ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾ ಎಚ್ಚರಿರುವ ಕಷ್ಟಗಳು..

ಇಮ್ತಿಯಾಜ್‌ ಶಿರಸಂಗಿ

ನನ್ನೊಂದಿಗೆ
ನನ್ನ ಎಲ್ಲಾ
ಕಷ್ಟಗಳು ಒಪ್ಪಂದ
ಒಂದಕ್ಕೆ ಸಹಿ
ಹಾಕಿವೆ. ಆಗಾಗ
ಅವು ಗಾಢ
ನಿದ್ರೆಗೆ ಜಾರುವುದಾಗಿ…
ಮತ್ತು
ಮನವಿಯೊಂದನ್ನು
ಪುರಸ್ಕರಿಸಿವೆ,
ಎಂದಾದರೊಮ್ಮೆ
ಬಳಿಗೆ ಸುಳಿವ
ಸುಖಕ್ಕೆ ದಾರಿ
ಮಾಡಿಕೊಡುವುದಾಗಿ..

ಚಂಚಲ ಮನಸು
ದೂರದ ದುರಾಸೆಯ ಬೆಟ್ಟಕ್ಕೆ
ಗುರಿ ಇಡುವುದಿಲ್ಲವೆಂದು ಆಣೆ ಮಾಡಿದೆ…

ಆದರೆ,

ಒಪ್ಪಂದ ಗಳು
ಇರುವುದೇ
ಮುರಿಯಲ್ಲಿಕ್ಕೆ,
ಆಣೆ ಹಾಕುವುದೇ
ಹುಸಿಯಾಗಲಿಕ್ಕೆ
ಇದನ್ನು ಮಾಡಿಸುವುದೇ
ನನ್ನ ಕಾಯ ಎನ್ನುತ್ತಿದೆ
ದೂರ ನಿಂತು ಹೊಂಚು
ಹಾಕುತ್ತಿರುವ ಪರಿಸ್ಥಿತಿ.

‍ಲೇಖಕರು Admin

6 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading