ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ ಅಕಾಡೆಮಿಯ ಈ ಕೆಲಸದಲ್ಲಿ ನಿಮ್ಮ ಕೈ ಜೋಡಿಸಿ..

ಸಿ ಎನ್ ರಾಮಚಂದ್ರನ್

ಪ್ರಿಯರೆ:
ನಮಸ್ಕಾರ. ಈ ಪತ್ರವನ್ನು ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರರ ಪರವಾಗಿ ನಾನು ಬರೆಯುತ್ತಿದ್ದೇನೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ಈಗ ಒಂದು ಬೃಹತ್ ಯೋಜನೆಯನ್ನು ಕೈಗೊಂಡಿದೆ ಮತ್ತು ಆ ಯೋಜನೆಯ ನಿರ್ದೇಶಕರು ಸ್ವತಃ ಅಕಾಡೆಮಿಯ ಅಧ್ಯಕ್ಷರಾಗಿರುವ ಮಾನ್ಯ ತಿವಾರಿ ಅವರೇ ಆಗಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶ: ಭಾರತದ ಪ್ರತಿಯೊಂದು ಭಾಷೆಯಲ್ಲಿಯೂ ಗಾಂಧೀಜಿಯವರನ್ನು ಕುರಿತು ಬಂದಿರುವ ಕಥೆ-ಕಾದಂಬರಿ-ಕವನ-ನಾಟಕಗಳನ್ನು ಸಮಗ್ರವಾಗಿ ದಾಖಲಿಸಿ, ಅನಂತರ ಅವುಗಳನ್ನು ಇತರ ಭಾಷೆಗಳಿಗೆ ಅನುವಾದಿಸುವುದು. ಈ ಯೋಜನೆಯಲ್ಲಿ ವಿಮರ್ಶೆ ಮತ್ತು ಅನುವಾದಗಳು ಸೇರುವುದಿಲ್ಲ.

ಕಂಬಾರರು ಈ ಯೋಜನೆಯ ಕನ್ನಡ ಭಾಗವನ್ನು ವಹಿಸಿಕೊಂಡಿದ್ದಾರೆ ಮತ್ತು ಈ ಮಾಹಿತಿಯನ್ನು ಸಂಗ್ರಹಿಸಲು ನನ್ನನ್ನು ಕೇಳಿದ್ದಾರೆ. ದಯವಿಟ್ಟು ಈ ಕಾರ್ಯದಲ್ಲಿ ನೀವೆಲ್ಲರೂ ಸಹಕರಿಸಬೇಕಾಗಿ ನಾನು ಕೋರುತ್ತೇನೆ. ಇನ್ನೊಂದು ಎರಡು-ಮೂರು ವಾರಗಳಲ್ಲಿ ಈ ಪಟ್ಟಿಯು ಕಂಬಾರರ ಕೈಸೇರಬೇಕು.
ಈ ವಿಷಯವನ್ನು ಕಂಬಾರರು ಪ್ರಸ್ತಾಪಿಸಿದ ಕೂಡಲೇ ನನಗೆ ಹೊಳೆದ ಕೆಲವು ಕೃತಿಗಳನ್ನು, ನಿದರ್ಶನಾರ್ಥವಾಗಿ, ನಮೂದಿಸುತ್ತಿದ್ದೇನೆ:
ಕತೆಗಳು: ಬೆಸಗರಹಳ್ಳಿ ರಾಮಣ್ಣ: “ನಮ್ಮೂರಿನ ಗಾಂಧಿ” (?) / ಕುಂವೀ, “ಕೂರ್ಮಾವತಾರ”
ಕಾದಂಬರಿ: ಎಚ್. ನಾಗವೇಣಿ, “ಗಾಂಧಿ ಬಂದ”
ಕಾವ್ಯ: ಅನಂತಮೂರ್ತಿ, “ಗಾಂಧಿಯ ಮೆಟ್ಟುಗಳು,” “ಗಾಂಧಿ ಮತ್ತು ಎಂಟನೇ ಹೆನ್ರಿ,” ಇತ್ಯಾದಿ.
ಇನ್ನು ಎರಡು ವಾರಗಳೊಳಗೆ ದಯವಿಟ್ಟು, ನಿಮಗೆ ಗೊತ್ತಿರುವ ಕೃತಿಗಳನ್ನು (ಮುದ್ರಣ ವಿವರಗಳೊಡನೆ) ನನಗೆ ಈಮೇಲ್ ಮೂಲಕ ಕಳುಹಿಸಿ.
ವಂದನೆಗಳೊಡನೆ,
ರಾಮಚಂದ್ರನ್
ಈ ಮೇಲ್ ವಿಳಾಸ ಇಲ್ಲಿದೆ : cnrama@gmail.com
 

‍ಲೇಖಕರು G

28 April, 2014

12 Comments

  1. ಸತ್ಯನಾರಾಯಣ

    ಗಾಂಧೀಜಿ ದೆಸೆಯಿಂದ (ಸಣ್ಣಕಥೆ) – ತೇಜಸ್ವಿ
    ಮಹಾತ್ಮ ಗಾಂಧಿ (ಸಾನೆಟ್ _ ಕೃತ್ತಿಕೆ ಸಂಕಲನ) – ಕುವೆಂಪು
    ಮಹಾತ್ಮಗಾಂಧಿ (ಅಪ್ರಕಟಿತ ಕವಿತೆ) – ನೆನಪಿನ ದೋಣಿಯಲ್ಲಿ ಪ್ರಕಟವಾಗಿದೆ)- ಕುವೆಂಪು

  2. ವೀಣಾ

    ವ್ಯಾಸರಾಯ ಬಲ್ಲಾಳರ – ಹೆಜ್ಜೆ(ಕಾದಂಬರಿ)

  3. lalithasiddabasavaiah

    ಗಾಂಧಿಯವರ ಮರಣಸಂದರ್ಭದಲ್ಲಿ ತೀನಂಶ್ರೀ ಅವರು ನಂದಾದೀವಿಗೆ ಎನ್ನುವ ಬಹು ಸಾಂದ್ರವಾದ ಲೇಖನ ಬರೆದಿದ್ದಾರೆ.ಈ ಲೇಖನ ಅವರ “ನಂಟರು” ಪ್ರಬಂಧಸಂಕಲನದಲ್ಲಿದೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ತಂದಿರುವ “ತೀನಂಶ್ರೀ ಸಮಗ್ರ ಗದ್ಯ” ದ ಪುಟ ೬೭೮ರಲ್ಲಿಯೂ ಇದೆ.ಇದೇ ಪುಸ್ತಕದ ಪುಟ ೬೮೯ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ಗಾಂಧೀಯವರ ಬಗ್ಗೆ ಆಡಿದ ಮಾತೊಂದು ಉಲ್ಲೇಖಿತವಾಗಿದೆ.
    ಡಾ.ಜಿಎಸ್.ಶಿವರುದ್ರಪ್ಪನವರ ಸಮಗ್ರ ಕಾವ್ಯ ಸಂಪುಟದ ಆರನೆಯ ಭಾಗದಲ್ಲಿ(ಪುಟ ೩೫೮,೩೬೧) ಗಾಂಧಿ ಕುರಿತಾದ ಎರಡು ಪದ್ಯಗಳಿವೆ.ಇವೆರಡೂ ಅವರ “ಗೋಡೆ” ಕವನಸಂಕಲನದ ಕವನಗಳು.
    ಶ್ರೀಯುತ.ವಿ.ಸೀತಾರಾಮಯ್ಯನವರು ೧೯೫೮ರಲ್ಲಿ ತಂದ “ಹೆಜ್ಜೆಪಾಡು” ಕವನಸಂಕಲನದಲ್ಲಿ ಗಾಂಧಿಯವರ ಕುರಿತು ಎರಡು ಪದ್ಯಗಳಿವೆ. ಕೈ ಮುಗಿದ ಗಾಂಧಿ ಮತ್ತು
    ಬಾಳ ಹೆದ್ದಾರಿ ಎಂಬ ಶೀರ್ಷಿಕೆಯವು. ಎರಡೂ ಸುಂದರವಾದ ಪದ್ಯಗಳು.
    ಶ್ರೀಯುತ.ರಾಘವ(ವೀ.ಸೀತಾರಾಮಯ್ಯ)ಅವರು ೧೯೪೭ರಲ್ಲಿ ತಂದಿರುವ “ಅಶೋಕ ಚಕ್ರ” ಕವನ ಸಂಕಲನದಲ್ಲಿ ನೇರವಾಗಿ ಗಾಂಧಿಯವರೆ ವಸ್ತುವಾಗುಳ್ಳ ಎರಡು ಪದ್ಯಗಳಿವೆ. ಈ ಇಡೀ ಸಂಕಲನ ಸ್ವಾತಂತ್ರ್ಯ ಗಾಥೆಯ ಕುರಿತಾಗಿದ್ದು ಎಲ್ಲ ಕವನಗಳಲ್ಲು ಗಾಂಧಿಯವರ ಉಲ್ಲೇಖವಿದ್ದೆ ಇದೆ.
    ಪುತಿನ ಅವರ ಗಾಂಧಿ ಕುರಿತ ಪದ್ಯದ ಬಗ್ಗೆ ವಿವರ ಗೊತ್ತಿಲ್ಲ, ಆದರೆ ಅವರೊಂದು ಕವನ ಬರೆದಿದ್ದಾರೆಂಬ ನೆನಪಿದೆ. ಹಾಗೆಯೇ ಗೊರೂರು ಅವರ ಗದ್ಯಸಾಹಿತ್ಯದಲ್ಲಿ ಗಾಂಧಿಯೆ ಪ್ರಧಾನವಸ್ತು ಆಗಿರುವ ಲೇಖನಗಳಿವೆ(ಅನುವಾದ ಹೊರತಾಗಿ), ಆ ವಿವರ ಗೊರೂರರ ಸಮಗ್ರ ಗದ್ಯದಲ್ಲಿ ದೊರೆಯುತ್ತದೆಯೆಂದು ತೋರುತ್ತೆ.

  4. lalithasiddabasavaiah

    ಪುತಿನ ಅವರ “ರಸಸರಸ್ವತಿ ಮತ್ತು ಇತರೆ ಕವಿತೆಗಳು” ಹಾಗೂ “ಹೃದಯವಿಹಾರಿ” ಈ ಎರಡೂ ಸಂಕಲನಗಳಲ್ಲಿ ತಲಾ ಒಂದರಂತೆ ‘ಗಾಂಧಿ ಸ್ತವ’ ಎಂಬ ಒಂದೇ ಹೆಸರಿನ ಕವನಗಳಿವೆ. (ಅವರ ಸಮಗ್ರ ಕಾವ್ಯ ಪುಟ ೪೦೯) , ಇದು ಪುತಿನ ಟ್ರಸ್ಟ್ ಪ್ರಕಟನೆ .

  5. sindhu

    ಪಾಪು ಗಾಂಧಿ ಬಾಪು ಗಾಂಧಿ ಆದ ಕತೆ – ಬೊಳುವಾರು (ಮಕ್ಕಳ ಕತೆ)

  6. ಸತ್ಯನಾರಾಯಣ

    ಗಾಂಧೀಜಿ ಕುರಿತ ಕುವೆಂಪು ಅವರ ಇನ್ನಷ್ಟು ಬರಹಗಳು
    1. ದಿವಂಗತ ರಾಷ್ಟ್ರಪಿತ! – ಗಾಂಧೀಜಿ ನಿಧನದ ಮರುದಿನ ಸಂಜೆ ಮೈಸೂರು ಆಕಾಶವಾಣಿಯಲ್ಲಿ ಮಾಡಿದ ಪ್ರಸಾರಭಾಷಣ (31.1.1948) ಕುವೆಂಪು ಸಮಗ್ರ ಗದ್ಯ ಸಂಪುಟ – 1, ಪುಟ 328-330
    2. ಬಾಪೂಜಿಗೆ ಬಾಷ್ಪಾಂಜಲಿ – ಮಹಾತ್ಮಾಜಿಯವರ ಅಸ್ಥಿವಿಸರ್ಜನಾನಂತರ ಮೈಸೂರು ನಗರದಲ್ಲಿ ತಾ 12.2.1948ರಲ್ಲಿ ನಡೆದ ಪ್ರಚಂಡ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣ
    ಕುವೆಂಪು ಸಮಗ್ರ ಗದ್ಯ ಸಂಪುಟ – 1, ಪುಟ 331-336
    3. ಪೂರ್ಣದೃಷ್ಟಿಗೆ ಗಾಂಧೀಜಿ – ಗಾಂಧೀಜಿಯ ಜ್ನಮೋತ್ಸವ ಸಂದರ್ಭದಲ್ಲಿ 2.10.1948
    ಕುವೆಂಪು ಸಮಗ್ರ ಗದ್ಯ ಸಂಪುಟ – 1, ಪುಟ 337-344
    4. ಮಹಾತ್ಮ ಗಾಂಧಿ – ಅಂತಿಮ ಹಂತ (ಪ್ಯಾರೇಲಾಲ್, ಅನು ಶ್ರೀ ಸಂಕರಗೌಡ ಗಾಂಧಿಭವನ ಮೈಸೂರು ವಿವಿ, ಮೈಸೂರು ಈ ಪುಸ್ತಕಕ್ಕೆ ಬರೆದ ಮುನ್ನುಡಿ.
    ಕುವೆಂಪು ಸಮಗ್ರ ಗದ್ಯ ಸಂಪುಟ – 2, ಪುಟ 810-813
    5. ಗಾಂಧಿಜಿಯವರು ಅಮರಣಾಂತ ಉಪವಾಸ ಆರಂಬಿಸಿದ ದಿನ (20.9.1932) ಬರೆದ ದಿನಚರಿಯ ಪುಟಗಳು. ನೆನಪಿನ ದೋಣಿಯಲ್ಲಿ ಪುಟ 977-78 ಮತ್ತು 1008-09
    6. ಗಾಂಧೀಜಿ ಕರೆಗೆ ಓಗಟ್ಟು ವಿದೇಶಿ ವಸ್ತ್ರ ದಹನ ಮಾಡಿದ ಪ್ರಸಂಗ – ನೆನಪಿನ ದೋಣಿಯಲ್ಲಿ ಪುಟಗಳು 169-173
    7. ಬೆಳಗಾವಿ ಅದಿವೇಷನದಲ್ಲಿ ಗಾಂಧಿಜಿಯವರನ್ನು ಕಂಡದ್ದು
    ನೆನಪಿನ ದೋಣಿಯಲ್ಲಿ ಪುಟಗಳು 452-457

  7. ಸತ್ಯನಾರಾಯಣ

    ಗಾಂಧಿಜಿ ಕುರಿತ ಬೇಂದ್ರೆಯವರ ಪದ್ಯಗಳು
    1. ಶೂನ್ಯ – ಔದುಂಬರಗಾಥೆ ಸಂ. 1, ಪುಟ 410
    2. ಬಾಪೂಜಿ-ಪೂಜಿ – ಔದುಂಬರಗಾಥೆ ಸಂ. 1, ಪುಟ 411
    3. ಗಾಂಧೀವಾದಿ – ಔದುಂಬರಗಾಥೆ ಸಂ. 1, ಪುಟ 412
    4. ಕೇಳಿರೊಂದು ಸೋಜಿಗ – ಔದುಂಬರಗಾಥೆ ಸಂ. 1, ಪುಟ 414
    5. ಶ್ರದ್ಧಾಂಜಲಿ – ಔದುಂಬರಗಾಥೆ ಸಂ. 1, ಪುಟ 419
    6. ಅಮರ ಮರಣ – ಔದುಂಬರಗಾಥೆ ಸಂ. 1, ಪುಟ 420
    7. ಜಯಜಯಾ ಗಾಂಧಿ ಮೋಹನಾ – ಔದುಂಬರಗಾಥೆ, ಸಂಪುಟ 1 ಪುಟ 423
    8. ದರಿದ್ರನಾರಾಯಣ – ಔದುಂಬರಗಾಥೆ ಸಂ. 1, ಪುಟ 428
    9. ಶಕಪುರುಷನ ಶತಮಾನ – ಔದುಂಬರಗಾಥೆ ಸಂ. 1, ಪುಟ 432
    10. ಪೂತಾತ್ಮ – ಹೂತಾತ್ಮ ಹುತಾತ್ಮ-ಮಹಾತ್ಮ – ಔದುಂಬರಗಾಥೆ ಸಂ. 1, ಪುಟ 437
    11. ಗಾಂಧಿ-ಸತ್ಯ – ಔದುಂಬರಗಾಥೆ ಸಂ. 1, ಪುಟ 441
    12. ಧ್ರುವತಾರೆ – ಔದುಂಬರಗಾಥೆ ಸಂ. 1, ಪುಟ 443
    13. ಮಹಾತ್ಮಾ – ಔದುಂಬರಗಾಥೆ ಸಂ. 1, ಪುಟ 444
    14. ವೃದ್ಧಗಾಂಧಿ – ಔದುಂಬರಗಾಥೆ ಸಂ. 1, ಪುಟ 449
    15. ಜಯಂತಿ – ಔದುಂಬರಗಾಥೆ ಸಂ. 1, ಪುಟ 451
    16. ಮರಣ? – ಔದುಂಬರಗಾಥೆ ಸಂ. 1, ಪುಟ 453
    17. ‘ಬಾ’ – ಔದುಂಬರಗಾಥೆ ಸಂ. 1, ಪುಟ 454
    18. ಗಾಂಧಿ ಭಸ್ಮ – ಔದುಂಬರಗಾಥೆ ಸಂ. 1, ಪುಟ 455

  8. ವೀರಣ್ಣ

    ವಿಕ್ರಾಂತ ಕರ್ನಾಟಕ ಪತ್ರಿಕೆ ಕೆಲವು ವರ್ಷ ನಡೆಸಿದ ಗಾಂಧಿ ಸೃತಿ ಕಥಾ ಸ್ಪರ್ಧೆಯ ೆಎಲ್ಲ ಕಥೆಗಳನ್ನು ಗಮನಿಸಿ.

  9. gundanna chickmagalur

    Boluvar avara Papu Gandhi Baapu Gandhi aada bage.

  10. Anonymous

    govinda pai yavar sonnet inninisu nee mahatma badukabekithu
    pu.ti.na. avara kavana neralu, kayyarara kavana gandhidarshana, gopalakrishna adigara gandhi:1985 emba kavana-

  11. laxminarasimha

    ಮಾನ್ಯ ಸಿ ಎನ್ ಆರ್ ಅವರಿಗೆ, ವಂದನೆಗಳು.
    “ಅವಧಿ”ಯಲ್ಲಿ “ಗಾಂಧೀ ಯೋಜನೆ” ಕುರಿತ ತಮ್ಮ ಅರಿಕೆ ನೋಡಿದೆ: ತಕ್ಷಣ ನೆನಪಾದದ್ದು , ಚಂದ್ರಶೇಖರ ಪಾಟೀಲರ ಸಂಪಾದಕತ್ವದಲ್ಲಿ emergency ಆಸುಪಾಸಿನಲ್ಲಿ ಬಂದ “ಗಾಂಧೀ….” ಕವನ ಸಂಕಲನ.
    ವಂದನೆಗಳೊಂದಿಗೆ,
    ಕೆ ಲಕ್ಷ್ಮೀನರಸಿಂಹ

  12. prathibha nandakumar

    ಗಾಂಧಿ ಬಗ್ಗೆ ಕವನಗಳು – ವಿವಿಧ ಕವಿಗಳು ಬರೆದ ಗಾಂಧಿ ಕವನಗಳು – ಸಾಹಿತ್ಯ ಪರಿಷತ್ ಪ್ರಕಟಣೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading