ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದ್ದಿರದೆ‌ ಎದ್ದು ಹೋದವನ ಹೆಗಲೇರಿ..

sridevi udupa

ಶ್ರೀದೇವಿ ಉಡುಪ

frogಹುಟ್ಟು ಮೋಹಗಳ
ಹೆಚ್ಚುಗಾರಿಕೆಯಲಿ ಬಿಟ್ಟು
ಸದ್ದಿರದೆ‌ ಎದ್ದು ಹೋದವನ
ಹೆಗಲೇರಿ ಕುಳಿತು ಕೊಡಲು
ಹೊರಟಿರುವ ಸುದ್ದಿಯಾದರು ಏನು..?
ಅಂತ:ಪುರದ ತೆಳು ಬೆಳಕಿನ
ಕತ್ತಲೆಯನೊದ್ದು ಹೊರಗೆ ಕಾದಿದ್ದ
ಕಾರಿರುಳ ಕತ್ತಲೊಳಗಿನ
ಬೆಳಕನರಿಸಿ ಹೊರಟವನ
ಮೌನದ ಮಾರ್ಗಕ್ಕೆ
ಮಾತಂಟಿಸಲು ಹೊರಟಿರುವೆಯೇನು..?

ಗೆಲ್ಲಬಹುದೆ..ಸದ್ದಿರದೆ‌ ಸುದ್ದಿಯಾದವನ
ಹನಿ ನೀರಿಗೂ ಸದ್ದು ಮಾಡುವ
ಸುದ್ದಿಯಾಗದ ನೀನು….?

ಹೆಗಲೇರಿ ಕುಳಿತು,
ಅವನ ತುಟಿಬಿಗಿತದಲಿ
ನಿನ್ನ ವಟ ವಟಕೆ ಅರ್ಥ ಹುಡುಕುತಿರಬಹದೇನು…
ಮಾತು ಜಯಸಿದ ಮಹಾ ಮೌನಿಯಾತ
ನಿನ್ನ ಮಾತಿಗೆ ನಿಲುಕಿದರೆ
ನನಗಿಷ್ಟು ಅರಹುವೆಯೇನು…?

‍ಲೇಖಕರು Admin

28 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading