ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ? ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?
‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ? ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್
ಸಿಂಧೂರ ಪದದ ಅರ್ಥ ‘ಆನೆ’
ನಿಮಗೆ ಇವೂ ಇಷ್ಟವಾಗಬಹುದು…





ಪೂರ್ಣ ಓದಿಗೆ ಮೀಡಿಯಾ ಮೈಂಡ್ ಭೇಟಿ ಕೊಟ್ಟರೆ ಅಲ್ಲಿ ಈ ಬರಹ ಕಾಣಿಸುತ್ತಿಲ್ಲವಲ್ಲ? ಅನೆ ತಿಂದಿತೋ ಹೇಗೆ?
ಅಂದಹಾಗೆ ಇದು ’ಸುನಾಥ’ (ಸುಧೀಂದ್ರ ದೇಶಪಾಂಡೆ) ಮಹಾಶಯರ ಬರಹ ಎಂದುಕೊಳ್ಳುವೆ. ಅವರ ಗಮನಕ್ಕೆ- “ಸಿಂಧೂರ” ಪದದ ಅರ್ಥ ಆನೆ ಅಂತಲ್ಲ. “ಸಿಂಧುರ” ಎಂದರೆ ಆನೆ. ಸಂಸ್ಕೃತದಲ್ಲಿ “ಸಿಂಧೂರ” ಎಂಬ ಪದವೇ ಇಲ್ಲ! ‘ಸಿಂದೂರತಿಲಕ’ ಎಂಬ ಪದ ಇದೆ, ಅದರ ಅರ್ಥವೂ ’ಆನೆ’ ಎಂದೇ. (ಕನ್‌ಫರ್ಮ್ ಮಾಡಿಕೊಳ್ಳಲಿಚ್ಛಿಸುವವರು “ಸಂಸ್ಕೃತ ಕನ್ನಡ ನಿಘಂಟು – ಪ್ರೊ. ಜಿ.ಎನ್.ಚಕ್ರವರ್ತಿ; ಗೀತಾ ಬುಕ್ ಹೌಸ್, 2006; ಪುಟ ಸಂಖ್ಯೆ 971 ನೋಡಬಹುದು)
//“ಸಿಂಧುರ” ಎಂದರೆ ಆನೆ, ‘ಸಿಂದೂರತಿಲಕ’ ಎಂಬ ಪದ ಇದೆ, ಅದರ ಅರ್ಥವೂ ’ಆನೆ’ //
ಜೋಶಿಯವ್ರೇ, ಇದು ಹೇಗೆ? ಸ್ವಲ್ಪ ವಿವರಿಸುತ್ತೀರಾ ಪ್ಲೀಸ್..
ಶಿವ ಅವರ ಗಮನಕ್ಕೆ-
“ಸಿಂಧುರ” ಎಂದರೆ ಆನೆ. ಅದು “ಸಿಂಧುರ” ಎಂಬ ಒಂದು ಪದದ ವಿಲೇವಾರಿ. ಅಲ್ಲಿಗೆ ಅದು ಮುಗಿಯಿತು.
ಇನ್ನು, ’ಸಿಂದೂರ’ ಎಂದರೆ ಕುಂಕುಮ/ ಒಂದುವಿಧದ ಕೆಂಪು ಚೂರ್ಣ ಎಂಬ ಅರ್ಥ. ’ಸಿಂದೂರತಿಲಕ’ ಎಂದರೆ ’ಹಣೆಮೇಲೆ ಸಿಂದೂರದ ತಿಲಕ ಇರುವಂಥ’. ಈ ಪದವನ್ನು ಪುಲ್ಲಿಂಗರೂಪದಲ್ಲಿ ಬಳಸಿದರೆ ಗಜ (ಆನೆ) ಎಂದು ಅರ್ಥ. ಪ್ರಾಯಶಃ ಆನೆಗಳಿಗೆ ಹಣೆಗೆ ಸಿಂದೂರದ ತಿಲಕವಿಟ್ಟು ಅಲಂಕರಿಸುವ ಕ್ರಮದಿಂದಾಗಿ ಆ ಪದಪ್ರಯೋಗ ಬಂದಿರಬಹುದು. ಇದೇ ಪದವನ್ನು ಸ್ತ್ರೀಲಿಂಗರೂಪದಲ್ಲಿ ಬಳಸಿದರೆ ಸುಮಂಗಲಿ (ಮುತ್ತೈದೆ) ಎಂದು ಅರ್ಥ.
“ಸಿಂಧುರ” ಪದದ ಅರ್ಥ ‘ಆನೆ’ ಆಗಿರುವುದಕ್ಕೂ ’ಸಿಂದೂರತಿಲಕ’ ಪದದ ಆರ್ಥ ‘ಆನೆ’ ಆಗಿರುವುದಕ್ಕೂ ಸಂಬಂಧವೇನೂ ಇಲ್ಲ. ಅಂದರೆ “ಸಿಂಧುರ’ಕ್ಕೂ ‘ಸಿಂದೂರತಿಲಕ’ಕ್ಕೂ ಪದಬಾಂಧವ್ಯ ಏನೂ ಇಲ್ಲ.
ಈ ವಿವರಣೆ ನಿಮಗೆ ಅರ್ಥವಾಗಿರಬಹುದು ಎಂದುಕೊಳ್ಳುವೆ. ಆಗಿರದಿದ್ದರೆ ನನಗೆ ಇಮೇಲ್ (srivathsajoshi@yahoo.com) ಕಳಿಸಿ, ವಿವರಿಸುವೆ.
ಅರ್ಥವಾಯಿತು. Thank you Joshiji.
somehow i could not connect to media mind
i have an old dictionary which i use for my reference
according to it
ಸಿಂಧೂರ = ಒಂದು ಜಾತಿಯ ಕೆಂಪು ಬಣ್ಣ, ಒಂದು ಸೀಸಾಮ್ಲ, ಚಂದ್ರ, ಆನೆ
ಸಿಂದುರ = ಪರಾಗ, ಹೂವಿನ ಹುಡಿ, ಸಿಂಧುರ (ಸಂ)
ಮಾಲತಿಯವರೆ,
ಸಿಂದೂರ ಪದಕ್ಕೆ ಕುಂಕುಮ ಎನ್ನುವ ಅರ್ಥವಿದೆ.ಸಂಸ್ಕೃತದಲ್ಲಿ ‘ಸಿಂಧೂರ’ ಎನ್ನುವ ಪದವಿಲ್ಲ ; ‘ಸಿಂಧುರ’ ಎನ್ನುವ ಪದಕ್ಕೆ ಆನೆ ಎನ್ನ್ನುವ ಅರ್ಥವಿದೆ. ಆದರೆ ಕಿಟ್ಟೆಲ್ ಕನ್ನಡ-ಇಂಗ್ಲಿಸ್ ಅರ್ಥಕೋಶದಲ್ಲಿ ಸಿಂಧೂರ ಎನ್ನುವ ಪದಕ್ಕೆ ಆನೆ ಎನ್ನುವ ಅರ್ಥ ಹೇಳಿದ್ದಾರೆ.
Namaskara…
Kittel dictionary prakara Sindhoor andare Kunmuma
Sindhur andare Aane…
dayavittu hechina mahiti needi.
Shreeraj
New Delhi