತ್ತಾನೆ.

 

ಗಾಂಧಿ ಕೊಟ್ಟ ಖಾದಿ ತೊಟ್ಟರೂ, ಗಾದಿ ಏರಿದ ಕೂಡಲೇ ಹೀಗೆ ಹಸಿದ ತೋಳನಂತೆ ಕಬಳಿಸುತ್ತೀಯಲ್ಲಾ, ನಿನಗಿದೂ ನ್ಯಾಯವೇ? ಅಂತಾ ಪುಡಾರಿ ಪುನ್ದಲೀಕನನ್ನು ಕೇಳಿದರೆ, ” ಏನು ಮಾಡಲಿ, ಖಾದಿಗೂ- ಗಾದಿಗೂ ಇಹ ಪರದೆ ಬಹು ತಿನ್ನು.(thin) ಖಾದಿಯ ಮೊದಲಕ್ಷರವೇ ಖಾ, ಅಂದರೆ ತಿನ್ನು. ಇನ್ನು ಗಾದಿಯ, ಐ ಮೀನ್ ‘s-eat’ ನಲ್ಲೋ, ಈಟ್ ಅನ್ನೋದೇ ಅಂತರ್ಗತವಾಗಿದೆ. ನನ್ನದೇನು ತಪ್ಪು ಅನ್ನಬೇಕೆ!

 

ಅಧಿಕಾರದಲ್ಲಿರುವವರು ಯೋಜನೆಗಳಿಗೆ ಶಂಖುಸ್ಥಾಪನೆ/ ಶಿಲಾನ್ಯಾಸ ಮಾಡುವುದು, ವಿರೋಧಿ ನಾಯಕರು ಸಲ್ಲದ ಅಡೆತಡೆಗಳನ್ನು ಒಡ್ಡಿ, ಶಂಖ ಹೊಡಿಯುವುದು, ತಾವು ಅಧಿಕಾರಕ್ಕೆ ಬಂದಾಗ, ಹಿಂದಿನವರ ಯೋಜನೆಗೆ ‘ಕಲ್ಲು’

ಹಾಕುವುದು ನಡೆದು ಬಂದಿರುವಂತದೆ. ಅದಕ್ಕೇ ಹೇಳುವುದು ಪೊಲಿಟಿ- ಕಲ್ಲು ಅಂತ. ಫಾರ್ ಎಗ್ ಜಾಮ್ ಪಲ್: ಜೆ ಅಂಡ್ ಕೆ ಪ್ರಾಬ್ಲಮ್..,ಕ್ಷಮಿಸಿ, ಜಮ್ಮು ಕಾಶ್ಮೀರ ಅಲ್ಲಾ, ಅಷ್ಟು ದೂರ ಹೋಗಬೇಕಿಲ್ಲಾ. ಪಕ್ಕ ಅಕ್ಕನದೇ. ಕರುಣ ದಿಂದ ನೋಡಿ, ಜಯ ಹೊ ಅನ್ನಿ!

 

ಕಳ ಕಳಿ!

ರಾಜಕೀಯವೇ ಭ್ರಷ್ಟಾಚಾರದ ಸುಗ್ಗಿಯ ಕಳ ಕಣಾ. ಅಂದ ಮೇಲೆ, ಕಳಬೇಡ ಅಂದರೆ ಹ್ಯಾಗೆ? ಎಲ್ಲಾದರೂ ಉಂಟೆ ‘ಅಣ್ಣಾ’, ಕಿಕ್ ಬ್ಯಾಕಿಲ್ಲದೆ ಪಾಲಿಟಿಕ್ಸ್ ಕಳ ಹೀನವಾದೀತು. ಎಂದು ‘ತಮ್ಮ’ ಕಳ ಕಳಿಯನ್ನು ತೋಡಿ ಕೊಂಡರು ಮಿಕ್ಕಿ (ಮೌಸ್ )ಲೀಕ್ಸ್ಗೆ

ಹಿರಿಯಗಣತಂತ್ರಿ ಪುಂಡ ಲೀಕ್!

 

end ಗುಟುಕು

‘ಹ’ ಕಾರೇನ ಪ್ರಕಾರೇಣ

“ಯಾವಾಗ, ಹೆಲ್ ಹೇನಾಗುತ್ತೆ ( ಎಲ್ಲಿ ಏನಾಗುತ್ತೆ ) ಅಂತ ನಿಮ್ಮಲ್ಲಿ ಮೊದಲೇ ಯಾರಿಗಾದರು ಗೊತ್ತಾಗುತ್ತೇನು” ಅಂತ ಹಕಾರಪ್ರಿಯ ಭಾಷಣಕಾರ ಕೇಳಿದ ಕೂಡಲೇ, ” ಯಾಕೆ ಗೊತ್ತಾಗಲ್ಲಾ ಸ್ವಾಮಿ ? ಖಂಡಿತಾ ಹೆಲ್ ಆಗುತ್ತೆ ತಲೆ- ಹೇನು ಹೆಚ್ಚಾದರೆ” ಅಂತ ಹೇಳಿ, ಪರಪರನೆ ತಲೆ ಕೆರೆದುಕೊಂಡು ಕುಳಿತ ಸಭಿಕನೊಬ್ಬ!

 

 

‍ಲೇಖಕರು G

23 December, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading