ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಲಿಂಗ ಕಾಮ ಮತ್ತು ತಲೆದಂಡ..

– ಡಾ ಎಸ್ ಬಿ ಜೋಗುರ

ಹಿಂದೊಮ್ಮೆ ‘ಫ಼ೈರ್’ ಎನ್ನುವ ಸಿನೇಮಾ ತೆಗೆಯುವ ಮೂಲಕ ದೀಪಾ ಮೆಹತಾ ಸಲಿಂಗ ಕಾಮದ ಬಗ್ಗೆ ಗುಲ್ಲೆಬ್ಬಿಸಿ ಗಲ್ಲಾಪೆಟ್ಟಿಗೆಯಲ್ಲೂ ಗೆದ್ದಿರುವದಿತ್ತು.. ಆನಂತರವೂ ಅಂಥಾ ಅದೆಷ್ಟೊ ಸಿನೆಮಾಗಳು ಬಂದಿವೆ. ಈಗ ‘ಇದು ನನ್ನ ಆಯ್ಕೆ’ ಎನ್ನುವ ಕಿರು ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಸುದ್ದಿಯಾಗಿಬಿಟ್ಟಳು. ಅದೇ ವೇಳೆಗೆ ಸಾಂಪ್ರದಾಯಿಕ ನಿಲುವಿನ ಕರ್ಮಠರು ದೀಪಿಕಾ ಬಗ್ಗೆ ಸಿಡಿಮಿಡಿಗೊಂಡದ್ದೂ ಆಯ್ತು. ಅಷ್ಟಕ್ಕೂ ಧರ್ಮ ಮತ್ತು ಲೈಂಗಿಕತೆಗೂ ಎಣ್ಣೆ ನೀರಿನ ಸಂಬಂಧ.. ಅವೇರಡೂ ಹದವಾಗಿ ಬೆರೆಯಲು ಸಾಧ್ಯವೇ ಇಲ್ಲ. ಹಾಗೆ ನೋಡಿದರೆ ಈ ಬಗೆಯ ಸಲಿಂಗ ಕಾಮದ ಬಗೆಗಿನ ಮಾತುಗಳು ಎಲ್ಲ ಕಾಲಗಳಲ್ಲಿಯೂ ಕೇಳಿಬಂದರೂ ಇಸ್ಲಾಂ, ಜ್ಯುಡಾಯಿಜಂ, ಕ್ರಿಶ್ಚಿಯನ್ ಧರ್ಮಗಳು ಈ ಬಗೆಯ ಸಲಿಂಗ ಕಾಮವನ್ನು ಅಷ್ಟಾಗಿ ಸಹಿಸುವದಿಲ್ಲ. ಈ ಬಗೆಯ ಧರ್ಮಗಳಲ್ಲಿ ತೀರಾ ಅಪರೂಪಕ್ಕೆ ಆ ಬಗೆಯ ಘಟನೆಗಳಿದ್ದರೂ ಅದನ್ನು ಮಹಾಪಾಪ..! ಎಂದು ಬಗೆಯುವ ಈ ಧರ್ಮಗಳು ಅದರಲ್ಲಿ ಸಿಲುಕಿರುವವರನ್ನು ಸಾಯಿಸುವವರೆಗೂ ಬಿಡುವದಿಲ್ಲ ಎನ್ನುವಂತೆ ವತರ್ಿಸುವದಿದೆ. ಈಚೆಗೆ ಇಂಡೋನೇಶ್ಯಾದ ಮುಸ್ಲಿಂ ಸಂಘಟನೆಯೊಂದು [ಎಮ್.ಯು.ಆಯ್] ಈ ಬಗೆಯ ಸಲಿಂಗ ಕಾಮಿಗಳ ವಿರುದ್ಧವಾಗಿ ಫéತ್ವಾ ಹೊರಡಿಸಿರುವದಿದೆ. ತಪ್ಪಿ ಇಂಥಾ ಸಂಬಂಧಗಳಲ್ಲಿ ಸಿಲುಕಿದರೆ ಅವರ ತಲೆದಂಡ ಗ್ಯಾರಂಟಿ ಎನ್ನುವ ಹಾಗೆ ಫéಮರ್ಾನು ಹೊರಡಿಸಲಾಗಿದೆ. ಗಂಡು-ಗಂಡು ಮತ್ತು ಹೆಣ್ಣು ಹೆಣ್ಣಿನ ನಡುವಿನ ಅಸ್ವಾಭಾವಿಕ ಸಂಬಂಧ ನಿಸರ್ಗಕ್ಕೆ ವ್ಯತಿರಿಕ್ತವಾದುದು ಅದೊಂದು ರೀತಿಯ ಅಪರಾಧವೇ ಹೌದು ಎಂದಿರುವ ಆ ಸಂಘಟನೆ ಅಂಥವರನ್ನು ಸಾಯಿಸದೇ ಬಿಡುವದಿಲ್ಲ ಎಂದಿರುವದಿದೆ. ಸಲಿಂಗಿಗಳು ಮತ್ತು ಲಿಂಗ ಬದಲಾಯಿಸಿಕೊಂಡವರ ಸಂಘಟನೆಯ ಪರವಾಗಿ ಕೆಲವರು ತಣ್ಣಗೆ ಪ್ರತಿಕ್ರಿಯಿಸಿ ಅದು ಆ ಸಂಘಟನೆಯ ಅಭಿಪ್ರಾಯ ನಾವು ಅದನ್ನು ಅಲ್ಲಗಳೆಯುತ್ತೇವೆ ಎಂದಿರುವದಿದೆ. ತಮಗೂ ಬದುಕುವ ಹಕ್ಕಿದೆ.. ತಮಗೂ ಆಯ್ಕೆಗಳಿವೆ.. ಎನ್ನುವ ಈ ಸಂಲಿಂಗಿಗಳ ಸಂಘಟನೆಯ ನಿಲುವಿಗೆ ಅದ್ಯಾವ ರೀತಿಯ ನೈತಿಕ ಬೆಂಬಲ ಸಿಗುತ್ತದೆ ಎನ್ನುವದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇಂಥವರಿಗೆ ತಲೆದಂಡ ಶಿಕ್ಷೆ ಖಾತ್ರಿ ಎನ್ನುವ ಉಲೆಮಾಗಳು ಅದು ಹೇಗೆ ಈ ಸಲಿಂಗಿಗಳ ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಾರೆ ಎನ್ನುವುದು ಕೂಡಾ ಅಷ್ಟೇ ಗಮನಾರ್ಹವಾಗಿದೆ.
ವಿಶ್ವದ ಬಹುತೇಕ ಕಡೆಗಳಲ್ಲಿ ಈ ಬಗೆಯ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಸಲಿಂಗ ಕಾಮಿಗಳ ಹಕ್ಕುಗಳನ್ನು ರಕ್ಷಿಸುವ ದಿಶೆಯಲ್ಲಿ ಮಾತನಾಡುವದಿದೆ ಆದರೆ ಇಂಡೊನೇಶ್ಯಾದಲ್ಲಿ ಮಾತ್ರ ಈಗ ಇದ್ದಕ್ಕಿದ್ದಂತೆ ಅವರ ಹಕ್ಕುಗಳನ್ನು ದಮನ ಮಾಡುವದು ಮಾತ್ರವಲ್ಲದೇ ಅವರ ವಿರುದ್ಧವೇ ಫéತ್ವಾ ಹೊರಡಿಸಿರುವದನ್ನು ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಅದು ಹೇಗೆ ಸ್ವೀಕರಿಸುತ್ತಾರೆ ಎನ್ನುವದು ಕೂಡಾ ಅಷ್ಟೆ ಮುಖ್ಯ. ಕಳೆದವರ್ಷವಷ್ಟೇ ಇಂಡೊನೇಶಿಯಾ ಪಾಕಿಸ್ಥಾನ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳೊಂದಿಗೆ ಕೂಡಿಕೊಂಡು ಈ ಬಗೆಯ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಸಲಿಂಗ ಕಾಮಿಗಳ ಹಕ್ಕುಗಳ ಬಗ್ಗೆ ಸಂಯುಕ್ತ ರಾಷ್ಟ್ರಸಂಘದ ಮಾನವ ಹಕ್ಕುಗಳ ಆಯೋಗದ ಶಿಫéಾರಸುಗಳನ್ನು ತಿರಸ್ಕರಿಸಿರುವದಿದೆ. ಇಂಡೋನೇಶಿಯಾದ ಅಪರಾಧಿ ಕಾನೂನಿನಲ್ಲಿ ಈ ಬಗೆಯ ಸಲಿಂಗ ಕಾಮದ ಬಗ್ಗೆ ಮಾತನಾಡುವದಿಲ್ಲವಾದರೂ ಅಶ್ಲೀಲತೆಯ ವಿರುದ್ಧವಾಗಿ ರೂಪಿಸಲಾದ ಕಾನೂನಿನಲ್ಲಿ ಈ ಬಗೆಯ ಸಲಿಂಗ ಕಾಮವನ್ನು ಅಪವರ್ತನೆ ಎಂದು ಸಂಬೋಧಿಸಿರುವದಿದೆ. ಸುಮಾತ್ರಾದಲ್ಲಂತೂ ಈ ಬಗೆಯ ಸಲಿಂಗ ಕಾಮಿಗಳಿಗೆ ಒಂದು ನೂರು ಚಡಿ ಏಟನ್ನು ಸಾರ್ವಜನಿಕರಿಂದ ವಿಧಿಸುವ ಬಗ್ಗೆ ಕಾನೂನನ್ನು ರೂಪಿಸಲಾಗಿದೆ. ಅದೇ ರೀತಿಯಲ್ಲಿ ಪಾಲೆಂಬಂಗ್ ಎಂಬ ಪ್ರಾಂತದಲ್ಲಿ ಆ ಬಗೆಯ ಸಂಬಂಧದಲ್ಲಿ ಸಿಲುಕಿದರೆ ಅವರಿಗೆ ಆರು ತಿಂಗಳ ಕಾಲ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಇಂಡೋನೇಶ್ಯಾದ ಕಾನೂನು ಅಲ್ಲಿಯ ಮುಸ್ಲಿಂ ಸಂಘಟನೆಯೊಂದರ ಈ ತೀರ್ಮಾನವನ್ನು ಪುರಷ್ಕರಿಸುತ್ತದೆ ಎಂದರ್ಥವಲ್ಲ ಅಷ್ಟಕ್ಕೂ ಲೈಂಗಿಕತೆಯ ವಿಷಯ ಅವರವರ ಆಯ್ಕೆ ಅದನ್ನು ನಿರ್ಬಂಧಿಸಲು ನಾವ್ಯಾರು..? ಎಂದು ಕೇಳುವ ಧಾರ್ಮಿಕ ಮುಖಂಡರುಗಳು ಇದೇ ನೆಲದಲ್ಲಿದ್ದಾರೆ. ಆದರೆ ಈ ಬಗೆಯ ಕಠೋರವಾದ ಮುಸ್ಲಿಂ ಸಂಘಟನೆಗಳು ಇಂಡೋನೇಶಿಯಾದಲ್ಲಿ ಈ ಮುಂಚೆಯೂ ತಮ್ಮ ಸಂಘಟನೆಯ ಬಲವನ್ನು ಪ್ರದರ್ಶಿಸಿರುವದಿದೆ. ತಮ್ಮ ಮಾತನ್ನು ಮೀರಿದರೆ ಪರಿಣಾಮ ಏನಾಗುತ್ತದೆ ಎನ್ನುವದನ್ನು ಆಗಾಗ ತೋರುತ್ತಲೇ ಬಂದಿರುವದಿದೆ. 2010 ರ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ಲೆಸಬಿಯನ್ ಸಂಘಟನೆಯ ಮೇಲೆ ಧಾಳಿ ಮಾಡಿರುವದಿದೆ. ಹಾಗೆಯೇ ಅದೇ ವರ್ಷ ಜಕಾರ್ತಾದಲ್ಲಿ ನಡೆಯುತ್ತಿದ್ದ ಫಿಲ್ಮ್ ಫೆಸ್ಟಿವಲ್ ಮೇಲೆಯೂ ದಾಂಧಲೆ ನಡೆಯಿಸಿ ಸಲಿಂಗ ಕಾಮವನ್ನು ಕುರಿತು ವ್ಯವಹರಿಸುವ ಯಾವುದೇ ಬಾಷೆಯ ಚಿತ್ರಗಳಿರಲಿ ಅವುಗಳನ್ನು ಸೆನ್ಸಾರ್ ಮಾಡಬೇಕು.. ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು. 1998 ರಲ್ಲಿ ಸುಹಾರ್ತೋ ನ ಸರ್ವಾಧಿಕಾರ ಕೊನೆಗೊಂಡ ಮೇಲೆ ಇಸ್ಲಾಂ ರಾಜಕೀಯ ಸಂಘಟನೆಗಳು ಅಲ್ಲಿಯ ಧಾರ್ಮಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಅನನ್ಯವಾದ ಪ್ರಭಾವವನ್ನು ಬೀರತೊಡಗಿವೆ.
ಈ ಬಗೆಯ ಮುಸ್ಲಿಂ ಉಲೆಮಾಗಳು ಧರ್ಮ ರಾಷ್ಟ್ರಕ್ಕಿಂತ ಮಿಗಿಲು ಎಂಂದು ಪ್ರತಿಪಾದಿಸುತ್ತಲೇ ಭಿನ್ನತೆಯಲ್ಲಿ ಐಕ್ಯತೆಯ ಮಂತ್ರಕ್ಕೂ ಧಕ್ಕೆ ತರುವ ಕೆಲಸವನ್ನು ಮಾಡಲಾಗುತ್ತದೆ. ಧಾಮರ್ಿಕ ಅಧಿಕಾರವಾಣಿಯಿಂದಲೇ ದೇಶ ಮುನ್ನಡೆಯಬೇಕು ಎನ್ನುವದು ಈ ಬಗೆಯ ಸಂಘಟನೆಗಳ ವಾದ ಸಹಜವಾಗಿ ಅಲ್ಲಿ ಪ್ರಜಾಸತ್ತಾತ್ಮಕ ತತ್ವಗಳು ಗೋರಿ ಸೇರಬೇಕಾಗುತ್ತದೆ. 2005 ರ ಸಂದರ್ಭದಲ್ಲಿ ಬಹುತ್ವ, ಧರ್ಮನಿರಪೇಕ್ಷತೆ ಮತ್ತು ಉದಾರವಾದದ ತತ್ವಗಳನ್ನು ವಿರೋಧಿಸಿ ಈ ಬಗೆಯ ಸಂಘಟನೆಗಳು ಫತ್ವಾ ಹೊರಡಿಸಿರುವದನ್ನು ಇಲ್ಲಿ ನೆನೆಪು ಮಾಡಿಕೊಂಡರೆ ಈ ಬಗೆಯ ಧಾರ್ಮಿಕ ಸಂಘಟನೆಗಳ ಮಹದಾಸೆ ಮನದಟ್ಟಾಗದೇ ಇರದು. ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾನ್ಯ ಮತ್ತು ಅಸಾಮಾನ್ಯ ವರ್ತನೆಗಳಿರುತ್ತವೆ ಈ ಬಗೆಯ ಅಸಾಮಾನ್ಯ ವರ್ತನೆಗಲನ್ನು ತಮಗಿಂತಲೂ ಚೆನ್ನಾಗಿ ಬೇರೆ ಯಾರೂ ನಿಯಂತ್ರಿಸಲಾರರು ಎನ್ನುವ ಮನೋಭಾವ ಈ ಬಗೆಯ ಸಂಘಟನೆಗಳದ್ದಾಗಿದೆ. ಸಾಮಾಜಿಕ ಆರೋಗ್ಯ ಕಾಯುವದೇ ತಮ್ಮ ಉದ್ದೇಶ ಎನ್ನುವ ಇವರು ಧರ್ಮದ ದೃಷ್ಟಿಯಲ್ಲಿ ಸರಿ ಎನಿಸುವ ವರ್ತನೆಗಳನ್ನು ಮಾತ್ರ ನಾವು ಸಹಿಸುತ್ತೇವೆ ಮಿಕ್ಕಂತೆ ನಾವು ಯಾವುದನ್ನೂ ಲೆಕ್ಕಿಸುವದಿಲ್ಲ ಎನ್ನುವ ಈ ಬಗೆಯ ಉಲೇಮಾಗಳು ಇಂಡೊನೇಶಿಯಾದ ಧಾಮರ್ಿಕ- ಸಾಮಾಜಿಕ ಬದುಕಿನ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸಿರುವದಿದೆ. ಇಂದೋನೇಶಿಯಾದಲ್ಲಿಯೂ ಈ ಬಗೆಯ ಸಲಿಂಗ ಕಾಮಿಗಳ ಬಗ್ಗೆ ಅವರ ಹಕ್ಕುಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಯೋಚಿಸುವ, ಮಾತನಾಡುವವರೂ ಇದ್ದಾರೆ ಆದರೆ ಅವರ ಮಾತುಗಳಿಗೆ ಈ ಬಗೆಯ ಸಂಘಟನೆಗಳ ಫéತ್ವಾದ ಚೀತ್ಕಾರದ ನಡುವೆ ದನಿಯಿಲ್ಲದಂತಾಗಿದೆ.

‍ಲೇಖಕರು G

20 April, 2015

1 Comment

  1. mallikarjun talawar

    gurugale super write up!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading