ವೈ ಗ ಜಗದೀಶ್
ಆತ್ಮೀಯರೇ,
‘ಸಾಹಿತ್ಯ ಸಂಭ್ರಮ’ದ ನಿಮ್ಮೆಲ್ಲರ ಮಾತು ನಿಜ. ನನ್ನದು ಸಹಮತವಿದೆ. . .
ಹೆಚ್ಚೇನು ಹೇಳಲಾರೆ, ಅಲ್ಲಮನ ವಚನಗಳ ಬಿಟ್ಟು. . .
ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಜೋಗುಳ ಹಾದಿ ತೂಗುತ್ತಿದ್ದಾಳೆ ಭ್ರಾಂತಿ ಎಂಬ ತಾಯಿ. . . . .
….
ಅಡವಿಯೊಳಗೆ ಕಳ್ಳರು
ಕಡವಸದ ಸ್ವಾಮಿಯನು ಹುಡುಕಿ ಹುಡುಕಿ
ಅರಸುತ್ತೈದಾರೆ !
ಸೊಡರು ನಂದಿ ಕಾಣದೆ
ಅನ್ನಪಾನದ ಹಿರಿಯರೆಲ್ಲರೂ ತಮ್ಮ ತಾವಱಿಯದೆ
ಅಧರಪಾನವನುಂಡು ತೇಗಿ
ಸುರಾಪಾನವ ಬೇಡುತ್ತೈದಾರೆ.
ಅಱಿದ ಹಾರುವನೊಬ್ಬನು
ಅರಿದ ತಲೆಯ ಹಿಡಿದುಕೊಂಡು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ-ಗುಹೇಶ್ವರ.
ಅಕ್ಷರವ ಬಲ್ಲೆವೆಂದು
ಅಹಂಕಾರವಡೆಗೊಂದು ಲೆಕ್ಕಗೊಳ್ಳರಯ್ಯ,
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು, ವಾದಿಪರಲ್ಲದೆ
ಆಗು-ಹೋಗೆಂಬುದನಱಿಯರು,
ಭಕ್ತಿಯನಱಿಯರು-ಯುಕ್ತಿಯನಱಿಯರು-ಮು
ಕ್ತಿಯನಱಿಯರು
ಮತ್ತೂ ವಾದಿಗಳೆನಿಸುವರು
ಹೋದರು, ಗುಹೇಶ್ವರ, ಸಲೆ ಕೊಂಡ ಮಾಱಿಂಗೆ !
-ಎಲ್ಲರಿಗೂ ನಮಸ್ಕಾರ,






ನಿನ್ನೆ ಮುಗಿದ ‘ಧಾರವಾಡದ ಸಾಹಿತ್ಯ ಸಂಭ್ರಮ’ ಇತ್ತೀಚಿನ ದಿನಗಳಲ್ಲಿ ನಡೆದ ಸಾರ್ಥಕ ಸಮಾರಂಭ ಎನಿಸಿತು. ಸಂಬಂಧಪಟ್ಟವರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಜೈಪುರ ಸಮ್ಮೇಳನದಿಂದ ಸ್ಫೂರ್ತಿ ಪಡೆದು ಆಲ್ಲಿ ಕೆಲವು ನಿಯಮಾವಳಿಗಳನ್ನು ಆನಗತ್ಯವಾಗಿ ಇಲ್ಲಿ ಬಳಸಿದ್ದು, ಎರಡು ವಾರಗಳ ಅಂತರದಲ್ಲಿ ಬಿಜಾಪುರದಲ್ಲಿ ಸಾಹಿತ್ಯ ಸಮ್ಮೇಳನವೇ ನಡೆಯುತ್ತಿರುವಾಗ ಇನ್ನಷ್ಟು ಕಾಲದ ಅಂತರವನ್ನು ಕಾಯ್ದುಕೊಳ್ಳುವುದು ಭಾಗವಹಿಸುವವರ ಅನುಕೂಲದ ದೃಷ್ಟಿಯಿಂದ ಅಪೇಕ್ಷಣೀಯವಾಗಿತ್ತು -ಎಂಬ ಅಭಿಪ್ರಾಯಗಳನ್ನು ಬಿಟ್ಟರೆ ಈ ಸಾಹಿತ್ಯ ಸಂಭ್ರಮ ನಡೆಯುವ ಬಗ್ಗೆ ಗಂಭೀರ ವಿರೋಧವಿರುವುದಕ್ಕೆ ಕಾರಣವಿಲ್ಲ.
ಧಾರವಾಡ ಉತ್ತರ ಕರ್ನಾಟಕದ ಸಾಂಸ್ಕೃತಿಕ ಶೈಕ್ಷಣಿಕ, ಸಾಹಿತ್ಯಕ ರಾಜಧಾನಿ ಎಂಬ ಹಿರಿಮೆಗೆ ತಕ್ಕಂತೆ ಈ ಸಂಭ್ರಮ ಯಶಸ್ವಿಯಾಗಿದೆ. ಧಾರವಾಡದ ಈ ಹಿರಿಯಕ್ಕನ ಸಂಭ್ರಮದ ಚಾಳಿ ನಾಡಿನಾದ್ಯಂತ ಹರಡಿ ಎಲ್ಲ ವಿಶ್ವವಿದ್ಯಾನಿಲಯಗಳ ವಲಯಗಳಲ್ಲಿಯೂ(ಪ್ರತಿ ವರ್ಷ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಒಂದೊಂದು ಜಿಲ್ಲಾ ಕೇಂದ್ರಗಳಲ್ಲಿ) ನಡೆಯುವಂತಾಗಬೇಕು.
ವಿವಧ ಗೋಷ್ಠಿಗಳ ದಾಖಲೀಕರಣ ನಡೆದಿದ್ದಲ್ಲಿ ಆವನ್ನು ಪ್ರತ್ಯೇಕ,ವಿದ್ಯಾನಿಲಯದ ಜಾಲತಾಣ, ಯು-ಟ್ತ್ಯೂಬ್ ನಂಥ ಅಂತರಜಾಲ ನೆಲೆಗಳಲ್ಲಿ ದೊರೆಯುವ ವ್ಯವಸ್ಥೆಯಾಗಲಿ.