ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ ಸಮ್ಮೇಳನಕ್ಕೆ ತಯಾರಾಗ್ತಾ ಇದೆ ಶ್ರವಣ ಬೆಳಗೊಳ

ಅರಕಲಗೂಡು ಜಯಕುಮಾರ್

ಶ್ರವಣಬೆಳಗೊಳ: ಶತಮಾನೋತ್ಸವ ವರ್ಷದಲ್ಲಿ ನುಡಿಹಬ್ಬದ ಸಂಭ್ರಮಕ್ಕೆ ಇನ್ನು 7ದಿನಗಳು! ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಬಾಹುಬಲಿಯ ಕ್ಷೇತ್ರದಲ್ಲಿ ಸಮ್ಮೇಳನ ಪೂರ್ವಭಾವಿ ಸಿದ್ದತೆಗಳು ಭರದಿಂದ ಸಾಗಿವೆ.
ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಅತೀ ಹೆಚ್ಚು ಬಾರಿ ಚರ್ಚೆಗೆ ಒಳಗಾಗಿ ಇನ್ನು ಈ ಸಲ ಸಾಹಿತ್ಯ ಸಮ್ಮೆಳನ ನಡೆಯುವುದೇ ಇಲ್ಲವೇನೋ ಎಂಬ ಪರಿಸ್ಥಿತಿ ಹಾವೇರಿ ಜಿಲ್ಲೆಯಲ್ಲಿ ಉಂಟಾದ ಗೋಂದಲದಿಂದಾಗಿ ಸಾರ್ವತ್ರಿಕವಾಗಿ ವ್ಯಕ್ತವಾಗಿತ್ತು. ಹಾಸನ ಜಿಲ್ಲೆಗೆ ಅತೀ ಕಡಿಮೆ ಅವಧಿಯಲ್ಲಿ ಶತಮಾನೋತ್ಸವ ವರ್ಷದ ಸಾಹಿತ್ಯ ಸಮ್ಮೆಳನ ನಡೆಸುವ ಅವಕಾಶ ದಕ್ಕಿದಾಗ ಇಷ್ಟು ಕಡಿಮೆ ಅವಧಿಯಲ್ಲಿ ಸಿದ್ದತೆ ಹೇಗೆ ಎಂಬ ಪ್ರಶ್ನೆ ತಲೆದೂರಿದ್ದು ನಿಜ, ಆದರೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇಚ್ಚಾಶಕ್ತಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳ ಮಠದ ಸಹಕಾರ, ಕೇಂದ್ರ ಕಸಾಪ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನ, ಜಿಲ್ಲೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ದೊರೆತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸುವ ಹೊಣೆಗಾರಿಕೆಯನ್ನು ಅಡ್ಡಿ ಆತಂಕದ ನಡುವೆಯೂ ಸದ್ದಿಲ್ಲದಂತೆ ನಿರ್ವಹಿಸುತ್ತಿದೆ.

ಕ್ಲುಪ್ತ ಅವಧಿಯ ಸಮ್ಮೇಳನ ಸಂಘಟನೆಗೆ ಶ್ರವಣಬೆಳಗೊಳದಲ್ಲಿ ಸಿದ್ದತೆ ಹೇಗೆ ಸಾಗಿದೆ? ಎಂಬ ಕುರಿತು ಪತ್ರಿಕೆ ಸ್ಥಳಕ್ಕೆ ಭೇಟಿ ನೀಡಿತ್ತು. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶಾಲವಾದ ಸ್ಥಳದ ಆಯ್ಕೆ ಮಾಡಿ ಸಮ್ಮೇಳನದ ಸಭಾಂಗಣ, ಬೋಜನಾಲಯ, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳು, ವಾಹನ ನಿಲುಗಡೆಗೆ ವ್ಯವಸ್ಥೆ, ಮಾಧ್ಯಮ ಕೇಂದ್ರ, ಪೋಲೀಸ್ ಚೌಕಿ, ಸಹಾಯ ವಾಣಿ ಕೇಂದ್ರಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಅನಾಮತ್ತು 30ಎಕರೆಯಷ್ಟು ಪ್ರದೇಶವನ್ನು ತಾತ್ಕಾಲಿಕವಾಗಿ ಸಮತಟ್ಟು ಮಾಡಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದುವರೆಗೆ 9ಸಾಹಿತ್ಯ ಸಮ್ಮೇಳನಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿದ್ದ ಬೆಂಗಳೂರಿನ ರಾಜ್ ಎಂಟರ್ ಪ್ರೈಸಸ್ ವೇದಿಕೆ ನಿರ್ಮಾಣದ ಕಾರ್ಯ ಮಾಡುತ್ತಿದೆ. ಸುಮಾರು 1.50ಲಕ್ಷ ಚದರ ಅಡಿಗಳಲ್ಲಿ ವೇದಿಕೆ ಮತ್ತು ಸಭೀಕರು ಕೂರಲು ಆಸರೆಯ ವ್ಯವಸ್ಥೆ ಮಾಡಲಾಗುತ್ತಿದ್ದು ಈ ಬೃಹತ್ ವೇದಿಕೆಯಲ್ಲಿ 25ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಆಗಿದೆ.
ಚನ್ನರಾಯ ಪಟ್ಟಣದಿಂದ ಶ್ರವಣಬೆಳಗೊಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆಯೇ ಬಲಕ್ಕೆ ಕವಲೊಡೆಯುವ ಹಾದಿಯಲ್ಲಿ 2ಕಿಮಿ ಸಾಗಿದರೆ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಸರಿಯಾಗಿ ಗೊಮ್ಮಟ ಮೂತರ್ಿ ನೆಲೆಯಾಗಿರುವ ವಿಂದ್ಯಗಿರಿ ಬೆಟ್ಟದ ಹಿಂಬದಿಯ ಪ್ರಶಾಂತ ವಾತಾವರಣದಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ.

ವೇದಿಕೆಯ ಹಿಂಬದಿಯಲ್ಲಿ ಸಾರ್ವಜನಿಕ ಪ್ರವೇಶ ನಿಷೇದಿಸಲಾಗಿದ್ದು ಅಲ್ಲಿ ಪೋಲೀಸ್ ಚೌಕಿ, ಮಾಧ್ಯಮ ಕೇಂದ್ರ, ಸ್ವಾಮೀಜಿಯವರ ವಿಶ್ರಾಂತ ಕೊಠಡಿ ಮತ್ತು ದೃಶ್ಯ ವಾಹಿನಿಗಳ ಮರುಪ್ರಸಾರದ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದ ಪಕ್ಕದಲ್ಲಿಯೇ ಬೋಜನ ವ್ಯವಸ್ಥೆಗೆ ಯೋಜನೆ ರೂಪಿಸಲಾಗುತ್ತಿದೆ. ವೇದಿಕೆಯ ಬಲಭಾಗದಲ್ಲಿ ಅತಿ ಗಣ್ಯರ ವಾಹನಗಳ ನಿಲುಗಡೆ, ವೇದಿಕೆಯ ಎಡ ಭಾಗದಲ್ಲಿ ಅತಿ ಗಣ್ಯರ ಭೋಜನಾಲಯ ನಿಮರ್ಿಸಲಾಗುತ್ತಿದ್ದು ಇಲ್ಲಿ ಸುಮಾರು 3000 ಮಂದಿ ಏಕಕಾಲದಲ್ಲಿ ಕುಳಿತು ಭೋಜನ ಸವಿಯುವ ಅವಕಾಶ ಇದೆ.
ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಂಪರ್ಕಿಸುವ ಸ್ಥಳಕ್ಕೆ ಡಾಂಬರು ರಸ್ತೆ ಮಾಡಲಾಗಿದೆ, ರಸ್ತೆಯ ಕೆಲಸ ಇನ್ನೂ ಪ್ರಗತಿಯಲ್ಲಿದೆ. ಧೂಳು ಆವರಿಸದಂತೆ ನೀರು ಹಾಕಿ ನೆಲವನ್ನು ಸಮತಟ್ಟು ಮಾಡಲಾಗುತ್ತಿದೆ.ಶೌಚಾಲಯ, ಮೂತ್ರಾಲಯಗಳನ್ನು ಪುಸ್ತಕ ಮಳಿಗೆ ಹಿಂಭಾಗ, ಭೋಜನ ಆಸರೆ ಹಿಂಭಾಗ, ವೇದಿಕೆಯ ಬಳಿ ಹೀಗೆ ನಾಲ್ಕೈದು ಸ್ಥಳಗಳಲ್ಲಿ ಗುರುತಿಸಿ 300ಶೌಚಾಲಯ, 300ಮೂತ್ರಾಲಯ ಹಾಗೂ 200 ಸ್ನಾನದ ಕೋಣೆಯನ್ನು ನಿಮರ್ಿಸುವ ಯೋಜನೆಯಾಗುತ್ತಿದೆ. ಮಾಧ್ಯಮ ಕೇಂದ್ರದ ಬಳಿ ನಿಮಾಣವಾಗುವ ಶೌಚ ಮತ್ತು ಮೂತ್ರ ಕೊಠಡಿಗಳು ಪರಿಸರ ಸ್ನೇಹಿಯಾಗಿದ್ದು ಆಧುನಿಕ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ.
ಸಾರ್ವಜನಿಕ ವಾಹನಗಳ ನಿಲುಗಡೆಗೆ 1.20ಲಕ್ಷ ಚದರ ಅಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ, ವಾಣಿಜ್ಯ ಮಳಿಗೆಗಳು 100, ಪುಸ್ತಕ ಮಳಿಗೆಗಳು 500 ನಿಮರ್ಾಣ ಕಾರ್ಯ ಭರದಿಂದ ಸಾಗಿದೆ. 20ಸಾವಿರ ಚದರ ಅಡಿಯ ತಲಾ 5 ಭೋಜನಾಲಯಗಳು ವ್ಯವಸ್ಥಿತವಾಗಿ ನಿರ್ಮಾಣವಾಗುತ್ತಿದ್ದು ಪ್ರತೀ ಭೋಜನಾಲಯದಲ್ಲಿ ಒಮ್ಮೆಗೆ 5000 ಮಂದಿ ಭೋಜನ ಸವಿಯುವ ಅವಕಾಶವಾಗುತ್ತಿದೆ. 4000ಚದರ ಅಡಿಯ 5 ಪ್ರತ್ಯೇಕ ಅಡುಗೆ ಕೋಣೆಗಳು ಸಮರ್ಪಕ ನೀರಿನ ವ್ಯವಸ್ಥೆಯೊಂದಿಗೆ ಸಜ್ಜಾಗುತ್ತಿವೆ. ಕುಡಿಯುವ ನೀರಿನ ವ್ಯವಸ್ಥೆಗೆ ಅಡ್ಡಿಯಾಗದಂತೆ 500ಕ್ಕೂ ಹೆಚ್ಚು ನಲ್ಲಿಗಳನ್ನು ಅಗತ್ಯ ಸ್ಥಳಗಳಲ್ಲಿ ಹಾಕಲಾಗಿದೆ. ಬೆಟ್ಟದ ಹಿಂಬದಿಯಲ್ಲಿರುವ ಬೃಹತ್ ನೀರು ಸಂಗ್ರಹಗಾರದಿಂದ ಸ್ವಚ್ಚ ಕುಡಿಯುವ ನೀರು ಸರಬರಾಜಾಗಲಿದೆ.
ಮುಖ್ಯ ವೇದಿಕೆಯ ಬಲ ಭಾಗದಲ್ಲಿ ಕೆಲವು ಮೀಟರುಗಳ ಅಂತರದಲ್ಲಿ ವಿಚಾರ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಸಮನಾಂತರ ವೇದಿಕ 20000ಚದರ ಅಡಿಯಲ್ಲಿ ನಿಮರ್ಾಣವಾಗಲಿದ್ದು 2000ಜನ ಕುಳಿತು ಕಾರ್ಯಕ್ರಮ ವೀಕ್ಷಿಸ ಬಹುದಾಗಿದೆ. ಮುಖ್ಯ ವೇದಿಕೆಗೆ ಅಭಿಮುಖವಾಗಿ ನಿಂತರೆ ಉತ್ತರಕ್ಕೆ ಪೂವರ್ಾಭಿಮುಖವಾಗಿ ಸಮನಾಂತರ ವೇದಿಕೆ, ದಕ್ಷಿಣಕ್ಕೆ ಊಟದ ಮನೆಗಳು, ಪಶ್ಚಿಮಕ್ಕೆ ವಾಹನ ನಿಲುಗಡೆ, ವಾಣಿಜ್ಯ ಮಳಿಗೆಗಳು, ಪುಸ್ತಕ ಮಳಿಗೆಗಳು ಇವೆ. ಪೂರ್ವಕ್ಕೆ ಮಾಧ್ಯಮ ಕೇಂದ್ರ ಪಶ್ಚಿಮಾಭಿಮುಖಿಯಾದ ವೇದಿಕೆ ಇದೆ.
ಸಮ್ಮೆಳನದ ಸಿದ್ದತೆಗಾಗಿ 30 ಉಪಸಮಿತಿಗಳು ಸ್ವಾಗತ ಸಮಿತಿಯ ನೇತೃತ್ವದಲ್ಲಿ ರಚನೆಯಾಗಿದ್ದು ಕ್ಲುಪ್ತ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಮ್ಮೆಳನದ ವೆಚ್ಚಕ್ಕೆ ಸರ್ಕಾರ 4ಜಿ ರಿಯಾಯ್ತಿಯನ್ನು ನೀಡಿದೆ, ಅಂದರೆ ಕಡಿಮೆ ಅವಧಿ ಇರುವುದರಿಂದ ಟೆಂಡರು ರಹಿತ ಪಾರದರ್ಶಕ ವೆಚ್ಚಗಳನ್ನು ಮಾಡಲು ಸಕರ್ಾರದ ಮಾಕರ್ೆಟಿಂಗ್ ಕನ್ಸಲ್ಟೆನ್ಸಿ ಮತ್ತು ಏಜೆನ್ಸಿಗೆ ಅವಕಾಶ ನೀಡಿದೆ. ಪರಿಷತ್ತಿನ ಎಲ್ಲ ವೆಚ್ಚಗಳು ಈ ಮೂಲಕ ನಿರ್ವಹಣೆಯಾಗುತ್ತಿವೆ. ಸರ್ಕಾರಿ ಸ್ವಾಮ್ಯದ ಮೆಡಿಕಲ್ ಕಾಲೇಜು ಮತ್ತು ಸ್ಥಳೀಯ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯ್ತಿಗಳು ದೇಣಿಗೆ ನೀಡಿವೆ, ಸರ್ಕಾರಿ ನೌಕರರು ಒಂದು ದಿನದ ದೇಣಿಗೆಯನ್ನು ನೀಡಿದ್ದಾರಾದರೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಗಿರುವ ಜಿಲ್ಲೆಯವರೇ ಆದ ಬಾಗೂರು ಮಂಜೇಗೌಡರು ದೇಣಿಗೆಯಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಅರ್ಧ ದೇಣಿಗೆಯನ್ನು ಹಿಂತಿರುಗಿಸುವಂತೆ ಕೇಳಿರುವುದು ಗೋಂದಲ ಹುಟ್ಟು ಹಾಕಿದೆ. ಅನೇಕ ಅತೃಪ್ತರು, ಅವಕಾಶ ವಂಚಿತರು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಡಾ ಎಚ್ ಎಲ್ ಜನಾರ್ಧನ್ ವಿರುದ್ದ ಅಸಹನೆ ವ್ಯಕ್ತಪಡಿಸುತ್ತಿದ್ದಾರಾದರೂ ಸಮ್ಮೇಳನ ಸಿದ್ದತೆಯ ಕೆಲಸಕ್ಕೆ ಯಾವುದೇ ತೊಡಕು ಉಂಟಾಗಿಲ್ಲ. ಆತಿಥ್ಯದ ಹೊಣೆ ಹೊತ್ತ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಚ್ ಎಲ್ ಜನಾರ್ಧನ್ ಸಮಚಿತ್ತದಿಂದ ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ ಮತ್ತು ಶ್ರವಣಬೆಳಗೊಳ ಶಾಸಕ ಸಿ ಎನ್ ಬಾಲಕೃಷ್ಣ, ಶ್ರೀ ಕ್ಷೇತ್ರ ಮಠದ ಚಾರುಕೀತರ್ಿ ಭಟ್ಟಾರಕ ಸ್ವಾಮೀಜಿ, ಜಿಲ್ಲಾಧಿಕಾರಿ ಉಮೇಶ್ ಕುಸಗಲ್ ಮತ್ತು ಇತರೆ ಅಧಿಕಾರಿಗಳು ಸಮ್ಮೆಳನದ ಸಿದ್ದತೆ ಮತ್ತು ಯಶಸ್ಸಿಗೆ ಶ್ರಮಿಸುತ್ತಿದ್ದು ಪ್ರತೀ ದಿನ ಸಮ್ಮೇಳನ ಸಿದ್ದತೆಯ ಸ್ಥಳಕ್ಕೆ ಭೇಟಿ ನೀಡಿ ಸೂಚನೆ ನೀಡುತ್ತಿದ್ದಾರೆ. ಉಪಸಮಿತಿಗಳಿಗೆ ನೇಮಕವಾಗಿರುವ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಒತ್ತಡಗಳ ನಡುವೆಯೂ ಸಮಚಿತ್ತದಿಂದ ಸಮರೋಪಾದಿಯ ಸಿದ್ದತೆಗೆ ಶ್ರಮಿಸುತ್ತಿದ್ದಾರೆ. ಸಮ್ಮೆಳನಕ್ಕೆ ಆಗಮಿಸುವ ಲಕ್ಷಾಂತರ ಮಂದಿಯ ಆತಿಥ್ಯಕ್ಕೆ ಕೊಂಚವೂ ಲೋಪವಾಗದಂತೆ ಸಿದ್ದತೆಯಾಗುತ್ತಿದ್ದು ಸಧ್ಯ ನೂರು ಮಂದಿ ಕಾಮರ್ಿಕರು ಪ್ರತಿ ನಿತ್ಯ ದುಡಿಯುತ್ತಿದ್ದಾರೆ. ಸಮ್ಮೆಳನ ಸಿದ್ದತೆ ಪೂರ್ಣಗೊಳ್ಳುವ ವೇಳೆಗೆ 400ಮಂದಿ ಕಾರ್ಮಿಕರ ಶ್ರಮ ಸಿದ್ದತೆಗಾಗಿ ವ್ಯಯವಾಗಲಿದೆ.

‍ಲೇಖಕರು G

27 January, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading