ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಧಿಸುವೆ ಬಯಸಿದಂತೆ..

ಗಿಡದಲ್ಲಿ ಇಣಚಿ
ಮಾಲಾ ಮ ಅಕ್ಕಿಶೆಟ್ಟಿ

ನೀರು ಹಾಕಲು ಬಂದಾಗ ಹೊರಗೆ
ಲುಟು ಪುಟು ಓಡಾಡುವ ಇಣಚಿ ಗಿಡದ ಮೇಲೆ

ನೋಡಿದ ತಕ್ಷಣ ಆಶ್ಚರ್ಯ ಮಗುವಿಗೆ
ಪ್ರಶ್ನೆಗಳು ಹುಟ್ಟಿದವು ಬಗೆ ಬಗೆ

ಚಿಕ್ಕದಿದ್ದರೂ ಓಡಾಟ ಎಷ್ಟೊಂದು
ಆಡಿ ಬರುವೆನು ಮಾತೊಂದು

ಅಮ್ಮ ಈ ಬಾರಿ ಚಟುವಟಿಕೆ ಹೇಗೆಂದ?
ದೇವರು ದಯಪಾಲಿಸಿದ ದೇಹದ ರಚನೆಯೆಂದೆ

ನಾನೂ ಆಗಬೇಕು ಎಣಚಿಯಂತೆ
ಮಾಡು ಯೋಗ, ವ್ಯಾಯಾಮ, ದೇಹ ಸವೆಸುವಂತೆ

ಒಳ್ಳೆಯ ಕೆಲಸಕ್ಕೆ ದೂಡೆನು ದಿನ
ಇಂದೇ ತೊಡಗಿಸುವೆ ಸಂಪೂರ್ಣ ಮನ

ಜಾಣ ಮರಿ ನೀನು ಇಣಚಿಯಂತೆ
ಬೇಕಾದ್ದು ಸಾಧಿಸುವೆ ಬಯಸಿದಂತೆ

‍ಲೇಖಕರು Admin

6 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading