ಸೀಮಾ

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಅನೇಕ ಸಿನಿಪ್ರಿಯರು ಬಂದು ಈ ಸಿನಿಮೋತ್ಸವ ಯಶಸ್ಸಿಗೆ ತಮ್ಮ ಪಾಲು ಸೇರಿಸಿದ್ದಾರೆ. ಇವರಲ್ಲಿ ಕನ್ನಡ ಸಿನಿಮಾ ಹಾಗು ಕಿರುತೆರೆ ನಿದೇರ್ಶಕ, ನಟ ಬಿ.ಸುರೇಶ್ ಕೂಡ ಒಬ್ಬರು. ಈ ಒಂದು ವಾರದ ಸಿನಿಮೋತ್ಸವದಲ್ಲಿ ಬೀಸು ಒಂದಲ್ಲ ಒಂದು ಥಿಯೇಟರ್ಗಳಲ್ಲಿ ಕಾಣಿಸುತ್ತಿದ್ದರು.
ಈ ಬಾರಿಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಸರ್ ಅಂದ್ರೆ, ’ ಈ ಸಿನಿಮೋತ್ಸವ ನಮಗೆಲ್ಲ ಹಬ್ಬವಿದ್ದಂತೆ. ದೀಪಾವಳಿ, ಯುಗಾದಿ ಹಬ್ಬವಿದ್ದ ಹಾಗೆ ಸಿನಿಮೋತ್ಸವ ವಾರ್ಷಿಕ ಹಬ್ಬ. ಪ್ರತಿ ವರ್ಷವೂ ತಪ್ಪದಂತೆ ಮತ್ತೇ ಮತ್ತೇ ಈ ಉತ್ಸವ ನಮ್ಮಲ್ಲಿ ಆಗಬೇಕು. ಇಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳು ನಮಗೆಲ್ಲಾ ಸ್ಪೂತಿ. ಬೇರೆ ದೇಶದ ಚಿತ್ರಗಳನ್ನು ನೋಡಿ ನಾವು ಕಲಿಯೋದು ಇರುತ್ತದೆ. ಇಂತಹ ಉತ್ಸವಗಳ ಮೂಲಕ ಹೊಸ ಪ್ರಯೋಗ, ಹೊಸ ಚರ್ಚೆಗಳು ನಮ್ಮೊಳಗೆ ಆಗುತ್ತವೆ ಹಾಗು ಸಿನಿಮಾಗಳನ್ನು ನೋಡುವ ಕ್ರಮ ಕೂಡ ಬದಲಾಗುತ್ತದೆ.

ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾದ ಚಿತ್ರಗಳಿಗೆ ಒಳ್ಳೆ ಮಾರ್ಕೆಟ್ ಕೂಡ ಸಿಗುತ್ತದೆ. ಒಟ್ಟಾರೆ ಅಂತರಾಷ್ಟ್ರೀಯ ಸಿನಿಮೋತ್ಸವ ಜಗತ್ತಿನ ಪ್ರಯತ್ನಗಳಿಗೆ ಪ್ರಯೋಗ ಪೆಟ್ಟಿಗೆ ಇದ್ದ ಹಾಗೆ . ನಮ್ಮ ಚಿತ್ರರಂಗದವರಿಗೆ ಈ ಸಿನಿಮೋತ್ಸವ ವಾರ್ಷಿಕ ಹಬ್ಬವಾಗಿದೆ. ಪ್ರತಿ ವರ್ಷ ಈ ದಿನದಿಂದ ಈ ದಿನದವರೆಗೆ ಎಂದು ಸಿನಿಮೋತ್ಸವದ ದಿನಾಂಕವನ್ನು ನಿಗದಿ ಮಾಡಿಬಿಟ್ಟರೆ ಸಿನಿಮಾ ಜನರು ನಾವು ನಮ್ಮ ಕೆಲಸಗಳಿಗೆ ರಜೆ ಮಾಡಿಬಿಡಬಹುದು.
ನನ್ನ ಪ್ರಕಾರ ಜಗತ್ತಿನಲ್ಲಿ ಕೆಟ್ಟ ಸಿನಿಮಾ ಒಳ್ಳೆಯ ಸಿನಿಮಾ ಎಂದು ಇರುವುದಿಲ್ಲ. ಪ್ರತಿಯೊಂದು ಸಿನಿಮಾಗಳ್ಳಿ ಒಂದಲ್ಲ ಒಂದು ಕಲಿತುಕೊಳ್ಳುವುದು ಇದ್ದೇ ಇರುತ್ತದೆ. ಹಾಗಾಗಿ ಕೆಟ್ಟ ಸಿನಿಮಾಗಳು ಇರುವುದಿಲ್ಲ. ಚಿತ್ರಗಳಿಗೆ ಹೊಂದದ, ಆ ಕಾಲಮಾನಕ್ಕೆ ತಕ್ಕುದಲ್ಲದ ಪ್ರೇಕ್ಷಕರಿರುತ್ತಾರೆ ಎಂದು ಒಂದೇ ಮಾತಿನಲ್ಲಿ ಪಟಪಟನೆ ಹೇಳಿದರು ಬೀಸು.



0 Comments