ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಸಪ್ನ ಬುಕ್‌ ಹೌಸ್‌’ನಲ್ಲಿ ‘ಪುಸ್ತಕ ಜಾತ್ರೆ’ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಸಪ್ನ ಬುಕ್‌ ಹೌಸ್‌ನಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ ಸುಧಾಮೂರ್ತಿ ಉದ್ಘಾಟಿಸಿ 67 ಪುಸ್ತಕಗಳನ್ನು ಬಿಡುಗಡೆ ಮಾಡಿದರು. ದೀಪಾರಾಧನೆಯನ್ನು ನಟಿ ಸಪ್ತಮಿ ಗೌಡ ನೆರವೇರಿಸಿದರು.

ಸಾಹಿತಿಗಳಾದ ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಮಲ್ಲೇಪುರಂ ಜಿ ವೆಂಕಟೇಶ್, ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್, ಪ್ರೊ ಎಸ್ ಜಿ ಸಿದ್ದರಾಮಯ್ಯ, ದೊಡ್ಡ ರಂಗೇಗೌಡ, ನಿವೃತ್ತ ಪೊಲೀಸ ಅಧಿಕಾರಿ ಡಿವಿ ಗುರುಪ್ರಸಾದ್, ಲೇಖಕಿ ಡಾ. ವಸುಂದರ ಭೂಪತಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್ ಎಲ್ ಪುಷ್ಪ, ಪತ್ರಕರ್ತರಾದ ಜಿಎನ್ ರಂಗನಾಥ್ ರಾವ್, ಜಿ ಎನ್ ಮೋಹನ್, ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಸೇರಿ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

ಚಿನ್ಮಯಿ ಚಂದ್ರಶೇಖರ್ ಕನ್ನಡ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇಗೌಡ,  ಡಾ. ವತ್ಸಲಾ ಮೋಹನ್ ನಿರ್ವಹಿಸಿದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ

‍ಲೇಖಕರು Admin

3 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading