ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತಿಗಳಿಗಾಗಿ ವಿಶಿಷ್ಟ ‘ಕೆಫೆ’


ಇದೊಂದು ವಿಶೇಷವಾದ ಕೆಫೆಯಾಗಿದೆ. ಇಲ್ಲಿ ಕಲೆ, ಸಾಹಿತ್ಯ ಮತ್ತು ಸಂಗೀತಪ್ರೇಮಿಗಳಿಗಾಗಿ ವೇದಿಕೆಯನ್ನು ಸೃಷ್ಟಿಸಲಾಗಿದೆ. ನಾಡಿನ ಕಲಾವಿದರಿಗೆ, ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಲಾಪ್ರದರ್ಶನಕ್ಕೆ ಈ ವೇದಿಕೆಯು ಉಚಿತವಾಗಿ ಲಭ್ಯವಾಗಲಿದೆ. ಸಾಹಿತ್ಯ, ಕಾವ್ಯ ವಲಯದ ಬಳಗವು ಕೂಡ ಇಲ್ಲಿ ತಮ್ಮ ಸಾಹಿತ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಈ ಮೂಲಕ ನಾಡಿನ ಕಲೆ ಮತ್ತು ಸಾಂಸ್ಕೃತಿಕ ವಲಯದ ಸಮಾನಮನಸ್ಕರ ಚರ್ಚೆಗಳಿಗೂ ಇದು ವೇದಿಕೆಯಾಗಲಿದೆ.

ಸೃಜನಾತ್ಮಕ ಚಟುವಟಿಕೆ ಉತ್ತೇಜಿಸುವ ವಿನ್ಯಾಸ:

ವಿಶಿಷ್ಟ ವಿನ್ಯಾಸದ ಕಟ್ಟಡವು ಸೃಜನಾತ್ಮಕ ಚಟುವಟಿಕೆಗೆ ಪೂರಕವಾಗಿದೆ. ಅತ್ಯಂತ ರುಚಿಕರವಾದ ಕಾಫಿಯೊಂದಿಗೆ ಸಾಹಿತ್ಯ, ಸಾಂಸ್ಕೃತಿಕ ವಲಯವನ್ನು ಬೆಸೆಯಲು ಕಾಫಿ ಸಿಟಿ ಶ್ರಮಿಸಲಿದೆ. ಎಲ್ಲಾ ರೀತಿಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ಸೌಲಭ್ಯ ಈ ಕೆಫೆಯಲ್ಲಿದೆ.

ಸಾಧಾರಣ ದರಪಟ್ಟಿ:
ಅತ್ಯಂತ ಸಾಧಾರಣ ದರಪಟ್ಟಿಯೊಂದಿಗೆ ಎಲ್ಲ ವರ್ಗದ ಜನರಿಗೆ ಕೈಗೆಟುಕುವಂತೆ ದರಗಳನ್ನು ನಿಗದಿಪಡಿಸಲಾಗಿದೆ ಎಂದು ಕಾಫಿ ಸಿಟಿಯ ಪಾಲುದಾರರಾದ ಆಶಾ, ಶ್ವೇತ ಮತ್ತು ಶಿಲ್ಪಶ್ರೀ ಅವರು ತಿಳಿಸಿದರು. ಹಿರಿಯ ಪತ್ರಕರ್ತ ಶ್ರೀ ಚಿನ್ನಸ್ವಾಮಿ ವಡ್ಡಗೆರೆ ಅವರು ಕಾಫಿ ಸಿಟಿಯ ಲೋಗೋ ಬಿಡುಗಡೆ ಮಾಡಿದರು.   

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ – 7022709561

೨೦ಕ್ಕೆ “ಕಾಫಿ ಸಿಟಿ” ಕೆಫೆಯ ಉದ್ಘಾಟನೆ

ಮೈಸೂರು ನಗರದ ವಿಜಯನಗರ ಎರಡನೇ ಹಂತ ವಾಟರ್‌ ಟ್ಯಾಂಕ್‌ ಸರ್ಕಲ್‌ ಹತ್ತಿರ ಇರುವ ಅಂಬರೀಶ್‌ ರಸ್ತೆಯಲ್ಲಿ ನೂತನವಾಗಿ ಆರಂಭವಾಗಲಿರುವ “ಕಾಫಿ ಸಿಟಿ” ಕೆಫೆಯ ಉದ್ಘಾಟನೆಯನ್ನು ಈ ತಿಂಗಳ 20 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಶ್ರೀ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ನಗರಪಾಲಿಕೆ ಸದಸ್ಯರಾದ ಶ್ರೀಎಂ.ಯು. ಸುಬ್ಬಯ್ಯ ಹಾಗೂ ಶ್ರೀಮತಿ ಪ್ರೇಮ ಶಂಕರೇಗೌಡ ಅವರು ಉಪಸ್ಥಿತರಿರುವರು.

ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಎನ್ ಆರ್ ವಿಶುಕುಮಾರ್ ಹಾಗೂ ಸಾಹಿತಿ ಶ್ರೀಮತಿ ಸುಜಾತ ಎಚ್.ಆರ್. ಅವರು ಭಾಗವಹಿಸಲಿರುವರು




‍ಲೇಖಕರು avadhi

18 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading