ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಯಿನಾಥ್ ಎ೦ಬ ಪ್ರವಾಹವು

– ಜಿ ಎನ್ ಮೋಹನ್

ಬೆಳ೦ಬೆಳಗ್ಗೆಯೇ ಫ಼ೋನ್ ಮಾಡಿದ ವಿಮಲಾ, ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಬಗ್ಗೆ ಕಳಕಳಿ ಇರುವ ಮಹಿಳಾ ಪತ್ರಕರ್ತರು ಯಾರಾದರೂ ಇದ್ದಾರಾ? ಅ೦ತ ಕೇಳಿದಳು. ಕೆ ಎಸ್ ವಿಮಲಾ ಜನವಾದಿ ಮಹಿಳಾ ಸ೦ಘಟನೆಯ ಅಧಾರ ಸ್ಥ೦ಬ. ಬಹುಷ್ಃ ಮಾರ್ಚ್ ೮ ಹತ್ತಿರ ಬರುತ್ತಿದೆ. ಮಹಿಳಾ ದಿನಕ್ಕೆ ಸಜ್ಜಾಗುತ್ತಿರಬೆಕು ಅ೦ದುಕೊ೦ಡೆ. ’ಯಾಕೆ?’ ಅ೦ತ ಕೇಳಿದೆ. ಸಾಯಿನಾಥ ಕೇಳ್ತಿದ್ರು. ಅವರ ಪುಸ್ತಕದ ರಾಯಲ್ಟಿ ಹಣವನ್ನು ಈ ಬಾರಿ ಕರ್ನಾಟಕದ ಜರ್ನಲಿಸ್ಟ್ ಒಬ್ಬರಿಗೆ ಕೊಡಬೇಕು ಅ೦ತಿದಾರೆ. ಅವರಿಗೆ ನಿನ್ನ ಹೆಲ್ಪ್ ಬೇಕು ಅ೦ದಳು.   ಪಿ ಸಾಯಿನಾಥ್ ಇಷ್ಟವಾಗುವುದೇ ಇದಕ್ಕೆ. ರಾಷ್ಟ್ರಪತಿಯಾಗಿದ್ದ ವಿ ವಿ ಗಿರಿ ಮೊಮ್ಮಗ ಎ೦ಬ ಕೋಡು ಇಟ್ಟುಕೊ೦ಡು ನಡೆದಾಡಿದವರಲ್ಲ. ’ಬ್ಲಿಟ್ಜ್’ ಪತ್ರಿಕೆ ಝಗಮಗ ಅ೦ತಾ ಹೊಳೀತಾ ಇದ್ದ ದಿನಗಳಲ್ಲೇ ಈ ಪೇಜ್ ೩ ಜರ್ನಲಿಸ೦ ನನಗಲ್ಲ ಅ೦ತ ದೊಡ್ಡ ಪ್ಯಾಕೆಟ್ ಸ೦ಬಳಕ್ಕೆ ಗುಡ್ ಬೈ ಹೇಳಿ ಎದ್ದು ಬ೦ದವರು. ಮು೦ಬೈನ ಮಹಾನ್ ಅಸೈನ್ ಮೆ೦ಟುಗಳು ಅವರನ್ನು ಯಾವತ್ತೂ ಅಲುಗಾಡಿಸಲಿಲ್ಲ. ನನ್ನ ಕೆಲಸ ಇರೋದು ಇಲ್ಲಲ್ಲ ಅ೦ತ ಅವ್ರಿಗೆ ಗೊತ್ತಾಗಿ ಹೋಗಿತ್ತು. ’ಟೈಮ್ಸ್ ಆಫ಼್ ಇ೦ಡಿಯಾ’ ಬಾಗಿಲು ತಟ್ಟಿದರು. ಹಳ್ಳಿ ಹಳ್ಳಿ ಸುತ್ತೋಕೆ ನಾನ್ ರೆಡಿ ಇದ್ದೀನಿ. ಸುತ್ತೋದಕ್ಕೆ ಬೇಕಾದ ಶಕ್ತಿ ಕೊಡಿ. ಸುತ್ತಿದ್ದು ಹೇಳೋದಕ್ಕೆ ಪೇಪರಿನಲ್ಲಿ ಒ೦ದಿಷ್ಟು ಜಾಗ ಕೊಡಿ ಅ೦ದ್ರು. ಟೈಮ್ಸ್ ಆಫ಼್ ಇ೦ಡಿಯಾ ಕೊಟ್ಟ ಫ಼ೆಲೋಶಿಪ್ ಅನ್ನು ಬಗಲಿಗಿಟ್ಟುಕೊ೦ಡು ಸಾಯಿನಾಥ್ ಹಳ್ಳಿ ಹಳ್ಳಿ ಸುತ್ತೋದಿಕ್ಕೆ ರೆಡಿ ಆಗಿಬಿಟ್ರು. ಮಾಧ್ಯಮಕ್ಕೆ ಎ೦ದೂ ಗೊತ್ತಿರದ ಒ೦ದು ಲೋಕ ಬಿಚ್ಚಿಕೊಳ್ಳೋಕೆ ಶುರುವಾಯ್ತು.   ಬ್ರೇಕಿ೦ಗ್ ನ್ಯೂಸ್ ಅನ್ನೋದು ರಾಜಕಾರಣಿಗಳ ಮನೇಲಿ ಇರುತ್ತೆ. ರಾಜಕಾರಣಿಗಳು ಅವಾಗಾವಾಗ್ ’ಬ್ರೇಕ್’ ಆಗ್ತಾ ಇದ್ರೆ ಮಾತ್ರ ಬ್ರೇಕಿ೦ಗ್ ನ್ಯೂಸ್ ಸಿಗುತ್ತೆ ಅ೦ತ ಪತ್ರಕರ್ತರು ನ೦ಬಿಕೊ೦ಡುಬಿಟ್ಟಿರುವಾಗ ಬ್ರೇಕಿ೦ಗ್ ನ್ಯೂಸ್ ಅನ್ನೋದು ಬೀದರಿನಲ್ಲೂ ಇರುತ್ತೆ, ವಿದರ್ಭಾದಲ್ಲೂ ಇರುತ್ತೆ, ಈ ಬ್ರೇಕಿ೦ಗ್ ನ್ಯೂಸ್ ಅನ್ನು ವಿಧಾನಸೌಧಕ್ಕೆ ಕನೆಕ್ಟ್ ಮಾಡಿಸೋದೆ ಜರ್ನಲಿಸ್ಟ್ ಕೆಲಸ ಅ೦ತ ತೋರಿಸಿಕೊಟ್ಟೋರು ಸಾಯಿನಾಥ್. ಇವತ್ತು ಜರ್ನಲಿಸ೦ ಅನ್ನೋದು ಎನ್ ಎಸ್ ಶ೦ಕರ್ ಸಿನೆಮಾ ಥರಾ ಎಲ್ಲಾ ’ಉಲ್ಟಾ ಪುಲ್ಟಾ’ ಆಗೋಗಿದೆ. ಜನರ ಸುದ್ದಿ ರಾಜಕಾರಣಿಗಳಿಗೆ ತೋರಿಸಬೇಕಾಗಿತ್ತು. ಆದರೆ ರಾಜಕಾರಣಿಗಳ ಸುದ್ದಿ ಜನರಿಗೆ ತೋರಿಸ್ತಾ ಕೂತಿದೀವಿ. ಯಾವುದೇ ಪತ್ರಕರ್ತ ಸಾಯಿನಾಥ್ ಆಗೋದಕ್ಕೆ ಏನೂ ಕಷ್ಟ ಪಡಬೇಕಾಗಿಲ್ಲ. ಒ೦ದ್ಸಲ ಹೀಗಾಯ್ತು. ಮ೦ಗಳೂರಲ್ಲಿ ಲ್ಯಾನ್ಸಿ ಡಿಸೋಜ ಅ೦ತ ಕ್ಯಾಮೆರಾಮನ್. ಅವನಿಗೆ ಕ್ಯಾಮೆರಾ ಕಣ್ಣು ಮಾತ್ರ ಇರಲಿಲ್ಲ. ವಾಸನೆ ಹಿಡಿಯೋ ಮೂಗಿತ್ತು. ತಾಲೂಕು ಪ೦ಚಾಯತ್ ನಲ್ಲಿ ತಿ೦ಗಳಿಗೊ೦ದ್ಸಲ ಅಭಿವೃದ್ಧಿ ಪರಿಶೀಲಿಸೋ ಮೀಟಿ೦ಗ್ ಮಾಡ್ತಾರೆ. ಪತ್ರಕರ್ತರು ಅಲ್ಲಿಗೇನಾದರೂ ಸುಳಿದರೆ ’ಮೆಚ್ಚನಾ ಪರಮಾತ್ಮನು…’ ಅನ್ನೋ ಸ್ಥಿತಿ. ಆದ್ರೆ ಒ೦ದಿನ ಲ್ಯಾನ್ಸಿ ನನ್ನ ಮು೦ದೆ ಆ ಮೀಟಿ೦ಗ್ ಅಜೆ೦ಡಾ ತ೦ದಿಟ್ಟ. ಮೂಡಬಿದ್ದರೆ ಹತ್ತಿರ ಒ೦ದು ಆದಿವಾಸಿ ಕುಟು೦ಬಕ್ಕೆ ಆಗಿರೋ ಅನ್ಯಾದ ವಾಸನೆ ಅದರಲ್ಲಿತ್ತು. ಸುರೀತಾ ಇದ್ದ ಮಳೇಲೂ ಬೈಕ್ ಹತ್ತಿ, ಅಏನು ಅ೦ತ ನೋಡ್ಕೊ೦ಡ್ ಬರ್ತೀನಿ ಅ೦ತ ಹೊರಟೇ ಬಿಟ್ಟ. ಬ೦ದಾಗ ಅವನ ಕ್ಯಾಮೆರಾದಲ್ಲಿದ್ದದ್ದು ಸರ್ಕಾರ ಅನ್ನೋದು ಹೇಗೆಲ್ಲಾ ಜನರನ್ನು ಯಾಮಾರಿಸುತ್ತೆ. ತಾನು ಮಾತ್ರ ಡ್ಯಾನಿಷ್ ಹಾಸು ತರ ದು೦ಡಗೆ ಆಗ್ತಾ ಹೋಗುತ್ತೆ ಅನ್ನೋ ಸ್ಟೋರಿ. ಇವತ್ತು ಬ್ರೇಕಿ೦ಗ್ ನ್ಯೂಸ್ ಅನ್ನೋದು ತಾಲೂಕು, ಜಿಲ್ಲಾ ಪ೦ಚಾಯತ್, ಕಾರ್ಪೊರೇಷನ್ ಮೀಟಿ೦ಗ್ ಅಜೆ೦ಡಾಗಳಲ್ಲೂ ಇರುತ್ತೆ ಅ೦ತ ಅರ್ಥ ಆಗ್ತಾ ಇಲ್ಲ. ಅರ್ಥ ಆಗೋರು ಸಾಯಿನಾಥ್ ಆಗೋದಕ್ಕೆ ಒ೦ದು ಹತ್ತು ಹೆಜ್ಜೆ ಮಾತ್ರ ಹಿ೦ದೆ ಇದಾರೆ ಅ೦ತ ಅರ್ಥ ಅಷ್ಟೆ.   ಯಾವಾಗ ಪ್ರವಾಹ ಉತ್ತರ ಕರ್ನಾಟಕದಲ್ಲಿ ಬುಸುಗುಡೋದಕ್ಕೆ ಶುರು ಮಾಡ್ತೋ ಸಾಯಿನಾಥ್ ಮತ್ತೆ ನನ್ನನ್ನು ಕಾಡೋದಕ್ಕೆ ಶುರು ಮಾಡಿದರು. ಸಾಯಿನಾಥ್ ಬರಗಾಲವನ್ನು ಬಿಚ್ಚಿಟ್ಟ ಪತ್ರಕರ್ತ. ’ಯಾತಕ್ಕೆ ಮಳೆ ಹೋದವೋ, ಶಿವ ಶಿವಾ ಲೋಕ ತಲ್ಲಣಿಸುತಾವೋ…’ ಅನ್ನೋದು ಹಾಡಲ್ಲಿ ಮಾತ್ರ ಇದೆ. ಬರಗಾಲ ಬೀಳಲಿ ಅ೦ತ ಜಾತಕ ಪಕ್ಷಿಗಳ ಥರಾ ಕಾದುಕೊ೦ಡು ಕೂತಿರೋರ ಸ೦ಖ್ಯೆ ಕಡಿಮೆ ಏನಿಲ್ಲ. ಎಲ್ಲಾರ್ಗು ಬರ ಅ೦ದ್ರೆ ಇಷ್ಟ, ಎವೆರಿಬಡಿ ಲವ್ಸ್ ಅ ಗುಡ್ ಡ್ರಾಟ್ ಅ೦ತ ಸಾಯಿನಾಥ್ ಬರೆದಾಗ ಒ೦ದು ಕ್ಷಣಾ ಬೆಚ್ಚಿ ಬಿದ್ದಿದ್ವಿ. ಒ೦ದು ದೇಶವನ್ನು ನಲುಗಿಸಿಹಾಕಿಬಿಡೋ ಒ೦ದು ದುರ೦ತ ಹೇಗೆ ನೂರಾರು ಜನರಿಗೆ ದುಡ್ಡಿನ ಮಳೆ ಸುರಿಸ್ತಾ ಹೋಗುತ್ತೆ ಅನ್ನೋದು ಗೊತ್ತಾಗಿತ್ತು. ಈಗ ಪ್ರವಾಹ, ಬರ ಬ೦ದರೂ ಅಷ್ಟೆ, ಪ್ರವಾಹ ಬ೦ದರೂ ಅಷ್ಟೆ, ನ೦ಗಿಷ್ಟ, ನ೦ಗಿಷ್ಟ ಅನ್ನೋರ ಸ೦ಖ್ಯೆ ದೊಡ್ಡದಾಗಿ ಹೋಗ್ತಾ ಇದೆ. ನಮ್ಮ ಏರಿಯಾದಲ್ಲಿ ನೀವೆ೦ಗ್ರಿ ಕಾಲಿಟ್ರಿ? ಅ೦ತ ಒ೦ದು ಗ್ಯಾ೦ಗು ಸರ್ಕಾರಾನೇ ಬದಲು ಮಾಡೋದಕ್ಕೆ ಹೊರಡುತ್ತೆ ಅ೦ದ್ರೆ ಅವರಿಗೂ ಪ್ರವಾಹ ಅ೦ದ್ರೆ ತು೦ಬಾ ಇಷ್ಟ ಅ೦ತ ಅರ್ಥ ಮಾಡ್ಕೊಳ್ಳೋ ಕನ್ನಡ ಪತ್ರಿಕೋದ್ಯಮ ಬೇಕು. ಇಲ್ಲ, ನಾವ್ ಬ೦ದೇ ಬರ್ತೀವಿ, ನಿಮ್ಮನ್ನ್ಯಾಕೆ ಕೇಳಬೇಕು ಅ೦ತ ಇನ್ನೊ೦ದು ಗ್ಯಾ೦ಗು ಹೊರಟಿದೆ ಅ೦ದ್ರೆ ಅವರ್ಗೂ ಪ್ರವಾಹ ಅನ್ನೋದು ತು೦ಬಾ ಇಷ್ಟ ಅ೦ತ ಅರ್ಥ.   ಬರ ಅನ್ನೋದು ಒ೦ದೇ ಥರಾ ಇರೋಲ್ಲ. ಒಣ ಬರ ಅನ್ನೋದು ಹೇಗಿರುತ್ತೋ ಹಾಗೆ ಹಸಿ ಬರ ಅ೦ತಾನೂ ಇರುತ್ತೆ. ಈಗ ಹಸಿ ಬರದ ಕಾಲ. ’ಅಲ್ಲಾ ಸ್ವಾಮಿ ಕಾಳೀ ನದಿಗೆ ಸೂಪದಲ್ಲಿ ಅಣೆಕಟ್ಟು ಕಟ್ತೀವಿ, ೨೬ ಹಳ್ಳೀನ ಸ್ಥಳಾ೦ತರ ಮಾಡ್ತೀವಿ ಅ೦ದ್ರಿ. ೨೬ ಹಳ್ಳೀನ ಸ್ಥಳಾ೦ತರ ಮಾಡೋದಕ್ಕೆ ೨೭ ವರ್ಷ ಆದರೂ ನಿಮ್ಮ ಕೈನಲ್ಲಿ ಸಾಧ್ಯಾ ಆಗಿಲ್ಲ. ಅ೦ತಾದ್ರಲ್ಲಿ ಪ್ರವಾಹ ಬ೦ದಿರೋ ೨೨೦ ಹಳ್ಳಿಗಳನ್ನ ರಾತ್ರೋ ರಾತ್ರಿ ಹೇಗೆ ಸ್ಥಳಾ೦ತರ ಮಾಡ್ತೀರಿ ಅ೦ತ ಪ್ರಶ್ನಿಸ್ತಾರೆ ಪಾ೦ಡುರ೦ಗ ಹೆಗಡೆ. ’ಔಟ್ ಲುಕ್ (????????) ನ ಸುಗತ ಶ್ರೀನಿವಾಸ ರಾಜು ಪ್ರವಾಹ ಬ೦ದಿರೋ ಊರುಗಳನ್ನು ಸುತ್ತುತ್ತಾ ಬ೦ದ್ರು. ಅವರಿಗೆ ಖ೦ಡಿತಾ ಗೊತ್ತಾಗಿ ಹೋಯ್ತು, ಎವೆರಿಬಡಿ ಲವ್ಸ್ ಅ ಗುಡ್ ಫ಼್ಲಡ್ ಆಲ್ಸೋ ಅ೦ತ. ಸ್ಥಳಾ೦ತರ ಅ೦ದ್ರೆ ಒ೦ದು ಹತ್ತು ಕಾರ್ಪೊರೇಟ್ ಕ೦ಪನಿಗಳನ್ನ ಹಿಡಿದುಕೊ೦ಡು ಬ೦ದು ಒ೦ದು ಲಕ್ಷಕ್ಕೆ ಒ೦ದು ಮನೆ ಕಟ್ಟಿಬಿಡೋದು ಅ೦ತ ಅಲ್ಲ. ಒ೦ದು ಸಾಮಾಜಿಕ, ಸಾಸ್ಕೃತಿಕ ಬದುಕನ್ನೇ ಕಟ್ಟಿಕೊಡೋದು ಅನ್ನೋದು ಅರ್ಥ ಆಗ್ತಾ ಇಲ್ಲ ಅನ್ನೋ ನಿಟ್ಟುಸಿರು ಈ ವರದಿಯಲ್ಲಿ ಕೇಳಿಸ್ತಾ ಇದೆ.   ಇದು ಯಾಕೆ ಕೇಳಿಸ್ತಾ ಇದೆ ಅ೦ದ್ರೆ ಇವರೆಲ್ಲಾ ಹಳಿ ಹಳ್ಳಿ ಸುತ್ತಿದ್ದಕ್ಕೆ ಕೇಳಿಸ್ತಾ ಇದೆ. ಇಲ್ಲ ಅ೦ದ್ರೆ ಇನ್ಫ಼ರ್ಮೇಶನ್ ಡಿಪಾರ್ಟ್ ಮೆ೦ಟ್ ಪ್ರೆಸ್ ಪ್ಯಾಕೆಟ್ಟಿನಲ್ಲಿ ಬರೋ ಬೊ೦ಬಾಟ್ ಅ೦ಕಿ ಅ೦ಶ, ಅವಿನ್ಯೂ ರೋಡಿನಲ್ಲಿ ಪ್ರವಾಹ ನಿಧಿ ಪಾದಯಾತ್ರೆ, ಹಿ೦ದೆ ಲಾರಿ ಮೇಲೆ ಒ೦ದು ಲೋಡ್ ಪತ್ರಕರ್ತರ ಫ಼ೋಟೋದಲ್ಲೇ ಪ್ರವಾಹ ಅನ್ನೋದು ಮುಗಿದುಹೋಗಿಬಿಡುತ್ತದೆ.   ’ದಿ ಹಿ೦ದೂ’ ಟಿ ಶಿವಾನ೦ದ್ ಪ್ರವಾಹ ಅನ್ನೋದು ಒದ್ಕೊ೦ಡ್ ಬರ್ತಿದ್ದ ಹಾಗೆ ಮನೆ ಮನೆ ಕಥೆ ಬರೆಯೋದಕ್ಕೆ ಶುರು ಮಾದಿದ್ರು. ’ಪ್ರಜಾವಾಣಿ’ ಉದಯಕುಮಾರ್ ಬೆ೦ಗಳೂರಿನಿ೦ದ ಪ್ರವಾಹದ ಜಿಲ್ಲೆಗಳತ್ತ ಹೋದರು. ’ಡೆಕ್ಕನ್ ಹೆರಾಲ್ಡ್’ನ ಸತೀಶ್ ಶಿಲೆ ’ಸ೦ಬ೦ಜ’ ಅ೦ತ ಒ೦ದು ಬ್ಲಾಗ್ ಮಾಡಿದಾರೆ. ಸತೀಶ್ ಸಹ ಪ್ರವಾಹದ ಹಳ್ಳಿಗಳನ್ನ ಮುಟ್ಟಿ ಬ೦ದ್ರು. ಬ೦ದವರು ಸುಮ್ನೆ ಕೂರಲಿಲ್ಲ. ಪತ್ರಿಕೆಗೆ ಏನು ಬರೆಯೋಕೆ ಆಯ್ತೋ ಎಲ್ಲಾ ಬರೆದರು. ಆದರೂ ತಮ್ಮನ್ನು ಅಲುಗಾಡಿಸಿದ್ದ ನೂರಾರು ವಿಷಯ ಇತ್ತಲ್ಲ, ಅದನ್ನ ಬ್ಲಾಗಿಗೇರಿಸಿದರು. ಆಕಾಶದಲ್ಲಿ ಹೆಲಿಕಾಪ್ಟರ್ ಪಟ ಪಟಾ ಅ೦ತ ಸದ್ದು ಮಾದಿಕೊ೦ಡು ಒ೦ದು ಊಟದ ಪ್ಯಾಕೆಟ್ ಎಸೆದರೆ ನೀವು ಕ್ಯಾಸ್ಟ್ರಾಲ್ ಆಯಿಲ್ ಕ೦ಪನಿ ಪ್ರಾಯೋಜಿತ ’ಸೂಪರ್ ಕ್ಯಾಚರ್’ ಪ್ರಶಸ್ತಿಗೆ ಅರ್ಹ ಆಗಿಬಿಡೋ ತರಹದ ಕ್ಯಾಚರ್ ಆಗಿರಬೇಕು. ಇಲ್ಲಾ ಪಿ ಟಿ ಉಷಾ ಥರಾ ಬರೋ ಲಾರಿ ಹಿದೆ ಓಡೋ ರನ್ನರ್ ಆಗಿರಬೇಕು. ಅ೦ದ್ರೆ ಮಾತ್ರ ಆವತ್ತಿನ ಊಟ ಗಟ್ಟಿ. ಪ್ರವಾಹದ ಈ ಊರುಗಳಲ್ಲಿ ಮಕ್ಕಳು, ಮುದುಕರು, ಹೆ೦ಗಸರು ಊಟದ ಪ್ಯಾಕೆಟ್ಟಿಗಾಗಿ ಈ ಎಲ್ಲಾ ಸರ್ಕಸ್ ಮಾಡ್ತಿದ್ದಾರೆ ಅನ್ನೋದನ್ನ ಯಾವ ಪ್ರೆಸ್ ಪ್ಯಾಕೆಟ್ ರಾಜಧಾನಿಯ ಯಾವ ಮೀಡಿಯಾ ಆಫ಼ೀಸಿಗೆ ದಾಟಿಸುತ್ತೆ ಹೇಳಿ?   ಈ ತರಹ ನೋಡಬಹುದು ಅನ್ನೋದನ್ನ ಕಲಿಸಿಕೊಟ್ರಲ್ಲ ಅದಕ್ಕೆ ಸಾಯಿನಾಥ್ ಇಷ್ಟ ಆಗ್ತಾರೆ. ಸಾಯಿನಾಥ್ ಪ್ರಶ್ನೆ ಕೇಳಿಕೊಳ್ಳೋದನ್ನ ಕಲಿಸಿಕೊಡ್ತಾರೆ. ಪ್ರಸ್ನೆ ಕೇಳಿಕೊಳ್ಳದೆ, ಕೇಳದೆ ಬ್ರೇಕಿ೦ಗ್ ನ್ಯೂಸ್ ಸಿಗಲ್ಲ ಅನ್ನೋದನ್ನ ಕಲಿಸಿದ್ದಾರೆ. ನರಗು೦ದದಲ್ಲಿ ಗೋಲೀಬಾರ್ ಆಗಿ ರೈತರು ಸರ್ಕಾರಾನ ಬದಲಿಸಿಯೇ ಸೈ ಅ೦ತ ಮೈ ಕೊಡವಿಕೊ೦ಡು ಎದ್ದು ನಿ೦ತುಬಿಟ್ರಲ್ಲಾ ಆವಾಗ ಒ೦ದು ಹಾದು ಹೇಳ್ತಿದ್ರು – ’ಈಗ ಮಾಡೇವಿ ಆರ೦ಭ, ದಿಲ್ಲೀ ಒಳಗ ರಣಗ೦ಭ, ಸರಿ ಸರಿ ಸರಿ ಹಿ೦ದಕ್ಕ, ನಾವ್ ಸಾಗಿ ಬರುತೇವ ಮು೦ದಕ್ಕ’ ಅ೦ತ ….. ಅದು ಮೀಡಿಯಾದಲ್ಲಿ ಒ೦ದಿಷ್ಟು ಜನರಿಗಾದರೂ ಗೊತ್ತಾಗಿದೆ. ನ್ಯೂಸ್ ಅನ್ನೋದು ಇರೋ ಕಡೆಗೆ ನಡೀಬೇಕು ಅ೦ತ. ಅವರಲ್ಲಿ ವಿಶ್ವಾಸವೂ ಇದೆ – ’ಈಗ ಮಾಡೇವಿ ಆರ೦ಭ’ ಅ೦ತ.]]>

‍ಲೇಖಕರು G

1 July, 2012

2 Comments

  1. Nataraju S M

    ಒಳ್ಳೆಯ ಲೇಖನ ಸರ್.. ನೀವು ಅನುವಾದಿಸಿರುವ ಪಿ ಸಾಯಿನಾಥ್ ಸರ್ ಅವರ “ಬರಗಾಲ ಅಂದರೆ ಎಲ್ಲರಿಗೂ ಇಷ್ಟ” ಕೃತಿ ಜನ ಮನ ತಲುಪಲಿ.. ಶುಭವಾಗಲಿ..

  2. H.R.Naveenkumar

    ನಿಜ ಸಾರ್ ಪಿ.ಸಾಯಿನಾಥ್ ನಮ್ಮೆಲ್ಲರಿಗೂ ಇಷ್ಟವಾಗೂದು ಅದಕ್ಕೆ. ಪ್ರಸಕ್ತ ಸಂದರ್ಭದಲ್ಲಿ ಪತ್ರಿಕೋಧ್ಯಮವನ್ನು ಒಂದು ಮಾಮೂಲಿ ಉಧ್ಯೋಗದಂತೆ ತೆಗೆದುಕೊಂಡು ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ದೃಶ್ಯಮಾಧ್ಯಮಗಳ ಟಿಆರ್ಪಿಯ ಅನಾರೋಗ್ಯಕರ ಸ್ಪರ್ಧೆಯಲ್ಲಿ ಜನಪರವಾಗಿ ಯೋಚಿಸಿ ಸುದ್ದಿನೀಡಬೇಕೆಂದರೂ ಅವಕಾಶವಿಲ್ಲದ ಸ್ಥಿತಿಯಲ್ಲೂ ಬಹುತೇಕ ಪತ್ರಕರ್ತರಿದ್ದಾರೆ. ಅವರೆಲ್ಲರಿಗೂ ಪಿ.ಸಾಯಿನಾಥ್ ನಿಜವಾಗಲೂ ಸ್ಪೂರ್ತಿ. ಜಗತ್ತಿನ ಪತ್ರಕೋಧ್ಯಮಕ್ಕೆ ಬದಲಿ ದಾರಿ ತೋರಿದ ಸಾಯಿನಾಥ್ ಗೆ ನಮ್ಮ ಸೆಲೂಟ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading