ಸೂರ್ಯನಾರಾಯಣ ಚಡಗರ ನಿಕಟವರ್ತಿಯಾಗಿದ್ದವನು ನಾನು. ಬೆಂಗಳೂರಿನಲ್ಲಿ ಅವರು ವಿಧಿವಶರಾದಾಗ ಕೂಡಲೇ ಎಲ್ಲ ಕನ್ನಡ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಿಗೆ ನಾನು ದೂರವಾಣಿ ಕರೆಮಾಡಿ ಸುದ್ದಿ ಮುಟ್ಟಿಸಿದೆ. ಲಿಖಿತ ಸುದ್ದಿಯನ್ನೂ ಅದೇ ದಿನ ಪತ್ರಿಕಾಲಯಗಳಿಗೆ ತಲುಪಿಸಲಾಯಿತು. ಆ ದಿನಗಳಲ್ಲಿ ’ಈ ಟಿವಿ’ಯಲ್ಲಿದ್ದ ಸುಘೋಷ್ ನಿಗಳೆ ಅವರ ಪರಿಚಯ ನನಗಿದ್ದುದರಿಂದ ಅವರಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದೆನಲ್ಲದೆ ಚಡಗರ ಪಾರ್ಥಿವ ಶರೀರದ ಚಿತ್ರೀಕರಣ ಮಾಡಿಕೊಂಡು ಟಿವಿಯಲ್ಲಿ ಬಿತ್ತರಿಸುವಂತೆ ವಿನಂತಿಸಿದೆ. ಸಂಬಂಧಿಸಿದವರಿಗೆ ಕೂಡಲೇ ತಿಳಿಸುವುದಾಗಿ ಸುಘೋಷ್ ಹೇಳಿದರು.
ಕಲೆ: ಚಿನುವ
ಹೆಬ್ಬಾಳದ ಚಿತಾಗಾರದಲ್ಲಿ ಚಡಗರ ಪಾರ್ಥಿವ ಶರೀರವನ್ನು ಚಿತೆಗೆ ಸಮರ್ಪಿಸುವ ಕ್ಷಣ ಸಮೀಪಿಸಿದರೂ ’ಈ ಟಿವಿ’ಯವರು ಪತ್ತೆ ಇಲ್ಲ. ಚಿತೆಯೆದುರು ಪಾರ್ಥಿವ ಶರೀರ ಬಂದಾಗ ಮತ್ತೆ ಸುಘೋಷ್ಗೆ ಕರೆಮಾಡಿದೆ. ತಾನೀಗ ಬೇರೆ ಕಡೆ ಇರುವುದಾಗಿಯೂ, ಸಂಬಂಧಿಸಿದವರಿಗೆ ಆಗಲೇ ತಿಳಿಸಿರುವುದಾಗಿಯೂ ಹೇಳಿದರಲ್ಲದೆ ಯಾರೂ ಬರದಿದ್ದುದಕ್ಕೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದರು. ಇನ್ನು ನಾವು ಕಾಯುವಂತಿರಲಿಲ್ಲ. ಸುಘೋಷ್ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಿದ್ದರೂ ಕೂಡ ನನ್ನಿಂದ ಫೋನ್ ದ್ವಾರಾ ಖಡಕ್ ಮಾತುಗಳನ್ನು ಕೇಳಬೇಕಾಯಿತು! ನನ್ನ ತೀಕ್ಷ್ಣನುಡಿಗಳನ್ನು ಅವರು ಸಮಾಧಾನದಿಂದ ಸಹಿಸಿಕೊಂಡರು.
ಪೂರ್ಣ ಓದಿಗೆ ಭೇಟಿ ಕೊಡಿ –ಮೀಡಿಯಾ ಮೈಂಡ್
ಸುದ್ದಿ ವಿಭಾಗಕ್ಕೆ ಹೋಗಿ ಆವೇಶದಿಂದ ಅಬ್ಬರಿಸಿದೆ…
ನಿಮಗೆ ಇವೂ ಇಷ್ಟವಾಗಬಹುದು…




0 Comments