ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾರ್ವಜನಿಕ ಲಜ್ಜೆಯೆಂಬುದೇ ಇಲ್ಲವಾಗಿದೆ..

ಪುರುಷೋತ್ತಮ ಬಿಳಿಮಲೆ

ನಾನು 20ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿ, 21ನೇ ಶತಮಾನದ ಮೊದಲ ಭಾಗದಲ್ಲಿ ಬದುಕುತ್ತಿರುವವನು. ಸ್ವಾತಂತ್ರ್ಯ ಸಿಕ್ಕ ಭಾರತವು ತನ್ನನ್ನು ಪ್ರವರ್ಧಮಾನಗೊಳಿಸಿಕೊಳ್ಳುವ ಹಠದ ಹಲವು ಪ್ರಕ್ರಿಯೆಗಳಿಗೆ ಸಾಕ್ಷಿಯಾದವನು. ಎರಡು ಮಹಾಯುದ್ಧಗಳಿಂದ ಜರ್ಝರಿತವಾದ ಜಗತ್ತು ಮತ್ತೆ ತನ್ನನ್ನು ಮರುರೂಪಿಸಿಕೊಳ್ಳುವ ಬಗೆಯನ್ನು ಕುತೂಹಲದಿಂದ ಕಂಡವನು.

ಕುವೆಂಪು, ಮಾಸ್ತಿ, ಕಾರಂತ, ಅಡಿಗ, ರಾಮಾನುಜನ್, ತಿರುಮಲೇಶ, ಸಿದ್ದಲಿಂಗಯ್ಯ, ದೇವನೂರು, ಭೀಮಸೇನ ಜೋಷಿ, ಗಂಗೂ ಬಾಯಿ ಹಾನಗಲ್, ಕೆ ಕೆ ಹೆಬ್ಬಾರ, ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ದೇವರಾಜ ಅರಸ. ನಿಜಲಿಂಗಪ್ಪ, ಬೊಳಿಯ ಅಜಿಲ, ಮೋಂಟ ಮೇರ, ಎಲಿಯೆಟ್, ಕಾಫ್ಕಾ, ಕಮೂ, ಅಪ್ಪ, ಅಮ್ಮ ಮೊದಲಾದವರ ಮೂಲಕ ನನ್ನದೇ ಪುಟ್ಟ ಜಗತ್ತನ್ನು ಕಂಡರಿತುಕೊಂಡವನು.

ಅದು ನಾಗರಿಕತೆಯೊಂದರ ವಿಕಸನದ ಹಂತವಾಗಿರಬೇಕೆಂದು ಈಗ ಭಾಸವಾಗುತ್ತಿದೆ. ಆ ಬದುಕಿಗೆ ಒಂದು ಬಗೆಯ ಗ್ರೇಸ್ ಇತ್ತು, ಏಕೆಂದರೆ ಅದು ಜಗತ್ತನ್ನು ಕಟ್ಟುವ ಕಾಲವಾಗಿತ್ತು.

ಆದರೆ ಈ ಶತಮಾನವು ನಾಗರಿಕತೆಯ ಕುಸಿತಕ್ಕೆ ಸಾಕ್ಷಿಯಾದಂತೆ ತೋರುತ್ತದೆ. ನಮ್ಮ ನಡುವಿನ ಜನರ ಮಾತಿನಲ್ಲಿ ಈಗ ಗ್ರೇಸ್ ಇಲ್ಲ. ಅಧಿಕಾರ ರಾಜಕಾರಣ ಅಮಾನುಷವಾಗಿದೆ. ಭಾಷೆ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಸಾರ್ವಜನಿಕ ಲಜ್ಜೆಯೆಂಬುದೇ ಇಲ್ಲವಾಗಿದೆ.

ನಾಗರಿಕತೆಯ ವಿವಿಧ ಹಂತದಲ್ಲಿ ಇದು ಒಂದು ಗತಿಯೇ ಹೌದಾದರೂ ಇದಕ್ಕೆ ನಾವು ಸಾಕ್ಷಿಗಳಾಗಬೇಕಾಯಿತಲ್ಲ!

‍ಲೇಖಕರು Avadhi GK

28 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading