eye ಇಲ್ಲದ ಐತೀರ್ಪು! ಒಂದು ಹಳೆ ಹಳಿಕೆ
– ಸೂತ್ರಧಾರ ರಾಮಯ್ಯ
ಅಂದಿನ ಆಂಗ್ಲರ ‘ಲೋಪ’ ಕ್ಕೆ
ಇಂದಿನ ಐತೀರ್ಪಿನ ‘ಮುದ್ರೆ’ಯೇ?
ಹೇಳಮ್ಮ ‘ಲೋಪಮುದ್ರೆ’.
ಇದು ಸರಿಯೇ ಕಾವೇರಿ ತಾಯೆ?
ಹುಟ್ಟಿ ಬೆಳೆದ ಮನೆಗೆ ೨೭೦ ಟಿ ಎಂ ಸಿ!
ನೆರಮನೆಗೆ ೪೨೦-೧ (೪೧೯) ಟಿ ಎಂ ಸಿಯೆ?
ಏನನ್ನಬೇಕು; ಎಷ್ಟು ಅನ್ನ ಬೇಕು ?
ಹೆತ್ತವರಿಗೆ ಒಪ್ಪತ್ತು ಅನ್ನ (ಒಂದೇ ಬೆಳೆ)
ಹೆರವರಿಗೆ ಮೂರುಹೊತ್ತು ಮೃಷ್ಟಾನ್ನ ( ಮೂರು ಬೆಳೆ)
ನೀವೇ ನೋಡಿಸ್ವಾಮಿ; ಅನ್ಯಾಯವನ್ನ!
ಯಾ.ಕ. ಬೇಕ – ಯಾದವೀ ಕಲಹ?
ನ್ಯಾ ಯಾದಿಕರಣ ನಮ್ಮ ಹಕ್ಕಿನ ಹರಣ!
ದಾಯಾದಿ ಮತ್ಸರಕೆ ಆಹ್ವಾನ;
ಯಾದವೀ ಕಲಹಕ್ಕೆ ಸೋಪಾನ?
ಕೊಲ್ಲಿ ದುರಾಸೆ.
ಮೂಡುವುದು ನೆಮ್ಮದಿ ಕಾವೇರಿ ಕಣಿವೆಗೆ,
ಎಸೆದಾಗ ಐತೀರ್ಪು ಬಂಗಾಳ ಕೊಲ್ಲಿಗೆ.
ಜಸ್ಟೀಸ್ ನ್ಯಾಚುರಲ್ .
ಈ ನೆಲದಿ ಸುರಿವ ಮಳೆ, ಹರಿವ ಜಲ ನಮ್ಮದಯ್ಯಾ,
ಇಳೆಯ ಜಾಣರು ಅನುವರಿದಕೆ ‘ನಿಸರ್ಗ ನ್ಯಾಯ’
ತಮಿಳು ನಾಡಿಗೆ ಕೊಟ್ಟರು justice-o.k
ಕನ್ನಡ ನಾಡ ಕೈಲಿಟ್ಟರು just-ice ಯಾಕೆ?
ಟಿ.ಎನ್ಗೆ ರಿವಾರ್ಡು, ಕೆ.ಎನ್ಗೆ ವಾರ್ಡು! ತ್ರಿಬುನಲ್ ಅವಾರ್ಡು?
ಕಾವೇರಿ ಕಣಿ-ವೆಯಲೆಂದೂ ಸಾವಿರದ ತಕರಾರು,
ಸಾವಿರ ಪುಟಗಳಲಿ ಗೀಚಿದರು ಕಾವೇರಿಸೋ ಕರಾರು.
ಕೇಂದ್ರ ಸರ್ಕಾರಗಳ ಒತ್ತೆ ಇಟ್ಟುಕೊಂಡು ನೀರುಕೊಡಿ
ಅನುವರಲ್ಲಾ ಯಾರಪ್ಪನ್?
‘ಅಣ್ಣ’ ನನು ಹಿಡಿದಿಟ್ಟು ಅದನೆ ಕೇಳಿದ್ದನಲ್ಲಾ- ವೀರಪ್ಪನ್!
ಪ್ರಶ್ನಿಸಲಿಲ್ಲಾ ಪಾಪ! ಅಂದು ‘ವಸಾಹತು’ಶಾಹಿ;
ಸ್ವಾತಂತ್ರ್ಯ ಬಂದ ಮೇಲೂ ನೀರು ಅನ್ಯರ ‘ವಶ ಆತು’ ತಾಯಿ!






0 Comments